ಯುಗಾದಿ ಸ್ಪೆಷಲ್: ಹೊಟ್ಟೆಗೆ ತಂಪು ನೀಡುತ್ತೆ ಮೊಸರು ವಡೆ!

By: Hemanth
Subscribe to Boldsky

ಯುಗಾದಿಯೆಂದರೆ ಏನೋ ಸಂಭ್ರಮ, ಸಡಗರ. ದೇಶದ ಹೆಚ್ಚಿನ ಎಲ್ಲಾ ಕಡೆಗಳಲ್ಲಿ ಯುಗಾದಿ ಹಬ್ಬವನ್ನು ವಿವಿಧ ರೀತಿಯಿಂದ ಆಚರಿಸಲಾಗುತ್ತದೆ. ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಯುಗಾದಿಯು ಹಿಂದೂಗಳಿಗೆ ಹೊಸವರ್ಷವಾಗಿದೆ.

ಚೈತ್ರ ಮಾಸದ ಮೊದಲ ದಿನವನ್ನು ಯುಗಾದಿಯೆಂದು ಆಚರಿಸಲಾಗುತ್ತದೆ. ಕರ್ನಾಟಕದಲ್ಲೂ ಇದನ್ನು ಹೊಸ ವರ್ಷವಾಗಿ ಆಚರಿಸುವ ಕಾರಣದಿಂದಾಗಿ ಪ್ರತಿಯೊಂದು ಮನೆಯಲ್ಲೂ ಸಂಭ್ರಮ. ಹೊಸ ಬಟ್ಟೆ, ಮನೆಗಳಿಗೆ ಬಣ್ಣ ಬಳಿದು ತಳಿರುತೋರಣಗಳಿಂದ ಸಿಂಗರಿಸಲಾಗುತ್ತದೆ.  ಬೋಲ್ಡ್ ಸ್ಕೈ ಅಡುಗೆ ಮನೆಯಲ್ಲಿ 8 ಯುಗಾದಿ ಖಾದ್ಯಗಳು

ಹೊಸ ವರ್ಷವನ್ನು ಬರಮಾಡಿಕೊಳ್ಳುವಾಗ ಹಲವಾರು ರೀತಿಯ ವೈವಿಧ್ಯಮಯ ಅಡುಗೆಗಳನ್ನು ಮಾಡಲಾಗುತ್ತದೆ. ಇದರಲ್ಲಿ ಮೊಸರು ವಡೆ (ದಹಿ ವಡಾ) ಪ್ರಮುಖವಾದದ್ದು. ಈ ಯುಗಾದಿಗೆ ನೀವು ಕೂಡ ಮೊಸರು ವಡೆ ಮಾಡಬೇಕೆಂದು ಬಯಸಿದ್ದರೆ ಇದನ್ನು ಮಾಡುವುದು ಹೇಗೆಂದು ತಿಳಿಯಬೇಕಾದರೆ ಈ ಲೇಖನವನ್ನು ಓದುತ್ತಾ ಮುಂದೆ ಸಾಗಿ.  

Dahi Vada
 

ಬೇಕಾಗುವ ಸಾಮಗ್ರಿಗಳು

1. ಕಡಲೆಕಾಳು-2 ಕಪ್

2. ಸಬ್ಬಸಿಗೆ ಸೊಪ್ಪು-3/4 ಕಪ್(ಕತ್ತರಿಸಿರುವುದು)

3. ಹಸಿ ಮೆಣಸು-7-8

4. ಈರುಳ್ಳಿ-2(ಸಣ್ಣಗೆ ತುಂಡರಿಸಿರುವುದು)

5. ಕರಿಯಲು ಎಣ್ಣೆ

6. ರುಚಿಗೆ ಬೇಕಾದಷ್ಟು ಉಪ್ಪು

7. ಮೊಸರು-3 ಕಪ್

8. ಶುಂಠಿ-1/2 ಕಪ್

9. ಕ್ಯಾರೆಟ್-1/4 ಕಪ್(ಸಣ್ಣಗೆ ಕತ್ತರಿಸಿರುವುದು, ಅಲಂಕಾರಕ್ಕಾಗಿ)

10. ಕರಿಬೇವಿನ ಎಲೆಗಳು 2 ಚಮಚ(ಸಣ್ಣಗೆ ಕತ್ತರಿಸಿರುವುದು ಅಲಂಕಾರಕ್ಕೆ)   ಯುಗಾದಿ ಗಮ್ಮತ್ತಿಗೆ ಬಿಸಿ ಬಿಸಿ ಹೂರಣದ ಹೋಳಿಗೆ

ಒಗ್ಗರಣೆಗೆ

*ಸಾಸಿವೆ ಕಾಳು 1 ಚಮಚ

*ಕರಿಬೇವಿನ ಎಲೆ ಸ್ವಲ್ಪ

*ಉದ್ದು 1 ಚಮಚ

*ಇಂಗು ಒಂದು ಚಿಟಿಕೆ

*ಎಣ್ಣೆ ಒಂದು ಚಮಚ  

Dahi Vada
 

ವಡೆ ತಯಾರಿಸುವ ವಿಧಾನ

1. ಕಡಲೆಕಾಳನ್ನು ರಾತ್ರಿಯಿಡಿ ನೆನೆಸಿಡಿ. ಬೆಳಿಗ್ಗೆ ಇದರ ನೀರು ಸೋಸಿಕೊಂಡು ಸ್ವಲ್ಪ ಕಡಲೆಕಾಳನ್ನು ಬದಿಗಿಡಿ.

2. ಸ್ವಲ್ಪ ಕಡಲೆಕಾಳು, ಹಸಿಮೆಣಸು, ಶುಂಠಿ ಮತ್ತು ಉಪ್ಪನ್ನು ಹಾಕಿಕೊಂಡು ರುಬ್ಬಿಕೊಳ್ಳಿ. ಇದನ್ನು ನುಣ್ಣಗೆ ರುಬ್ಬಿಕೊಳ್ಳುವುದು ಬೇಡ.

3. ಈ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿಕೊಂಡು ಅದನ್ನು ಬಾಕಿ ಉಳಿದಿರುವ ಕಡಲೆಕಾಳಿನೊಂದಿಗೆ ಮಿಶ್ರಣ ಮಾಡಿ. ಇದಕ್ಕೆ ಸಬ್ಬಸಿಗೆ ಸೊಪ್ಪು, ಕತ್ತರಿಸಿರುವ ಈರುಳ್ಳಿಯನ್ನು ಹಾಕಿಕೊಂಡು ಅದನ್ನು ಸರಿಯಾಗಿ ಮಿಶ್ರಣ ಮಾಡಿ.

4. ಇದರ ಸಣ್ಣ ಭಾಗವನ್ನು ತೆಗೆದುಕೊಂಡು ಉಂಡೆಗಳನ್ನಾಗಿ ಮಾಡಿ. ಇದನ್ನು ಚಪ್ಪಟೆ ಮಾಡಿ ವಡೆಯ ಆಕಾರ ನೀಡಿ.

5. ಈ ವಡೆಗಳನ್ನು ಎಣ್ಣೆಯಲ್ಲಿ ಸರಿಯಾಗಿ ಕರಿಯಿರಿ. ವಡೆಗಳು ಕಂದು ಬಣ್ಣಕ್ಕೆ ತಿರುಗಲಿ. ಕರಿದ ವಡೆಗಳನ್ನು ತೆಗೆದಿಡಿ.

ಮೊಸರು ವಡೆ ತಯಾರಿಸುವ ವಿಧಾನ

1. ಈಗ ತಾನೇ ರೆಡಿಯಾದ ವಡೆಗಳನ್ನು ಸುಮಾರು ಎರಡು ಗಂಟೆಗಳ ಕಾಲ ತಣ್ಣಗಾಗಲು ಬಿಡಿ.

2. ಇನ್ನು ಮೊಸರನ್ನು ಒಂದು ಪಾತ್ರೆಗೆ ಹಾಕಿ ಇದನ್ನು ತೆಳು ಮಾಡಿ. ವಡೆಗಳನ್ನು ಮೊಸರಿಗೆ ಹಾಕಿ ಸುಮಾರು 10-12 ಗಂಟೆಗಳ ಕಾಲ ಅದನ್ನು ಫ್ರಿಡ್ಜ್ ನಲ್ಲಿಡಿ. ವಡೆಗಳು ಸಂಪೂರ್ಣವಾಗಿ ಮುಳುಗುವ ತನಕ ಮೊಸರು ಹಾಕಿಡಿ.

3. ಇದನ್ನು ಫ್ರಿಡ್ಜ್ ನಿಂದ ಹೊರತೆಗೆದು ಅದು ಕೋಣೆಯ ತಾಪಮಾನಕ್ಕೆ ಬರಲು ಬಿಡಿ.

4. ಈಗ ವಡೆಯನ್ನು ಮೊಸರಿನಿಂದ ಹೊರತೆಗೆಯಿರಿ. ಇದಕ್ಕೆ ಜೀರಿಗೆ ಹುಡಿ ಮತ್ತು ಒಂದು ಚಿಟಿಕೆ ಉಪ್ಪನ್ನು ಹಾಕಿ. ಕರಿಬೇವಿನ ಎಲೆಗಳು, ಸಾಸಿವೆ ಕಾಳು, ಇಂಗು, ಉದ್ದಿನ ಬೇಳೆಯ ಒಗ್ಗರಣೆ ಮಾಡಿ ಅದನ್ನು ಮೊಸರಿಗೆ ಹಾಕಿ.

5. ವಡೆಗಳನ್ನು ಒಂದು ಪ್ಲೇಟ್‌ಗೆ ಹಾಕಿ ಮತ್ತು ತಯಾರಿಸಿದ ಮೊಸರನ್ನು ಇದರ ಮೇಲೆ ಹಾಕಿ. ಈಗ ಮೊಸರು ವಡೆ ಸವಿಯಲು ಸಿದ್ಧ. ಮೊಸರು ವಡೆಯ ಮೇಲೆ ಕತ್ತರಿಸಿಕೊಂಡಿರುವ ಕ್ಯಾರೆಟ್ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ ಅಲಂಕರಿಸಿ.

6. ಇದು ತುಂಬಾ ರುಚಿಕರ ಹಾಗೂ ಅತ್ಯುತ್ತಮವಾಗಿದೆ. ಇದನ್ನು ಈ ಸಲದ ಯುಗಾದಿಗೆ ಪ್ರಯತ್ನಿಸಿ ನೋಡಿ.

English summary

mouthwatering Dahi Vada Recipe For Ugadi

For non-Kannada people, Mosaru vada is nothing but dahi vada. However, it tastes different from the conventional dahi vada and during Ugadi, people have it to increase the celebratory mood of the festival. So, would you want to know how to make Mosaru vada? Then, continue reading to know its recipe..
Story first published: Monday, March 27, 2017, 23:35 [IST]
Please Wait while comments are loading...
Subscribe Newsletter