For Quick Alerts
ALLOW NOTIFICATIONS  
For Daily Alerts

ವೆರೈಟಿ ವೆರೈಟಿ ತಿಂಡಿ : ಆಲೂಗಡ್ಡೆ ದೋಸೆ

By * ನಿರುಪಮಾ ಶ್ರೀರಾಮ್
|
Aloo Dosa recipe
ಮನೆಯಲ್ಲಿ ಶಾಲೆಗೆ ಹೋಗುವ ಮಕ್ಕಳಿದ್ದರೆ ಸೋಮವಾರದಿಂದ ಶುಕ್ರವಾರದವರೆಗೆ ಅಥವಾ ಶನಿವಾರದವರೆಗೆ ಡಬ್ಬಿಗೆ ಏನು ಹಾಕುವುದು? ಎಂಬುದು ಎಂಬುದೇ ಎಲ್ಲ ತಾಯಂದಿರ ಸಮಸ್ಯೆ. ಪ್ರತಿದಿನ ಏನಾದರೂ ಬೇರೆಯದೇ ತಿಂಡಿ ಇರಬೇಕು. ಇಲ್ಲದಿದ್ದರೆ, ಏನಮ್ಮಾ ನಿನ್ನೆನೂ ಇದೇ ಹಾಕಿದ್ದಿಯಲ್ಲ ಎಂಬ ತಕರಾರು ಮಗು ಮಾಡೇ ಮಾಡುತ್ತದೆ. ಟೈಮಿರಲ್ಲ ಪುಟ್ಟಾ, ಹಾಗಾಗಿ ಬೇರೆ ಮಾಡಲಿಕ್ಕಾಗಲಿಲ್ಲ, ಇವತ್ತೊಂದಿನ ತಗೊಂಡು ಹೋಗು ಅಂದ್ರೆ ಮಗು ಕೇಳಬೇಕಲ್ಲ?

ವೆರೈಟಿ ವೆರೈಟಿ ತಿಂಡಿಗಳನ್ನು ಮಾಡಿಕೊಟ್ಟರೆ ಮಕ್ಕಳಿಗೂ ಇಷ್ಟವಾಗುತ್ತದೆ ಮತ್ತು ಹಸಿವು ಕೂಡ ಹೆಚ್ಚುತ್ತದೆ. ಒಂದು ದಿನ ರವಾ ಇಡ್ಲಿ, ಇನ್ನೊಂದಿನ ಚಪಾತಿ, ಮತ್ತೊಂದಿನ ಸಾದಾ ದೋಸೆ, ಮಗುದೊಂದಿನ ಬ್ರೆಡ್ ರೋಲ್... ವಾರದಲ್ಲಿ ಒಂದು ದಿನ ಸ್ವಾದಿಷ್ಟ ಆಲೂ ದೋಸೆಯನ್ನೂ ಮಾಡಿನೋಡಿ. ಮಾಡಿದ್ದನ್ನು ತೆಪ್ಪಗೆ ತಿನ್ನುವ ಗಂಡನ ಮೊಗದಲ್ಲೂ ಬೆಳಿಗ್ಗೆ ತಿಂಡಿ ತಿನ್ನುವಾಗ ಮಂದಹಾಸ ಮೂಡಿರುತ್ತದೆ.

ಬೇಕಾದ ಸಾಮಗ್ರಿಗಳನ್ನು ಪಟ್ಟಿ ಮಾಡಿಕೊಳ್ಳಿ : 4 ಆಲೂಗಡ್ಡೆ | 1 ಕಪ್ ಮೈದಾಹಿಟ್ಟು | 4 ಹಸಿರು ಮೆಣಸಿನಕಾಯಿ | ಕೊತ್ತಂಬರಿ ಸ್ವಲ್ಪ | ಎಣ್ಣೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ :

* ಆಲೂಗಡ್ಡೆಗಳನ್ನು ಕುಕ್ಕರಿನಲ್ಲಿ ಬೇಯಿಸಿ, ಆರಿದ ಮೇಲೆ ಸಿಪ್ಪೆಯನ್ನು ಸುಲಿದು ಚೆನ್ನಾಗಿ ಪುಡಿಪುಡಿ ಮಾಡಿಟ್ಟುಕೊಳ್ಳಿ. ಅದಕ್ಕೆ ಉಪ್ಪು ಹಾಕಿ ಮತ್ತೆ ಕೈಯಾಡಿಸಿ.

* ಅದಕ್ಕೆ ಮೈದಾಹಿಟ್ಟು ಮತ್ತು ಸ್ವಲ್ಪ ನೀರು ಸೇರಿಸಿ ಕೈಲಿಸಿ. ಅದು ಪಕೋಡಾ ಹಿಟ್ಟಿನಂತೆ ಗಟ್ಟಿಯಾಗಿದ್ದರೆ ಸಾಕು.

* ಈ ಹಿಟ್ಟಿನ ಮಿಶ್ರಣಕ್ಕೆ ಹೆಚ್ಚಿಟ್ಟುಕೊಂಡ ಹಸಿರು ಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ ಕಲಿಸಿರಿ.

* ದೋಸೆ ತವಾವನ್ನು ಉರಿಯ ಮೇಲಿಟ್ಟು ಕಾದ ಮೇಲೆ ಎಣ್ಣೆ ಸವರಿ ಆಲೂಗಡ್ಡೆ ಹಿಟ್ಟಿನ ಮಿಶ್ರಣವನ್ನು ದೋಸೆಯಂತೆ ಹರವಿ ಮತ್ತೊಂದು ಚಮಚ ಎಣ್ಣೆ ಹುಯ್ದು ಎರಡೂ ಬದಿಯಲ್ಲಿ ಚೆನ್ನಾಗಿ ಬೇಯಿಸಿ.

* ಹಸಿರು ಮೆಣಸಿನಕಾಯಿ ಚಟ್ನಿ ಅಥವಾ ಟೊಮೆಟೊ ಸಾಸ್ ಜೊತೆ ಬಿಸಿಬಿಸಿಯಾಗಿರುವಾಗಲೇ ಬಡಿಸಿರಿ. ಮಗುವಿಗೆ ಎರಡು ತುತ್ತು ತಿನ್ನಿಸಿ ಅದರ ರುಚಿ ತೋರಿಸಿ ಡಬ್ಬಿಗೆ ಹಾಕಿ ಕಳಿಸಿ.

English summary

Aloo Dosa recipe | Breakfast for children | Delicious aloo dosa | ಆಗೂಗಡ್ಡೆ ದೋಸೆ | ಬೆಳಗಿನ ತಿಂಡಿ

Aloo dosa recipe is surely favorite for the school going children. Say good morning to your family members with variety variety dishes. Know how to prepare delicious aloo dosa.
Story first published: Monday, December 6, 2010, 17:33 [IST]
X
Desktop Bottom Promotion