For Quick Alerts
ALLOW NOTIFICATIONS  
For Daily Alerts

ಬಾಯಿಚಪ್ಪರಿಸಲು ಸ್ವಲ್ಪ ಸಿಹಿ, ಸ್ವಲ್ಪ ಹುಳಿ ದಹಿ ಇಡ್ಲಿ

By Super
|

ಬೆಳಗಿನ ಉಪಹಾರ ಯಾವುದೇ ಆಗಿರಲಿ ನಮ್ಮ ಮಹಿಳೆಯರು ಯಾವುದಕ್ಕೂ ಇರಲಿ ಅಂತ ಸ್ವಲ್ಪ ಹೆಚ್ಚಿಗೆ ಮಾಡಿರುತ್ತಾರೆ. ಹಾಗೇ ಇಡ್ಲಿಗಳನ್ನೂ ನೀವೇನಾದರೂ ಸ್ವಲ್ಪ ಹೆಚ್ಚಿಗೇ ಮಾಡಿ ಉಳಿದುಕೊಂಡರೆ ಚಿಂತಿಸಬೇಡಿ. ಮಿಕ್ಕ ಇಡ್ಲಿಗಳಿಂದ ಮಾಡಿಕೊಳ್ಳಬಹುದಾದ ಸುಲಭವಾದ ಅಡುಗೆ ಅಂದರೆ ದಹಿ ಇಡ್ಲಿ. ಇದೇನಿದು ದಹಿಪೂರಿ ಕೇಳಿದ್ದೀವಿ, ದಹಿ ವಡಾ ಕೇಳಿದ್ದೀವಿ ಇದ್ಯಾವುದು ದಹಿ ಇಡ್ಲಿ ಅಂತ ಯೋಚಿಸದೆ ಒಮ್ಮೆ ಮಾಡಿ ನೋಡಿ. ಶಾಲೆಯಿಂದ ಸುಸ್ತಾಗಿ ಹಿಂದಿರುಗಿದ ಮಕ್ಕಳಿಗೆ ಇದು ಇಷ್ಟವಾಗಬಹುದು.

  • ಸುಷ್ಮಾ, ಮೈಸೂರು

ಬೇಕಾಗುವ ಪದಾರ್ಥಗಳು:

ಇಡ್ಲಿ: 6
ಮೊಸರು: 250 ಗ್ರಾಂ
ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು: ಸ್ವಲ್ಪ
ಖಾರ ಸೇವು: 100 ಗ್ರಾಂ
ಕಟ್ಟಾ ಮೀಠಾ ಚಟ್ನಿ: 2 ಟೇಬಲ್ ಚಮಚ
ಪುದೀನಾ ಚಟ್ನಿ: 2 ಚಮಚ
ಉಪ್ಪು: ರುಚಿಗೆ ತಕ್ಕಷ್ಟು

ಮಾಡುವ ವಿಧಾನ:

ಕಟ್ಟಾ ಮಿಠಾ ಚಟ್ನಿ: ಸ್ವಲ್ಪ ಬೆಲ್ಲವನ್ನು ಪುಡಿ ಮಾಡಿಕೊಂಡು ಮಂದವಾದ ಹುಣಸೆಹಣ್ಣಿನ ರಸದಲ್ಲಿ ಚೆನ್ನಾಗಿ ಬೆರಸಿ. ಇದೇ ಕಟ್ಟಾಮಿಠಾ ಚಟ್ನಿ.

ಪುದೀನಾ ಚಟ್ನಿ: ಸ್ವಲ್ಪ ಉಪ್ಪು, ಪುದೀನಾ ಸೊಪ್ಪು ಮತ್ತು ಮೆಣಸಿನಕಾಯಿಗಳನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಅರೆದುಕೊಳ್ಳಿ ಪುದೀನಾ ಚಟ್ನಿ ಸಿದ್ಧವಾಗುತ್ತದೆ.

ಈಗ ಒಂದೊಂದು ಇಡ್ಲಿಯನ್ನೂ ಮೊಸರಿನಲ್ಲಿ ಐದು ನಿಮಿಷಗಳ ಕಾಲ ನೆನೆಸಬೇಕು. ಏಕೆಂದರೆ ಮೊಸರನ್ನು ಇಡ್ಲಿ ಚೆನ್ನಾಗಿ ಹೀರಿಕೊಳ್ಳುತ್ತದೆ. ಅಗಲವಾದ ಪಾತ್ರೆಯೊಂದಕ್ಕೆ ಈ ಇಡ್ಲಿಗಳನ್ನು ಹಾಕಿ. ಅದರ ಮೇಲೆ ಸ್ವಲ್ಪ ಪುದೀನಾ ಚಟ್ನಿ, ಕಟ್ಟಾಮಿಠಾ ಚಟ್ನಿಯನ್ನು ಹಾಕಬೇಕು. ಈಗ ಸಣ್ಣಗಿನ ಖಾರಸೇವು, ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪನ್ನು ಅದರ ಮೇಲೆ ಉದುರಿಸಿ. ಬೇಕಾದರೆ ಇನ್ನಷ್ಟು ಮೊಸರು, ಚಟ್ನಿಗಳನ್ನು ಸೇರಿಸಿಕೊಳ್ಳಬಹುದು. ಮತ್ತಷ್ಟು ರುಚಿಗೆ ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನೂ ಬೆರಸಿಕೊಳ್ಳಬಹುದು. ಕುರುಕಲು ತಿಂಡಿ ಬೇಕೆನ್ನುವವರು ದಹಿಇಡ್ಲಿಯನ್ನೊಮ್ಮೆ ಪ್ರಯತ್ನಿಸಬಹುದು.

X
Desktop Bottom Promotion