Latest Updates
-
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ?
ವರಮಹಾಲಕ್ಷ್ಮಿ ವ್ರತ 2021: ವರಮಹಾಲಕ್ಷ್ಮಿ ಹಬ್ಬದ ವಿಶೇಷ: ಕೊಬ್ಬರಿ ಲಾಡು ರೆಸಿಪಿ
ತೆಂಗಿನತುರಿ ಲಡ್ಡು ಭಾರತೀಯ ವಿಶೇಷ ಸಿಹಿ ತಿಂಡಿಯಲ್ಲಿ ಒಂದು. ಮನಸ್ಸು ಬಯಸಿದಾಗ, ಉತ್ಸವ, ಹಬ್ಬ ಹಾಗೂ ವಿಶೇಷ ಕಾರ್ಯಗಳಲ್ಲಿ ತಯಾರಿಸುತ್ತಾರೆ. ಇದನ್ನು ಒಣಗಿದ ತೆಂಗಿನ ತುರಿ ಹಾಗೂ ಹಾಲಿನಿಂದ ತಯಾರಿಸಲಾಗುತ್ತದೆ. ಹಾಲು ಮತ್ತು ತೆಂಗಿನಕಾಯಿಯ ಮಿಶ್ರಣವು ಅದ್ಭುತವಾದ ರುಚಿ ಹಾಗೂ ಪರಿಮಳವನ್ನು ಸೂಸುತ್ತದೆ.
ರಸಭರಿತವಾದ ಈ ಸಿಹಿಯನ್ನು ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಲು ಮನಸ್ಸು ಬಯಸುತ್ತದೆ. ಈ ಅದ್ಭುತ ಸಿಹಿಯನ್ನು ಬಹು ಬೇಗ ತಯಾರಿಸಬಹುದು. ಇದಕ್ಕಾಗಿ ಪಾಕವಿಧಾನದಲ್ಲಿ ಪಾಂಡಿತ್ಯ ಪಡೆಯುವ ಅಗತ್ಯವಿಲ್ಲ. ಬಯಕೆಯಾದಾಗ ಬಹು ಬೇಗ ತಯಾರಿಸಿಕೊಳ್ಳಬಹುದು.
ವಿಷ್ಣುವಿನ ಶಕ್ತಿರೂಪಿಣಿ ದೇವಿ ವರಮಹಾಲಕ್ಷ್ಮಿ ವ್ರತ 2021ನೇ ಸಾಲಿನಲ್ಲಿ ಆಗಸ್ಟ್ 20ರಂದು ಆಚರಿಸಲಾಗುತ್ತಿದೆ. ವರಮಹಾಲಕ್ಷ್ಮಿ ವ್ರತದ ಹಿನ್ನೆಲೆ ದೇವತೆಗೆ ನೈವೇದ್ಯಕ್ಕೆ ಇಡಲು ಈ ಸಿಹಿ ಖಾದ್ಯ ಉತ್ತಮ ಆಯ್ಕೆ. ಈ ತಿಂಡಿಯನ್ನು ನೀವು ಮಾಡಲು ಬಯಸುವುದಾದರೆ ನಾವಿಲ್ಲಿ ನೀಡಿರುವ ವೀಡಿಯೋ ಮತ್ತು ಹಂತ ಹಂತವಾದ ಚಿತ್ರ ವಿವರಣೆಯನ್ನು ವೀಕ್ಷಿಸಿ... ನಿಮ್ಮ ಪಾಕ ವಿಧಾನ ಸುಲಭವಾಗುವುದು.
ನಾರಿಯಲ್ ಲಡ್ಡು ವೀಡಿಯೋ ಪಾಕವಿಧಾನ.

Recipe By: ಮೀನಾ ಭಂಡಾರಿ
Recipe Type: ಸಿಹಿ ತಿಂಡಿ
Serves: 8-10 ಲಡ್ಡು
-
ಒಣ ಕೊಬ್ಬರಿ ತುರಿ -2 ಕಪ್ +1ಕಪ್ ಲೇಪನಕ್ಕೆ
ಸಿಹಿಯಾದ ಮಂದಗೊಳಿಸಿದ ಹಾಲು -200 ಗ್ರಾಂ
ಹೆಚ್ಚಿಕೊಂಡ ಬಾದಾಮಿ-2 ಚಮಚ+ ಅಲಂಕಾರಕ್ಕೆ
ಏಲಕ್ಕಿ ಪುಡಿ- 1 ಚಮಚ
-
1. ಒಂದು ದಪ್ಪ ತಳದ ಪಾತ್ರೆಯನ್ನು ಬಿಸಿಗಿಟ್ಟು, ಘನೀಕರಿಸಿದ/ಮಂದಗೊಳಿಸಿದ ಹಾಲನ್ನು ಹಾಕಿ. ತಕ್ಷಣವೇ 2 ಕಪ್ ಒಣ ಕೊಬ್ಬರಿ ತುರಿಯನ್ನು ಸೇರಿಸಬೇಕು.
2. ಈ ಮಿಶ್ರಣವು ತಳ ಹಿಡಿಯದಂತೆ ನಿರಂತರವಾಗಿ ಕೈಯಾಡಿಸುತ್ತಲೇ ಇರಬೇಕು. ನಂತರ ಮಿಶ್ರಣವು ದಪ್ಪ ಪಾಕದ ರೂಪಕ್ಕೆ ಬರುವುದು.
3. ಏಲಕ್ಕಿ ಪುಡಿ, ಹೆಚ್ಚಿಕೊಂಡ ಬಾದಾಮಿಯನ್ನು ಸೇರಿಸಿ, ಇದು ಬಿಗಿಯಾದ ಮಿಶ್ರಣದಂತಾಗುವರೆಗೂ ಚೆನ್ನಾಗಿ ಕಲುಕಬೇಕು.
4. ಒಂದು ಉಂಡೆಯ ಆಕಾರದಲ್ಲಿ ಮಿಶ್ರಣವನ್ನು ಕಟ್ಟಬೇಕು.
5. ಉಂಡೆಯನ್ನು ಒಣ ಕೊಬ್ಬರಿಯಲ್ಲಿ ಒಮ್ಮೆ ಉರುಳಿಸಬೇಕು.
6. ಹೆಚ್ಚಿಕೊಂಡ ಬಾದಾಮಿಯಿಂದ ಅಲಂಕರಿಸಿ.
- 1. ಲಡ್ಡುವನ್ನು ತಾಜಾ ಕೊಬ್ಬರಿಯಿಂದಲೂ ಮಾಡಬಹುದು. ಆದರೆ ತೆಂಗಿನ ತುರಿಯನ್ನು ಚೆನ್ನಾಗಿ ಹುರಿದು ತೇವಾಂಶವನ್ನು ತೆಗೆದುಕೊಳ್ಳಬೇಕು.
- 2. ಮಿಶ್ರಣ ಪಾಕ ಬರುವಾಗ ತಳಹಿಡಿಯದಂತೆ ಹಾಗೂ ಗಂಟಾಗದಂತೆ ಸೂಕ್ತ ರೀತಿಯಲ್ಲಿ ಕಲುಕುತ್ತಿರಬೇಕು.
- 3. ಮಿಶ್ರಣವು ಬಿಸಿಯಾಗಿರುವಾಗಲೇ ಲಡ್ಡು ಕಟ್ಟಬೇಕು.
- ಸರ್ವಿಂಗ್ ಸೈಜ್ - 1 ಲಡ್ಡು
- ಕ್ಯಾಲೋರೀಸ್ - 54 ಕ್ಯಾಲ್
- ಫ್ಯಾಟ್ - 2 ಗ್ರಾಂ.
- ಪ್ರೋಟೀನ್ - 1ಗ್ರಾಂ.
- ಕಾರ್ಬೋಹೈಡ್ರೇಟ್ - 9 ಗ್ರಾಂ.
- ಸಕ್ಕರೆ - 9 ಗ್ರಾಂ.
ಲಡ್ಡು ಪಾಕವಿಧಾನದ ಹಂತ ಹಂತವಾದ ಚಿತ್ರ ವಿವರಣೆ:
1. ಒಂದು ದಪ್ಪ ತಳದ ಪಾತ್ರೆಯನ್ನು ಬಿಸಿಗಿಟ್ಟು, ಘನೀಕರಿಸಿದ/ಮಂದಗೊಳಿಸಿದ ಹಾಲನ್ನು ಹಾಕಿ. ತಕ್ಷಣವೇ 2 ಕಪ್ ಒಣ ಕೊಬ್ಬರಿ ತುರಿಯನ್ನು ಸೇರಿಸಬೇಕು.


2. ಈ ಮಿಶ್ರಣವು ತಳ ಹಿಡಿಯದಂತೆ ನಿರಂತರವಾಗಿ ಕೈಯಾಡಿಸುತ್ತಲೇ ಇರಬೇಕು. ನಂತರ ಮಿಶ್ರಣವು ದಪ್ಪ ಪಾಕದ ರೂಪಕ್ಕೆ ಬರುವುದು.

3. ಏಲಕ್ಕಿ ಪುಡಿ, ಹೆಚ್ಚಿಕೊಂಡ ಬಾದಾಮಿಯನ್ನು ಸೇರಿಸಿ, ಇದು ಬಿಗಿಯಾದ ಮಿಶ್ರಣದಂತಾಗುವರೆಗೂ ಚೆನ್ನಾಗಿ ಕಲುಕಬೇಕು.



4. ಒಂದು ಉಂಡೆಯ ಆಕಾರದಲ್ಲಿ ಮಿಶ್ರಣವನ್ನು ಕಟ್ಟಬೇಕು.

5. ಉಂಡೆಯನ್ನು ಒಣ ಕೊಬ್ಬರಿಯಲ್ಲಿ ಒಮ್ಮೆ ಉರುಳಿಸಬೇಕು.

6. ಹೆಚ್ಚಿಕೊಂಡ ಬಾದಾಮಿಯಿಂದ ಅಲಂಕರಿಸಿ.





Click it and Unblock the Notifications
