Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಬಿಸಿಬೇಳೆ ಬಾತ್ ರೆಸಿಪಿ
ಬಿಸಿಬೇಳೆ ಬಾತ್ ಕರ್ನಾಟಕದ ಪ್ರಸಿದ್ಧ ಭಕ್ಷ್ಯಗಳಲ್ಲಿ ಒಂದು. ಅಕ್ಕಿ, ಹುಣಸೇ ಹಣ್ಣು, ತೊಗರಿಬೇಳೆ, ವಿಶೇಷವಾದ ಮಸಾಲೆಗಳ ಸಮ್ಮಿಶ್ರಣದಿಂದ ತಯಾರಿಸಲಾಗುತ್ತದೆ. ಕನ್ನಡದಲ್ಲಿ "ಬಿಸಿ" ಎಂದರೆ "ಬಿಸಿ" ಎಂದು "ಬೇಳೆ" ಎಂದರೆ ಮಸೂರ/ತೊಗರಿಬೇಳೆ, ಬಾತ್ ಎಂದರೆ ಸ್ನಾನ ಎಂದು ಆಗುತ್ತದೆ. ಅಂದರೆ ಬೇಳೆಯಲ್ಲಿ ಅಕ್ಕಿ ಸ್ನಾನ ಮಾಡಿದ್ದು ಎನ್ನುವ ಅರ್ಥವಾಗುತ್ತದೆ.
ಕರ್ನಾಟಕ ಶೈಲಿಯ ಸಾಂಬರ್ ಅನ್ನದಂತೆ ಕಂಡರೂ ಇದು ರುಚಿ ಹಾಗೂ ಪರಿಮಳದಲ್ಲಿ ವಿಭಿನ್ನತೆಯನ್ನು ಹೊಂದಿರುತ್ತದೆ. ಅಕ್ಕಿ ಮತ್ತು ತರಕಾರಿಗಳನ್ನು ಪ್ರತ್ಯೇಕವಾಗಿ ಬೇಯಿಸಿಕೊಂಡು, ನಂತರ ಬೇಳೆ ಮಸಾಲೆ ಹಾಗೂ ತರಕಾರಿ ಮಿಶ್ರಣದಿಂದ ಈ ಭಕ್ಷ್ಯವನ್ನು ತಯಾರಿಸಲಾಗುತ್ತದೆ. ವಿಶೇಷವಾದ ಮಸಾಲ ಪುಡಿಯೊಂದಿಗೆ ತುಪ್ಪದ ಸುವಾಸನೆಯು ಈ ಪಾಕವಿಧಾನದ ಶ್ರೇಷ್ಠತೆಯನ್ನು ಹೆಚ್ಚಿಸುತ್ತದೆ.
ಈ ಪಾಕವಿಧಾನ ವಿಸ್ತಾರವಾದ ಪ್ರಕ್ರಿಯೆಯನ್ನು ಒಳಗೊಂಡಿದೆ. ಆದರೆ ಕಡಿಮೆ ಸಮಯದಲ್ಲೇ ತಯಾರಿಸಬಹುದು. ಹೆಚ್ಚು ತುಪ್ಪವನ್ನು ಸೇರಿಸಿ ಸೇವಿಸುವುದರಿಂದ ಈ ಊಟದ ಶ್ರೀಮಂತಿಕೆ ಹೆಚ್ಚುವುದು. ಈ ಭಕ್ಷ್ಯಕ್ಕೆ ಬೂಂಧಿ ಮತ್ತು ರೈತಾವನ್ನು ಸೇರಿಸಿಕೊಂಡು ತಿನ್ನುತ್ತಾರೆ. ಈ ಪಾಕವಿಧಾನವನ್ನು ಮಾಡಲು ಉತ್ಸುಕರಾಗಿದ್ದರೆ ಇಲ್ಲಿದೆ ನೋಡಿ ವೀಡಿಯೋ ಹಾಗೂ ಚಿತ್ರ ವಿವರಣೆಯ ಪಾಕವಿಧಾನ.

Recipe By: ಅರ್ಚನಾ ವಿ.
Recipe Type: ಪ್ರಮುಖ ತಿಂಡಿ
Serves: 2 ಮಂದಿಗೆ
-
ಅಕ್ಕಿ - 1 ಕಪ್
ತೊಗರಿ ಬೇಳೆ - 1 ಕಪ್
ನೀರು - 7 ಕಪ್
ಸಿಪ್ಪೆ ತೆಗೆದು ಹೆಚ್ಚಿದ ಕ್ಯಾರೇಟ್/ಗಜರಿ - 1
ಹೆಚ್ಚಿದ ಬೀನ್ಸ್ - 100 ಗ್ರಾಂ.
ರುಚಿಗೆ ತಕ್ಕಷ್ಟು ಉಪ್ಪು
ಹುಣಸೆ ಹಣ್ಣು - 1/2 ನಿಂಬೆ ಗಾತ್ರದಷ್ಟು
ಬಿಸಿಬೇಳೆ ಬಾತ್ ಪೌಡರ್ - 3 ಟೇಬಲ್ ಚಮಚ
ತುಪ್ಪ - 3 ಟೇಬಲ್ ಚಮಚ
ಬೆಲ್ಲ - 1 ಟೇಬಲ್ ಚಮಚ
ಸಾಸಿವೆ ಕಾಳು - 1/2 ಟೀ ಚಮಚ
ಕರಿಬೇವಿನ ಎಲೆ 7-10
ಹುರಿದ ಗೋಡಂಬಿ - 6-7
-
1. ಪ್ರೆಶರ್ ಕುಕ್ಕರ್‌ನಲ್ಲಿ ಅಕ್ಕಿ ಮತ್ತು ತೊಗರಿ ಬೇಳೆಯನ್ನು ಒಮ್ಮೆಲೇ ಹಾಕಿ.
2. 3 ಕಪ್ ನೀರನ್ನು ಬೆರೆಸಿ, 2 ಸೀಟಿ ಕೂಗುವವರೆಗೆ ಬೇಯಿಸಿ.
3. ಇದೇ ವೇಳೆಯಲ್ಲಿ ಪಾತ್ರೆಯೊಂದರಲ್ಲಿ 2 ಕಪ್ ನೀರನ್ನು ಹಾಕಿ ಕಾಯಲು ಇಡಿ.
4. ಕ್ಯಾರೆಟ್ ಮತ್ತು ಬೀನ್ಸ್ ಅನ್ನು ಪಾತ್ರೆಗೆ ಸೇರಿಸಿ
5. ಸ್ವಲ್ಪ ಉಪ್ಪನ್ನು ಬೆರೆಸಿ ಬೇಯಲು ಬಿಡಿ.
6. ತರಕಾರಿಗಳು ಅರ್ಧ ಬೇಯುವಂತೆ ಮುಚ್ಚಳವನ್ನು ಮುಚ್ಚಿಡಿ.
7. ಹುಣಸೆ ಹಣ್ಣಿನ ರಸವನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.
8. ಇದಲ್ಲದೆ ಬಿಸಿಬೇಳೆ ಪೌಡರ್‍ಅನ್ನು ಸೇರಿಸಿ.
9. ಇದಕ್ಕೆ ಒಂದು ಕಪ್ ನೀರನ್ನು ಬೆರೆಸಿ, ಗಂಟಾಗದಂತೆ ಚನ್ನಾಗಿ ಕಲುಕಿ.
10. ದಪ್ಪ ತಳದ ಪಾತ್ರೆಯಲ್ಲಿ 1 ಚಮಚ ತುಪ್ಪವನ್ನು ಹಾಕಿ ಬಿಸಿ ಮಾಡಿ, ಬೇಯಿಸಿಕೊಂಡ ಬೇಳೆ ಮತ್ತು ಅನ್ನದ ಮಿಶ್ರಣವನ್ನು ಸೇರಿಸಿ.
11. ನಂತರ ಬೇಯಿಸಿಕೊಂಡ ತರಕಾರಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.
12. ಅರ್ಧ ಕಪ್ ನೀರು ಮತ್ತು ಬೆಲ್ಲವನ್ನು ಸೇರಿಸಬೇಕು.
13. ಬೇಕಾದರೆ ಉಪ್ಪನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಬೇಕು.
14. ಮಿಶ್ರಣವು ಸ್ವಲ್ಪ ತೆಳು/ನೀರಾಗ ಬೇಕಾದರೆ ಸ್ವಲ್ಪ ನೀರನ್ನು ಸೇರಿಸಿ.
15. ಇದೇ ಸಮಯದಲ್ಲಿ ಒಂದು ಚಿಕ್ಕ ಪಾತ್ರೆಯಲ್ಲಿ ತುಪ್ಪವನ್ನು ಬೆರೆಸಿ.
16. ಸಾಸಿವೆಯನ್ನು ಹಾಕಿ, ಸಿಡಿಯುವವರೆಗೆ ಹುರಿಯಿರಿ.
17. ಕರಿಬೇವಿನ ಎಲೆ, ಗೋಡಂಬಿಗಳನ್ನು ಸೇರಿಸಿ ಬಿಸಿಯಾದ ಒಂದು ಒಗ್ಗರಣೆ ತಯಾರಿಸಿ.
18. ಒಗ್ಗರಣೆ ತಯಾರಾದ ಮೇಲೆ ಅನ್ನದ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಕಲುಕಿ.
19. ಮತ್ತೊಮ್ಮೆ ತುಪ್ಪವನ್ನು ಮಿಶ್ರಣದ ಮೇಲ್ಭಾಗಕ್ಕೆ ಹಾಕಿ.
20. ಗೋಡಂಬಿಯಿಂದ ಅಲಂಕರಿಸಿ.
- 1. ಕ್ಯಾರೆಟ್/ಗಜರಿ ಎಷ್ಟು ಸಿಹಿಯಾಗಿದೆ ಎನ್ನುವುದನ್ನು ಆಧರಿಸಿ ಬೆಲ್ಲವನ್ನು ಸೇರಿಸಿ.
- 2. ಹೆಚ್ಚು ತುಪ್ಪವನ್ನು ಬೆರೆಸಿದಷ್ಟು ರುಚಿಯು ಹೆಚ್ಚುವುದು.
- 3. ನಿಮಗೆ ಬೇಕಾದ ತರಕಾರಿಗಳನ್ನು ಸೇರಿಸಿಕೊಳ್ಳಬಹುದು.
- 4. ನಿಮಗೆ ಬೇಕಾದಲ್ಲಿ ತೆಂಗಿನ ತುರಿಯನ್ನು ಸೇರಿಸಬಹುದು. ಇದು ಭಿನ್ನವಾದ ರುಚಿಯನ್ನು ನೀಡುತ್ತದೆ.
- ಸರ್ವಿಂಗ್ ಸೈಜ್ - 1 ಕಪ್
- ಕ್ಯಾಲೋರೀಸ್ - 343 ಕ್ಯಾಲ್
- ಫ್ಯಾಟ್ - 5 ಗ್ರಾಂ.
- ಪ್ರೋಟೀನ್ - 7 ಗ್ರಾಂ.
- ಕಾರ್ಬೋಹೈಡ್ರೇಟ್ - 67 ಗ್ರಾಂ.
- ಸಕ್ಕರೆ - 2 ಗ್ರಾಂ.
- ಫೈಬರ್ - 4 ಗ್ರಾಂ.
- ಐರನ್ - ಶೇ.20
- ವಿಟಮಿನ್ ಎ - ಶೇ.44
ಬಿಸಿಬೇಳೆ ಬಾತ್ ಪಾಕ ವಿಧಾನ
1. ಪ್ರೆಶರ್ ಕುಕ್ಕರ್‌ನಲ್ಲಿ ಅಕ್ಕಿ ಮತ್ತು ತೊಗರಿ ಬೇಳೆಯನ್ನು ಒಮ್ಮೆಲೇ ಹಾಕಿ.

2. 3 ಕಪ್ ನೀರನ್ನು ಬೆರೆಸಿ, 2 ಸೀಟಿ ಕೂಗುವವರೆಗೆ ಬೇಯಿಸಿ.

3. ಇದೇ ವೇಳೆಯಲ್ಲಿ ಪಾತ್ರೆಯೊಂದರಲ್ಲಿ 2 ಕಪ್ ನೀರನ್ನು ಹಾಕಿ ಕಾಯಲು ಇಡಿ.

4. ಕ್ಯಾರೆಟ್ ಮತ್ತು ಬೀನ್ಸ್ ಅನ್ನು ಪಾತ್ರೆಗೆ ಸೇರಿಸಿ.

5. ಸ್ವಲ್ಪ ಉಪ್ಪನ್ನು ಬೆರೆಸಿ ಬೇಯಲು ಬಿಡಿ.

6. ತರಕಾರಿಗಳು ಅರ್ಧ ಬೇಯುವಂತೆ ಮುಚ್ಚಳವನ್ನು ಮುಚ್ಚಿಡಿ.

7. ಹುಣಸೆ ಹಣ್ಣಿನ ರಸವನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.

8. ಇದಲ್ಲದೆ ಬಿಸಿಬೇಳೆ ಪೌಡರ್‍ಅನ್ನು ಸೇರಿಸಿ.

9. ಇದಕ್ಕೆ ಒಂದು ಕಪ್ ನೀರನ್ನು ಬೆರೆಸಿ, ಗಂಟಾಗದಂತೆ ಚನ್ನಾಗಿ ಕಲುಕಿ.

10. ದಪ್ಪ ತಳದ ಪಾತ್ರೆಯಲ್ಲಿ 1 ಚಮಚ ತುಪ್ಪವನ್ನು ಹಾಕಿ ಬಿಸಿ ಮಾಡಿ, ಬೇಯಿಸಿಕೊಂಡ ಬೇಳೆ ಮತ್ತು ಅನ್ನದ ಮಿಶ್ರಣವನ್ನು ಸೇರಿಸಿ.

11. ನಂತರ ಬೇಯಿಸಿಕೊಂಡ ತರಕಾರಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.

12. ಅರ್ಧ ಕಪ್ ನೀರು ಮತ್ತು ಬೆಲ್ಲವನ್ನು ಸೇರಿಸಬೇಕು.

13. ಬೇಕಾದರೆ ಉಪ್ಪನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಬೇಕು.

14. ಮಿಶ್ರಣವು ಸ್ವಲ್ಪ ತೆಳು/ನೀರಾಗ ಬೇಕಾದರೆ ಸ್ವಲ್ಪ ನೀರನ್ನು ಸೇರಿಸಿ.

15. ಇದೇ ಸಮಯದಲ್ಲಿ ಒಂದು ಚಿಕ್ಕ ಪಾತ್ರೆಯಲ್ಲಿ ತುಪ್ಪವನ್ನು ಬೆರೆಸಿ.

16. ಸಾಸಿವೆಯನ್ನು ಹಾಕಿ, ಸಿಡಿಯುವವರೆಗೆ ಹುರಿಯಿರಿ.

17. ಕರಿಬೇವಿನ ಎಲೆ, ಗೋಡಂಬಿಗಳನ್ನು ಸೇರಿಸಿ ಬಿಸಿಯಾದ ಒಂದು ಒಗ್ಗರಣೆ ತಯಾರಿಸಿ.

18. ಒಗ್ಗರಣೆ ತಯಾರಾದ ಮೇಲೆ ಅನ್ನದ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಕಲುಕಿ.

19. ಮತ್ತೊಮ್ಮೆ ತುಪ್ಪವನ್ನು ಮಿಶ್ರಣದ ಮೇಲ್ಭಾಗಕ್ಕೆ ಹಾಕಿ.

20. ಗೋಡಂಬಿಯಿಂದ ಅಲಂಕರಿಸಿ.

Click it and Unblock the Notifications