For Quick Alerts
ALLOW NOTIFICATIONS  
For Daily Alerts

ಸ್ಕಿನ್ ಕೇರ್ ಮಾಡುವುದು ಈ ಕ್ಯಾರೆಟ್ ಜ್ಯೂಸ್

|
Carrot Juice
ಕ್ಯಾರೆಟ್ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಹಸಿ ತಿನ್ನಲು ಇಷ್ಟಪಡದವರು ಜ್ಯೂಸ್ ಮಾಡಿ ಕುಡಿಯಬಹುದಾಗಿದೆ. ಈ ಜ್ಯೂಸ್ ಕುಡಿಯುವುದರಿಂದ ಮುಖದಲ್ಲಿ ಕಣ್ಣಿನ ಸುತ್ತ ಕಪ್ಪು ಕಲೆಗಳು ಮಾಯವಾಗಿ ತ್ವಚೆಯು ಕಾಂತಿಯುತವಾಗುತ್ತದೆ. ಅಲ್ಲದೆ ಕ್ಯಾರೆಟ್ ಸೇವನೆ ಚಳಿಗಾಲದ ಚರ್ಮ ಸಮಸ್ಯೆಗಳನ್ನು ಕಡಿಮೆಗೊಳಿಸುವುದು.

ಬೇಕಾಗುವ ಸಾಮಾಗ್ರಿಗಳು:

1. 4-5 ಕ್ಯಾರೆಟ್
2. ಕಿತ್ತಳೆ 2 ಅಥವಾ ದಾಳಿಂಬೆ
3. ರುಚಿಗೆ ಸ್ವಲ್ಪ ಉಪ್ಪು
4. ನೀರು
5. ಪುದೀನ ಸೊಪ್ಪು

ಮಾಡುವ ವಿಧಾನ:

1. ಕ್ಯಾರೆಟ್ ಚೆನ್ನಾಗಿ ತೊಳೆದು ಅದರ ಚಿಪ್ಪೆಯನ್ನು ತೆಗೆದು ಚಿಕ್ಕ ಗಾತ್ರದಲ್ಲಿ ಕತ್ತರಿಸಿ.

2. ಕಿತ್ತಳೆ ಅಥವಾ ದಾಳಿಂಬೆಯನ್ನು ಅದಕ್ಕೆ ಹಾಕಿ.

3. ಅದನ್ನು ಸ್ವಲ್ಪ ನೀರು ಹಾಕಿ ಮಿಕ್ಸಿಯಲ್ಲಿ ಹಾಕಿ ರುಬ್ಬಿ.

4. ಅದಕ್ಕೆ ಸ್ವಲ್ಪ ಉಪ್ಪು ಹಾಕಿ ತಿರುಗಿಸಿ.

5. ಅದರಲ್ಲಿ ಪುದೀನ ಸೊಪ್ಪು ಹಾಕಿದರೆ ಕ್ಯಾರೆಟ್ ಜ್ಯೂಸ್ ರೆಡಿ.

English summary

Recipe Of Carrot Juice | Types of Juice | ಕ್ಯಾರೆಟ್ ಜ್ಯೂಸ್ ಮಾಡುವ ವಿಧಾನ | ಜ್ಯೂಸ್ ನ ವಿಧಗಳು

Carrot juice is a healthy and nutritious juice which is beneficial for the body and skin. To get glowing skin free from dark spots or marks, have carrot juice everyday. Take a look at the healthy carrot juice recipe.
Story first published: Friday, October 7, 2011, 14:13 [IST]
X
Desktop Bottom Promotion