For Quick Alerts
ALLOW NOTIFICATIONS  
For Daily Alerts

ಈ ಬಟಾಣಿ ಪಲಾವ್ ಮಾಡುವುದು ಬಲು ಸುಲಭ

|

ಬೆಳಗ್ಗೆ ತಿಂಡಿಗೆ ಸುಲಭದ ಅಡುಗೆಯೆಂದರೆ ಈ ಗ್ರೀನ್ ಪೀಸ್ ಪಲಾವ್ (ಬಟಾಣಿ ಬಲಾವ್). ಈ ಗ್ರೀನ್ ಪೀಸ್ ಪಲಾವ್ ಗೆ ಹೆಚ್ಚಿನ ತರಕಾರಿಗಳೂ ಬೇಕಾಗಿಲ್ಲ, ರುಚಿಯಲ್ಲೂ ವೆಜ್ ಪಲಾವ್ ಗಿಂತ ಏನೂ ಕಮ್ಮಿಯಿಲ್ಲ.

ಏನು ಈ ಪಲಾವ್ ಮಾಡಲು ಮನಸ್ಸಾಗುತ್ತಿದೆಯೇ? ಹಾಗಾದರೆ ತಡವೇಕೆ? ಬನ್ನಿ, ವೆಜ್ ಪಲಾವ್ ಮಾಡುವುದು ಹೇಗೆ ಎಂದು ನೋಡೋಣ:

Peas Pulao Recipe

ಬೇಕಾಗುವ ಸಾಮಾಗ್ರಿಗಳು
* 1 ಕಪ್ ಬಾಸುಮತಿ ಅಕ್ಕಿ
* ಅರ್ಧ ಕಪ್ ಬಟಾಣಿ
* 1 ಲವಂಗ
* 1 ಏಲಕ್ಕಿ
* 1 ಚಕ್ಕೆ
* ಅರ್ಧ ಕಪ್ ಕತ್ತರಿಸಿದ ಈರುಳ್ಳಿ
* 2-3 ಹಸಿ ಮೆಣಸಿನಕಾಯಿ
* ಅರ್ಧ ಕಪ್ ತೆಂಗಿನ ತುರಿ
* ಪಲಾವ್ ಎಲೆ 1
* 2 ಕಪ್ ನೀರು
* ಎಣ್ಣೆ 2 ಚಮಚ ಮತ್ತು ರುಚಿಗೆ ತಕ್ಕ ಉಪ್ಪು

ತಯಾರಿಸುವ ವಿಧಾನ:

* ಅಕ್ಕಿಯನ್ನು ತೊಳೆದು 10 ನಿಮಿಷ ನೆನೆ ಹಾಕಿ.

* ಕುಕ್ಕರ್ ಅನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಮಸಾಲೆ ಪದಾರ್ಥಗಳಾದ ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ ಹಾಕಿ 1 ನಿಮಿಷ ಫ್ರೈ ಮಾಡಿ ನಂತರ ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿ ಹಾಕಿ, ಈರುಳ್ಳಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.

* ನಂತರ ಬಟಾಣಿಯನ್ನು ತೊಳೆದು ಹಾಕಿ ಮತ್ತೆ 2 ನಿಮಿಷ ಫ್ರೈ ಮಾಡಿ, ಈಗ ತೊಳೆದಿಟ್ಟ ಅಕ್ಕಿ ಹಾಕಿ 5 ನಿಮಿಷ ಫ್ರೈ ಮಾಡಿ, ರುಚಿಗೆ ತಕ್ಕ ಉಪ್ಪು ಸೇರಿಸಿ, ಎರಡು ಕಪ್ ನೀರು ಹಾಕಿ ಕುಕ್ಕರ್ ಬಾಯಿ ಮುಚ್ಚಿ 3 ವಿಶಲ್ ಬರುವವರೆಗೆ ಬೇಯಿಸಿದರೆ ಬಟಾಣಿ ಪಲಾವ್ ರೆಡಿ.

English summary

Peas Pulao Recipe

Did you want to know how to make make a delicious peas pulao? Peas Pulao one of the easiest recipe, so take a look to know how to make.
X
Desktop Bottom Promotion