For Quick Alerts
ALLOW NOTIFICATIONS  
For Daily Alerts

ಬೆಳಗ್ಗಿನ ಉಪಹಾರಕ್ಕಾಗಿ ಟೇಸ್ಟೀ ಈರುಳ್ಳಿ ದೋಸೆ

|

ರುಚಿಕರ ಈರುಳ್ಳಿ ದೋಸೆಯ ಸವಿಯನ್ನು ನೀವು ಎಂದಾದರೂ ಸವಿದಿದ್ದೀರಾ? ದಕ್ಷಿಣ ಭಾರದತದಲ್ಲಿ, ದೋಸೆ ಸಾಮಾನ್ಯವಾದ ತಿಂಡಿಯಾಗಿದೆ, ಬೆಳಗ್ಗಿನ ಜಾವದಲ್ಲಿ ಸುಲಭವಾಗಿ ತಯಾರಿಸಬಹುದಾದ ಒಂದು ಟೇಸ್ಟಿ ರೆಸಿಪಿ ಇದಾಗಿದೆ. ಸಂಶೋಧನೆಗಳ ಪ್ರಕಾರ, ಈರುಳ್ಳಿ ಬೆರೆತಿರುವ ಯಾವುದೇ ಆಹಾರ ಪದಾರ್ಥಗಳನ್ನು ಬೆಳಗ್ಗೆ ತಿನ್ನುವುದು ನಿಮಗೆ ಶಕ್ತಿಯನ್ನು ನೀಡುತ್ತದೆ. ಯುವಕರು ಮತ್ತು ಹಿರಿಯರಿಗೆ ಇದೊಂದು ಆರೋಗ್ಯಕರವಾದ ರುಚಿಕರ ಡಿಶ್ ಆಗಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸ್ವೀಟ್ ಕಾರ್ನ್ ಪರೋಟ ರೆಸಿಪಿ

ಮಕ್ಕಳಿಗೆ ಈ ಖಾದ್ಯ ಅಷ್ಟೊಂದು ರುಚಿಕರವಾಗಿಲ್ಲದಿರಬಹುದು ಏಕೆಂದರೆ ಇದು ಸಿಹಿಯಾಗಿಲ್ಲ. ಆದರೆ ಈರುಳ್ಳಿಯೊಂದಿಗೆ ಆಲೂಗಡ್ಡೆ ಮಿಶ್ರ ಮಾಡಿ ದೋಸೆಯನ್ನು ಸಿದ್ಧಪಡಿಸುವುದು ಮಕ್ಕಳಲ್ಲಿ ಸಂತೋಷವನ್ನುಂಟು ಮಾಡಬಹುದು. ನಿಮ್ಮ ಮಕ್ಕಳಿಗಾಗಿ ಬೆಳಗ್ಗಿನ ತಿಂಡಿ ಸ್ವಾದಿಷ್ಟವಾಗಿರಬೇಕೆಂಬ ಬಯಕೆ ನಿಮ್ಮದಾಗಿದ್ದರೆ, ಈ ರುಚಿಯಾದ ಈರುಳ್ಳಿ ದೋಸೆ ನಿಮ್ಮ ಆಯ್ಕೆಯಾಗಿರಲಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸವಿರುಚಿಯ ಹೆಸರು ಕಾಳಿನ ದೋಸೆ

Onion Dosa Recipe For Breakfast

ನಿಮ್ಮ ಆರೋಗ್ಯಕರ ಬೆಳಗ್ಗಿನ ತಿಂಡಿಗಾಗಿ ಈ ಯಮ್ಮಿ ಈರುಳ್ಳಿ ದೋಸೆ ತಯಾರಿ ಕಡೆ ಕಣ್ಣು ಹಾಯಿಸಿ

ಪ್ರಮಾಣ: 3 ಜನರಿಗೆ ಸಾಕಾಗುವಷ್ಟು
ಸಿದ್ಧತಾ ಸಮಯ: 15 ನಿಮಿಷಗಳು
ಅಡುಗೆಗೆ ತಗಲುವ ಸಮಯ: 20 ನಿಮಿಷಗಳು

ಸಾಮಾಗ್ರಿಗಳು:
.ಅಕ್ಕಿ - 3 ಕಪ್‌ಗಳು
.ಉದ್ದಿನಬೇಳೆ- 1 ಕಪ್
.ಮೆಂತ್ಯ - 2ಸ್ಪೂನ್
.ಆಲೂಗಡ್ಡೆ - 200 ಗ್ರಾಮ್ಸ್ (ಹಿಸುಕಿದ್ದು)
.ಈರುಳ್ಳಿ - 200 ಗ್ರಾಮ್ಸ್ (ತುಂಡರಿಸಿದ್ದು)
.ಸಾಸಿವೆ - 1 ಸ್ಪೂನ್
.ಅರಶಿನ - 1/2 ಸ್ಪೂನ್
.ಮೆಣಸಿನ ಹುಡಿ - 1/2 ಸ್ಪೂನ್
.ಕರಿಬೇವು - 10 ಎಲೆಗಳು
.ಹುರಿಯಲು ಎಣ್ಣೆ
.ರುಚಿಗೆ ತಕ್ಕಷ್ಟು ಉಪ್ಪು

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ನಿಮ್ಮ ಯಮ್ಮಿ ಬ್ರೇಕ್‌ಫಾಸ್ಟ್‌ಗಾಗಿ ಕಾಯಿಸಿದ ಮೆಂತೆ ಪರೋಟಾ

ಮಾಡುವ ವಿಧಾನ:
1. ಬೌಲ್‌ನಲ್ಲಿ, ಅಕ್ಕಿ ಉದ್ದಿನಬೇಳೆ, ಮೆಂತ್ಯವನ್ನು 5 ಗಂಟೆಗಳವರೆಗೆ ನೆನೆಸಿಡಿ.

2. 5 ಗಂಟೆಗಳ ತರುವಾಯ, ನೀರು ಬೆರೆಸಿ ನಯವಾಗಿ ಹಿಟ್ಟು ಮಾಡಿಕೊಳ್ಳಿ.

3.ಈಗ ಹಿಟ್ಟಿಗೆ ಉಪ್ಪು ಸೇರಿಸಿ. ಪುನಃ 2 ಗಂಟೆಗಳವರೆಗೆ ಹಿಟ್ಟು ಹುಳಿ ಬರಲು ಹಾಗೆಯೇ ಬಿಡಿ.

4.ಪ್ಯಾನ್‌ನಲ್ಲಿ ಸ್ವಲ್ಪ ಎಣ್ಣೆ ತೆಗೆದುಕೊಂಡು, ಈರುಳ್ಳಿ ಗೋಲ್ಡನ್ ಬಣ್ಣವನ್ನು ತಾಳುವವರೆಗೆ ಹುರಿಯಿರಿ.

5.ಈರುಳ್ಳಿಗೆ ಸಾಸಿವೆ, ಮತ್ತು ಕರಿಬೇವಿನೆಲೆಗಳನ್ನು ಸೇರಿಸಿ ಅವುಗಳನ್ನು ಕೆಂಪಗಾಗುವರೆಗೆ ಹುರಿದುಕೊಳ್ಳಿ.

6.ಪ್ಯಾನ್‌ಗೆ, ಹಿಸುಕಿದ ಆಲೂಗಡ್ಡೆ, ಮೆಣಸಿನ ಹುಡಿ, ಅರಶಿನ ಮತ್ತು ಉಪ್ಪು ಸೇರಿಸಿ. ಚಪ್ಪಟೆ ಸ್ಪೂನ್‌ನ ಸಹಾಯದಿಂದ ಪ್ಯಾನ್‌ನಲ್ಲಿರುವ ಎಲ್ಲಾ ಸಾಮಾಗ್ರಿಗಳನ್ನು ಮಿಶ್ರ ಮಾಡಿಕೊಳ್ಳಿ.

7.ಸ್ಟವ್‌ನ ಜ್ವಾಲೆಯನ್ನು ಕಡಿಮೆ ಮಾಡಿ ಮತ್ತು ಅದು ಚೆನ್ನಾಗಿ ಬೇಯಲು ಬಿಡಿ. ಒಮ್ಮೆ ಆದ ಕೂಡಲೇ ಗ್ಯಾಸ್ ಆಫ್ ಮಾಡಿ ಮತ್ತು ಅದನ್ನು ಕೆಳಗಿಳಿಸಿ.

8.ಈಗ ನಾನ್‌ಸ್ಟಿಕ್ ತವಾವನ್ನು ತೆಗೆದುಕೊಂಡು ಗ್ಯಾಸ್ ಮೇಲಿರಿಸಿ. ಮಧ್ಯಮ ಫ್ಲೇಮ್‌ನಲ್ಲಿ ತವಾ ಸುತ್ತಲೂ ಎಣ್ಣೆ ಹರಡಿ ಮತ್ತು ತವಾ ಬಿಸಿಯಾಗುವವರಗೆ ಕಾಯಿರಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ತೆಳ್ಳಗೆ-ಬೆಳ್ಳಗಿನ ನೀರು ದೋಸೆ

9.ತವಾದ ಮಧ್ಯಭಾಗಕ್ಕೆ ಹಿಟ್ಟು ಹಾಕಿ ಮತ್ತು ವೃತ್ತಾಕಾರವಾಗಿ ತವಾದ ಸುತ್ತಲೂ ಹಿಟ್ಟನ್ನು ಎರೆಯಿರಿ.

10.ಹಿಟ್ಟು ಚೆನ್ನಾಗಿ ಬೆಂದ ನಂತರ, ಮಧ್ಯಭಾಗದಲ್ಲಿ ಈರುಳ್ಳಿ ಮತ್ತು ಆಲೂಗಡ್ಡೆಯನ್ನು ಇರಿಸಿ ಮತ್ತು ಅದನ್ನು ಸುತ್ತಲೂ ಹರಡಿಸಿ ಹಾಗೆಯೇ ಅದು ಬೇಯಲಿ.

11.ಅದು ಬೇಯುತ್ತಿದ್ದಂತೆ ಪ್ಯಾನ್‌ನ ಮೂಲೆಗೆ ಸ್ವಲ್ಪ ಎಣ್ಣೆ ತೆಗೆದುಕೊಂಡು ದೋಸೆಯ ಸುತ್ತಲೂ ಹರಡಿ. ಇದು ದೋಸೆ ತವಾವನ್ನು ಅಂಟಿಕೊಳ್ಳದಂತೆ ನೋಡುತ್ತದೆ.

12.ಮೂರು ನಿಮಿಷಗಳ ನಂತರ, ದೋಸಾವನ್ನು ಮಧ್ಯಕ್ಕೆ ಮಡಚಿ ಬಿಸಿಯಾಗಿ ಬಡಿಸಿ.

English summary

Onion Dosa Recipe For Breakfast

Have you tried the yummy onion dosa? In South of India, dosas are very common, since it is a tasty and easy recipe to prepare in the morning. According to research, consuming any dish which consists of onions early in the morning will help you feel energetic.
Story first published: Saturday, March 1, 2014, 16:49 [IST]
X
Desktop Bottom Promotion