Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಮನೆಯಲ್ಲೇ ತಯಾರಿಸಿ ರುಚಿಕರವಾದ ಮಾವಿನ ಹಣ್ಣಿನ ಜ್ಯೂಸ್!
ಬೇಸಿಗೆ ಹಣ್ಣುಗಳ ರಾಜ ಮಾವು ತನ್ನ ರುಚಿಯನ್ನು ತೋರಿಸುವ ಕಾಲ. ಇನ್ನು ಮಾವಿನ ಹಣ್ಣಿನ ರುಚಿ ಮಾತ್ರ ಸವಿದರೆ ಸಾಕೆ? ಅದರ ಜೊತೆಗೆ ಆ ಹಣ್ಣಿನ ರಸವನ್ನು ಸೇವಿಸಿದಾಗ ತಾನೆ ಅದರ ರುಚಿ ನಮ್ಮ ರುಚಿ ಗ್ರಂಥಿಗಳಿಗೆ ಆಹ್ಲಾದವನ್ನುಂಟು ಮಾಡುವುದು.
ಮಾವಿನ ಹಣ್ಣಿನ ರಸವನ್ನು ಸೇವಿಸಬೇಕೆಂದು ಸಂಸ್ಕರಿಸಿದ ರಸ ಅಥವಾ ಜ್ಯೂಸ್ ಕಾರ್ನರ್‌ಗಳಲ್ಲಿ ಮಾವಿನ ಜ್ಯೂಸ್ ಸೇವಿಸುವ ಬದಲು, ನಿಮ್ಮ ಮನೆಯಲ್ಲಿಯೇ ಅದನ್ನು ತಯಾರಿಸಿಕೊಳ್ಳಿ. ಈ ಋತುವಿನಲ್ಲಿ ಮಾವಿನ ಹಣ್ಣಿನ ರಸವನ್ನು ಮನೆಯಲ್ಲಿಯೇ ಮಾಡುವುದನ್ನು ನಾವು ಇಂದು ನಿಮಗೆ ತಿಳಿಸುತ್ತಿದ್ದೇವೆ.

ಅಗತ್ಯವಾದ ಪದಾರ್ಥಗಳು
*ನಾಲ್ಕು ಜನ ಸೇವಿಸಬಹುದು
*2 ಹಣ್ಣಾದ ಮಾವಿನಹಣ್ಣುಗಳು
*1 ಕಪ್ ನೀರು
*2 ಟೀ.ಚಮಚ ಸಕ್ಕರೆ
*ಒಂದಿಷ್ಟು ಐಸ್ ಕ್ಯೂಬ್‍ಗಳು
ಮಾಡುವ ವಿಧಾನ
*ಮಾವಿನ ಹಣ್ಣುಗಳ ಸಿಪ್ಪೆಯನ್ನು ತೆಗೆಯಿರಿ.
*ಇದನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ.
*ಮಾವು, ಐಸ್, ನೀರು ಮತ್ತು ಸಕ್ಕರೆ ಎಲ್ಲವನ್ನೂ ಮಿಕ್ಸಿನಲ್ಲಿ ಹಾಕಿ. ಚೆನ್ನಾಗಿ ರುಬ್ಬಿಕೊಳ್ಳಿ.
*ನಂತರ ಇದನ್ನು ಶೋಧಿಸಿಕೊಳ್ಳಿ.
*ಉಳಿದ ಸಿಪ್ಪೆಗಳನ್ನು ಮತ್ತು ನಾರನ್ನು ತೆಗೆದು ದೂರವಿಡಿ.
*ಈ ಜ್ಯೂಸನ್ನು ಗ್ಲಾಸುಗಳಲ್ಲಿ, ಅಲಂಕಾರಕ್ಕಾಗಿ ಒಂದು ತುಂಡು ಮಾವಿನ ಹಣ್ಣನ್ನು ಸಿಕ್ಕಿಸಿ ಸರ್ವ್ ಮಾಡಿ.
ಸಲಹೆಗಳು
*ಮಾವಿನಹಣ್ಣುಗಳಲ್ಲಿ ಉತ್ತಮವಾದ ಸ್ವಾದದ ಜೊತೆಗೆ, ಒಳ್ಳೆಯ ಸುವಾಸನೆ ಸಹ ಇರುತ್ತದೆ. ಮಾವಿನ ಹಣ್ಣಿನ ಜೊತೆಗೆ ಜಿಪುಣತನ ಮಾಡಬೇಡಿ. ಹೆಚ್ಚು ಮಾವಿನ ಹಣ್ಣು ಬಳಸಿದಷ್ಟು ನೀರನ್ನು ಹೆಚ್ಚು ಮಾಡಿ.
*ಜ್ಯೂಸ್ ಮಾಡಲು ರುಚಿಯಾದ ಮತ್ತು ಕಡಿಮೆ ನಾರಿನಂಶವಿರುವ ಮಾವಿನಹಣ್ಣುಗಳನ್ನು ಬಳಸಿ.
*ನೀರು ಬೆರೆಸಬೇಕೆಂದು ಹೆಚ್ಚು ಪ್ರಮಾಣದ ನೀರನ್ನು ಬೆರೆಸಬೇಡಿ. ಅದು ಮಾವಿನ ಹಣ್ಣಿನ ರುಚಿಯನ್ನು ಹಾಳು ಮಾಡಿ ಬಿಡುತ್ತದೆ.



Click it and Unblock the Notifications

