For Quick Alerts
ALLOW NOTIFICATIONS  
For Daily Alerts

ಮರಗೆಣಸಿನ ತಿಂಡಿ ಮಾಡೋಣ ಬರ್ರಮ್ಮ

|
Tapioca Kerala Recipe
ಕೇರಳಿಗರಿಗೆ ಈ ಮರಗೆಣಸಿನ ಖಾದ್ಯವೆಂದರೆ ಅಚ್ಚುಮೆಚ್ಚು. ಮರಗೆಣಸನ್ನು ನಯವಾಗಿ ಬೇಯಿಸಿ ಮಸಾಲೆ ಸಮೇತ ತಯಾರು ಮಾಡುವ ಈ ಖಾದ್ಯದ ರುಚಿಯೂ ಪ್ರಸಿದ್ಧ. ಈ ಪ್ರಸಿದ್ಧ ಕೇರಳದ ಖಾದ್ಯವನ್ನು ನಿಮ್ಮ ಮನೆಯಲ್ಲೂ ತಯಾರು ಮಾಡಬಹುದು. ಬ್ರೇಕ್ ಫಾಸ್ಟ್ ಗೆ, ಸಂಜೆ ತಿಂಡಿಗೆ, ಯಾವ ಸಮಯದಲ್ಲಾದರೂ ಈ ಗೆಣಸಿನ ಖಾದ್ಯ ಚೆಂದ.

ಬೇಕಾಗುವ ಪದಾರ್ಥ:
* ಮರಗೆಣಸು- 500 ಗ್ರಾಂ (ಸಿಪ್ಪೆ ತೆಗೆದು ತೊಳೆದು ಕತ್ತರಿಸಿರಬೇಕು)
* 3/4 ಚಮಚ ಅರಿಶಿಣ
* ಉಪ್ಪು

ಮಸಾಲೆಗೆ:
* 1 1/2 ಕಪ್ ತೆಂಗಿನ ತುರಿ
* 4-5 ಹಸಿರು ಮೆಣಸಿನಕಾಯಿ
* 4-5 ಚಿಕ್ಕ ಚಿಕ್ಕ ಈರುಳ್ಳಿ
* ಕರಿಬೇವು
* 2 ಎಸಳು ಬೆಳ್ಳುಳ್ಳಿ
* 1 ಚಮಚ ಜೀರಿಗೆ
* 3 ಚಮಚ ಕೊಬ್ಬರಿ ಎಣ್ಣೆ

ಗೆಣಸಿನ ಖಾದ್ಯ ತಯಾರಿಸುವುದು ಹೇಗೆ?
* ಕುಕ್ಕರ್ ನಲ್ಲಿ ಮರಗೆಣಸನ್ನು ಸ್ವಲ್ಪ ಉಪ್ಪು ಮತ್ತು ಅರಿಶಿಣದೊಂದಿಗೆ ಬೇಯಿಸಬೇಕು.
* ಬೇಯಿಸಿದ ನಂತರ ನೀರನ್ನು ಬಸಿಯಬೇಕು.
* ಹಸಿರು ಮೆಣಸಿನಕಾಯಿ, ತೆಂಗಿನ ತುರಿ, ಈರುಳ್ಳಿ, ಬೆಳ್ಳುಳ್ಳಿ ಮತ್ತು ಕರಿಬೇವನ್ನು ಒಟ್ಟಿಗೆ ರುಬ್ಬಿಕೊಳ್ಳಬೇಕು.
* ಬಾಣಲೆಯನ್ನು ಬಿಸಿ ಮಾಡಿ ಅದರಲ್ಲಿ ಜೀರಿಗೆ, ಕರಿಬೇವು ಹಾಕಬೇಕು. ನಂತರ ಗೆಣಸಿನ ಮಿಶ್ರಣ ಹಾಗೂ ರುಬ್ಬಿಕೊಂಡ ಪೇಸ್ಟನ್ನು ಬೆರೆಸಬೇಕು. ಈ ಮಿಶ್ರಣ ಸ್ವಲ್ಪ ಒಣಗುವವರೆಗೆ ಹುರಿಯಬೇಕು.
* ಕೊನೆಯಲ್ಲಿ ಕೊಬ್ಬರಿ ಎಣ್ಣೆಯನ್ನು ಈ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ತಿರುಗಿಸಿ ಉರಿಯನ್ನು ಆರಿಸಿದರೆ ಕೇರಳದ ಸ್ಪೆಷಲ್ ಗೆಣಸಿನ ಖಾದ್ಯ ರೆಡಿಯಾಗಿರುತ್ತೆ.

English summary

Tapioca Kerala Recipe | Kerala Kappa Recipe | ಕೇರಳದ ವಿಶೇಷ ಖಾದ್ಯ | ಮರಗೆಣಸಿನ ತಿನಿಸು

Tapioca recipe is famous in kerala. It is called as Kerala Kappa Puzhukku. This tasty food is also easy to prepare. Have a look to know the procedure of Kerala Kappa Puzhukku.
Story first published: Friday, December 23, 2011, 13:03 [IST]
X
Desktop Bottom Promotion