For Quick Alerts
ALLOW NOTIFICATIONS  
For Daily Alerts

ಬಗೆಬಗೆಯ ಇಡ್ಲಿ ರೆಸಿಪಿ-ನೀವೂ ಒಮ್ಮೆ ಪ್ರಯತ್ನಿಸಿ ನೋಡಿ

|

ನಿಮ್ಮ ದೈಹಿಕ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುವ ಬೆಳಗ್ಗಿನ ಉಪಹಾರವನ್ನು ಎಂದಿಗೂ ನಿರ್ಲಕ್ಷ್ಯಸದಿರಿ. ನೀವು ಮಾಡುವ ಈ ಉಪಹಾರ ಕೇವಲ ಹೊಟ್ಟೆ ತುಂಬಿಸುವುದಕ್ಕೆ ಮಾತ್ರವಲ್ಲ ನಿಮ್ಮನ್ನು ಇಡೀ ದಿನ ಚಟುವಟಿಕೆಯಿಂದ ಇರಿಸುವ ದಿವ್ಯ ಔಷಧವಾಗಿದೆ. ಹೆಚ್ಚಿನವರು ಕಚೇರಿಗೆ ಹೋಗುವ ಲಗುಬಗೆಯಲ್ಲಿ ಅಥವಾ ಡಯೆಟ್ ಎಂಬ ನೆಪದಲ್ಲಿ ಬೆಳಗ್ಗಿನ ಉಪಹಾರವನ್ನು ಸೇವಿಸದೇ ಮಧ್ಯಾಹ್ನ ಜೊತೆಯಾಗಿ ಊಟ ಮಾಡಿದರೆ ಆಯಿತು ಎಂಬ ಉಪೇಕ್ಷೆಯಲ್ಲಿ ಈ ಅದ್ಭುತ ಟಾನಿಕ್ ಅನ್ನು ಕೈಬಿಡುತ್ತಿದ್ದಾರೆ. ಆದರೆ ನೀವು ಸೇವಿಸುವ ಉಪಹಾರ ನಿಮ್ಮ ದೇಹದ ತೂಕ ಇಳಿಕೆಯಲ್ಲೂ ಅದ್ಭುತ ಪರಿಣಾಮವನ್ನು ಬೀರುತ್ತದೆ. ವಿಭಿನ್ನ ರುಚಿಯ ರೈಸ್ ಬಾತ್-ನೀವೂ ಪ್ರಯತ್ನಿಸಿ

ನೀವು ಸೇವಿಸುವ ಉಪಹಾರ ಆರೋಗ್ಯಕರವಾಗಿದ್ದು ಪೌಷ್ಟಿಕಾಂಶಗಳಿಂದ ಕೂಡಿರಬೇಕು ಎಂಬುದೇ ವೈದ್ಯಶಾಸ್ತ್ರದ ನಿಯಮವಾಗಿದೆ. ಭಾರತೀಯ ಆಹಾರ ಪದ್ಧತಿಗಳು ಇಂತಹ ಸಂತುಲಿತ ಅಂಶಗಳೊಂದಿಗೆ ಬಂದಿದ್ದು ವಿದೇಶಿ ತಿಂಡಿಗಳನ್ನು ಬಿಟ್ಟು ಸ್ವದೇಶಿತನವನ್ನು ನಿಮ್ಮದಾಗಿಸಿಕೊಳ್ಳಿ. ನೀವು ನಿತ್ಯವೂ ಸೇವಿಸುವ ಉಪಹಾರ ಬೇಜಾರು ಎನಿಸುತ್ತಿದೆ ಎಂದಾದಲ್ಲಿ ಅದರಲ್ಲೇ ವೈವಿಧ್ಯಮಯ ಪಾಕ ವಿಧಾನಗಳನ್ನು ತನ್ನಿ.

ಅಂತಹುದೇ ಪಾಕ ವೈವಿಧ್ಯತೆಯಾಗಿದೆ ವಿವಿಧ ಬಗೆಯ ಇಡ್ಲಿಗಳು. ಎಂದಿನ ಸಾದಾ ಇಡ್ಲಿಗಳಲ್ಲದೆ ಉಪಹಾರವನ್ನು ಪೌಷ್ಟಿಕವಾಗಿಸುವ ಮತ್ತು ನಿಮ್ಮ ಹೊಟ್ಟೆಯನ್ನು ಭರ್ತಿ ಮಾಡುವ ನಳಪಾಕಗಳಾಗಿವೆ ಈ ತರೇಹವಾರಿ ಇಡ್ಲಿಗಳು. ಬೇರೆ ಬೇರೆ ದ್ವಿದಳ ಧಾನ್ಯಗಳನ್ನು ಬಳಸಿ ತಯಾರಿಸುವ ಈ ಇಡ್ಲಿಗಳು ಹೊಟ್ಟೆಯುಬ್ಬರದ ಸಮಸ್ಯೆಯನ್ನು ತಂದೊಡ್ಡದೆ ಜೀರ್ಣಗೊಳ್ಳುವ ಅಂಶಗಳನ್ನು ಪಡೆದುಕೊಂಡು ಬಂದಿವೆ. ಬನ್ನಿ ಹಾಗಿದ್ದರೆ ಇಂದಿನ ಲೇಖನದಲ್ಲಿ ವಿಧ ವಿಧ ಬಗೆಯ ಇಡ್ಲಿಗಳನ್ನು ಕುರಿತು ತಿಳಿದುಕೊಳ್ಳೋಣ.

ಓಟ್ಸ್ ಇಡ್ಲಿ

ಓಟ್ಸ್ ಇಡ್ಲಿ

ಅಡುಗೆ ಮನೆಯಲ್ಲಿ ಅರಳಿದ ಘಮ್ಮೆನ್ನುವ ಓಟ್ಸ್ ಇಡ್ಲಿ

ರವೆ ಇಡ್ಲಿ

ರವೆ ಇಡ್ಲಿ

ಅಡುಗೆ ಮನೆಯಲ್ಲಿ ಅರಳಿದ ಘಮಘಮಿಸುವ ರವೆ ಇಡ್ಲಿ!

ಬಾಳೆ ಹಣ್ಣಿನ ಇಡ್ಲಿ

ಬಾಳೆ ಹಣ್ಣಿನ ಇಡ್ಲಿ

ಇಡ್ಲಿಯ ರುಚಿ ಗೊತ್ತಿಲ್ಲದವರು ದಕ್ಷಿಣ ಭಾರತದಲ್ಲಿಯೇ ಇರುವುದಿಲ್ಲ. ಸಾದಾ ಇಡ್ಲಿ, ತಟ್ಟೆ ಇಡ್ಲಿ, ರವೆ ಇಡ್ಲಿ, ವೆಜೆಟೇಬಲ್ ಇಡ್ಲಿ ಹೀಗೆ ಇಡ್ಲಿಯನ್ನು ನಾನಾ ರುಚಿಯಲ್ಲಿ ಮಾಡಬಹುದು. ಆದರೆ ಎಂದಾದರು ಬಾಳೆ ಹಣ್ಣಿನ ಇಡ್ಲಿ ತಯಾರಿಸಿದ್ದೀರಾ? ಅಚ್ಚರಿಯಾಯಿತು ಅಲ್ಲವೇ..? ಹಾಗಾದರೆ ಈ ಲಿಂಕ್ ಕ್ಲಿಕ್ ಮಾಡಿ ಮಕ್ಕಳಿಗೆ ಪ್ರಿಯವಾಗುವುದು ಈ ಬನಾನ ಇಡ್ಲಿ

ಮೆಕ್ಕೆಜೋಳದ ಇಡ್ಲಿ

ಮೆಕ್ಕೆಜೋಳದ ಇಡ್ಲಿ

ಮಕ್ಕಳ ಸ್ವಾಸ್ಥ್ಯಕ್ಕಾಗಿ ಆರೋಗ್ಯಕರ ಮೆಕ್ಕೆಜೋಳದ ಇಡ್ಲಿ

English summary

Simply Delicious: Top four Idli Recipes

Here are few interesting varieties of idli that are easy to make, low on calories and absolutely fabulous, have a look
X
Desktop Bottom Promotion