For Quick Alerts
ALLOW NOTIFICATIONS  
For Daily Alerts

ಆಲೂ ಉಪ್ಪಿನಕಾಯಿ ರುಚಿ ನೋಡಿದ್ದೀರಾ?

|
Potato pickle recipe
ಆಲೂಗೆಡ್ಡೆಯಿಂದ ಕರಿ, ಪಲ್ಯ, ಗ್ರೇವಿ ಹೀಗೆ ತರಾವರಿ ಖಾದ್ಯ ತಯಾರಿಸುತ್ತೇವೆ. ಎಂದಾದರೂ ಅದರಿಂದ ಉಪ್ಪಿನಕಾಯಿ ಮಾಡಿದ್ದೀರಾ? ಇಲ್ಲ ಅಂದಾದರೆ ಇಲ್ಲಿದೆ ನೋಡಿ ಆಲೂ ಉಪ್ಪಿನಕಾಯಿ ಮಾಡುವ ಸುಲಭ ಉಪಾಯ.

ಈ ಉಪ್ಪಿನ ಕಾಯಿಯನ್ನು ದೋಸೆ ಅಥವಾ ಚಪಾತಿ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಟ್ರೈ ಮಾಡಿ ನೋಡಿ.

ಬೇಕಾಗುವ ಸಾಮಾಗ್ರಿಗಳು:

* 1/2 ಕೆಜಿ ಆಲೂಗೆಡ್ಡೆ
* 15-20 ಕೆಂಪು ಮೆಣಸಿನಕಾಯಿ ( ಹುರಿದ ಒಣ ಕೆಂಪು ಮೆಣಸು)
* ಕೊತ್ತಂಬರಿ ಬೀಜ
* 2 ಚಮಚ ಮೆಂತೆ
* ಚಿಕ್ಕ ಬಾಲ್ ನಷ್ಟು ಹುಣಸೆ ಹುಳಿ
* 3 ಚಮಚ ಸಾಸಿವೆ ಎಣ್ಣೆ
* ಒಂದು ಚಿಟಿಕೆಯಷ್ಟು ಇಂಗು
* ರುಚಿಗೆ ತಕ್ಕ ಉಪ್ಪು
* ಎಣ್ಣೆ

ತಯಾರಿಸುವ ವಿಧಾನ:

1. ಆಲೂಗೆಡ್ಡೆಯನ್ನು ಕತ್ತರಿಸಿ ಅದರ ಮೇಲೆ ಉಪ್ಪು ಹಾಕಿ ಬದಿಯಲ್ಲಿ ಇಡಬೇಕು.

2. ಮೆಂತೆ, ಸಾಸಿವೆ, ಮತ್ತು ಒಣಮೆಣಸಿನಕಾಯಿ ಹುರಿದು ಅದರ ಜೊತೆ ಹುಣಸೆ ಹುಳಿಯನ್ನು ಸೇರಿಸಿ ಪೇಸ್ಟ್ ರೀತಿ ಮಾಡಬೇಕು.

3. ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿಯಾದಾಗ ಆಲೂಗೆಡ್ಡೆ ಕಂದು ಬಣ್ಣ ಬರುವವರೆಗೆ ಹುರಿಯಬೇಕು.

4. ಈಗ ಚಿಕ್ಕ ಬಾಣಲೆಯಲ್ಲಿ 4-5 ಚಮಚ ಎಣ್ಣೆ ಹಾಕಿ ಅದಕ್ಕೆ ಸ್ವಲ್ಪ ಇಂಗು ಮತ್ತು ಮತ್ತು ಮೆಂತೆ, ಸಾಸಿವೆ ಹುರಿದು ಹುಣಸೆ ಹುಳಿಯನ್ನು ಸೇರಿಸಿ ಮಾಡಿದ ಪೇಸ್ಟ್ ಹಾಕಿ ಸ್ವಲ್ಪ ಉಪ್ಪು ಹಾಕಬೇಕು.

5. ಈ ಮಿಶ್ರಣಕ್ಕೆ ಆಲೂಗೆಡ್ಡೆಯನ್ನು ಹಾಕಿ 5-6 ನಿಮಿಷ ಹುರಿಯಬೇಕು.

6. ನಂತರ ಗ್ಯಾಸ್ ಆಫ್ ಮಾಡಿ ತಣ್ಣಗಾಗಲು ಬಿಡಬೇಕು. ಈಗ ರುಚಿಕರವಾದ ಆಲೂಗೆಡ್ಡೆ ಉಪ್ಪಿನಕಾಯಿ ತಿಂದು ನೋಡಿ.

English summary

Potato pickle recipe | Variety of pickles | ಆಲೂ ಉಪ್ಪಿನಕಾಯಿ ರೆಸಿಪಿ | ನಾನಾ ಬಗೆಯ ಉಪ್ಪಿನಕಾಯಿಗಳು

Potatoes are the best choices to make if you are a beginner in cooking. They taste best if added to curries, gravies, salads or pickles.
Story first published: Monday, February 27, 2012, 18:08 [IST]
X
Desktop Bottom Promotion