For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ಯೋನಿ ಭಾಗದ ಶೇವಿಂಗ್‌ ಸುರಕ್ಷಿತವೇ?

|

ಈ ಬಗ್ಗೆ ಕಲವರು ಅಗತ್ಯ ಎಂದು ಉತ್ತರಿಸಿದರೆ ಉಳಿದವರು ಅನಗತ್ಯ ಎನ್ನುತ್ತಾರೆ. ಹೆರಿಗೆಯ ಸಮಯ ಹತ್ತಿರಾಗುತ್ತಿದ್ದಂತೆ ಯೋನಿ ಭಾಗದ ರೋಮಗಳನ್ನು ನಿವಾರಿಸಬೇಕೇ ಬೇಡವೇ ಎಂಬ ಪ್ರಶ್ನೆ ಪ್ರತಿ ಗರ್ಭಿಣಿಗೂ ಎದುರಾಗಿಯೇ ಆಗುತ್ತದೆ. ಆಸ್ಪತ್ರೆಯಲ್ಲಿ ಹೆರಿಗೆಯ ಸಮಯಕ್ಕೂ ಮುನ್ನ ದಾದಿಯರೇ ಈ ಭಾಗದ ರೋಮಗಳನ್ನು ನಿವಾರಿಸುತ್ತಾರೆ. ಹಲವರಿಗೆ ಇದು ಇರಿಸು ಮುರಿಸು ಎದುರಾಗುವಂತಾಗಬಹುದು. ಅಲ್ಲದೇ ಭಾವನಾತ್ಮಕವಾಗಿಯೂ ಮನಸ್ಸನ್ನು ರಾಡಿ ಮಾಡಬಹುದು.

ಆದರೆ ಈ ಕೆಲಸವನ್ನು ಸ್ವತಃ ನಿರ್ವಹಿಸಿಕೊಂಡು ದುಗುಡವಿಲ್ಲದೇ ಹೆರಿಗೆಯನ್ನು ಎದುರಿಸುವುದೇ ಉತ್ತಮ ಎಂದು ತಜ್ಞರು ಮತ್ತು ಅನುಭವಿ ದಾದಿಯರು ಅಭಿಪ್ರಾಯ ಪಡುತ್ತಾರೆ. ಆದರೆ ಹೆರಿಗೆಯ ಸಮಯ ಹತ್ತಿರಾಗುತ್ತಿದ್ದಂತೆಯೇ ಕಿಬ್ಬೊಟ್ಟೆಯ ಕೆಳಭಾಗದಲ್ಲಿಯೂ ಹಲವಾರು ಬದಲಾವಣೆಗಳಾಗುತ್ತವೆ ಹಾಗೂ ತ್ವಚೆ ಇನ್ನಷ್ಟು ಸೂಕ್ಷ್ಮಸಂವೇದಿಯಾಗುತ್ತದೆ. ಹೀಗಿರುವಾಗ ಶೇವಿಂಗ್ ಕ್ರಿಯೆಯನ್ನು ಉಳಿದ ಸಮಯದಂತಲ್ಲದೇ ಹೆಚ್ಚಿನ ಕಾಳಜಿಯಿಂದ ನಿರ್ವಹಿಸಬೇಕಾಗುತ್ತದೆ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಹೆರಿಗೆಗೂ ಮೊದಲು ಕಿಬ್ಬೊಟ್ಟೆ (ಯೋನಿ ಭಾಗ) ಕೂದಲನ್ನು ನಿವಾರಿಸುವ ಅಗತ್ಯವೇನು?

ಹೆರಿಗೆಗೂ ಮೊದಲು ಕಿಬ್ಬೊಟ್ಟೆ (ಯೋನಿ ಭಾಗ) ಕೂದಲನ್ನು ನಿವಾರಿಸುವ ಅಗತ್ಯವೇನು?

ಸಾಮಾನ್ಯವಾಗಿ ಎಲ್ಲಾ ಹೆರಿಗೆ ಆಸ್ಪತ್ರೆಗಳಲ್ಲಿ ಹೆರಿಗೆಗೂ ಮುನ್ನ ಈ ಭಾವನ್ನು ರೋಮರಹಿತವಾಗಿಸುವುದು ಹೆರಿಗೆಯ ಪೂರ್ವಾಭ್ಯಾಸದ ಒಂದು ಭಾಗವೇ ಹೌದು. ಇದಕ್ಕೆ ಕಾರಣಗಳು ಹೀಗಿವೆ:

 • ಹೆರಿಗೆಯನ್ನು ಆದಷ್ಟೂ ಸ್ವಚ್ಛತೆಯಿಂದ ನಿರ್ವಹಿಸಲು, ಇದರಿಂದ ವೈದ್ಯರು ಗರ್ಭಿಣಿಯ ವಿಶ್ವಾಸವನ್ನು ಪಡೆಯಬಹುದು
 • ಒಂದು ವೇಳೆ ಸಿಸರೇನಿಯನ್ ಹೆರಿಗೆಯಾಗುವುದಾದರೆ ವೈದ್ಯರ ಕೆಲಸ ಸುಲಭವಾಗುತ್ತದೆ.
 • ಸಾಮಾನ್ಯವಾಗಿ ಈ ಕ್ರಿಯೆ ಅತ್ಯಂತ ಖಾಸಗಿಯಾಗಿದ್ದು ಹೆಚ್ಚಿನ ಮಹಿಳೆಯರಿಗೆ ಬೇರೊಬ್ಬರಿಂದ ಈ ಕೆಲಸ ಮಾಡಿಸಿಕೊಳ್ಳುವುದು ಹಿಡಿಸುವುದಿಲ್ಲ. ವಿಶೇಷವಾಗಿ ಹೆರಿಗೆಯ ಸಮಯದಲ್ಲಿಯಾದರೂ ಸರಿ, ಈ ಕೆಲಸ ಹಿಡಿಸದೇ ಹೋಗಬಹುದು. ಅಲ್ಲದೇ ಈ ಕೆಲಸ ನಿರ್ವಹಿಸುವವರ ನೈಪುಣ್ಯ, ನೈರ್ಮಲ್ಯದ ಬಗ್ಗೆ ಅನುಮಾನ ಉಂಟಾದರಂತೂ ಗರ್ಭಿಣಿಗೆ ಆತಂಕ ತಪ್ಪಿದ್ದಲ್ಲ. ಈ ಸ್ಥಿತಿಗೆ ಒಳಗಾಗದಿರಲು ಇದಕ್ಕಾಗಿ ಸ್ವತಃ ನಿರ್ವಹಿಸಿಕೊಳ್ಳುವುದೇ ಅತ್ಯುತ್ತಮ ಪರಿಹಾರವಾಗಿದೆ.

  ನೀವು ಯಾವಾಗ ಶೇವ್ ಮಾಡಿಕೊಳ್ಳಬೇಕು?

  ನೀವು ಯಾವಾಗ ಶೇವ್ ಮಾಡಿಕೊಳ್ಳಬೇಕು?

  ಹೆರಿಗೆ ಸಾಮಾನ್ಯವೇ ಆಗಲಿ, ಸಿಸರೇನಿಯನ್ನೇ ಆಗಲಿ, ಹೆರಿಗೆಯ ದಿನಾಂಕ ಏಳು ದಿನಗಳ ಹಿಂದಿನ ದಿನದಿಂದ ನೀವು ಶೇವಿಂಗ್ ಅಥವಾ ವ್ಯಾಕ್ಸಿಂಗ್ ಮಾಡಿಸಿಕೊಳ್ಳಬಾರದು. ಏಕೆಂದರೆ ಈ ಕ್ರಿಯೆಯಲ್ಲಿ ಉಂಟಾಗುವ ಸೂಕ್ಷ್ಮ ಗಾಯಗಳು ಬ್ಯಾಕ್ಟೀರಿಯಾಗಳನ್ನು ಆಕರ್ಷಿಸಬಹುದು.

  ಈ ಭಾಗದ ರೋಮದ ನಿವಾವಣೆಯ ಬಗ್ಗೆ ಇಂದಿಗೂ ದ್ವಂದ್ವಗಳಿವೆ. ಹಲವಾರು ಆಸ್ಪತ್ರೆಗಳು ಈ ಕ್ರಿಯೆ ಅಗತ್ಯ ಎಂದು ವಾದಿಸಿದರೆ ಸಂಶೋಧಕರು ಈ ಕ್ರಿಯೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಈ ಕ್ರಿಯೆಯ ಸಾಧಕ ಬಾಧಕಗಳನ್ನು ಪರಿಗಣಿಸಿ ಈ ನಿರ್ಧಾರವನ್ನು ಗರ್ಭವತಿಯೇ ನಿರ್ಧರಿಸಬಹುದು.

  ಗರ್ಭಾವಸ್ಥೆಯ ಸಮಯದಲ್ಲಿ ಕಿಬ್ಬೊಟ್ಟೆಯ ರೋಮಗಳ ನಿವಾರಣೆಯಿಂದ ಲಭಿಸುವ ಲಾಭಗಳು

  ಗರ್ಭಾವಸ್ಥೆಯ ಸಮಯದಲ್ಲಿ ಕಿಬ್ಬೊಟ್ಟೆಯ ರೋಮಗಳ ನಿವಾರಣೆಯಿಂದ ಲಭಿಸುವ ಲಾಭಗಳು

  ಈ ಮಾಹಿತಿಯನ್ನು ಆಧರಿಸಿ ನೀವು ಈ ಕಾರ್ಯವನ್ನು ನಿರ್ವಹಿಸಿಕೊಳ್ಳಬೇಕೇ, ಬೇಡವೇ ಎಂಬುದನ್ನು ನಿರ್ಧರಿಸಬಹುದು.

  ಪ್ರಯೋಜನಗಳು:

  • ವಿಶೇಷವಾಗಿ ಗರ್ಭಾವಸ್ಥೆಗೂ ಮುನ್ನ ಕಿಬ್ಬೊಟ್ಟೆಯ ಕೆಳಗಿನ ರೋಮವಿರುವ ತ್ವಚೆ ಬ್ಯಾಕ್ಟೀರಿಯಾಗಳ ಸೋಂಕಿಗೆ ಅತಿ ಸೂಕ್ತವಾದ ಸ್ಥಳವಾಗಿದೆ. ಹಾಗಾಗಿ ಈ ಭಾಗವನ್ನು ಸ್ವಚ್ಛವಾಗಿರಿಸುವ ಮೂಲಕ ಸೋಂಕು ತಗಲುವ ಸಾಧ್ಯತೆಯನ್ನು ಇಲ್ಲವಾಗಿಸಬಹುದು.
  • ರೋಮರಹಿತ ಭಾಗದ ಮೂಲಕ ಪ್ರಸೂತಿತಜ್ಞರಿಗೆ ಹೆರಿಗೆಯ ಮುನ್ನ ಸಮಯದ ಪರೀಕ್ಷೆ ನಡೆಸಲು ಸುಲಭವಾಗುತ್ತದೆ ಹಾಗೂ ಪರೀಕ್ಷೆಗಾಗಿ ಸೂಕ್ತ ಸಲಕರಣೆಗಳ ಬಳಕೆಯೂ ಸುಲಭವಾಗುತ್ತದೆ.
  • ಈ ಭಾಗದ ರೋಮಗಳನ್ನು ಶೇವ್ ಮಾಡುವುದು ಅಥವಾ ತ್ವಚೆಯ ಮಟ್ಟಕ್ಕೆ ಟ್ರಿಮ್ ಮಾಡಿ ಕತ್ತರಿಸಿಕೊಳ್ಳುವ ಮೂಲಕ ಬೆವರುವಿಕೆಯನ್ನು ಕಡಿಮೆಗೊಳಿಸಬಹುದು ಹಾಗೂ ಬೆವರಿಲ್ಲದೇ ಇದ್ದಾಗ ಸೋಂಕು ಆವರಿಸುವ ಸಾಧ್ಯತೆಯೂ ಕಡಿಮೆಯಾಗುತ್ತದೆ.
  • ಈ ಭಾಗದಲ್ಲಿ ರೋಮಗಳಿಲ್ಲದೇ ಇದ್ದಷ್ಟೂ ಹೆರಿಗೆಯ ಸಮಯದಲ್ಲಿ ಆಗುವ ರಕ್ತಸ್ರಾವ ಕೂದಲುಗಳಿಗೆ ಅಂಟಿಕೊಳ್ಳುವ ಸಾಧ್ಯತೆಯನ್ನುಇಲ್ಲವಾಗಿಸಬಹುದು. ಇದನ್ನು ಬಳಿಕ ಸ್ವಚ್ಛಗೊಳಿಸುವುದು ಹೆಚ್ಚು ತ್ರಾಸದಾಯಕವಾಗುತ್ತದೆ.
  • ಅಪಾಯದ ಸಾಧ್ಯತೆಗಳು

   ಅಪಾಯದ ಸಾಧ್ಯತೆಗಳು

   • ಶೇವಿಂಗ್ ಸಮಯದಲ್ಲಿ ನೈರ್ಮಲ್ಯಕ್ಕೆ ಅತಿ ಹೆಚ್ಚಿನ ಆದ್ಯತೆ ನೀಡಬೇಕು. ಕೊಂಚ ಸಡಿಲಿಕೆ ತೋರಿದರೂ ಸೋಂಕು ತಗಲುವ ಸಾಧ್ಯತೆ ಹೆಚ್ಚುತ್ತದೆ. ಇದಕ್ಕಾಗಿ ಪ್ರತಿ ಬಾರಿ ಹೊಸ ಮತ್ತು ಕೀಟಾಣುರಹಿತ (ಸ್ಟರಿಲೈಸ್ಛ್) ಹಾಗೂ ಒಮ್ಮೆ ಬಳಸಿ ಎಸೆಯುವಂತಹ ರೇಜರ್ ಗಳನ್ನೇ ಬಳಸಬೇಕು.
   • ಶೇವಿಂಗ್ ಮಾಡಿದ ದಿನವಷ್ಟೇ ಈ ಭಾಗ ನುಣ್ಣಗಿರುತ್ತದೆ, ಮರುದಿನದಿಂದ ಮತ್ತೆ ಕೂದಲುಗಳು ಬೆಳೆಯಲು ತೊಡಗುತ್ತವೆ. ಇವು ಚರ್ಮವನ್ನು ನೂಕಿ ಹೊರಬರುವ ಕಾರಣ ತುರಿಕೆ ಹೆಚ್ಚುತ್ತದೆ. ಕೆಲವೊಮ್ಮೆ ನೂಕುವ ಕ್ರಿಯೆಯಲ್ಲಿ ಕೂದಲ ತುದಿ ಹೊರಬರದೇ ಒಳಮುಖ ಬೆಳವಣಿಗೆಯೂ ಎದುರಾಗಬಹುದು. ಪರಿಣಾಮವಾಗಿ ನೋವಿನಿಂದ ಕೂಡಿದ ಚಿಕ್ಕ ದದ್ದುಗಳು ಏಳಬಹುದು.
   • ಕೆಲವೊಮ್ಮೆ Barthlon cyst ಎಂಬ ಕೀವುಗುಳ್ಳೆಯೂ ಎದುರಾಗಬಹುದು. ಇದು ನೋವಿನಿಂದ ಕೂಡಿದ ಗುಳ್ಳೆಗಳಾಗಿದ್ದು ವೈದ್ಯರಿಗೆ ಪ್ರತಿಜೀವಕ ಔಷಧಿಗಳನ್ನು ನೀಡುವುದು ಅನಿವಾರ್ಯವಾಗುತ್ತದೆ. ಹೆರಿಗೆಯ ಸಮಯದಲ್ಲಿ ಈ ಪ್ರತಿಜೀವಕ ಔಷಧಿಗಳು ವೈದ್ಯರಿಗೂ ಸವಾಲಾಗಿ ಎದುರಾಗಬಹುದು.
English summary

Shaving When Pregnant: Should You Shave Your Pubic Hair?

Here we are discussing about When You Pregnant Should You Shave Your Pubic Hair. Some say you should, and some say you shouldn’t. You are left confused whether or not you should shave your pubic hair before delivery. Before you enter the labor room, you, usually, go through perineal hair shaving. It could be annoying and might unleash a myriad of emotions. Read more.
X