For Quick Alerts
ALLOW NOTIFICATIONS  
For Daily Alerts

ಚಂದ್ರಗ್ರಹದಲ್ಲೊಂದು ಡೊಮಿನೊ ಪಿಜ್ಜಾ ರೆಸ್ಟೋರೆಂಟ್ !

|
Pizza restaurant on moon
ಚಂದ್ರ ಗ್ರಹಕ್ಕೆ ಹೋದರೂ ಇನ್ನು ಮುಂದೆ ನಿಮಗೆ ಪಿಜ್ಜಾ ದೊರೆಯುತ್ತೆ. ಹೌದು. ಡೊಮಿನೋಸ್ ಪಿಜ್ಜಾ ಗ್ರೂಪ್ ತನ್ನ ಪ್ರತಿಸ್ಟರ್ಧಿ ಪಿಜ್ಜಾ ಹಟ್ ಗೆ ಬಲವಾದ ಸ್ಪರ್ಧೆಯೊಡ್ಡಲು ಮುಂದಾಗಿದೆ.

ಚಂದ್ರನ ಮೇಲೆ ತನ್ನ ಮೊದಲ ಪಿಜ್ಜಾ ರೆಸ್ಟೊರಂಟ್ ತೆರೆಯುವ ಯೋಜನೆಯನ್ನು ಡೊಮಿನೋಸ್ ವ್ಯಕ್ತ ಪಡಿಸಿದ್ದು, ಬಾಯಲ್ಲಿ ನೀರೂರಿಸುವ ಪಿಜ್ಜಾವನ್ನು ಚಂದ್ರನ ಮೇಲೆ ಡೊಮಿನೋಸ್ ಹಂಚಲಿದೆಯಂತೆ.

ಚಂದ್ರನ ಮೇಲೆ ಗುಮ್ಮಟ ಆಕಾರದಲ್ಲಿ ಡೊಮಿನೋಸ್ ಪಿಜ್ಜಾ ರೆಸ್ಟೋರಂಟ್ ತೆರೆಯುವ ಯೋಜನೆ ರೂಪಿಸಿರುವುದಾಗಿ ಕಟ್ಟಡ ನಿರ್ಮಾಣ ಸಂಸ್ಥೆ ಮೀಡಾ ಕಾರ್ಪ್ ತಿಳಿಸಿದೆ.

2001 ರಲ್ಲಿ ಬಾಹ್ಯಾಕಾಶದಲ್ಲಿದ್ದ ಯಾನಿಗಳಿಗೆ ಪಿಜ್ಜಾ ವಿತರಿಸುವ ಮೂಲಕ ಪಿಜ್ಜಾ ಹಟ್ ಪ್ರಸಿದ್ಧಿ ಪಡೆದಿತ್ತು. ಆದರೆ ಅದನ್ನು ಈಗ ಡೊಮಿನೋಸ್ ಹಿಂದಿಕ್ಕಿದೆ. ಈ ಯೋಜನೆಗೆ 13.4 ಬಿಲಿಯನ್ ಪೌಂಡ್ಸ್ ವೆಚ್ಚ ತಗುಲಲಿದೆ ಎಂದು ಅಂದಾಜಿಸಲಾಗಿದ್ದು, ಚಂದ್ರನ ಮೇಲೆ ಲಭ್ಯವಿರುವ ಖನಿಜಗಳನ್ನೂ ಬಳಸಿಕೊಂಡು ನಿರ್ಮಾಣ ವೆಚ್ಚ ತಗ್ಗಿಸುವುದಾಗಿ ಕಂಪೆನಿ ತಿಳಿಸಿದೆ. 15 ರಾಕೆಟ್ ಗಳನ್ನು ಉಪಯೋಗಿಸಿಕೊಂಡು ನಿರ್ಮಾಣ ಕಾರ್ಯ ನಡೆಸಲಿದೆಯಂತೆ.

ಈ ವಿಷಯದ ಕುರಿತು ಕಳೆದ ವರ್ಷವೇ ಯೋಚಿಸಿದ್ದೆವು. ಚಂದ್ರನ ಮೇಲೆ ರೆಸ್ಟೋರೆಂಟ್ ಯಾವಾಗ ಆರಂಭಗೊಳ್ಳುತ್ತದೆ ಎಂಬ ಕುರಿತು ದಿನಾಂಕವನ್ನು ನಿಗದಿಪಡಿಸಿಲ್ಲ ಎಂದು ಡೊಮಿನೋಸ್ ವಕ್ತಾರ ಟೊಮೊಹೈಡ್ ನ್ಯಾಟ್ಸ್ಯುನಿಯಾಗ್ ಡೈಲಿ ಗ್ರಾಫ್ ಪತ್ರಿಕೆಗೆ ತಿಳಿಸಿದ್ದಾರೆ. ಭವಿಷ್ಯತ್ ನಲ್ಲಿ ಚಂದ್ರನ ಮೇಲೆ ಜನರು ವಾಸಿಸುವ ಭರವಸೆ ಇದೆ. ಆದ್ದರಿಂದ ಅವರಿಗಾಗಿ ಈ ಪಿಜ್ಜಾ ರೆಸ್ಟೋರೆಂಟ್ ತೆರೆಯುತ್ತಿದ್ದೇವೆ ಎಂದು ಕಂಪನಿ ತಿಳಿಸಿದೆ.

English summary

Domino's Pizza Plans Launch Pizza Restaurant on Moon | ಚಂದ್ರನ ಮೇಲೆ ಡಾಮಿನೋಸ್ ಪಿಜ್ಜಾ ರೆಸ್ಟೊರೆಂಟ್ ತೆರೆಯುವ ಯೋಜನೆ

Domino's Pizza group is giving a tough competition to its rival Pizza Hut. Domino's plans to launch its first pizza restaurant on the Moon. It is all set to deliver its mouth-watering pizzas on moon.
Story first published: Friday, September 2, 2011, 18:35 [IST]
X
Desktop Bottom Promotion