For Quick Alerts
ALLOW NOTIFICATIONS  
For Daily Alerts

ಈರುಳ್ಳಿ, ಬೆಳ್ಳುಳ್ಳಿ ರಾಯತದ ರೆಸಿಪಿ

|
Onion Garlic Raita Recipe
ಭಾರತೀಯರ ಸ್ಪೆಷೆಲ್ ಅಡುಗೆಗಳಲ್ಲಿ ರಾಯತ ಇದ್ದೇ ಇರುತ್ತದೆ. ಇದನ್ನು ಅನೇಕ ರುಚಿಯಲ್ಲಿ ತಯಾರಿಸಬಹುದು. ಇದನ್ನು ಖಾರವಾಗಿ ಹಾಗೂ ಬೂಂದಿ ಹಾಕಿ ಸಿಹಿ ಆಗಿಯೂ ತಯಾರಿಸಬಹುದು. ಇಲ್ಲಿ ಸರಳವಾದ ಹಾಗೂ ರುಚಿಯಾದ ಈರುಳ್ಳಿ, ಬೆಳ್ಳುಳ್ಳಿ ರಾಯತದ ರೆಸಿಪಿ ನೀಡಿದ್ದೇವೆ.

ಬೇಕಾಗುವ ಸಾಮಾಗ್ರಿಗಳು:

ಮೊಸರು 2 ಕಪ್
ಈರುಳ್ಳಿ 1 (ಚಿಕ್ಕದಾಗಿ ಕತ್ತರಿಸಿದ್ದು)
ಬೆಳ್ಳುಳ್ಳಿ ಎಸಳು 5-6
ಹಸಿ ಮೆಣಸಿನಕಾಯಿ ( ಖಾರಕ್ಕೆ ತಕ್ಕಷ್ಟು)
ಜೀರಿಗೆ ಅರ್ಧ ಚಮಚ
ಚಿಟಿಕೆಯಷ್ಟು ಕರಿಮೆಣಸಿನ ಪುಡಿ
ಕೊತ್ತಂಬರಿ ಸೊಪ್ಪು 2 ಚಮಚ (ಚಿಕ್ಕದಾಗಿ ಕತ್ತರಿಸಿದ್ದು)
ಎಣ್ಣೆ ಅರ್ಧ ಚಮಚ

ತಯಾರಿಸುವ ವಿಧಾನ:

* ತವಾವನ್ನು ಬಿಸಿ ಮಾಡಿ ಅದರಲ್ಲಿ ಜೀರಿಗೆಯನ್ನು ಹಾಕಿ ಹುರಿದು ಹಲಗೆಯಲ್ಲಿ ಹಾಕಿ ಪುಡಿ ಮಾಡಬೇಕು. ಬೆಳ್ಳುಳ್ಳಿಯನ್ನು ತವಾದಲ್ಲಿ ರೋಸ್ಟ್ ಮಾಡಿಡಬೇಕು.

* ಈಗ ಒಂದು ಬಟ್ಟಲಿನಲ್ಲಿ ಮೊಸರು, ಸ್ವಲ್ಪ ನೀರು ಹಾಕಿ ಚೆನ್ನಾಗಿ ಕದಡಬೇಕು. ಈಗ ಮೊಸರಿಗೆ ಬೆಳ್ಳುಳ್ಳಿ, ಜೀರಿಗೆ, ಈರುಳ್ಳಿ, ಕರಿ ಮೆಣಸಿನ ಪುಡಿ, ಹಸಿ ಮೆಣಸಿನಕಾಯಿ, ರುಚಿಗೆ ತಕ್ಕ ಉಪ್ಪು ಹಾಕಿ ಚೆನ್ನಾಗಿ ಕೆಲಸಬೇಕು.

* ನಂತರ ಅರ್ಧ ಚಮಚ ಎಣ್ಣೆಯನ್ನು ಬಿಸಿ ಮಾಡಿ ಮೊಸರಿಗೆ ಹಾಕಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಈರುಳ್ಳಿ, ಬೆಳ್ಳುಳ್ಳಿ ರಾಯತ ರೆಡಿ.

English summary

Onion Garlic Raita Recipe | Variety Of Raitha Recipe | ಈರುಳ್ಳಿ, ಬೆಳ್ಳುಳ್ಳಿ ರಾಯತ ರೆಸಿಪಿ | ಅನೇಕ ಬಗೆಯ ರಾಯತ ರೆಸಿಪಿ

Raita is a very famous side dish in the Indian cuisine. It is made by beating curd with water and spices. You can either make raita with spices or add some freshly chopped vegetables like onions, tomatoes, cucumber and avocado. You can also make sweet raita with boondis.
X
Desktop Bottom Promotion