Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಆಲೂ ಪಲ್ಯ ಪಾಕವಿಧಾನ
ಆಲೂ ಪಲ್ಯ ಪ್ರತಿಯೊಂದು ಮನೆಯಲ್ಲೂ ತಯಾರಿಸುವ ಪ್ರಸಿದ್ಧ ಕರ್ನಾಟಕ ಶೈಲಿಯ ಭಕ್ಷ್ಯ. ಆಲೂಗಡ್ಡೆ ಮತ್ತು ರುಚಿಕರವಾದ ಮಸಾಲಾ ಪದಾರ್ಥಗಳ ಸಮ್ಮಿಶ್ರಣದಿಂದ ಈ ಪಲ್ಯವನ್ನು ತಯಾರಿಸಲಾಗುತ್ತದೆ. ಇದನ್ನು ದೋಸೆ, ರೊಟ್ಟಿ ಹಾಗೂ ಅನ್ನದ ಜೊತೆ ಸವಿಯಬಹುದು. ಬಾಯಲ್ಲಿ ನೀರೂರಿಸುವ ಈ ಪಲ್ಯವನ್ನು ಸಮೋಸದ ಮಿಶ್ರಣದಂತೆಯೂ ಬಳಸಲಾಗುವುದು.
ಸಾಮಾನ್ಯವಾಗಿ ಆಲೂಗಡ್ಡೆಯ ಪಲ್ಯ ತಯಾರಿಸುವಾಗ ಮಸಾಲೆಯನ್ನು ಸೇರಿಸಿ ತಯಾರಿಸಲಾಗುತ್ತದೆ. ಆದರೆ ನಾವಿಲ್ಲಿ ಹೇಳುತ್ತಿರುವ ಆಲೂಗಡ್ಡೆ ಪಲ್ಯದ ಪಾಕವಿಧಾನದಲ್ಲಿ ಮಸಾಲೆಯನ್ನು ಪರಿಮಳದ ಕಾರಣಕ್ಕಾಗಿ ಕೊನೆಯಲ್ಲಿ ಬಳಸುತ್ತೇವೆ. ಈ ವಿಧಾನವನ್ನು ಅನ್ವಯಿಸಿದರೆ ಬಹುಬೇಗ ತಯಾರಿಸಬಹುದು.
ಆಲೂಗಡ್ಡೆಯನ್ನು ನಿಮ್ಮ ನೆಚ್ಚಿನ ತರಕಾರಿ ಪಲ್ಯದೊಂದಿಗೂ ಸೇರಿಸಿ ಖಾದ್ಯವನ್ನು ತಯಾರಿಸಬಹುದು. ಹೆಚ್ಚು ರುಚಿಯನ್ನು ನೀಡಬಲ್ಲ ಈ ಪಾಕವಿಧಾನವನ್ನು ನೀವು ತಪ್ಪದೆಯೇ ಮಾಡಿ ನೋಡಿ. ನಿಮಗೆ ಅನುಕೂಲಕ್ಕಾಗಿ ನಾವಿಲ್ಲಿ ವಿಡಿಯೋ ಹಾಗೂ ಹಂತ ಹಂತವಾದ ಚಿತ್ರ ವಿವರಣೆಯನ್ನು ನೀಡುತ್ತಿದ್ದೇವೆ.
ಆಲೂಗಡ್ಡೆ ಪಲ್ಯ ವಿಡಿಯೋ ರೆಸಿಪಿ

Recipe By: ಅರ್ಚನಾ ವಿ.
Recipe Type: ಹೆಚ್ಚುವರಿ ಭಕ್ಷ್ಯ/ ಸೈಡ್ ಡಿಶ್
Serves: 2 ಮಂದಿಗೆ
-
ಆಲೂಗಡ್ಡೆ - 4
ನೀರು - 2 ಕಪ್
ಎಣ್ಣೆ - 1 1/2 ಟಿಚಮಚ
ಹೆಚ್ಚಿಕೊಂಡ ಈರುಳ್ಳಿ - 2
ಟೊಮೆಟೊ - 2
ರುಚಿಗೆ ತಕ್ಕಷ್ಟು ಉಪ್ಪು
ಅರಿಶಿನ - ಒಂದು ಚಿಟಕಿ
ಖಾರದ ಪುಡಿ/ಮೆನಸಿನ ಹಿಟ್ಟು - 2 ಟೀ ಚಮಚ
ದಾಲ್ಚಿನ್ನಿ - 1/2 ಇಂಚಿನ ಎರಡು ತುಂಡು
ಲವಂಗ - 3-4
-
1. ಕುಕ್ಕರ್‌ನಲ್ಲಿ ಆಲೂಗಡ್ಡೆಯನ್ನು ಹಾಕಿರಿ.
2. ಇದಕ್ಕೆ ನೀರನ್ನು ಸೇರಿಸಿ, ಎರಡು ಸೀಟಿ ಕೂಗಿಸಿ ಬೇಯಿಸಿಕೊಳ್ಳಿ. ನಂತರ ಸಂಪೂರ್ಣವಾಗಿ ಆರಲು ಬಿಡಿ.
3. ಕುಕ್ಕರ್‌ನಿಂದ ಬೆಂದ ಆಲೂಗಡ್ಡೆಯನ್ನು ತೆಗೆದು, ಸಿಪ್ಪೆಯನ್ನು ತೆಗೆಯಬೇಕು.
4. ಕೈಗಳಿಂದಲೇ ಆಲೂಗಡ್ಡೆಯನ್ನು ತುಂಡಾಗಿಸಿ ಮ್ಯಾಶ್/ಜಜ್ಜಿರಿ.
5. ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆಯನ್ನು ಸೇರಿಸಿ ಬಿಸಿ ಮಾಡಿ.
6. ಈರುಳ್ಳಿಯನ್ನು ಸೇರಿಸಿ ತಿಳಿ ಹೊಂಬಣ್ಣ ಬರುವವರೆಗೆ ಹುರಿಯಿರಿ.
7. ಟೊಮೆಟೋ ಮತ್ತು ಚಿಟಕಿ ಉಪ್ಪನ್ನು ಸೇರಿಸಿ ಕಲುಕಿ.
8. ಚೆನ್ನಾಗಿ ಮಿಶ್ರಗೊಳಿಸಿ ಮುಚ್ಚಳವನ್ನು ಮುಚ್ಚಿ.
9. ಟೊಮೆಟೋ ರಸವು ಆವಿಯಾಗುವಂತೆ 5 ನಿಮಿಷಗಳ ಕಾಲ ಬೇಯಿಸಿ.
10. ಅರಿಶಿನ ಪುಡಿ, ಖಾರ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ.
11. ಎಲ್ಲವನ್ನು ಚೆನ್ನಾಗಿ ಮಿಶ್ರಗೊಳಿಸಿ.
12. ದಾಲ್ಚಿನ್ನಿ ಮತ್ತು ಲವಂಗವನ್ನು ಸೇರಿಸಿ ಚೆನ್ನಾಗಿ ಹುರಿದು, ಪಾತ್ರೆಯಲ್ಲೇ ಸೌಟಿನಿಂದ ಸ್ವಲ್ಪ ಜಜ್ಜಿರಿ.
13. ಈ ಮಿಶ್ರಣಕ್ಕೆ ಆಲೂಗಡ್ಡೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ, ಸವಿಯಲು ನೀಡಿ.
- 1. ವ್ರತ ಅಥವಾ ಉಪವಾಸ ಆಚರಣೆಯ ಸಂದರ್ಭದಲ್ಲಿ ಈ ಪಾಕವಿಧಾನಕ್ಕೆ ಈರುಳ್ಳಿಯನ್ನು ಸೇರಿಸದೆಯೇ ತಯಾರಿಸಬಹುದು.
- 2. ಕೊನೆಯಲ್ಲಿ ಮಸಾಲಾ ಪುಡಿಯನ್ನು ಸೇರಿಸಿ ಪಲ್ಯವನ್ನು ಖಾರ ಮತ್ತು ಪರಿಮಳಯುಕ್ತವಾಗಿ ತಯಾರಿಸಬಹುದು.
- ಸರ್ವಿಂಗ್ ಸೈಜ್ - 1 ಕಪ್
- ಕ್ಯಾಲೋರಿ - 145 ಕ್ಯಾಲ್
- ಫ್ಯಾಟ್ - 9 ಗ್ರಾಂ
- ಪ್ರೋಟೀನ್ - 4 ಗ್ರಾಂ
- ಕಾರ್ಬೋಹೈಡ್ರೇಟ್ - 12 ಗ್ರಾಂ
- ಸಕ್ಕರೆ - 4 ಗ್ರಾಂ
- ಫೈಬರ್ - 3 ಗ್ರಾಂ
ಆಲೂ ಪಲ್ಯ ಪಾಕವಿಧಾನದ ಹಂತ ಹಂತವಾದ ಚಿತ್ರ ವಿವರಣೆ:
1. ಕುಕ್ಕರ್‌ನಲ್ಲಿ ಆಲೂಗಡ್ಡೆಯನ್ನು ಹಾಕಿರಿ.

2. ಇದಕ್ಕೆ ನೀರನ್ನು ಸೇರಿಸಿ, ಎರಡು ಸೀಟಿ ಕೂಗಿಸಿ ಬೇಯಿಸಿಕೊಳ್ಳಿ. ನಂತರ ಸಂಪೂರ್ಣವಾಗಿ ಆರಲು ಬಿಡಿ.


3. ಕುಕ್ಕರ್‌ನಿಂದ ಬೆಂದ ಆಲೂಗಡ್ಡೆಯನ್ನು ತೆಗೆದು, ಸಿಪ್ಪೆಯನ್ನು ತೆಗೆಯಬೇಕು.


4. ಕೈಗಳಿಂದಲೇ ಆಲೂಗಡ್ಡೆಯನ್ನು ತುಂಡಾಗಿಸಿ ಮ್ಯಾಶ್/ಜಜ್ಜಿರಿ.

5. ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆಯನ್ನು ಸೇರಿಸಿ ಬಿಸಿ ಮಾಡಿ.

6. ಈರುಳ್ಳಿಯನ್ನು ಸೇರಿಸಿ ತಿಳಿ ಹೊಂಬಣ್ಣ ಬರುವವರೆಗೆ ಹುರಿಯಿರಿ.

7. ಟೊಮೆಟೊ ಮತ್ತು ಚಿಟಕಿ ಉಪ್ಪನ್ನು ಸೇರಿಸಿ ಕಲುಕಿ.


8. ಚೆನ್ನಾಗಿ ಮಿಶ್ರಗೊಳಿಸಿ ಮುಚ್ಚಳವನ್ನು ಮುಚ್ಚಿ.

9. ಟೊಮೆಟೊ ರಸವು ಆವಿಯಾಗುವಂತೆ 5 ನಿಮಿಷಗಳ ಕಾಲ ಬೇಯಿಸಿ.

10. ಅರಿಶಿನ ಪುಡಿ, ಖಾರ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ.




11. ಎಲ್ಲವನ್ನು ಚೆನ್ನಾಗಿ ಮಿಶ್ರಗೊಳಿಸಿ.

12. ದಾಲ್ಚಿನ್ನಿ ಮತ್ತು ಲವಂಗವನ್ನು ಸೇರಿಸಿ ಚೆನ್ನಾಗಿ ಹುರಿದು, ಪಾತ್ರೆಯಲ್ಲೇ ಸೌಟಿನಿಂದ ಸ್ವಲ್ಪ ಜಜ್ಜಿರಿ.



13. ಈ ಮಿಶ್ರಣಕ್ಕೆ ಆಲೂಗಡ್ಡೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ, ಸವಿಯಲು ನೀಡಿ.






Click it and Unblock the Notifications
