For Quick Alerts
ALLOW NOTIFICATIONS  
For Daily Alerts

ಬೇಸಿಗೆಗೆ ಸವಿ ರುಚಿಯಾದ ಚಾಕಲೇಟ್ ಕುಲ್ಫಿ ರೆಸಿಪಿ!

|

ಬೇಸಿಗೆಯ ಬೇಸಿಗೆಯಿಂದ ನಿಮ್ಮನ್ನು ಸ್ವತಂತ್ರಗೊಳಿಸಲು, ತಂಪಾದ ಸಿಹಿ ಐಸ್‌ಕ್ರೀಂ ಕುಲ್ಫಿಯನ್ನು ನಿಮಗೆ ಸವಿಯಬಹುದು. ಕುಲ್ಫಿ ಒಂದು ಸಾಂಪ್ರದಾಯಿಕ ಭಾರತೀಯ ಐಸ್‌ಕ್ರೀಂ ಆಗಿದ್ದು ಹಾಲನ್ನು ಬಳಸಿಕೊಂಡು ಇದನ್ನು ತಯಾರಿಸಲಾಗುತ್ತದೆ. ಹಾಲನ್ನು ಕುದಿಸಿ ನಂತರ ಕೇಸರಿ ಹಾಗೂ ಪಿಸ್ತಾಚಿಯೋಸ್ ನಂತಹ ಸಾಮಾಗ್ರಿಗಳೊಂದಿಗೆ ಮಿಶ್ರ ಮಾಡಲಾಗುತ್ತದೆ.

ಮನೆಯಲ್ಲೇ ತಯಾರಿಸಲಬಹುದಾದ ವಿಭಿನ್ನ ಬಗೆಯ ಕುಲ್ಫಿ ರೆಸಿಪಿಗಳಿವೆ. ಕೇಸರಿಯಿಂದ ಹಿಡಿದು ಪಿಸ್ತಾ ಮಾವು ಹಾಗೂ ಚಾಕಲೇಟ್ ಕುಲ್ಫಿ, ಹೀಗೆ ಸಾಮಾಗ್ರಿಗಳು ಬದಲಾಗುತ್ತಿರುತ್ತವೆ. ನಿಮ್ಮ ಕುಲ್ಫಿಗೆ ಫಲೂಡಾ ಮತ್ತು ರೋಸ್ ಸಿರಪ್‌ನ ಟೋಪಿಂಗ್ ಅನ್ನು ಕೂಡ ನೀಡಬಹುದು.

Yummy Chocolate Kulfi Recipe: Summer Treat

ಈ ರೆಸಿಪಿ ತುಂಬಾ ಸರಳವಾಗಿದ್ದು ಇದಕ್ಕೆ ಅವಶ್ಯಕವಾಗಿರುವ ಸಾಮಾಗ್ರಿಗಳು ನಿಮ್ಮಲ್ಲಿದ್ದರೆ ಸಾಕು. ಈ ಬೇಸಿಗೆಯಲ್ಲಿ ಸವಿಯಲು ಈ ಕುಲ್ಫಿ ರೆಸಿಪಿ ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ಆನಂದವನ್ನು ನೀಡುವುದು ಖಂಡಿತ.

ಬನ್ನಿ ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದಾದ ಕುಲ್ಫಿ ರೆಸಿಪಿಯ ತಯಾರಿ ವಿಧಾನವನ್ನು ಇಲ್ಲಿ ನೀಡುತ್ತಿದ್ದೇವೆ. ಅದರತ್ತ ನೋಟ ಹರಿಸಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಬೇಸಿಗೆಗೆ ಬೆಸ್ಟ್ ಲೆಮನ್ ಐಸ್ ಕ್ರೀಮ್

ಪ್ರಮಾಣ: 5
ಸಿದ್ಧತಾ ಸಮಯ: 15 ನಿಮಿಷಗಳು

ಸಾಮಾಗ್ರಿಗಳು:
1.ಹಾಲು - 2 ಕಪ್‌ಗಳು
2.ಮಿಲ್ಕ್ ಪೌಡರ್ - 1 ಸ್ಪೂನ್
3.ಚಾಕಲೇಟ್ - 1 ಕಪ್ (ತುರಿದದ್ದು)
4. ಸಕ್ಕರೆ - 1/2 ಕಪ್
5.ಪಿಸ್ತಾಚಿಯೋಸ್ - ಕೆಲವು (ಕೊಚ್ಚಿದ)

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಯಮ್ಮೀ...ವೆನಿಲ್ಲಾ ಕಸ್ಟರ್ಡ್ ರೆಸಿಪಿ

ಮಾಡುವ ವಿಧಾನ:
1.ಗ್ಲಾಸ್‌ನಲ್ಲಿ, ಸ್ವಲ್ಪ ಹಾಲು ತೆಗೆದುಕೊಂಡು ಅದಕ್ಕೆ ಮಿಲ್ಕ್ ಪೌಡರ್ ಸೇರಿಸಿ. ಗಂಟುಗಳು ಬಾರದಂತೆ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ಪಕ್ಕದಲ್ಲಿಡಿ.

2.ಸಣ್ಣ ಉರಿಯಲ್ಲಿ ತಳಪಾಯವಿರುವ ಪಾತ್ರೆಯಲ್ಲಿ ಹಾಲನ್ನು ಕುದಿಸಿ. ಆಗಾಗ್ಗೆ ತಿರುಗಿಸುತ್ತಿರಿ. ಹಾಲು ದಪ್ಪಗಾಗುವರೆಗೆ ಕುದಿಸಿ ಮತ್ತು ಅದರ ಮೂರನೇ ಒಂದು ಭಾಗಕ್ಕೆ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಿ.

3.ಇದೀಗ ಮಿಲ್ಕ್ ಪೌಡರ್ ಅನ್ನು ಸೇರಿಸಿ ಹಾಗೂ ಸಕ್ಕರೆಯನ್ನು ಮಿಶ್ರ ಮಾಡಿ ಇನ್ನೊಂದು 5 ನಿಮಿಷಗಳ ಕಾಲ ಕುದಿಸಿ. ಸಕ್ಕರೆ ಕರಗುವವರೆಗೆ ಆಗಾಗ್ಗೆ ತಿರುಗಿಸುತ್ತಿರಿ.

4.ಪ್ಯಾನ್ ಆಫ್ ಮಾಡಿ ಮತ್ತು ಪಿಸ್ತಾಚಿಯೋಸ್ ಹಾಗೂ ತುರಿದ ಚಾಕಲೇಟ್ ಸೇರಿಸಿ. ಪುನಃ ಮಿಶ್ರ ಮಾಡಿಕೊಳ್ಳಿ ಸ್ವಲ್ಪ ಹೊತ್ತಿನವರೆಗೆ ಅದನ್ನು ತಣ್ಣಗೆ ಮಾಡಿ. ಆಗ ಚಾಕಲೇಟ್ ಕರಗುತ್ತದೆ.

5.ಈ ಮಿಶ್ರಣವನ್ನು ಪ್ಯಾನ್‌ಗೆ ಹಾಕಿ ಮತ್ತು 1 ಗಂಟೆಯಷ್ಟು ಕಾಲ ರೆಫ್ರಿಜರೇಟ್ ಮಾಡಿ.

6.ಈಗ ಅದನ್ನು ಹೊರಗೆ ತೆಗೆಯಿರಿ ಹಾಗೂ ನೊರೆಯಂತೆ ಮಾಡಿಕೊಳ್ಳಲು ಮಿಕ್ಸರ್‌ನಲ್ಲಿ ಗ್ರೈಂಡ್ ಮಾಡಿಕೊಳ್ಳಿ. ಮೋಲ್ಡ್‌ಗಳಿಗೆ ಇದನ್ನು ಸುರಿಯಿರಿ ಮತ್ತು 5-6 ಗಂಟೆಗಳ ಕಾಲ ಅದನ್ನು ರೆಫ್ರಿಜರೇಟ್ ಮಾಡಿ.

ಚಾಕಲೇಟ್ ಕುಲ್ಫಿ ರೆಸಿಪಿ ಸವಿಯಲು ಸಿದ್ಧವಾಗಿದೆ. ಚಿಲ್ ಐಸ್‌ಕ್ರೀಂನೊಂದಿಗೆ ಅಥವಾ ಫಲೂಡಾ ಸಿರಪ್‌ನೊಂದಿಗೆ ಇದನ್ನು ಸರ್ವ್ ಮಾಡಿ.

English summary

Yummy Chocolate Kulfi Recipe: Summer Treat

To take a break from the scorching summer heat, you can enjoy the chilled and sweet dessert, kulfi. Kulfi is the traditional Indian ice cream which is prepared using milk.
Story first published: Tuesday, April 8, 2014, 11:11 [IST]
X
Desktop Bottom Promotion