For Quick Alerts
ALLOW NOTIFICATIONS  
For Daily Alerts

ಪನ್ನೀರ್ ಸ್ಯಾಂಡ್ ವಿಚ್

|

ಸ್ಯಾಂಡ್ ವಿಚ್ ಇಂದಿನ ನಾಗಾಲೋಟದ ದಿನಗಳಲ್ಲಿ ಬೆಳಗ್ಗೆ ಎದ್ದು ಆಫೀಸಿಗೆ ಓಡುವ ಧಾವಂತದಲ್ಲಿ ಬೇಗ ಮಾಡಿ ಮುಗಿಸಬಹುದಾದ ತಿಂಡಿ. ಡಯೆಟ್ ಮಾಡುವವರಿಗೆ ಕೂಡ ಇದು ಬಹಳ ಪ್ರಯೋಜನಕಾರಿ. ಸ್ಯಾಂಡ್ ವಿಚ್ ಅನ್ನು ಅವರವರ ಅಭಿರುಚಿಗೆ ತಕ್ಕಂತೆ ಬೇರೆ ಬೇರೆ ರುಚಿಗಳಲ್ಲಿ ತಯಾರು ಮಾಡಬಹುದು. ಬ್ರೆಡ್ ಟೋಸ್ಟಿಗೆ ಮೊಟ್ಟೆ ಅಥವ ಇತರ ಯಾವುದಾದರೂ ಸ್ಟಫಿಂಗ್ ಇಟ್ಟು ಮಾಡಬಹುದು. ಇದಕ್ಕೆ ತರಕಾರಿ ಅಥವ ಬೇರಾವುದಾದರೂ ಮಸಾಲೆಯನ್ನು ಬಳಸಬಹುದು. ಸಸ್ಯಾಹಾರಿಗಳು ಸ್ಯಾಂಡ್ ವಿಚ್ ಗೆ ಹಲವು ರೀತಿಯ ಸ್ಟಫಿಂಗ್ ಗಳನ್ನು ಮಾಡಬಹುದು. ಆಲೂಗಡ್ಡೆಯಿಂದ ಹಿಡಿದು ಪನ್ನಿರಿನವರೆಗೆ ಹಲವನ್ನು ಬಳಸಬಹುದು.

ನಿಮಗೆ ಪನ್ನೀರು ಇಷ್ಟವಾದ್ದಾದರೆ ಸ್ಯಾಂಡ್ ವಿಚ್ ಗೆ ಅದನ್ನೇ ಬಳಸಬಹುದು. ನಾವಿವತ್ತು ಪನ್ನೀರ್, ಈರುಳ್ಳಿ, ಹಸಿ ಮೆಣಸಿನಕಾಯಿ ಮತ್ತಿತರ ಗಮಗಮಿಸುವ ಮಸಾಲೆ ಬೆರೆಸಿದ ಸ್ಯಾಂಡ್ ವಿಚ್ ಮಾಡುವ ವಿಧಾನ ತಿಳಿಸುತ್ತಿದ್ದೇವೆ. ಇದನ್ನು ಮಾಡುವುದು ಹೇಗೆ ಬನ್ನಿ ನೋಡೋಣ.

Stuffed Paneer Sandwich: Breakfast Recipe

ಬೇಕಾಗುವ ಸಾಮಗ್ರಿಗಳು

1. ಪನ್ನೀರ್- 100ಗ್ರಾಂ
2. ಬ್ರೆಡ್ ಸ್ಲೈಸ್ ಗಳು- 8-10
3. ಈರುಳ್ಳಿ- 2 (ಹೆಚ್ಚಿದ್ದು)
4. ಕ್ಯಾಪ್ಸಿಕಂ- 1/2(ಕತ್ತರಿಸಿದ್ದು)
5. ಹಸಿಮೆಣಸಿನಕಾಯಿ- 2 (ಕತ್ತರಿಸಿದ್ದು)
6. ಅರಿಶಿಣ ಪುಡಿ- 1 ಟೀಚಮಚ
7. ಅಚ್ಚ ಖಾರದ ಪುಡಿ- 1 ಟೀಚಮಚ
8. ಟೊಮೊಟೊ ಸಾಸ್- 2 ಟೀಚಮಚ
9. ಉಪ್ಪು ರುಚಿಗೆ ತಕ್ಕಷ್ಟು
10. ಎಣ್ಣೆ- 1 ಟೀಚಮಚ
11. ಬೆಣ್ಣೆ- ಬ್ರೆಡ್ ಟೋಸ್ಟ ಮಾಡಲು

ಮಾಡುವ ವಿಧಾನ
1. ಬಾಣಲಿಯಲ್ಲಿ ಎಣ್ಣೆಯನ್ನು ಕಾಯಿಸಿಕೊಂಡು ಈರುಳ್ಳಿಯನ್ನು 2 ನಿಮಿಷಗಳವರೆಗೆ ಹುರಿಯಿರಿ.
2. ಕ್ಯಾಪ್ಸಿಕಂ ಮತ್ತು ಹಸಿಮೆಣಸಿನಕಾಯನ್ನು ಹಾಕಿ 3-4 ನಿಮಿಷಗಳವರೆಗೆ ಬೇಯಿಸಿ. ಇದಕ್ಕೆ ಅರಿಶಿಣ ಪುಡಿ ಮತ್ತು ಉಪ್ಪನ್ನು ಸೇರಿಸಿ.
3. ಪನ್ನೀರನ್ನು ತೆಗೆದುಕೊಂಡು ಮುರಿದುಕೊಳ್ಳಿ.
4. ಅಚ್ಚ ಖಾರದ ಪುಡಿ, ಟೊಮೊಟೊ ಸಾಸ್ ಅನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಇದಕ್ಕೆ ಪನ್ನೀರನ್ನು ಹಾಕಿ. ಪನ್ನೀರು ಇವೆಲ್ಲವನ್ನು ಹೀರಿಕೊಳ್ಳುವವರೆಗೆ ತಿರುಗಿಸುತ್ತಿರಿ. ಇದನ್ನು 3-4 ನಿಮಿಷ ಬೇಯಿಸಿ. ಒಲೆ ಆರಿಸಿ.
5. ಟೋಸ್ಟರ್ ನಲ್ಲಿ ಬ್ರೆಡ್ಡಿಗೆ ಬೆಣ್ಣೆ ಹಚ್ಚಿ, ಪನ್ನೀರ್ ಮಸಾಲೆ ಇಟ್ಟು ಟೋಸ್ಟ್ ಮಾಡಿಕೊಳ್ಳಿ.

ಪನ್ನೀರ್ ಸ್ಟಫ್ಡ್ ಸ್ಯಾಂಡ್ ವಿಚ್ ತಿನ್ನಲು ಸಿದ್ಧ. ಟೊಮೊಟೊ ಸಾಸ್ ನೊಂದಿಗೆ ತಿನ್ನಲು ರುಚಿಯಾಗಿರುತ್ತದೆ.

English summary

Stuffed Paneer Sandwich: Breakfast Recipe

Vegetarians can sue a large variety of ingredients for stuffing their toast sandwiches. From aloo bread sandwich to paneer stuffed toasts, you have a lot to try and experiment.
Story first published: Tuesday, December 10, 2013, 10:49 [IST]
X
Desktop Bottom Promotion