For Quick Alerts
ALLOW NOTIFICATIONS  
For Daily Alerts

ಆಹಾ ಮೊಸರು ವಡೆ, ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ!

|

ಬೆಳಗಿನ ತಿಂಡಿ ರಾಜ ಸೇವಿಸುವಂತಿರಲಿ, ಮಧ್ಯಾಹ್ನದ ಊಟ ರಾಜಕುಮಾರಿ ಸೇವಿಸುವಂತಿರಲಿ ಅಂತೆಯೇ ರಾತ್ರಿಯೂಟ ಬಡವ ಸೇವಿಸುವಂತೆ ಕನಿಷ್ಟವಾಗಿರಲಿ ಎಂಬ ಇಂಗ್ಲೀಷ್ ಗಾದೆಯೊಂದಿದೆ. (Eat breakfast like a king, lunch like a prince and dinner like a beggar") ಆಹಾರದ ಸಂತುಲಿತ ವಿಧಾನವನ್ನು ಈ ಗಾದೆ ಸೂಚ್ಯವಾಗಿ ನಮಗೆ ತೋರಿಸುತ್ತಿದೆ.

ನೀವು ಸೇವಿಸುವ ಉಪಹಾರ, ಮಧ್ಯಾಹ್ನದೂಟ, ರಾತ್ರಿಯೂಟ ಹೆಚ್ಚು ಪೋಷಕಾಂಶಭರಿತವಾಗಿರಬೇಕು ಮತ್ತು ಕೊಬ್ಬನ್ನು ನಿಮ್ಮ ದೇಹದಲ್ಲಿ ಹೆಚ್ಚು ಹೆಚ್ಚು ಸಂಗ್ರಹಿಸುವಂತಿರಬಾರದು. ಹಾಗಿದ್ದರೆ ಸರಳವಾಗಿರುವ ಮತ್ತು ನಿಮಗೆ ತೃಪ್ತಿಯಾಗುವಂತಹ ಆಹಾರ ಆಯ್ಕೆ ಮಾಡಿಕೊಳ್ಳುವುದು ಕಷ್ಟವೇನಲ್ಲ. ಹೌದು ಓದುಗರೇ ನಿಮ್ಮ ಬಾಯಿ ರುಚಿಗೆ ಯಾವುದೇ ಕೊರತೆಯನ್ನುಂಟು ಮಾಡದೇ ದೇಹದ ಕೊಬ್ಬನ್ನು ಹೆಚ್ಚಿಸದೇ ಇರುವ ಬೆಳಗಿನ ಉಪಹಾರದ ಕುರಿತೇ ಇಂದಿನ ಲೇಖನದಲ್ಲಿ ನಾವು ನಿಮ್ಮೊಡನಿರುವೆವು.

Morning Breakfast: Mouthwatering Dahi Vada recipe

ಇಂದು ಬೋಲ್ಡ್ ಸ್ಕೈ ನಿಮ್ಮ ಮನಸ್ಸಿಗೆ ಆನಂದವನ್ನು ಬಾಯಿಗೆ ರುಚಿಯನ್ನು ನೀಡುವ ಮೊಸರು ವಡೆ ತಯಾರಿ ವಿಧಾನವನ್ನು ಪರಿಚಯಿಸುತ್ತಿದೆ. ಇದು ದೇಹಕ್ಕೆ ಮೊಸರಿನ ಪ್ರೋಟೀನ್ ಅನ್ನು ನೀಡುವುದರೊಂದಿಗೆ ಇದನ್ನು ತಯಾರಿಸುವಾಗ ಮಿಶ್ರ ಮಾಡುವ ಅಂಶಗಳು ನಮ್ಮ ದೇಹಕ್ಕೆ ಆರೋಗ್ಯಕಾರಿ ಅಂಶವನ್ನು ನೀಡುತ್ತದೆ. ಅಡುಗೆ ಮನೆಯಲ್ಲಿ ಅರಳಿದ ಘಮಘಮಿಸುವ ರವೆ ಇಡ್ಲಿ!

*ಪ್ರಮಾಣ: 4
*ಸಿದ್ಧತಾ ಸಮಯ: 20 ನಿಮಿಷಗಳು
*ಅಡುಗೆಗೆ ಬೇಕಾದ ಸಮಯ: 15 ನಿಮಿಷಗಳು

ಸಾಮಾಗ್ರಿಗಳು
*ಉದ್ದಿನ ಬೇಳೆ - 1/2 ಕಪ್
*ಹೆಸರು ಬೇಳೆ - 1/2 ಕಪ್
*ಶುಂಠಿ - 1 ಇಂಚಿನಷ್ಟು
*ಉಪ್ಪು - ½ ಚಮಚ
*ಹಸಿಮೆಣಸು - 2-3
*ಸೋಡಾ ಪುಡಿ - ½ ಚಮಚ
*ಮೊಸರು - 250 ಗ್ರಾಮ್
*ಉಪ್ಪು - ½ ಚಮಚ
*ಜೀರಿಗೆ - 2 ಚಮಚ
*ಮೆಣಸಿನ ಪುಡಿ - ½ ಚಮಚ
*ಚಾಟ್ ಮಸಾಲಾ ಪುಡಿ - 1 ಚಮಚ
*ಕೊತ್ತಂಬರಿ ಸೊಪ್ಪು - 2 ಚಮಚ

ಮಾಡುವ ವಿಧಾನ
*ಮೊದಲಿಗೆ ನೀವು ಮೊಸರಿಗೆ ಅರ್ಧ ಕಪ್ ನೀರು ಹಾಕಿ ಚೆನ್ನಾಗಿ ಕಡೆದುಕೊಳ್ಳಬೇಕು. ನಂತರ ಮೊಸರಿಗೆ ಎಲ್ಲಾ ಸಾಮಾಗ್ರಿಗಳನ್ನು ಹಾಕಿ (ಕೊತ್ತಂಬರಿ ಸೊಪ್ಪು ಹೊರತುಪಡಿಸಿ) ಇದನ್ನು ಚೆನ್ನಾಗಿ ಮಿಶ್ರ ಮಾಡಿಕೊಂಡು ವಡೆ ತಯಾರಾಗುವವರೆಗೆ ಫ್ರಿಡ್ಜ್‌ನಲ್ಲಿ ಇದನ್ನಿಡಿ.
*ಎರಡೂ ಬೇಳೆಗಳನ್ನು ತೆಗೆದುಕೊಂಡು (ಉದ್ದಿನ ಬೇಳೆ ಹಾಗೂ ಹೆಸರು ಬೇಳೆ) ನೀರಿನಲ್ಲಿ ಚೆನ್ನಾಗಿ ತೊಳೆದುಕೊಂಡು 4-6 ಗಂಟೆಗಳ ಕಾಲ ನೆನೆಸಿ, ಮತ್ತು ಬೇಳೆಗಳಿಂದ ನೀರನ್ನೆಲ್ಲಾ ಬಸಿದುಕೊಳ್ಳಿ. ನಂತರ ಗ್ರೈಂಡರ್‌ನಲ್ಲಿ ಇದನ್ನು ಹಾಕಿ ನೀರು ಹಾಕದೇ ನುಣ್ಣಗೆ ರುಬ್ಬಿಕೊಳ್ಳಿ. ಇದನ್ನು ಒಂದು ಪಾತ್ರೆಗೆ ಹಾಕಿ ಒಂದೆಡೆ ಇರಿಸಿ.
*ಈಗ ಇಡ್ಲಿ ತಟ್ಟೆಗೆ ಸ್ವಲ್ಪ ಎಣ್ಣೆ ಸವರಿ ಇಡ್ಲಿ ಪಾತ್ರೆಗೆ ಅನ್ನು ಬಿಸಿಯಾಗಲು ಮಂದ ಉರಿಯಲ್ಲಿ ಇರಿಸಿ. ಪಾತ್ರೆಗೆ ನೀರು ಹಾಕಿ ಅದರ ಮೇಲೆ ಇಡ್ಲಿ ತಟ್ಟೆಗಳನ್ನಿಡಿ.
*ಹಿಟ್ಟಿಗೆ ಈಗ ಉಪ್ಪು, ಶುಂಠಿ, ಕತ್ತರಿಸಿದ ಹಸಿಮೆಣಸು ಹಾಕಿ ಹಿಟ್ಟನ್ನು ಮಿಶ್ರ ಮಾಡಿಕೊಳ್ಳಿ. ಹಿಟ್ಟು ತೆಳುವಾಗಿದೆ ಎಂದಾದರೆ 2-3 ಚಮಚದಷ್ಟು ರವೆಯನ್ನು ಸೇರಿಸಿ. ಕೊನೆಗೆ ಸೋಡವನ್ನು ಹಾಕಿ. ಇದನ್ನು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ನಿಮ್ಮ ಮೊಸರು ವಡೆ ಮಿಶ್ರಣ ಈಗ ಸಿದ್ಧವಾಗಿದೆ.

ಮೊಸರು ವಡೆ ತಯಾರಿಸಲು:
*ಒಂದು ಕೈಲಿನಷ್ಟು ಹಿಟ್ಟನ್ನು ತೆಗೆದುಕೊಂಡು ಇಡ್ಲಿಗೆ ತಟ್ಟೆಗೆ ಹಾಕಿ. ಈ ಮಿಶ್ರಣವನ್ನು ಒದ್ದೆ ಕೈಗಳಿಂದ ತಟ್ಟಿ ವಡೆಯ ಆಕಾರದಲ್ಲಿ ಚಪ್ಪಟೆ ಮಾಡಿಕೊಳ್ಳಿ.
*ನಂತರ ಮಂದ ಉರಿಯಲ್ಲಿ ಬೇಯಲು ಬಿಡಿ. 15-20 ನಿಮಿಷಗಳ ಕಾಲ ಇಡ್ಲಿ ತಟ್ಟೆಯಲ್ಲಿ ಈ ವಡೆ ಬೇಯಲಿ.
*ಇನ್ನು ವಡೆ ಪೂರ್ತಿ ಬೆಂದಾಗ ಗ್ಯಾಸ್ ಆರಿಸಿ, ಇಡ್ಲಿ ತಟ್ಟೆಗಳನ್ನು ಹೊರತೆಗೆದು ತಣ್ಣಗಾಗಲು ಬಿಡಿ. ನಂತರ ಮೊಸರು ವಡೆಯನ್ನು ತಟ್ಟೆಗೆ ವರ್ಗಾಯಿಸಿ. ಇದು ಇನ್ನಷ್ಟು ತಣ್ಣಗಾಗಲು 5 ನಿಮಿಷಗಳ ಕಾಲ ಹಾಗೆಯೇ ಬಿಡಿ.

ಬಡಿಸುವಾಗ:
*ಪಾತ್ರೆಯಲ್ಲಿ 2-4 ವಡೆಗಳನ್ನು ಇರಿಸಿ.
*ವಡೆಯ ಮೇಲೆ ಮಸಾಲಾ ಮೊಸರನ್ನು ಹಾಕಿ ನಂತರ ಮೆಣಸಿನ ಪುಡಿ, ಕರಿಮೆಣಸಿನ ಪುಡಿ ಮತ್ತು ಕೊತ್ತಂಬರಿ ಸೊಪ್ಪಿನೊಂದಿಗೆ ಅಲಂಕರಿಸಿ.
*ಮೊಸರು ವಡೆ ಸವಿಯಲು ಸಿದ್ಧವಾಗಿದೆ. ರುಚಿಯಾ ಮೊಸರು ವಡೆ ಸವಿಯಲು ಸಿದ್ಧವಾಗಿದ್ದು ಮನೆಮಂದಿಗೆ ಸ್ವಾದಿಷ್ಟ ಖಾದ್ಯವನ್ನು ಉಣಬಡಿಸಿ.

English summary

Morning Breakfast: Mouthwatering Dahi Vada recipe

Dahi Vada is one of the most popular snacks in India and is also a festival favourite. But then, you have to get the recipe right for that perfect plate of Dahi Vada. Have a look how to prepare Dahi voda recipe
Story first published: Saturday, July 11, 2015, 18:27 [IST]
X
Desktop Bottom Promotion