For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿ ಈ ವಸ್ತುಗಳಿದ್ದರೆ ಹೊಟ್ಟೆಯಲ್ಲಿರುವ ಮಗುವಿಗೆ ಅಪಾಯ ತಪ್ಪಿದಲ್ಲ

|

ಮನೆಗೊಂದು ಮಗು ಬರಲಿದೆ ಎಂಬುದು ಇಡೀ ಕುಟುಂಬಕ್ಕೆ ಬಹಳ ಸಂತೋಷ ಕೊಡುವ ಸಂಗತಿ. ತಾಯ್ತನ ಅನ್ನುವುದು ಹೆಣ್ಣಿನ ಪುನರ್ಜನ್ಮದಂತೆ. ಪ್ರತಿ ತಾಯಿಯೂ ಕೂಡ ತನ್ನ ಮಗುವಿಗೆ ವಿದ್ಯೆ, ಬುದ್ಧಿ, ಆಯಸ್ಸು, ಜೊತೆಗೆ ಉತ್ತಮ ಆರೋಗ್ಯವನ್ನು ಬೇಡಿಕೊಳ್ಳುತ್ತಾಳೆ. ತನ್ನೊಳಗೆ ಕೂಸೊಂದು ಜನ್ಮ ತಳೆಯಲು ಸಿದ್ಧವಾಗುತ್ತಿದೆ ಎಂದು ತಿಳಿದಾಗ ಪ್ರತಿಯೊಬ್ಬ ಹೆಣ್ಣು ಕೂಡ ಎಲ್ಲಾ ರೀತಿಯಿಂದಲೂ ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಪ್ರಾರಂಭಿಸುತ್ತಾಳೆ.

ನಿಮ್ಮ ಮಗುವನ್ನು ತೊಂದರೆಯಿಂದ ರಕ್ಷಿಸಿ!

ಕೆಫೀನ್, ಆಲ್ಕೋಹಾಲ್‌ನಿಂದ ದೂರವಿರುವುದು, ಉತ್ತಮ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಮತ್ತು ಪೋಷಕಾಂಶ ಭರಿತ ಆಹಾರವನ್ನು ಸೇವಿಸುವುದು ಸೇರಿದಂತೆ ಆರೋಗ್ಯವಾಗಿ ಮಗು ಜನಿಸಬೇಕು ಎಂದರೆ ಎಲ್ಲಾ ರೀತಿಯ ಜಾಗೃತಿಯನ್ನು ಪೋಷಕರು ತೆಗೆದುಕೊಳ್ಳಬೇಕಾಗುತ್ತದೆ.

ಎಲ್ಲರಿಗೂ ತಿಳಿದಿರುವಂತೆ ಮನೆಯಲ್ಲಿರುವ ಎಲ್ಲಾ ವಸ್ತುಗಳನ್ನು ಕೂಡ ಗರ್ಭಿಣಿಯರು ಸೇವಿಸುವುದು ಸುರಕ್ಷಿತವಲ್ಲ. ಎಡ್ವರ್ಡ್ ವಯಾ ಕಾಲೇಜು ಮತ್ತು ವರ್ಜೀನಿಯಾ ಮೇರಿಲ್ಯಾಂಡ್ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಸಂಶೋಧನೆಯೊಂದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಬಳಸುವ ಕೆಲವು ಉತ್ಪನ್ನಗಳಲ್ಲಿರುವ ಸಂಯೋಜನೆಯು ಜನ್ಮ ವೈಪರೀತ್ಯಗಳಿಗೆ ಸಂಬಂಧಿಸಿದ್ದು ತಾಯಿಯು ಈ ರಾಸಾಯನಿಕಗಳಿಗೆ ತನ್ನನ್ನು ತಾನು ಒಡ್ಡಿಕೊಂಡಲ್ಲಿ ಹುಟ್ಟುವ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬುದಾಗಿ ತಿಳಿಸಿದೆ.

ನೀವು ಜಾಗೃತೆ ವಹಿಸಬೇಕಾಗಿರುವ ಕೆಲವು ವಸ್ತುಗಳ ಬಗ್ಗೆ ನಾವಿಲ್ಲಿ ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ.

ಗೋಡೆಗಳಿಗೆ ಬಳಸುವ ಪೇಯಿಂಟ್

ಗೋಡೆಗಳಿಗೆ ಬಳಸುವ ಪೇಯಿಂಟ್

ನಿಮ್ಮ ಮನೆಯಲ್ಲಿ ಗೋಡೆಗಳಿಗೆ ಪೇಯಿಂಟ್ ಮಾಡುವ ಮೊದಲು ಮನೆಯಲ್ಲಿ ಯಾರಾದರೂ ಗರ್ಭಿಣಿ ಸ್ತ್ರೀಯರಿದ್ದಲ್ಲಿ ಈ ಕೆಲಸವನ್ನು ನಿಲ್ಲಿಸುವುದೇ ಒಳ್ಳೆಯದು. ಯಾಕೆಂದರೆ ಗೋಡೆಗಳಿಗೆ ಬಳಸುವ ಪೇಯಿಂಟ್ ಮಗು ಬೇಗನೆ ಜನಿಸುವಂತೆ ಮಾಡುವ ಸಾಧ್ಯತೆ ಇರುತ್ತದೆ ಅಷ್ಟೇ ಅಲ್ಲ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ರೂಮಿನಲ್ಲಿ ಸರಿಯಾಗಿ ಗಾಳಿಯಾಡುವಂತೆ ಮಾಡಿಕೊಳ್ಳಿ. ಪೇಯಿಂಟ್ ನ ದ್ರಾವಕಗಳು ಮತ್ತು ಸ್ಪ್ರೇಗಳನ್ನು ರೂಮಿಗೆ ಬಳಸುವ ಮುನ್ನ ಜಾಗ್ರತೆ ವಹಿಸಿ. ಗರ್ಭಿಣಿಯರು ಇಂತಹ ವಸ್ತುಗಳನ್ನು ಬಳಸಲೇ ಬೇಡಿ. ಮನೆಯಲ್ಲಿ ಅನಿವಾರ್ಯವಾಗಿ ಬಳಸಬೇಕಾದ ಸಂದರ್ಭ ಬಂದರೆ ಬೇರೊಬ್ಬರ ಸಹಾಯ ಪಡೆದು ಕೆಲಸ ಪೂರ್ಣಗೊಳಿಸಿ. ಆ ಮೂಲಕ ಬರಬಹುದಾದ ಸಮಸ್ಯೆಯಿಂದ ದೂರವಿರಿ.

ಸೊಳ್ಳೆ ಕೊಲ್ಲುವ ಸ್ಪ್ರೇಗಳು

ಸೊಳ್ಳೆ ಕೊಲ್ಲುವ ಸ್ಪ್ರೇಗಳು

ಸೊಳ್ಳೆಗಳ ಕಡಿತ ಮತ್ತು ದೋಷದ ವಿರುದ್ಧ ಹೋರಾಟ ಮಾಡುವುದಕ್ಕಾಗಿ ಸೊಳ್ಳೆ ನಿವಾರಕಗಳು ಸೂಕ್ತವೆನಿಸಿದ್ದರೂ ಕೂಡ ಗರ್ಭಿಣಿ ಸ್ತ್ರೀಯರಿಗೆ ಅವುಗಳು ಸ್ನೇಹಿಯಾಗಿರುವುದಿಲ್ಲ. ಅವುಗಳು ಎಷ್ಟೇ ಸುರಕ್ಷಿತವೆಂದು ಹೇಳಿದರೂ ಕೂಡ ಸಣ್ಣ ಪ್ರಮಾಣದಲ್ಲಿ DEET ಸಾಂದ್ರತೆಯನ್ನು ಅದು ಹೊಂದಿರುತ್ತದೆ ಮತ್ತು ಇದರಲ್ಲಿರುವ ರಾಸಾಯನಿಕಗಳು ಚರ್ಮಕ್ಕೆ ಹಾನಿ ಮಾಡುವ ಸಾಧ್ಯತೆ ಇರುತ್ತದೆ ಮತ್ತು ಮಗುವಿನ ಬೆಳವಣಿಗೆ ಆಗುವ ಸಂದರ್ಭದಲ್ಲಿ ಇವುಗಳಿಂದ ದೂರವಿರುವುದೇ ಲೇಸು. ಕೆಮಿಕಲ್ ಮಿಶ್ರಿತ ಪ್ರೊಡಕ್ಟ್ ಗಳ ಬದಲಾಗಿ ಯಾವುದಾದರೂ ನೈಸರ್ಗಿಕ ವಿಧಾನದಿಂದ ಅಥವಾ ಪ್ರಮಾಣೀಕರಿಸಿದ, ಪರೀಕ್ಷೆಗೆ ಒಳಪಡಿಸಿದ ಉತ್ಪನ್ನಗಳನ್ನು ಆರಿಸಿ.

ನ್ಯಾಪ್ತಲೀನ್ ಬಾಲ್ ಗಳು

ನ್ಯಾಪ್ತಲೀನ್ ಬಾಲ್ ಗಳು

ಕೀಟಗಳು, ಪತಂಗಗಳು, ಮೂಲೆ-ಮುರುಕಿನ ವಾಸನೆಯನ್ನು ಹೊಡೆದೋಡಿಸುವ ನಿಟ್ಟಿನಲ್ಲಿ ಸಾಮಾನ್ಯವಾಗಿ ಎಲ್ಲರೂ ಕೂಡ 98% ನ್ಯಾಪ್ತಲೀನ್ ಬಾಲ್ ಗಳು ಬಳಸುತ್ತಾರೆ. ಇದು ವಿಷಕಾರಿ ರಾಸಾಯನಿಕವಾಗಿದೆ. ವಾಕರಿಕೆ, ತಲೆ ತಿರುಗುವಿಕೆ ಸೇರಿದಂತೆ ನ್ಯಾಪ್ತಲೀನ್ ಗುಳಿಕೆಗಳಿಂದ ಗರ್ಭಿಣಿ ಸ್ತ್ರೀಯರಿಗೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಇದು ಕಾರಣವಾಗಬಹುದು. ಆ ಮೂಲಕ ಹುಟ್ಟುವ ಮಗುವಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ. ಇದನ್ನು ಸರಿಯಾಗಿ ಶೇಖರಿಸಿ ಇಡದೇ ಇರುವುದರಿಂದ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು.

ಬೆಕ್ಕಿನ ಕಸದ ಪೆಟ್ಟಿಗೆ

ಬೆಕ್ಕಿನ ಕಸದ ಪೆಟ್ಟಿಗೆ

ಬೆಕ್ಕುಗಳು ಎಷ್ಟು ಮುದ್ದು ಮುದ್ದು ಎನ್ನಿಸಿದರೂ ಇವುಗಳಿಂದ ನಿರೀಕ್ಷಿಸದೇ ಇರುವಂತಹ ಕಾಯಿಲೆ ಮತ್ತು ಸೋಂಕು ತಗುಲುವ ಸಾಧ್ಯತೆ ಇರುತ್ತದೆ. ಬೆಕ್ಕಿನ ಕಸದ ಪೆಟ್ಟಿಗೆ ಅಥವಾ ಸ್ಯಾಂಡ್ ಬಾಕ್ಸ್ ನಲ್ಲಿ ಟೋಕ್ಸೋಪ್ಲಾಸ್ಮಾ ಗೊಂಡಿ ಎಂಬ ಪರಾವಲಂಬಿ ಇರುತ್ತದೆ. ಇದು ಗಂಭೀರವಾದ ಶಿಶುಗಳ ಜನ್ಮಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಉಂಟು ಮಾಡುವ ಸಾಧ್ಯತೆ ಇದೆ. ಅಷ್ಟೇ ಅಲ್ಲ ತಾಯಿಗೂ ಕೂಡ ಕೆಲವು ಅಡ್ಡಪರಿಣಾಮಗಳನ್ನು ಉಂಟು ಮಾಡುವ ಸಾಧ್ಯತೆ ಇದೆ. ತಜ್ಞರು ಹೇಳುವ ಪ್ರಕಾರ ತೊಳೆಯದ ಹಣ್ಣುಗಳು, ತರಕಾರಿಗಳು ಮತ್ತು ಕಲುಷಿತ ನೀರಿನ ಮೂಲಕ ಹೇಗೆ ಕಾಯಿಲೆಗಳು ಹರಡುತ್ತವೆಯೋ ಹಾಗೆಯೇ ಇದರ ಮೂಲಕವೂ ಕೂಡ ಸಮಸ್ಯೆಯಾಗುತ್ತದೆ.

ಪ್ಲಾಸ್ಟಿಕ್

ಪ್ಲಾಸ್ಟಿಕ್

ಇಡೀ ಭೂಮಿಗೆ ಪ್ಲಾಸ್ಟಿಕ್ ಒಂದು ಮಾರಕ ವಸ್ತು. ಆದರೆ ಪ್ರತಿಯೊಬ್ಬ ಗರ್ಭಿಣಿ ಸ್ತ್ರೀ ಕೂಡ ಪ್ಲಾಸ್ಟಿಕ್ ನಿಂದ ದೂರವಿರುವುದಕ್ಕೆ ಪ್ರಯತ್ನಿಸಬೇಕು ಥಾಲೇಟ್ ಗಳಂತಹ ಕೆಲವು ಮಾರಕ ವಸ್ತುಗಳನ್ನು ಈ ಪ್ಲಾಸ್ಟಿಕ್ ಗಳು ಹೊಂದಿರುತ್ತದೆ. ಇದು ಚರ್ಮದ ಮೂಲಕ ಸುಲಭವಾಗಿ ಹೀರಲ್ಪಡುತ್ತದೆ ಮತ್ತು ವಿಪರೀತ ತಾಪಮಾನಕ್ಕೆ ಒಡ್ಡಿದಾಗ ಇದು ಬಿಡುಗಡೆಗೊಳ್ಳುತ್ತದೆ. ಈ ಕೆಮಿಕಲ್ ಗಳು ಸಾಕಷ್ಟು ರೀತಿಯಲ್ಲಿ ಭ್ರೂಣಕ್ಕೆ ತೊಂದರೆ ಮಾಡುವ ಸಾಧ್ಯತೆ ಇದೆ. ಮಗುವಿನ ಬೆಳವಣಿಗೆಯ ಮೇಲೆ ಪರಿಣಾಮ ಒಡ್ಡುವ ಸಾಧ್ಯತೆ ಇದೆ.

English summary

These Household Items May Be Toxic For Your Unborn Baby

Here we are discussing about these are the household items may be toxic for your unborn baby. composition and ingredients used in some of the most commonly used products may be linked to birth abnormalities and impact the baby's health - even if only one parent were exposed to chemicals. That being said, here are some products you should be very cautious of. Read more.
Story first published: Tuesday, February 4, 2020, 10:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X