For Quick Alerts
ALLOW NOTIFICATIONS  
For Daily Alerts

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸೂಪ್

|

ಮಳೆಗಾಲದಲ್ಲಿ ಬಿಸಿಬಿಸಿಯಾದ ಮಸಾಲ ಟೀ ಅಥವಾ ಸೂಪ್ ಕುಡಿಯುವುದು ಒಳ್ಳೆಯದು. ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಈ ಆಹಾರ ಸಾಮಾಗ್ರಿಗಳು ಮೈಯನ್ನು ಬೆಚ್ಚಗಿಡಲು ಮತ್ತು ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಔಷಧೀಯ ಗುಣವಿರುವ ಈ ಪದಾರ್ಥಗಳಿಂದ ಆರೋಗ್ಯಕರ ಮತ್ತು ರುಚಿಕರವಾದ ಸೂಪ್ ತಯಾರಿಸಬಹುದಾಗಿದ್ದು ಸೂಪ್ ತಯಾರಿಸುವ ಸರಳ ವಿಧಾನ ನೋಡಿ ಇಲ್ಲಿದೆ.

Onion Garlic Ginger Soup

ಬೇಕಾಗುವ ಸಾಮಾಗ್ರಿಗಳು:
* 2 ಈರುಳ್ಳಿ
* 1೦ ಬೆಳ್ಳುಳ್ಳಿ ಎಸಳು
* ಒಂದು ಇಂಚಿನಷ್ಟು ದೊಡ್ಡದಿರುವ ಶುಂಠಿ
* 2 ಚಮಚ ತುಪ್ಪ
* 1/2 ಚಮಚ ಅರಿಶಿಣ ಪುಡಿ
* ಒಂದು ಚಮಚ ಸಕ್ಕರೆ
* ಒಂದು ಚಮಚ ಕಾಳು ಮೆಣಸಿನ ಪುಡಿ
* ರುಚಿಗೆ ತಕ್ಕ ಉಪ್ಪು

ತಯಾರಿಸುವ ವಿಧಾನ:

1. ಈರುಳ್ಳಿಯನ್ನು ಸಿಪ್ಪೆ ತೆಗೆದು ಉದ್ದುದ್ದವಾಗಿ ಕತ್ತರಿಸಬೇಕು.

2. ಒಂದು ಬಾಣಲೆಯಲ್ಲಿ 2 ಚಮಚ ತುಪ್ಪ ಹಾಕಿ ಅದರಲ್ಲಿ ಈರುಳ್ಳಿ, ಬೆಳ್ಳುಳ್ಳು, ಶುಂಠಿ ತುಂಡು ಹಾಕಿ, ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು.

3. ನಂತರ ಈ ಎಲ್ಲಾ ಮಿಶ್ರಣದ ಜೊತೆ ಕಾಲು ಚಮಚ ಅರಿಶಿಣ ಪುಡಿ ಹಾಕಿ ಮಿಕ್ಸಿಯಲ್ಲಿ ತರಿತರಿಯಾಗಿ ರುಬ್ಬಿಕೊಳ್ಳಬೇಕು.

4. ನಂತರ ಪಾತ್ರೆಗೆ ಹಾಕಿ ಸೂಪ್ ಹದಕ್ಕೆ ಬರುವಷ್ಟು ನೀರು ಸೇರಿಸಿ ಕುದಿಸಬೇಕು.

5. ಈರುಳ್ಳಿ ಮಿಶ್ರಣ ಕುದಿಯುತ್ತಿರುವಾಗ 1೦ ಚಮಚ ಹಾಲು, ರುಚಿಗೆ ತಕ್ಕ ಉಪ್ಪು, ಒಂದು ಚಮಚ ಸಕ್ಕರೆ, ಒಂದು ಚಮಚ ಕಾಳುಮೆಣಸಿನ ಪುಡಿ ಬೆರೆಸಿ 2-3 ನಿಮಿಷ ಕುದಿಸಬೇಕು.

ಈ ಸೂಪ್ ಬಿಸಿಬಿಸಿಯಾಗಿರುವಾಗಲೇ ಕುಡಿದರೆ ತುಂಬಾ ರುಚಿಯಾಗಿರುತ್ತದೆ. ನೆಗಡಿ, ಗಂಟಲು ನೋವು, ಕೆಮ್ಮು ಇದ್ದಾಗ ಈ ಸೂಪ್ ಮಾಡಿ ಕುಡಿದರೆ ಶೀತ, ಕೆಮ್ಮು ಸಮಸ್ಯೆ ನಿವಾರಣೆಯಾಗುವುದು.

English summary

Onion Garlic Ginger Soup | Variety Of Soup Recipe | ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಮಿಶ್ರಣದ ಸೂಪ್ | ಅನೇಕ ಬಗೆಯ ಸೂಪ್ ರೆಸಿಪಿ

In rainy season we should have healthy drinks and foods. Garlic, ginger will help to add immunity power in the body. By this You can prepare tasty and healthy soup, here is a recipe.
X
Desktop Bottom Promotion