Latest Updates
-
ಭಾಯಿ ದೂಜ್ 2026: ಹಬ್ಬದ ಸಂಭ್ರಮಕ್ಕೆ ಪ್ಲಾನಿಂಗ್, ಬಜೆಟ್ ಮತ್ತು ಸಮಯ ನಿರ್ವಹಣೆಯ ಸರಳ ಟಿಪ್ಸ್ -
ಹಬ್ಬದ ಸಂಭ್ರಮದಲ್ಲಿ ಬೀದಿಬದಿ ಆಹಾರ ಸೇವಿಸುವ ಮುನ್ನ ಎಚ್ಚರ: ಆರೋಗ್ಯ ಸುರಕ್ಷತೆಗೆ ಇಲ್ಲಿದೆ 5 ಸರಳ ಸೂತ್ರಗಳು -
ಬಿಗ್ ಬಾಸ್ ಕನ್ನಡ 13: ಈ ವಾರ ಯಾರೂ ಎಲಿಮಿನೇಟ್ ಇಲ್ಲ! ಕಿಚ್ಚ ಸುದೀಪ್ ನೀಡಿದ ಅಚ್ಚರಿಯ ಟ್ವಿಸ್ಟ್ ಏನು? -
ದೀಪಾವಳಿ ನಂತರ ದೆಹಲಿಯಲ್ಲಿ ದಟ್ಟ ಹೊಗೆ: ಮಕ್ಕಳ ಆರೋಗ್ಯ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ -
ಲಕ್ಷ್ಮಿ ಪೂಜೆಯ ಮುಹೂರ್ತದ ಗೊಂದಲ: ಕುಟುಂಬದ ಶಾಂತಿಗಾಗಿ ಇಲ್ಲಿದೆ ಸರಳ ಪರಿಹಾರಗಳು -
ದೀಪಾವಳಿ ಹಬ್ಬದ ಸಂಭ್ರಮ: ಡಯಾಬಿಟಿಸ್ ಇದ್ದರೂ ಸಿಹಿ ಸವಿಯಲು ಈ ಟಿಪ್ಸ್ ಫಾಲೋ ಮಾಡಿ -
ಅಯೋಧ್ಯೆ ದೀಪೋತ್ಸವ 2026: 36 ಲಕ್ಷ ದೀಪಗಳ ಬೆಳಕಿನ ವೈಭವ, ಸಂಚಾರ ಮಾರ್ಗ ಮತ್ತು ವೀಕ್ಷಣೆಯ ಟಿಪ್ಸ್ -
ದೀಪಾವಳಿ ಸಂಭ್ರಮದಲ್ಲಿ ಬೆನ್ನು ನೋವಾ? ಲಕ್ಷ್ಮಿ ಪೂಜೆಗೂ ಮುನ್ನ ಈ 7 ನಿಮಿಷದ ಸ್ಟ್ರೆಚಿಂಗ್ ಟ್ರೈ ಮಾಡಿ! -
ದೀಪಾವಳಿ ಸಂಭ್ರಮಕ್ಕೆ ಮೆಗಾ ಬ್ಲಾಕ್ ಅಡ್ಡಿ: ಮುಂಬೈ ರೈಲು ಪ್ರಯಾಣಿಕರೇ ಎಚ್ಚರ, ಪ್ಲಾನ್ ಬದಲಾಯಿಸಿ! -
ದೀಪಾವಳಿ ಸಿಹಿ ತಿಂಡಿಗಳಲ್ಲಿ ಕಲಬೆರಕೆ? 30 ಸೆಕೆಂಡ್ಗಳಲ್ಲಿ ಪರೀಕ್ಷಿಸಿ ನಿಮ್ಮ ಕುಟುಂಬದ ಆರೋಗ್ಯ ಕಾಪಾಡಿ!
ಬೋಲ್ಡ್ ಸ್ಕೈ ಅಡುಗೆ ಮನೆಯಲ್ಲಿ 8 ಯುಗಾದಿ ಖಾದ್ಯಗಳು
ಯುಗ-ಯುಗಗಳು ಕಳೆದರೂ ಯುಗಾದಿ ಮರಳಿ ಬರುತ್ತಿದೆ... ನಮಗೆ ಹೊಸ ವರ್ಷ ಅಂದರೆ ಯುಗಾದಿ. ಬಾಳೆಂದರೆ ಸಿಹಿ-ಕಹಿಗಳ ಮಿಲನ ಎಂಬುದನ್ನು ಜನತೆಗೆ ಜ್ಞಾಪಿಸುತ್ತಾ ಸಿಹಿ-ಕಹಿಯನ್ನು ಸಮಾನವಾಗಿ ಸ್ವೀಕರಿಸಬೇಕು, ಆಗ ಬದುಕು ಬಂಗಾರವಾಗುವುದು ಎಂಬ ಅರ್ಥವನ್ನು ಸಾರುವ ಯುಗಾದಿ ಬರುತ್ತಿದೆ.
ಯುಗಾದಿಗೆ ಮುಖ್ಯವಾಗಿ ಬೇವು ಬೆಲ್ಲ ತಯಾರಿಸಲಾಗುವುದು. ನಂತರ ಹಬ್ಬದ ಅಡುಗೆಯಲ್ಲಿ ಕೊಸಂಬರಿ, ಹೋಳಿಗೆ, ಪಚಡಿ, ಒಬ್ಬಟ್ಟು ಹೀಗೆ ಹತ್ತಾರು ಬಗೆಯ ಅಡುಗೆಯನ್ನು ತಯಾರಿಸಲಾಗುವುದು. ಯುಗಾದಿಯಲ್ಲಿ ಅಮ್ಮಂದಿರುವ ಮಾಡುವ ರುಚಿಕರವಾದ ಅಡುಗೆಯನ್ನು ತಿಂದು ಗೊತ್ತಿರುತ್ತದೆ ವಿನಾಃ ತಯಾರಿಸಿ ಗೊತ್ತಿರುವುದಿಲ್ಲ.
ಅದರಲ್ಲೂ ಹೊಸದಾಗಿ ಮದುವೆಯಾದವರಿಗೆ ಇದೊಂದು ಸವಾಲು, ಅತ್ತೆ ಮನೆಯಲ್ಲಿ ಹಬ್ಬದ ಅಡುಗೆ ತಯಾರಿಸುವುದು ಹೇಗೆ ಎಂಬ ಚಿಂತೆ. ಚಿಂತೆ ಬೇಡ ರಿಲ್ಯಾಕ್ಸ್ ಆಗಿ ಏಕೆಂದರೆ ಕನ್ನಡ ಬೋಲ್ಡ್ ಸ್ಕೈ ನಿಮಗಾಗಿ ಅನೇಕ ಯುಗಾದಿ ರೆಸಿಪಿಗಳನ್ನು ನೀಡುತ್ತಿದೆ.
ಇಲ್ಲಿ ನಾವು ಹಬ್ಬಕ್ಕೆ ಸಾಮಾನ್ಯವಾಗಿ ತಯಾರಿಸಬಹುದಾದ ಅಡುಗೆಗಳ ರೆಸಿಪಿಯನ್ನು ಈ ಒಂದೇ ಲೇಖನದಲ್ಲಿ ನೀಡುತ್ತಿದ್ದೇವೆ. ಇದರಿಂದ ವಿಧ-ವಿಧದ ಯುಗಾದಿ ರೆಸಿಪಿಗಾಗಿ ಬೇರೆ ಕಡೆ ಹುಡುಕಬೇಕಾಗಿಲ್ಲ. ಆದ್ದರಿಂದ ಯಾವುದೆ ಮುಜುಗರವಿಲ್ಲದೆ ಈ ಅಡುಗೆ ಮಾಡಿ ನೋಡಿ. ಮನೆಯವರು ನಿಮ್ಮ ಕೈ ನೈಪುಣ್ಯಕ್ಕೆ ಕ್ಲೀನ್ ಬೋಲ್ಡ್ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಕನ್ನಡ ಬೋಲ್ಡ್ ಸ್ಕೈ ಓದುಗರಿಗೆ ಯುಗಾದಿ ಹಬ್ಬದ ಶುಭಾಶಯಗಳು...

ಬೇವು-ಬೆಲ್ಲದ ಪಾನೀಯಾ
ನೀವು ಬೇವು ಬೆಲ್ಲ ಸವಿದಿರಬಹುದು. ಆದರೆ, ಬೇವಿನ ರಸ ಮತ್ತು ಬೆಲ್ಲದಿಂದ ತಯಾರಿಸುವ ಪಾನೀಯ ಸವಿದಿರಲಿಕ್ಕಿಲ್ಲ. ಇಲ್ಲಿದೆ ನೋಡಿ ಬೇವು-ಬೆಲ್ಲದ ಪಾನೀಯದ ರೆಸಿಪಿ.

ಯುಗಾದಿ ಪಚಡಿ
ಯುಗಾದಿ ಪಚಡಿ ಇಲ್ಲ ಅಂದರೆ ಅದು ಹಬ್ಬದ ಅಡುಗೆ ಅಂತ ಅನಿಸಿಕೊಳ್ಳುವುದಿಲ್ಲ! ಆದ್ದರಿಂದ ಇವತ್ತು ಯುಗಾದಿ ಪಚಡಿ ತಯಾರಿಸುವ ವಿಧಾನದ ಬಗ್ಗೆ ತಿಳಿಯೋಣ:

ಒಬ್ಬಟ್ಟು
ಯುಗಾದಿಗೆ ಒಬ್ಬಟ್ಟು ಇಲ್ಲ ಅಂದರೆ ಹೇಗೆ ಎಂದು ಮನೆಯವರು ನಕ್ಕಾರು. ಅಂತಹ ತೊಂದರೆ ನಿಮಗೆ ಬರದಿರಲಿ ಎಂದು ಈ ಒಬ್ಬಟ್ಟು ರೆಸಿಪಿ ನೀಡಲಾಗಿದೆ. ಈ ಕೆಳಗಿನ ರೆಸಿಪಿ ವಿಧಾನ ಸರಳ ಮತ್ತು ರುಚಿಕರವಾಗಿದೆ.

ಬೇಯಿಸಿದ ಮಾವಿನಕಾಯಿ ಚಟ್ನಿ

ಸಜ್ಜಪ್ಪ

ತೋಷಾ

ಕೋಸಂಬರಿ

ಪಾಯಸ
ಹಬ್ಬದಲ್ಲಿ ಪಾಯಸವಿಲ್ಲ ಅಂದರೆ ಹೇಗೆ ಅಲ್ವಾ? ಯುಗಾದಿಗೆ ಬೇವು-ಬೆಲ್ಲ, ಒಬ್ಬಟ್ಟು, ಯುಗಾದಿ ಪಚಡಿ, ಕೋಸಂಬರಿ ವಿಶೇಷವಾದರೂ ಇವುಗಳ ಜೊತೆ ಪಾಯಸವಿದ್ದರನೆ ಸಂಪೂರ್ಣ ಹಬ್ಬದ ಅಡುಗೆಯಾಗುವುದು. ಯುಗಾದಿಗೆ ಎಲ್ಲರಿಗೂ ಶುಭ ಕೋರುತ್ತಾ, ಈ ಯುಗಾದಿಗೆ ಅವಲಕ್ಕಿ ಪಾಯಸ



Click it and Unblock the Notifications
