For Quick Alerts
ALLOW NOTIFICATIONS  
For Daily Alerts

ಸ್ವಾದಿಷ್ಟಕರ ಟೊಮೆಟೊಕಾಯಿ ಚಟ್ನಿ

By Prasad
|
Tomatokayi
ದೋಸೆ, ಇಡ್ಲಿ, ಚಪಾತಿ, ರೊಟ್ಟಿ ಯಾವುದರೊಂದಿಗೂ ಟೊಮೆಟೊಕಾಯಿ ಚಟ್ನಿ ತಕರಾರು ಮಾಡುವುದಿಲ್ಲ. ಈ ಸ್ವಾದಿಷ್ಟಕರ ಚಟ್ನಿಯನ್ನು ಯಾವುದರೊಂದಿಗೆ ತಿನ್ನಬೇಕೆಂದು ನಿರ್ಧರಿಸುವುದು ಮಾತ್ರ ನಿಮ್ಮ ಅಭಿರುಚಿಗೆ ಬಿಟ್ಟಿದ್ದು.

* ಸುನಂದ ಅರುಣಕುಮಾರ ಗೋಸಿ

ಬೇಕಾಗಿರುವ ಪದಾರ್ಥಗಳು :

ಟೊಮೆಟೊಕಾಯಿ - 1/2 ಕೆ .ಜಿ .
ಹಸಿಮೆಣಸಿನಕಾಯಿ - 8
ಜೀರಿಗೆ - 1 ಸ್ಪೂನ್
ಬೆಳ್ಳುಳ್ಳಿ ಎಸಳು - 6
ಒಣ ಕೊಬ್ಬರಿ - ಸ್ವಲ್ಪ
ಕಡ್ಲೆ - 1 ಚಮಚ
ಕೊತ್ತಂಬರಿ ಸೊಪ್ಪು
ಕರಿಬೇವು
ಎಣ್ಣೆ
ಉಪ್ಪು ರುಚಿಗೆ

ಮಾಡುವ ವಿಧಾನ :

ಮೊದಲಿಗೆ ಟೊಮೆಟೊಕಾಯಿಯನ್ನು ಚೆನ್ನಾಗಿ ತೊಳೆದುಕೊಂಡು ನೀರಿನ ಅಂಶವೆಲ್ಲ ಮಾಯವಾಗುವಹಾಗೆ ಒರೆಸಿ ಹೆಚ್ಚಿಟ್ಟುಕೊಳ್ಳಿ. ಬಾಣಲೆಗೆ ತುಸು ಎಣ್ಣೆ ಹಾಕಿ ಹಸಿಮೆಣಸಿನಕಾಯಿಯನ್ನು ಹುರಿದುಕೊಳ್ಳಿ. ನಂತರ ಹೆಚ್ಚಿದ ಟೊಮೆಟೊಕಾಯಿ ಹಾಗು ಎಣ್ಣೆ ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಮಿಕ್ಸಿ ಜಾರಿಗೆ ಕೊಬ್ಬರಿ, ಹಸಿಮೆಣಸಿನಕಾಯಿ, ಬೆಳ್ಳುಳ್ಳಿ, ಜೀರಿಗೆ, ಹುರಿದ ಟೊಮೆಟೊಕಾಯಿ, ಕೊತ್ತಂಬರಿ ಸೊಪ್ಪು, ಕರಿಬೇವು, ಉಪ್ಪು ಎಲ್ಲಾ ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ. ನೆನಪಿಡಿ, ರುಬ್ಬಿಕೊಳ್ಳುವಾಗ ಅಜೀಬಾತ್ ನೀರು ಹಾಕಬೇಡಿ.

ಈ ಟೊಮೆಟೊಕಾಯಿ ಚಟ್ನಿಯನ್ನು ಯಾವುದರೊಂದಿಗೆ ತಿನ್ನಬೇಕೆಂದು ನಿರ್ಧರಿಸುವುದು ಮಾತ್ರ ನಿಮಗೆ ಬಿಟ್ಟಿದ್ದು. ದೋಸೆ, ಇಡ್ಲಿ, ಚಪಾತಿ, ರೊಟ್ಟಿ ಯಾವುದರೊಂದಿಗೂ ಟೊಮೆಟೊಕಾಯಿ ಚಟ್ನಿ ತಕರಾರು ಮಾಡುವುದಿಲ್ಲ.

Story first published: Monday, February 15, 2010, 17:08 [IST]
X
Desktop Bottom Promotion