For Quick Alerts
ALLOW NOTIFICATIONS  
For Daily Alerts

ಪಾಲಾಕ್ ಪೂರಿ : ಓದಿ ತಿಳಿ, ಮಾಡಿ ಕಲಿ, ತಿಂದು ನಲಿ

|
Palak
ಪೌಷ್ಟಿಕಾಂಶಯುಕ್ತ ಪಾಲಾಕ್ ಅಂದ್ರೆ ಎಲ್ಲರಿಗೂ ಚಿರಪರಿಚಿತ. ಪಾಲಾಕ್ ಸೇವನೆ ಆರೋಗ್ಯಕ್ಕೆ ಮಾತ್ರವಲ್ಲ, ರುಚಿಯಲ್ಲೂ ಎತ್ತಿದ ಕೈ. ಈ ಪಾಲಾಕನ್ನ ಉಪಯೋಗಿಸಿಕೊಂಡು ಅನೇಕ ಖಾದ್ಯಗಳನ್ನ ಮಾಡಬಹುದು. ಆದ್ರೆ ಸಾದಾ ಪೂರಿ ಜೊತೆ ಪಾಲಾಕ್ ಸೇರಿದ್ರೆ ಅದರ ರುಚಿ ಹೇಳೋದಕ್ಕೆ ಅಸಾಧ್ಯ.

ಮಕ್ಕಳಿಗೆ ಅಚ್ಚು ಮೆಚ್ಚಾಗಿರೊ ಪೂರಿಯನ್ನ ಪಾಲಾಕ್ ಮಸಾಲ ಬೆರೆಸಿ ಕೊಟ್ರೆ ಟೇಸ್ಟಿ ಆಗೂ ಇರುತ್ತೆ, ಅವರ ಆರೋಗ್ಯಕ್ಕೂ ಒಳ್ಳೇದು.
ಪಾಲಾಕ್ ಪೂರಿ ಮಾಡೋದಕ್ಕೆ ಜಾಸ್ತಿ ರಿಸ್ಕ್ ತೊಗೊಳ್ಳೋ ಅಗತ್ಯನೂ ಇಲ್ಲ.

ಬೇಕಾಗುವ ಪದಾರ್ಥಗಳು:
* ಗೋಧಿಹಿಟ್ಟು 250 ಗ್ರಾಂ
* ಹಸಿಮೆಣಸಿನ ಕಾಯಿ 5
* ಪಾಲಾಕ್ ಸೊಪ್ಪು
* ಎಣ್ಣೆ, ಉಪ್ಪು ರುಚಿಗೆ ತಕ್ಕಷ್ಟು.
* ಕೊತ್ತಂಬರಿ, ಜೀರಿಗೆ

ಮಾಡುವ ವಿಧಾನ: ಪಾಲಾಕ್ ಪೂರಿ ತಯಾರಿಸುವ ಮುನ್ನ ಸೊಪ್ಪಿಗೆ ಸ್ವಲ್ಪ ಉಪ್ಪು ಬೆರೆಸಿ ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು. ಒಂದು ಬಾಣಲೆಗೆ ನೀರು ಹಾಕಿ ಕುದಿ ಬಂದ ನಂತರ ಪಾಲಾಕ್ ಸೊಪ್ಪು ಹಾಕಿ ಬೇಯಿಸಬೇಕು. ಬೆಂದ ಸೊಪ್ಪು ಆರಿದ ನಂತರ, ಜೀರಿಗೆ, ಹಸಿಮೆಣಸಿನಕಾಯಿ ತೊಳೆದು ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು.

ಈಗ ಗೋಧಿ ಹಿಟ್ಟನ್ನು ಜರಡಿ ಮಾಡಿಕೊಂಡು ರುಬ್ಬಿದ ಪಾಲಾಕ್ ಮಿಶ್ರಣ, ಉಪ್ಪು, ಸ್ವಲ್ಪ ಕಾದ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಕಲೆಸಬೇಕು. ಚಪಾತಿ ಹಿಟ್ಟಿನಂತೆ ಕಲೆಸಿದ ಹಿಟ್ಟನ್ನು ಪೂರಿಯಂತೆ ಲಟ್ಟಿಸಿಕೊಂಡು ಕಾದ ಎಣ್ಣೆಗೆ ಹಾಕಿ ಪೂರಿ ಕರಿಯಬೇಕು. ಸ್ವಲ್ಪ ಹಸಿರು ಬಣ್ಣದಲ್ಲಿ ಬರುವ ಈ ಪೂರಿಯನ್ನು ನಿಮ್ಮ ಮೆಚ್ಚಿನ ಚಟ್ನಿಯೊಂದಿಗೆ ಸೇವಿಸಿ ನೋಡಿ.

English summary

Spinach leaves recipe | Chapathi, Poori | Protein foods | ಪಾಲಾಕ್ ಸೊಪ್ಪಿನ ಖಾದ್ಯಗಳು | ಚಪಾತಿ, ಪೂರಿ | ಪೌಷ್ಟಿಕಾಂಶಯುಕ್ತ ಆಹಾರ

Poori of palak masala recipe: Tasty, especially to kids who like poori.
Story first published: Monday, August 1, 2011, 10:47 [IST]
X
Desktop Bottom Promotion