For Quick Alerts
ALLOW NOTIFICATIONS  
For Daily Alerts

ಕ್ರೀಮಿ ಚೀಸ್ ಆಲೂಗಡ್ಡೆ ಪಲ್ಯ

|

ಇದೇನಿದು ಹೆಸರೇ ಹೀಗಿದೆಯಲ್ಲ ಅಂತ ಆಶ್ಚರ್ಯ ಆಯ್ತಾ? ಇದು ಇಂಗ್ಲೀಷ್ ಬ್ರೇಕ್ ಫಾಸ್ಟ್. ಈ ರೆಸಿಪಿಯನ್ನು ಈವತ್ತು ಟ್ರೈ ಮಾಡಿ ನೋಡಿ. ಬ್ರೆಡ್ ಜೊತೆ ಜಾಮ್ ರುಚಿ ನಮಗೆ ಗೊತ್ತು. ಈವತ್ತು ಜಾಮ್ ಬದಲು ಬ್ರೆಡ್ ಜೊತೆ ಇದನ್ನು ಟ್ರೈ ಮಾಡಿ. ತಿನ್ನಲು ಡಿಫರೆಂಟ್ ಆಗಿರುತ್ತೆ. ಇದನ್ನು ತುಂಬ ಸುಲಭವಾಗಿ ಮಾಡಬಹುದು.

Creamy Cheese Mashed Potatoes For Breakfast

ಬೇಕಾಗುವ ಸಾಮಗ್ರಿಗಳು
ಆಲೂಗಡ್ಡೆ - 4 (ಬೇಯಿಸಿಕೊಳ್ಳಿ)\
ಚೀಸ್ - 500 ಗ್ರಾಂ
ಕ್ರೀಂ- 1 ಕಪ್
ಬೆಣ್ಣೆ- 8 ಟೀಚಮಚ
ಬೆಳ್ಳುಳ್ಳಿ ಪುಡಿ- 1 ಟೀಚಮಚ
ಮೆಣಸು- 1/4 ಟೀಚಮಚ

ಮಾಡುವ ವಿಧಾನ
ಆಲೂಗಡ್ಡೆಯನ್ನು ಸಿಪ್ಪೆ ತೆಗೆದು ಕುಕ್ಕರಿನಲ್ಲಿಟ್ಟು ಬೇಯಿಸಿಕೊಳ್ಳಿ. ಆಲೂಗಡ್ಡೆ ಬೆಂದ ನಂತರ ನೀರನ್ನು ಹೊರಚೆಲ್ಲಿ. ಒಂದು ದೊಡ್ಡ ಪಾತ್ರೆಗೆ ಆಲೂಗಡ್ಡೆ, ಚೀಸ್, ಕ್ರೀಂ, ಬೆಣ್ಣೆ, ಬೆಳ್ಳುಳ್ಳಿ ಪುಡಿ ಮತ್ತು ಮೆಣಸನ್ನು ಹಾಕಿಕೊಳ್ಳಿ. ಇದನ್ನು ಎಲೆಕ್ಟ್ರಿಕ್ ಮಿಕ್ಸರ್ ಬಳಸಿ ಚೆನ್ನಾಗಿ ಕಲಸಿ. ಇದು ಒಂದು ಹದಕ್ಕೆ ಬಂದ ನಂತರ ಒವೆನ್ ನ ಪಾತ್ರೆಗೆ ಈ ಮಿಶ್ರಣ ಮತ್ತು ಚೀಸ್ ಹಾಕಿ ಮುಚ್ಚಳ ಮುಚ್ಚಿ ಒವೆನ್ ನಲ್ಲಿಟ್ಟು 45 ನಿಮಿಷಗಳವರೆಗೆ ಬೇಯಿಸಿ. ಇದಾದ ನಂತರ ಮತ್ತೆ ಮುಚ್ಚಳ ತೆಗೆದು ಇದನ್ನು 15 ನಿಮಿಷಗಳವರೆಗೆ ಬೇಯಿಸಿ.

English summary

Creamy Cheese Mashed Potatoes For Breakfast

If you want to have an English breakfast this morning, you can try out this lovely cheesy breakfast recipe we have in store for you. Creamy cheese and mashed potatoes is one of the best English breakfast recipes you should try out at any cost.
Story first published: Thursday, November 28, 2013, 16:43 [IST]
X
Desktop Bottom Promotion