For Quick Alerts
ALLOW NOTIFICATIONS  
For Daily Alerts

ತೇಜಸ್ವಿನಿ ಹೆಗಡೆ : ಮಾಲಿಕರು, ಶಿರಸಿ ಭವನ

By Super
|

ಕನ್ನಡ ಜನರ ಬಾಯಿರುಚಿಯನ್ನು ತಣಿಸಲು ಆರಂಭವಾಗಿರುವ ಅಡುಗೆ ಅಂಕಣ 'ಶಿರಸಿ ಭವನ'. ಪ್ರತಿ ಶುಕ್ರವಾರದ ಈ ಅಂಕಣವನ್ನು ನಡೆಸಿಕೊಡುವವರು ಬೆಂಗಳೂರಿನ ತೇಜಸ್ವಿನಿ ಹೆಗಡೆ. ಲೇಖಕಿ ಉತ್ತರ ಕನ್ನಡ ಜಿಲ್ಲೆ ಶಿರಸಿ ಮೂಲದವರಾಗಿ ಸದ್ಯ ಬೆಂಗಳೂರಲ್ಲಿ ವಾಸವಾಗಿದ್ದರೂ ತಮ್ಮ ಪ್ರಾಂತ್ಯಕ್ಕೆ ವಿಶಿಷ್ಟವಾದ ರುಚಿರುಚಿ ಅಡುಗೆ ಮಾಡುವುದನ್ನು ಹಾಗೂ ತಯಾರಿಸುವ ಕ್ರಮವನ್ನು ಅಕ್ಷರ ಕುಕ್ಕರ್ ನಲ್ಲಿ ಬೇಯಿಸುವುದರಲ್ಲಿ ಪಳಗಿದವರು.

ವಿಷೇಷವಾಗಿ ಸಿರ್ಸಿ, ಸಿದ್ದಾಪುರ, ಕಾರವಾರ ಭಾಗದಲ್ಲಿ ಪ್ರಚಲಿವಿದ್ದು, ಈಗಿನ ಕಾಲದ ಮಂದಿಗೆ ಅರಿವು ಮಾಸಿರುವ ಶುದ್ಧ ಶಾಖಾಹಾರ ಪದಾರ್ಥಗಳನ್ನು ನಿಮಗೆ ಅವರು ಇಲ್ಲಿ ಒಪ್ಪವಾಗಿ ಮಾಡಿ ಇಡುತ್ತಾರೆ. ಅವರು ಬರೆಯುವ ರೆಸಿಪಿಗಳನ್ನು ನೀವು ಪ್ರಯೋಗ ಮಾಡಿ, ಯಶಸ್ವಿಯಾಗಿ, ಇತರರಿಗೂ ತಿಳಿಸಿ.

ಬಗೆಬಗೆ ಪದಾರ್ಥಗಳನ್ನು ತಯಾರಿಸುವ ವಿಧಾನಗಳನ್ನು ತೇಜಸ್ವಿನಿ ಅವರು ಕಲಿತದ್ದು ತಮ್ಮ ತಾಯಿಯವರಿಂದ. ಈ ಅಂಕಣ ನಿರ್ವಹಿಸುವುದಕ್ಕೆ ತಮ್ಮ ತಾಯಿಯೇ ಪ್ರೇರಣೆ ಎನ್ನುತ್ತಾರೆ ಲೇಖಕಿ. ತೇಜಸ್ವಿನಿ ಅವರು ಮಂಗಳೂರಿನ ಕೆನರಾ ಕಾಲೇಜಿನಲ್ಲಿ ವಿಜ್ಞಾನ ಪದವಿ ಪಡೆದು, ಆನಂತರ ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರು ಕವಿಯೂ ಹೌದು. ಅವರ ಕವನ ಸಂಕಲನ "ಪ್ರತಿಬಿಂಬ"(ಜಯಶ್ರೀ ಪ್ರಕಾಶನ) ಹಾಗೂ ಕಥಾಸಂಕಲನ "ಕಾಣ್ಕೆ"(ಜಯಶ್ರೀ ಪ್ರಕಾಶನ) ಕಳೆದ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಯಾಗಿವೆ. 1995ರಲ್ಲಿ ಅವರ ಪ್ರಥಮ ಕವನ ಸಂಕಲನ "ಚಿಗುರು" ಕೃತಿಯನ್ನು ಸುಮುಖ ಪ್ರಕಾಶನ ಬೆಳಕು ಕಾಣಿಸಿತ್ತು.

English summary

About the author Tejaswini Hegde,The Chef - ತೇಜಸ್ವಿನಿ ಹೆಗಡೆ : ಮಾಲಿಕರು, ಶಿರಸಿ ಭವನ

About the Columnist Tejaswini Hegde. The internet chef will maintain south Indian vegetarian recipe section on thatskannada. Exclusive delicacies from Sirsi region, North Canara. ತೇಜಸ್ವಿನಿ ಹೆಗಡೆ : ಶಿರಸಿ ಭವನ ಅಂಕಣಕಾರ್ತಿ.
X
Desktop Bottom Promotion