For Quick Alerts
ALLOW NOTIFICATIONS  
For Daily Alerts

ಬ್ರೆಡ್ ಉಪ್ಪಿಟ್ಟು

By Staff
|

ಉಪ್ಪಿಟ್ಟು ಎಂದ ತಕ್ಷಣ ಮುಖ ಕಿವುಚಬೇಡಿ.. ಇದು ಬರೀ ಉಪ್ಪಿಟ್ಟಲ್ಲ, ಸ್ಪೆಷಲ್ ಉಪ್ಪಿಟ್ಟು!

* ಅಮೃತಾ

ಬೇಕಾಗುವ ಪದಾರ್ಥಗಳು:

ಬ್ರೆಡ್ (1 ಪೌಂಡ್)
ಈರುಳ್ಳಿ (4ರಿಂದ 5)
ಹಸಿ ಮೆಣಸಿನಕಾಯಿ(10ರಿಂದ 12)
ಉತ್ತಮ ದರ್ಜೆಯ ರವೆ(ಅರ್ಧ ಬಟ್ಟಲು)
ನೀರು(ಒಂದೂವರೆ ಬಟ್ಟಲು)
ಉಪ್ಪು(1 ಚಮಚೆ)
ಹರಿಶಿಣ(ಅರ್ಧ ಟೇಬಲ್ ಚಮಚೆ)
ನಿಂಬೆ ಹಣ್ಣು(1)
ಎಣ್ಣೆ(6 ಟೇಬಲ್ ಚಮಚೆ)
ಸಾಸಿವೆ(ಅರ್ಧ ಟೇಬಲ್ ಚಮಚೆ)
ಉದ್ದಿನ ಬೇಳೆ(1 ಟೇಬಲ್ ಚಮಚೆ)
ಕಡಲೆ ಬೇಳೆ(2 ಟೇಬಲ್ ಚಮಚೆ)
ಕರಿಬೇವು(ಒಗ್ಗರಣೆಗೆ ಬೇಕಾಗುವಷ್ಟು)

Bread Uppittu

ಮತ್ತಷ್ಟು ರುಚಿಗಾಗಿ :

ಹುರಿದ ಗೋಡಂಬಿ(ಒಂದು ಟೇಬಲ್ ಚಮಚೆ)
ಕತ್ತರಿಸಿದ ಕೊತ್ತಂಬರಿ ಸೊಪ್ಪು(ಒಂದು ಟೇಬಲ್ ಚಮಚೆ)
ತುರಿದ ಹಸಿದ ಕೊಬ್ಬರಿ(ಎರಡು ಟೇಬಲ್ ಚಮಚೆ)

ಮಾಡುವ ವಿಧಾನ:

ಮೊದಲು ಬ್ರೆಡ್ಡನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಈರುಳ್ಳಿಯನ್ನೂ ಸಣ್ಣಗೆ ಹೆಚ್ಚಿ, ಹಸಿ ಮೆಣಸಿನ ಕಾಯಿಯನ್ನು ಉದ್ದುದ್ದಕ್ಕೆ ಕತ್ತರಿಸಿ.

ಆಮೇಲೆ ಎಣ್ಣೆಯನ್ನು ಅಗಲವಾದ ಬಾಣಲೆಯಲ್ಲಿ ಹಾಕಿ ಕಾಯಿಸಿ. ಎಣ್ಣೆಗೆ ಹಸಿಮೆಣಸಿನ ಕಾಯಿ ಮತ್ತು ಈರುಳ್ಳಿಯನ್ನು ಹಾಕಿ. ಸ್ವಲ್ಪ ಹೊಂಬಣ್ಣ ಬರುವವರೆಗೂ ಬೇಯಿಸಿ. ನಂತರ ನೀರಿನೊಂದಿಗೆ ಬೆರೆಸಿದ ನಿಂಬೆಯ ರಸ, ಅರಿಶಿಣ, ಉಪ್ಪನ್ನು ಸೇರಿಸಿ.

ಮಿಶ್ರಣ ಕುದಿಯುತ್ತಿದ್ದಂತೆ ರವೆಯನ್ನು ಹಾಕಿ ಒಂದೆರಡು ನಿಮಿಷ ಬಿಡಿ. ಈಗ ಬ್ರೆಡ್ಡಿನ ಚೂರುಗಳನ್ನು ಹಾಕಿ ಕಡಿಮೆ ಹುರಿಯಲ್ಲಿ ಬೇಯಿಸಿ.

ರುಚಿಗಾಗಿ ಗೋಡಂಬಿ, ತುರಿದ ಕೊಬ್ಬರಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ. ನಿಮ್ಮ ನೆಚ್ಚಿನ ರೆಡಿ.

ಇದನ್ನು ಐದರಿಂದ ಆರು ಮಂದಿ ಆರಾಮವಾಗಿ ತಿಂದು, ತೃಪ್ತಿಯಿಂದ ತೇಗಬಹುದು.

ನಿಮ್ಮ ಪಾಕ ನೈಪುಣ್ಯವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.. ಹೊಸ ರುಚಿಗಳನ್ನು ಕೂಡಲೇ ಕಳುಹಿಸಿ..

English summary

Karnataka Recipe : Bread Uppittu

upma
X
Desktop Bottom Promotion