Latest Updates
-
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ಮಕ್ಕಳಿಗೆ ಪ್ರಿಯವಾಗುವುದು ಈ ಬನಾನ ಇಡ್ಲಿ
ಇಡ್ಲಿಯ ರುಚಿ ಗೊತ್ತಿಲ್ಲದವರು ದಕ್ಷಿಣ ಭಾರತದಲ್ಲಿಯೇ ಇರುವುದಿಲ್ಲ. ಸಾದಾ ಇಡ್ಲಿ, ತಟ್ಟೆ ಇಡ್ಲಿ, ರವೆ ಇಡ್ಲಿ, ವೆಜೆಟೇಬಲ್ ಇಡ್ಲಿ ಹೀಗೆ ಇಡ್ಲಿಯನ್ನು ನಾನಾ ರುಚಿಯಲ್ಲಿ ಮಾಡಬಹುದು. ಆದರೆ ಎಂದಾದರು ಬಾಳೆ ಹಣ್ಣಿನ ಇಡ್ಲಿ ತಯಾರಿಸಿದ್ದೀರಾ?
ಸಾಮಾನ್ಯವಾಗಿ ಇಡ್ಲಿ ಸಿಹಿ ಇರುವುದಿಲ್ಲ, ಆದರೆ ಇದು ಸಿಹಿಯಾದ ಇಡ್ಲಿಯಾಗಿದ್ದು, ಚಟ್ನಿ, ಸಾಂಬಾರ್ ಜೊತೆ ಸವಿಯುವ ಇಡ್ಲಿ ಇದಲ್ಲ. ಇದನ್ನು ಏನಿದ್ದರೂ ಹಾಲು ಅಥವಾ ತೆಂಗಿನ ಹಾಲಿಗೆ ಸ್ವಲ್ಪ ಸಕ್ಕರೆ ಹಾಕಿ ಸವಿಯಬೇಕು. ಮಕ್ಕಳ ಮೆಚ್ಚಿನ ಇಡ್ಲಿ ಆಗುವುದರಲ್ಲಂತೂ ಯಾವುದೇ ಸಂಶಯವಿಲ್ಲ.
ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣವೇ?

ಬೇಕಾಗುವ ಸಾಮಾಗ್ರಿಗಳು
ರವಾ 1 ಕಪ್
ತೆಂಗಿನ ತುರಿ 1/4 ಕಪ್
ಹಣ್ಣಾದ ಬಾಳೆ ಹಣ್ಣು 3-4
ಚಿಟಿಕೆಯಷ್ಟು ಉಪ್ಪು
ಸಕ್ಕರೆ (ಸಿಹಿಗೆ ತಕ್ಕಷ್ಟು)
ಅಡುಗೆ ಸೋಡಾ ಅರ್ಧ ಚಮಚ
ತುಪ್ಪ 1 ಚಮಚ
ಹಸಿ ಬಟಾಣಿ 1/4 ಕಪ್(ಬೇಕಿದ್ದರೆ)
ತಯಾರಿಸುವ ವಿಧಾನ:
* ಮೊದಲಿಗೆ ಬಾಳೆ ಹಣ್ಣಿನ ಸಿಪ್ಪೆ ಸುಲಿದು, ನಂತರ ಬಾಳೆ ಹಣ್ಣನ್ನು ಮ್ಯಾಶರ್ ಅಥವಾ ಕೈಯಿಂದ ಪೇಸ್ಟ್ ರೀತಿಯಲ್ಲಿ ಮಾಡಿ.
* ಈಗ ಅದಕ್ಕೆ ರವೆ, ತೆಂಗಿನ ತುರಿ, ಸಕ್ಕರೆ, ಅಡುಗೆ ಸೋಡಾ, ಚಿಟಕೆಯಷ್ಟು ಉಪ್ಪು, ಬಟಾಣಿ ಹಾಕಿ ಮಿಕ್ಸ್ ಮಾಡಿ, ಇಡ್ಲಿಯ ಹದಕ್ಕೆ ತರಲು ಸ್ವಲ್ಪ ನೀರು ಸೇರಿಸಬಹುದು.
* ಈಗ ಇಡ್ಲಿ ತಟ್ಟೆಗೆ ತುಪ್ಪ ಸವರಿ ಅದಕ್ಕೆ ಇಡ್ಲಿ ಹಿಟ್ಟು ಹಾಕಿ ಆವಿಯಲ್ಲಿ 15-20 ನಿಮಿಷ ಬೇಯಿಸಿದರೆ ಬಾಳೆ ಹಣ್ಣಿನ ಇಡ್ಲಿ ರೆಡಿ.
ಈ ಬಾಳೆ ಹಣ್ಣಿನ ಇಡ್ಲಿಯನ್ನು ತೆಂಗಿನ ಹಾಲು ಅಥವಾ ಹಾಲಿನ ಜೊತೆ ತಿನ್ನಲು ತುಂಬಾ ರುಚಿಯಗಿರುತ್ತದೆ.



Click it and Unblock the Notifications