For Quick Alerts
ALLOW NOTIFICATIONS  
For Daily Alerts

ಬೈಂಗನ್ ಕಾ ಬರ್ತಾ ಉತ್ತರ ಭಾರತೀಯ ತಿನಿಸು

|

ಚಳಿಗಾಲದ ರಾತ್ರಿಗಳಲ್ಲಿ ಮನೆಯವರೊಂದಿಗೆ ಕ್ಯಾಂಪ್ ಫೈರ್ ಮಾಡಿದ್ರೆ ಹೇಗೆ? ಮಜಾ ಇರುತ್ತೆ ಅಲ್ವಾ? ಅದಕ್ಕೆ ಸರಿಯಾಗಿ ಒಂದಿಷ್ಟು ಅಡುಗೆ ತಯಾರಿನೂ ಮಾಡ್ಕೊಬೇಕಲ್ಲ. ಬನ್ನಿ ಅಂತಹ ಒಂದು ರುಚಿಕರವಾದ ತಿಂಡಿಯನ್ನು ನಿಮಗೆ ಹೇಳಿಕೊಡ್ತೀವಿ. ಇದರ ಹೆಸರು ಬೈಂಗನ್ ಕಾ ಬರ್ತಾ. ಬದನೆಕಾಯಿ ಹಾಕಿ ಮಾಡಿದ ಗೊಜ್ಜಿನ ರೀತಿ ಇರುತ್ತೆ ಅಂದುಕೊಳ್ಳಿ.
ಈ ರುಚಿಯಾದ ತಿನಿಸು ಉತ್ತರ ಭಾರತದಲ್ಲಿ ಬಹಳ ಪ್ರಸಿದ್ಧವಾದದ್ದು. ಬೆಂಕಿಯ ಪಕ್ಕ ಮೈಕಾಯಿಸಿಕೊಳ್ಳುತ್ತಲೇ ಜನ ಬದನೆಕಾಯಿ, ಟೊಮೊಟೊ, ಆಲೂಗಡ್ಡೆ ಇತ್ಯಾದಿಯನ್ನ ಸುಟ್ಟುಕೊತಾರೆ ಆಮೇಲೆ ಅದನ್ನ ಹಿಸುಕಿ ಮಸಾಲೆ ಹಾಕಿ ಬೇಯಿಸಿಕೊಳ್ತಾರೆ. ಬದನೆಕಾಯಿ ಹಾಕಿ ಮಾಡಿದ ಈ ಕರಿಯನ್ನ ರೋಟಿ ಜೊತೆ ತಿನ್ನೋವಾಗಿನ ಮಜವೇ ಮಜ.
ಹಾಗಿದ್ದರೆ ಬನ್ನಿ ತಡಯಾಕೆ ಇದನ್ನ ತಯಾರು ಮಾಡೋದು ಹೇಗೆ ಅಂತ ನೋಡೋಣ.

Yummy Baingan Ka Bharta Recipe
ಬೇಕಾಗುವ ಸಾಮಗ್ರಿಗಳು
1. ಬದನೆಕಾಯಿ- 1
2. ಈರುಳ್ಳಿ- 1
3. ಬೆಳ್ಳುಳ್ಳಿ- 8 ಎಸಳು
4. ಶುಂಠಿ ಪೇಸ್ಟ್- 1 ಟೀಚಮಚ
5. ಟೊಮೊಟೊ- 1
6. ಹಸಿಮೆಣಸಿನಕಾಯಿ- 3
7. ಉಪ್ಪು- ರುಚಿಗೆ ತಕ್ಕಷ್ಟು
8. ಜೀರಿಗೆ ಪುಡಿ- 1 ಟೀಚಮಚ
9. ಅರಿಶಿಣ ಪುಡಿ- 1/2 ಟೀಚಮಚ
10. ಅಚ್ಚಖಾರದ ಪುಡಿ- 1/2 ಟೀಚಮಚ
11. ಗರಂಮಸಾಲ ಪುಡಿ- 1/2 ಟೀಚಮಚ
12. ಕೊತ್ತಂಬರಿ ಸೊಪ್ಪು- ಸ್ವಲ್ಪ
13. ಎಣ್ಣೆ- 1 ಟೀಚಮಚ

ಮಾಡುವ ವಿಧಾನ
1. ಬದನೆಕಾಯಿಯನ್ನು ತೊಳೆದುಕೊಂಡು ಅದರ ಮೇಲೆ ಚಿಕ್ಕದಾಗಿ ಕತ್ತರಿಸಿದ ಗುರುತು ಮಾಡಿಕೊಳ್ಳಿ
2. ಅದಕ್ಕೆ ಎಣ್ಣೆ ಹಚ್ಚಿ
3. ಒಲೆಯನ್ನು ಹೊತ್ತಿಸಿ ಬದನೆಕಾಯಿಯನ್ನು ನೇರ ಅದರ ಮೇಲಿಟ್ಟು 4-5 ನಿಮಿಷಗಳವರೆಗೆ ಸುಡಿ.
4. ಬದನೆಕಾಯಿಯ ಎಲ್ಲ ಬದಿಗಳನ್ನು ಚೆನ್ನಾಗಿ ಕಪ್ಪಾಗುವವರೆಗೆ ಸುಡಿ.
5. ಹೀಗೆ ಸುಟ್ಟ ಬದನೆಕಾಯಿಯನ್ನು ತಣ್ಣಗಿನ ನೀರಿನಲ್ಲಿ ಹಾಕಿಡಿ. ಇದರಿಂದ ಬದನೆಕಾಯಿ ಸಿಪ್ಪೆ ಬಿಡಿಸುವುದು ಸುಲಭವಾಗುತ್ತದೆ.
6. ನಂತರ ಅದರ ಸಿಪ್ಪೆಯನ್ನು ಬಿಡಿಸಿಕೊಂಡು ಅದನ್ನು ಚೆನ್ನಾಗಿ ಹಿಸುಕಿಕೊಳ್ಳಿ.
7. ಬಾಣಲಿಯಲ್ಲಿ ಎಣ್ಣೆ ಹಾಕಿ ಕಾದನಂತರ ಈರುಳ್ಳಿ ಮತ್ತು ಬೆಳ್ಳುಳ್ಳಿ ಹಾಕಿ 3-4 ನಿಮಿಷಗಳವರೆಗೆ ಹುರಿಯಿರಿ.
8. ನಂತರ ಇದಕ್ಕೆ ಶುಂಠಿ ಪೇಸ್ಟ್, ಹಸಿಮೆಣಸಿನಕಾಯಿ, ಅರಿಶಿಣ ಪುಡಿ, ಅಚ್ಚಖಾರದ ಪುಡಿ, ಜೀರಿಗೆ ಪುಡಿ ಹಾಕಿ ಎಲ್ಲವನ್ನೂ ಕಲಸಿ ಹುರಿಯಿರಿ.
9. ನಂತರ ಟೊಮೊಟೊ, ಉಪ್ಪು ಹಾಕಿ 3-4 ನಿಮಿಷ ಬೇಯಿಸಿ.
10. ಈಗ ಇದಕ್ಕೆ ಹಿಸುಕಿಟ್ಟುಕೊಂಡ ಬದನೆಕಾಯಿ ಸೇರಿಸಿ 2-3 ನಿಮಿಷ ಹುರಿಯಿರಿ.
11. ಕಡೆಯದಾಗಿ ಇದಕ್ಕೆ ಕೊತ್ತಂಬರಿಸೊಪ್ಪನ್ನು ಸೇರಿಸಿ. ಒಲೆಯಿಂದ ಇಳಿಸಿ.
ಅನ್ನ ಮತ್ತು ರೋಟಿಗಳೊಂದಿಗೆ ತಿನ್ನಲು ಈ ಬದನೆಕಾಯಿ ಗೊಜ್ಜು ರುಚಿಕರವಾಗಿರುತ್ತದೆ.

English summary

Yummy Baingan Ka Bharta Recipe

Baingan ka bharta is a yummy vegetarian dish which is quite famous in North India. Sitting beside the fire people love to roast up the vegetables like brinjal, tomato, potato etc. mash and then cook it up with some of the best spices.
Story first published: Thursday, December 5, 2013, 14:22 [IST]
X
Desktop Bottom Promotion