For Quick Alerts
ALLOW NOTIFICATIONS  
For Daily Alerts

ದೀಪಾವಳಿ ಸ್ಪೆಷಲ್: ಗರಂ ಗರಂ ಕ್ಯಾಪ್ಸಿಕಂ ಸೂಪ್....

ಅರೆಅರೆ ಇದೇನಿದು ಕ್ಯಾಪ್ಸಿಕಂ ಸೂಪ್?, ಹೆಸರು ಕೇಳಿ ಅಚ್ಚರಿಯಾತೇ? ಹೌದು, ದೀಪಾವಳಿಗೆ ಹಬ್ಬಕ್ಕೆ ಇನ್ನೇನು ಒಂದೆರಡು ದಿನಗಳು ಮಾತ್ರ ಉಳಿದಿವೆ, ಅದಕ್ಕೆಂದೇ ಈ ವಿಶೇಷ ರೆಸಿಪಿ ನಿಮಗಾಗಿ.....

By Vani nayak
|

ದೀಪಾವಳಿ ಹಬ್ಬದ ದಿನ ವಿಶೇಷ ತಿನಿಸುಗಳನ್ನೊಳಗೊಂಡ ಊಟವನ್ನು ಸೇವಿಸುವುದಕ್ಕೆ ಮೊದಲು, ಹಸಿವನ್ನು ಹೆಚ್ಚಿಸುವ ಪೇಯವನ್ನು ಯಾಕೆ ತೆಗೆದುಕೊಳ್ಳಬಾರದು? ಸೂಪ್ ಗಿಂತ ಬೇರೆ ಪೇಯ ಮತ್ತೊಂದಿಲ್ಲ.

ದೀಪಾವಳಿ ಹಬ್ಬದ ದಿನ ನಿಮಗೆ ಬಹಳಷ್ಟು ಕೆಲಸ ಕಾರ್ಯಗಳಿರುತ್ತವೆ. ಇಂತಹ ದಿನಗಳಲ್ಲಿ ಹೆಚ್ಚಿನ ಕೆಲಸಗಳಿಂದ ಆಯಾಸವಾಗುವುದು ಸಹಜ. ಸೂಪನ್ನು ಸೇವಿಸುವುದರಿಂದ ನಿಮ್ಮ ದೇಹದಲ್ಲಿನ ನೀರಿನ ಸಮತೋಲನತೆಯನ್ನು ಕಾಪಾಡಿ ಆಯಾಸವಾಗದಂತೆ ನೋಡಿಕೊಳ್ಳುತ್ತದೆ. ದೀಪಾವಳಿ ವಿಶೇಷ: ರುಚಿ ರುಚಿಯಾದ ಹಾಲಿನ ಪಾಯಸ

ಅದಕ್ಕಾಗಿ ನಾವು ನಿಮಗಾಗಿ ಒಂದು ವಿಭಿನ್ನವಾದ ರೋಸ್ಟೆಡ್ ಕ್ಯಾಪ್ಸಿಕಂ (ದೊಣ್ಣೆ ಮೆಣಸಿನ ಕಾಯಿ ಅಥವಾ ದಪ್ಪ ಮೆಣಸಿನಕಾಯಿ) ಸೂಪ್ ರೆಸಿಪಿಯನ್ನು ಮಾಡುವುದರ ಬಗ್ಗೆ ತಿಳಿಸಿಕೊಡುತ್ತಿದ್ದೇವೆ.

ಈ ರೆಸಿಪಿಯನ್ನು ತಯಾರಿಸಲು ನೀವು ಯಾವುದೇ ಬಣ್ಣದ ದಪ್ಪ ಮೆಣಸಿನಕಾಯಿಯನ್ನು ಬಳಸಬಹುದು. ವಿವಿಧ ಬಗೆಯ ದಪ್ಪ ಮೆಣಸಿನಕಾಯಿ ವಿವಿಧ ರುಚಿಯನ್ನು ಕೊಡುತ್ತದೆ. ಈ ಕೆಳಗೆ ಈ ರೆಸಿಪಿಯನ್ನು ಮಾಡುವ ಬಗೆ, ಬೇಕಾಗುವ ಸಾಮಗ್ರಿಗಳ ವಿವರಣೆಯನ್ನು ನೀಡಲಾಗಿದೆ. ಮುಂದೆ ಓದಿ.

ಅಳತೆ - 4 ಮಂದಿಗೆ ಸಾಕಾಗುವಷ್ಟು
*ಸಿದ್ಧತಾ ಸಮಸ - 10 ನಿಮಿಷಗಳು
*ತಯಾರಿಸುವ ಸಮಯ - 30 ನಿಮಿಷಗಳು

ಬೇಕಾಗುವ ಸಾಮಗ್ರಿಗಳು:
1. ಕೆಂಪು ದಪ್ಪ ಮೆಣಸಿನಕಾಯಿ - 2
2. ಎಣ್ಣೆ - 1 ಟೇಬಲ್ ಚಮಚ
3. ಟೊಮೇಟೋ - 4 (ಒಂದರಲ್ಲಿ 4 ತುಂಡುಗಳಾಗಿ ಎಲ್ಲವನ್ನು ಹೆಚ್ಚಿರಬೇಕು)
4. ಬೆಳ್ಳುಳ್ಳಿ - 1 ಎಸಳು
5. ಲವಂಗದ ಎಲೆ - 2
6. ನೀರು - 3 ಕಪ್
7. ಹಾಲು - 1/2 ಕಪ್
8. ಕಾರ್ನ್ ಫ್ಲೋರ್ - 1 1/2 ಟೇಬಲ್ ಚಮಚ
9. ಉಪ್ಪು - ರುಚಿಗೆ ತಕ್ಕಷ್ಟು
10. ಸಕ್ಕರೆ - ಒಂದು ಚಿಟಕಿ (ನಿಮ್ಮ ಆಯ್ಕೆ)
11. ಕರಿ ಮೆಣಸು - ಒಂದು ಚಿಟಕಿ ಅಲಂಕಾರಕ್ಕಾಗಿ (ನಿಮ್ಮ ಆಯ್ಕೆ)

ದೀಪಾವಳಿಯ ವಿಶೇಷ: ಮನತಣಿಸುವ ವೈವಿಧ್ಯ 10 ರೆಸಿಪಿಗಳು

ಮಾಡುವ ನಿಧಾನ
1. ತಾಜಾ ದಪ್ಪ ಮೆಣಸಿನಕಾಯಿಯನ್ನು ತೆಗೆದುಕೊಂಡು ಎಲ್ಲಾ ಕಡೆ ಎಣ್ಣೆ ಹಚ್ಚಿರಿ.

Roasted Capsicum Soup For Diwali

2. ಈಗ ಒಂದು ಫೋರ್ಕ್ ಗೆ ಚುಚ್ಚಿ ಗ್ಯಾಸ್ ಒಲೆಯ ಮೇಲೆ ಚೆನ್ನಾಗಿ ಸುಡಿ.
3. ದಪ್ಪ ಮೆಣಸಿನಕಾಯಿ ಕಪ್ಪು ಬಣ್ಣ ತಿರುಗುವವರೆಗೆ ಅದನ್ನು ಸುಡಬೇಕು.

4. ಈಗ, ಒಂದು ಬೌಲ್ ನಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ ಸುಟ್ಟ ದಪ್ಪ ಮೆಣಸಿನಕಾಯನ್ನು ಅದ್ದಬೇಕು. ನಿಮ್ಮ ಕೈಗಳಿಂದ ಕಪ್ಪಗಾದ ಭಗವನ್ನು ತೆಗೆಯಬೇಕು.
5. ಇದಾದ ನಂತರ ದಪ್ಪ ಮೆಣಸಿನಕಾಯನ್ನು ಬೌಲ್ ನಿಂದ ತೆಗೆದು ಕಪ್ಪಾದ ಭಾಗವನ್ನು ತೆಗೆಯಬೇಕು.

6. ದಪ್ಪ ತಳದ ಪ್ಯಾನ್ ನನ್ನು ತೆಗೆದುಕೊಂಡು ಹಣ್ಣಾದ ಟೊಮೇಟೋವನ್ನು ಹಾಕಿ.
7. ನಿಮಗೆ ಬೆಳ್ಳುಳ್ಳಿಯ ವಾಸನೆ ಇಷ್ಟವಾದ್ದಲ್ಲಿ ಅದನ್ನೂ ಹಾಕಿ ಇಲ್ಲವಾದ್ದಲ್ಲಿ ಬೇಡ.
8. ಈಗ, ಲವಂಗದ ಎಲೆ, ನೀರು, ದಪ್ಪ ಮೆಣಸಿನಕಾಯಿಯ ತುಂಡುಗಳನ್ನು ಪ್ಯಾನ್‌ನಲ್ಲಿ ಹಾಕಿ. ಚೆನ್ನಾಗಿ ಕುದ್ದು ಬೇಯಬೇಕು.

9. ನಂತರ ಒಲೆಯನ್ನು ಆರಿಸಿ. ತಣ್ಣಗಾಗಲು ಬಿಡಿ.
10. ಎಲ್ಲವೂ ತಣ್ಮಗಾದ ಬಳಿಕ ಬ್ಲೆಂಡರ್ ನಲ್ಲಿ ಹಾಕಿ.
11. ಬ್ಲೆಂಡರ್ ತುಂಬಾ ಹಾಕದೇ ಬೇರೇಬೇರೆಯಾಗಿ ಹಾಕಿ ಚೆನ್ನಾಗಿ ಬ್ಲೆಂಡ್ ಮಾಡಿಕೊಂಡು ಬೌಲ್ ಗೆ ಮಿಶ್ರಣವನ್ನು ಸುರಿಯಿರಿ.

12. ಒಂದು ಕಡಾಯಿ ತೆಗೆದುಕೊಂಡು ಮಿಶ್ರಣವನ್ನು ಸುರಿದು ಕುದಿಯಲು ಬಿಡಿ. ಇದೇ ವೇಳೆಗೆ ನೀವು ಹಾಲು ಮತ್ತು ಕಾರ್ನ್ ಮಿಶ್ರಣವನ್ನು ತಯಾರಿಸಿ.
13. ತಣ್ಣಗಿನ ಹಾಲಿಗೆ ಕಾರ್ನ್ ಫ್ಲೋರ್ ಅನ್ನು ಮಿಶ್ರಣ ಮಾಡಿ ನಿಧಾನವಾಗಿ ಕುದಿಯುತ್ತಿರುವ ಸೂಪಿನ ಮಿಶ್ರಣಕ್ಕೆ ಸುರಿಯಿರಿ.

14. ಕಲಕ್ಕುತ್ತಲೇ ಇರಬೇಕು. ಇಲ್ಲವಾದ್ದಲ್ಲಿ ಕಾರ್ನ್ ಫ್ಲೋರ್ ತುಂಬಾ ಜಿಗಿಯಾಗಿ ಬಿಡುತ್ತದೆ.
15. ಸೂಪಿನ ರುಚಿ ನೋಡಿ. ಹುಳಿ ಅನಿಸಿದರೆ, ಸ್ವಲ್ಪವೇ ಸಕ್ಕರಯನ್ನು ಸೇರಿಸಿ.

16. ಸ್ವಲ್ಪ ಹೊತ್ತು ಕುದಿಯಲು ಬಿಡಿ. ಸರಿಯಾದ ಹದ ಬಂದ ಕೂಡಲೆ ಸೂಪ್ ಬೌಲ್ ಗೆ ಸುರಿಯಿರಿ.
17. ಹೀಗೆ ಮಾಡಿದ್ದಲ್ಲಿ, ನಿಮ್ಮ ರೋಸ್ಟೆಡ್ ಕ್ಯಾಪ್ಸಿಕಮ್ ಸೂಪ್ ತಯಾರಾಗುತ್ತದೆ.

ದೀಪಾವಳಿಗೆ 7 ಬಗೆಯ ಸಿಹಿತಿಂಡಿಗಳ ರೆಸಿಪಿ

ಆದ್ದರಿಂದ ದೀಪಾವಳಿ ಹಬ್ಬಕ್ಕೆ, ನೀವು ಒಮ್ಮೆ ರೋಸ್ಟೆಡ್ ಕ್ಯಾಪ್ಸಿಕಮ್ ಸೂಪ್ ರೆಸಿಪಿಯನ್ನು ಮಾಡಿ ಮನೆ ಮಂದಿಯರಿಗೆಲ್ಲಾ ಕೊಟ್ಟು ರುಚಿಯ ಬಗ್ಗೆ ನಮಗೆ ತಿಳಿಸಿ.

English summary

Roasted Capsicum Soup For Diwali

On Diwali, you have lots of things to do, isn't it? It is quite obvious that you can get exhausted. Having soups can keep the water balance intact in your body and you won’t feel a lack of energy too. So, here are the ingredients and a simple recipe of making the roasted capsicum soup. Read on to know more.
X
Desktop Bottom Promotion