For Quick Alerts
ALLOW NOTIFICATIONS  
For Daily Alerts

ಗರ್ಭಧಾರಣೆಯಲ್ಲಿ ರಕ್ತಸ್ರಾವಕ್ಕೆ ಕಾರಣ ಮತ್ತು ಚಿಕಿತ್ಸಾ ಕ್ರಮ

|

ನಾಲ್ಕರಲ್ಲಿ ಒಬ್ಬ ಗರ್ಭಿಣಿ ಸ್ತ್ರೀಗೆ ತನ್ನ ಗರ್ಭಾವಸ್ಥೆಯಲ್ಲಿ ರಕ್ತಸ್ರಾವದ ಅನುಭವ ಆಗುತ್ತದೆ.ಇದು ವಿಭಿನ್ನ ಸಮಯದಲ್ಲಿ ವಿಭಿನ್ನ ಕಾರಣಗಳಿಗಾಗಿ ಬರಬಹುದು. ಕೆಲವು ಸಂದರ್ಭದಲ್ಲಿ ಇದು ಎಚ್ಚರಿಕೆಯ ಘಂಟೆಯೂ ಆಗಿರಬಹುದು. ಒಂದು ವೇಳೆ ನೀವೂ ಕೂಡ ನಿಮ್ಮ ಗರ್ಭಾವಸ್ಥೆಯಲ್ಲಿ ರಕ್ತಸ್ರಾವದ ಅನುಭವ ಪಡೆದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಮತ್ತು ರೋಗಪತ್ತೆ ಮಾಡಿಕೊಂಡು ಜಾಗೃತೆ ವಹಿಸುವುದು ಬಹಳ ಒಳ್ಳೆಯದು.

Pregnancy Spotting And Bleeding: Causes And Prevention

ಗರ್ಭಧಾರಣೆಯ ಚುಕ್ಕೆ ಮತ್ತು ರಕ್ತಸ್ರಾವದ ಸಂಭವನೀಯತೆಯ ಬಗ್ಗೆ ಮತ್ತು ವೈದ್ಯರನ್ನು ಯಾವಾಗ ಭೇಟಿ ಮಾಡಬೇಕು ಎಂಬ ಬಗ್ಗೆ ಈ ಲೇಖನವು ನಿಮಗೆ ಮಾಹಿತಿಯನ್ನು ನೀಡುತ್ತದೆ.

ಗರ್ಭಾವಸ್ಥೆಯ ರಕ್ತಸ್ರಾವವನ್ನು ಗುರುತಿಸುವುದು

ಗರ್ಭಾವಸ್ಥೆಯ ರಕ್ತಸ್ರಾವವನ್ನು ಗುರುತಿಸುವುದು

ಎರಡು ರೀತಿಯಲ್ಲಿ ಗರ್ಭಾವಸ್ಥೆಯಲ್ಲಿ ರಕ್ತಸ್ರಾವವಾಗುತ್ತದೆ. ಒಂದು ಸ್ಪಾಟಿಂಗ್. ಅಂದರೆ ಕೆಲವೇ ಹನಿಗಳಷ್ಟು ರಕ್ತವು ಹೊರಹೋಗುವುದು ಮತ್ತು ಇದರಿಂದ ನಿಮ್ಮ ಸ್ಯಾನಿಟರಿ ಪ್ಯಾಡ್ ಒದ್ದೆಯಾಗುವುದಿಲ್ಲ. ಸಾಮಾನ್ಯವಾಗಿ ಮೊದಲ ತ್ರೈಮಾಸಿಕದಲ್ಲಿ ಹೀಗಾಗುತ್ತದೆ ಮತ್ತು ಇದು ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ.

ಇನ್ನು ಕೆಲವರಿಗೆ ರಕ್ತಸ್ರಾವ ಅಧಿಕವಾಗಿದ್ದು ಸ್ಯಾನಿಟರಿ ಪ್ಯಾಡ್ ಸಂಪೂರ್ಣ ಒದ್ದೆಯಾಗುವಂತಾಗುತ್ತದೆ. ಮಹಿಳೆಯ ಸೂಕ್ಷ್ಮ ಪ್ರದೇಶದಿಂದ ಇಂತಹ ರಕ್ತಸ್ರಾವವು ಯಾವ ಸಮಯದಲ್ಲಿ ಬೇಕಿದ್ದರೂ ಆಗಬಹುದು. ಗರ್ಭಧಾರಣೆಯಾದ ಸಮಯದಿಂದ 9 ತಿಂಗಳು ಭರ್ತಿಯಾಗುವ ಯಾವುದೇ ಸಂದರ್ಭದಲ್ಲೂ ಇದು ನಡೆಯಬಹುದು.

ಯಾವುದೇ ಸಂದರ್ಬದಲ್ಲಿ ಸ್ಪಾಟಿಂಗ್ ಅಥವಾ ಅಧಿಕ ರಕ್ತಸ್ರಾವ ಕಂಡುಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.

ಗರ್ಭಾವಸ್ಥೆಯಲ್ಲಿ ಎಷ್ಟು ರಕ್ತಸ್ರಾವವಾದರೆ ಸಹಜವೆಂದು ಪರಿಗಣಿಸಬಹುದು?

ಗರ್ಭಾವಸ್ಥೆಯಲ್ಲಿ ಎಷ್ಟು ರಕ್ತಸ್ರಾವವಾದರೆ ಸಹಜವೆಂದು ಪರಿಗಣಿಸಬಹುದು?

ಕಡಿಮೆ ರಕ್ತಸ್ರಾವ ಅಥವಾ ಸ್ಪಾಟಿಂಗ್ ಸಮಸ್ಯೆಯು ಗರ್ಭಧಾರಣೆಯ ಪ್ರಾರಂಭಿಕ ದಿನಗಳಲ್ಲಿ ಆಗುತ್ತದೆ. ಫಲವತ್ತಾದ ಮೊಟ್ಟೆಯು ಗರ್ಭಾಶಯಕ್ಕೆ ಸೇರಿಕೊಂಡಾಗ ಸಾಮಾನ್ಯ ರಕ್ತಸ್ರಾವ ಅಥವಾ ಸ್ಪಾಟಿಂಗ್ ಗರ್ಭಾವಸ್ಥೆಯ ಪ್ರಾರಂಭಿಕ ಹಂತದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.ಇನ್ನು ಅಧಿಕ ರಕ್ತಸ್ರಾವವನ್ನು ಸ್ಯಾನಿಟರಿ ಪ್ಯಾಡ್ ಸಂಪೂರ್ಣ ಒದ್ದೆಯಾಗದ ಸ್ಥಿತಿಯಲ್ಲಿ ಅಥವಾ ನಿಮ್ಮ ಒಳವಸ್ತ್ರವನ್ನು ನೆನೆಸದೇ ಇದ್ದಲ್ಲಿ ಅದನ್ನು ಸಹಜವೆಂದೇ ಪರಿಗಣಿಸಬಹುದು.

ಗರ್ಭಾವಸ್ಥೆಯಲ್ಲಿ ಸ್ಪಾಟಿಂಗ್ ಆಗುವುದಕ್ಕೆ ಕಾರಣಗಳು

ಈ ಕೆಳಗಿನ ಯಾವುದೇ ಕಾರಣವೂ ಕೂಡ ಸ್ಪಾಟಿಂಗ್ ಗೆ ಕಾರಣವಾಗಬಹುದು ಮತ್ತು ಅದು ಸಾಮಾನ್ಯವಾಗಿ ಯಾವುದೇ ತೊಂದರೆಯನ್ನುಂಟು ಮಾಡುವುದಿಲ್ಲ.

ಮೊದಲ ತ್ರೈಮಾಸಿಕದಲ್ಲಿ

ಮೊದಲ ತ್ರೈಮಾಸಿಕದಲ್ಲಿ

ಇಂಪ್ಲಾಂಟೇಷನ್ ರಕ್ತಸ್ರಾವ: ಇದು ಸಾಮಾನ್ಯವಾಗಿ ನಿಮ್ಮ ತಿಂಗಳ ದಿನಾಂಕವಿರುವ ಸಮಯದಲ್ಲೇ ಕಾಣಿಸಿಕೊಳ್ಳುತ್ತದೆ ಮತ್ತು ನೀವಿದನ್ನು ಪಿರೇಡ್ಸ್ ಎಂದು ತಪ್ಪು ಭಾವಿಸುವ ಸಾಧ್ಯತೆ ಇರುತ್ತದೆ. ಇಂಪ್ಲಾಂಟೇಷನ್ ನ ಫಲಿತಾಂಶದಿಂದಾಗಿ ಕಾಣಿಸಿಕೊಳ್ಳುವ ಸ್ಪಾಟಿಂಗ್ ಕೆಲವು ಘಂಟೆಗಳ ಅಥವಾ ಕೆಲವು ದಿನಗಳವರಗೆ ಕಾಣಿಸಿಕೊಳ್ಳಬಹುದು ಮತ್ತು ಇದು ಸಾಮಾನ್ಯವಾಗಿ ಕಂದು ಅಥವಾ ಗುಲಾಬಿ ವರ್ಣದಲ್ಲಿರುತ್ತದೆ.

ಮೂರನೇ ತ್ರೈಮಾಸಿಕದಲ್ಲಿ

ಮೂರನೇ ತ್ರೈಮಾಸಿಕದಲ್ಲಿ

ಮ್ಯೂಕಸ್ ಪ್ಲಗ್: ಗರ್ಭಕಂಠದಿಂದ ಲೋಳೆಯ ಪ್ಲಗ್ ಅಥವಾ ಮ್ಯೂಕಸ್ ಪ್ಲಗ್ ನ್ನು ಕಳೆದುಕೊಳ್ಳುವ ಕಾರಣದಿಂದ ರಕ್ತವು ಕಾಣಿಸಿಕೊಂಡಿರಬಹುದು.ಇದು ನಿಮ್ಮ ಗರ್ಭಕಂಠವು ಹೆರಿಗೆಗೆ ಸಿದ್ಧವಾಗುತ್ತಿದೆ ಎಂಬ ಸೂಚನೆಯಾಗಿದೆ. ಸಂಕೋಚನಗಳು ಪ್ರಾರಂಭವಾಗುವ ಕೆಲವು ದಿನಗಳ ಮುಂಚೆ ಅಥವಾ ಹೆರಿಗೆ ನೋವು ಕಾಣಿಸಿಕೊಳ್ಳುವ ಸಂದರ್ಬದಲ್ಲಿ ಆಗುವ ಸಾಧ್ಯತೆ ಇರುತ್ತದೆ.

ಗರ್ಭಾವಸ್ಥೆಯ ಯಾವುದೇ ಸಮಯ:

ಆಂತರಿಕ ಶ್ರೋಣಿಯ ಪರೀಕ್ಷೆ ಅಥವಾ ಸಂಭೋಗ: ಗರ್ಭಾವಸ್ಥೆಯಲ್ಲಿ ಗರ್ಭಕಂಠವು ಕೋಮಲವಾಗುತ್ತದೆ ಮತ್ತು ಸಣ್ಣ ನೋವು ಕಾಣಿಸುತ್ತದೆ. ಸಂಭೋಗದ ಸಂದರ್ಬದಲ್ಲಿ ಅಥವಾ ಆಂತರಿಕ ಶ್ರೋಣಿಯ ಪರೀಕ್ಷೆಯ ಸಂದರ್ಬದಲ್ಲಿ ಗರ್ಭಕಂಠವು ಒತ್ತಡಕ್ಕೆ ಸಿಲುಕಿ ಸ್ಪಾಟಿಂಗ್ ಕಾಣಿಸಿಕೊಳ್ಳಬಹುದು.ಇದು ತೀವ್ರವಾಗಿಲ್ಲದೇ ಇದ್ದಲ್ಲಿ ಮತ್ತು ಭಯಾನಕ ನೋವಿಲ್ಲದೇ ಇದ್ದಲ್ಲಿ ಸಮಸ್ಯೆಯನ್ನು ಸೂಚಿಸುವುದಿಲ್ಲ.

ಸೋಂಕುಗಳು: ಯೋನಿಯ ಅಥವಾ ಗರ್ಭಕಂಠದ ಯಾವುದೇ ಸೋಂಕು ಕಿರಿಕಿರಿ ಅಥವಾ ಉರಿಯೂತ ಸ್ಪಾಟಿಂಗ್ ಕಾಣಿಸಿಕೊಳ್ಳುವುದಕ್ಕೆ ಕಾರಣವಾಗಬಹುದು. ರಕ್ತದ ಮಾದರಿ ಪರೀಕ್ಷೆಯು ಬ್ಯಾಕ್ಟೀರಿಯಾ ಸೋಂಕು, ವೈರಲ್ ಅಥವಾ ಲೈಂಗಿಕವಾಗಿ ಹರಡುತ್ತಿದೆಯೇ ಎಂದು ತಿಳಿದುಕೊಳ್ಳಲು ಸಹಾಯವಾಗುತ್ತದೆ.

ಸಬ್ಕೋರಿಯೋನಿಕ್ ರಕ್ತಸ್ರಾವ: ಈ ಸ್ಥಿತಿಯಲ್ಲಿ, ಗರ್ಭಾಶಯದ ಒಳಪದರ ಮತ್ತು ಕೋರಿಯನ್(ಹೊರಗಿನ ಭ್ರೂಣದ ಪೊರೆಯ) ನಡುವೆ ರಕ್ತಸಂಗ್ರಹವಾಗುತ್ತದೆ. ಇದು ಕೆಲವೊಮ್ಮೆ ಕಡಿಮೆಯಿಂದ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು.ಇದು ಸಾಮಾನ್ಯವಾಗಿ ತನ್ನಷ್ಟಕ್ಕೇ ತಾನೇ ಪರಿಹರಿಸಿಕೊಳ್ಳುತ್ತದೆ ಮತ್ತು ಗರ್ಭಾವಸ್ಥೆಯಲ್ಲಿ ಹೆಚ್ಚಿನ ಸಮಸ್ಯೆಯನ್ನು ಉಂಟು ಮಾಡುವುದಿಲ್ಲ.

ಗರ್ಭಾವಸ್ಥೆಯಲ್ಲಿ ಅಧಿಕ ರಕ್ತಸ್ರಾವವಾಗುವುದಕ್ಕೆ ಪ್ರಮುಖ ಕಾರಣಗಳು

ಅಧಿಕವಾದ ವಜಿನಲ್ ರಕ್ತಸ್ರಾವವು ಗರ್ಭಾವಸ್ಥೆಯ ಯಾವುದೇ ಸಮಯದಲ್ಲಾದರೂ ಕೂಡ ಅದು ಸಮಸ್ಯೆಯ ಸೂಚನೆಯೇ ಆಗಿರುತ್ತದೆ. ಬಹಳ ಕಡಿಮೆ ಕೇಸ್ ಗಳಲ್ಲಿ ಆರಂಭಿಕ ಚಿಹ್ನೆಯಾಗಿರುವ ಸಾಧ್ಯತೆ ಇದೆ.

ಮೊದಲ ತ್ರೈಮಾಸಿಕದಲ್ಲಿ:

ಮೊದಲ ತ್ರೈಮಾಸಿಕದಲ್ಲಿ:

ಅಪಸ್ಥಾನೀಯ ಗರ್ಭಧಾರಣೆ: ಇದು ಸಾಮಾನ್ಯವಾಗಿ ಫಲವತ್ತಾದ ಭ್ರೂಣವು ಗರ್ಭಾಶಯದ ಹೊರಗೆ ಫಾಲೋಪಿಯನ್ ಟ್ಯೂಬ್ ನಲ್ಲಿ ಅಳವಡಿಸಿದಾಗ ಸಂಭವಿಸುತ್ತದೆ. ಇದು ಅಸ್ಥಿರವಾದ ಗರ್ಭಧಾರಣೆಯಾಗಿರುವುದರಿಂದಾಗಿ ಛಿದ್ರವಾಗಬಹುದು,ರಕ್ತಸ್ರಾವಕ್ಕೆ ಕಾರಣವಾಗಬಹುದು,ಹೊಟ್ಟೆ ನೋವು, ಲಘು ತಲೆನೋವು,ಗುದನಾಳದ ಒತ್ತಡ ಮತ್ತು ಆಘಾತಕ್ಕೆ ಕಾರಣವಾಗುವ ಸಾಧ್ಯತೆ ಅಧಿಕವಾಗಿರುತ್ತದೆ.

ಮೋಲಾರ್ ಗರ್ಭಧಾರಣೆ:ಗರ್ಭಧಾರಣೆಯ ಟ್ರೋಫೋಬ್ಲಾಸ್ಟಿಕ್ ಕಾಯಿಲೆ ಎಂದು ಕರೆಯಲ್ಪಡುವ ಭ್ರೂಣದ ಬದಲಿಗೆ ಅಸಹಜ ಅಂಗಾಂಶವು ರೂಪಕೊಂಡಾಗ ಮೋಲಾರ್ ಗರ್ಭಧಾರಣೆ ಸಂಭವಿಸುತ್ತದೆ. ನೀವು ರಕ್ತಸ್ರಾವದ ಜೊತೆಗೆ ವಾಕರಿಕೆ,ವಾಂತಿ ಮತ್ತು ಸೆಳೆತದ ಅನುಭವಕ್ಕೆ ಇದರಿಂದಾಗಿ ಒಳಗಾಗುವ ಸಾಧ್ಯತೆ ಇದೆ.

ಗರ್ಭಪಾತ: ಗರ್ಭಾವಸ್ಥೆಯ 12 ವಾರಗಳ ಅವಧಿಯಲ್ಲಿ ಗರ್ಭಾವಸ್ಥೆಯು ಕಳೆದು ಹೋಗುವ ಸಂಭವವಿರುತ್ತದೆ ಮತ್ತು ಇದಕ್ಕೆ ಹಲವು ಕಾರಣಗಳಿರುತ್ತದೆ. ಅನುವಂಶಿಕ ಮತ್ತು ವರ್ಣತಂತು ದೋಷಗಳು ಮತ್ತು ಇತರೆ ಹಲವು ಕಾರಣಗಳಿಂದ ಈ ಸಮಸ್ಯೆಯಾಗುವ ಸಾಧ್ಯತೆ ಇರುತ್ತದೆ. ಹೊಟ್ಟೆಯ ಕೆಳಭಾಗ ಮತ್ತು ಹಿಂಭಾಗದಲ್ಲಿ ಸಹಿಸಲು ಅಸಾಧ್ಯವೆನಿಸುವ ಸೆಳೆತ ಮತ್ತು ನೋವುಂಟಾಗಿ ಅತಿಯಾದ ರಕ್ತಸ್ರಾವವು ಇದರಲ್ಲಿ ಸಂಭವಿಸುತ್ತದೆ.

ಎರಡನೇ ಮತ್ತು ಮೂರನೇ ತ್ರೈಮಾಸಿಕದ ಅವಧಿಯಲ್ಲಿ

ಎರಡನೇ ಮತ್ತು ಮೂರನೇ ತ್ರೈಮಾಸಿಕದ ಅವಧಿಯಲ್ಲಿ

ಜರಾಯು ಪ್ರೇವಿಯಾ:ಇದೊಂದು ಜರಾಯು ಸ್ಥಿತಿ.ಇದರಲ್ಲಿ ಜರಾಯು ಗರ್ಭಕಂಠವನ್ನು ಸಂಪೂರ್ಣವಾಗಿ ಅಥವಾ ಬಾಗಶಃ ಆವರಿಸಿರುತ್ತದೆ. ಸಾಮಾನ್ಯವಾಗಿ ಇದು ರಕ್ತಸ್ರಾವವಾಗಲು ಪ್ರಾರಂಭವಾದಾಗಲೇ ಗುರುತಿಸಲ್ಪಡುತ್ತದೆ. ಗರ್ಭಧಾರಣೆಯ ನಂತರ ಗರ್ಭಕಂಠದ ತೆರೆಯುವಿಕೆಯು ಕಡಿಮೆಯಾಗುತ್ತಾ ಹೋಗುತ್ತದೆ ಮತ್ತು ಜರಾಯು ವಿಸ್ತರಿಸುತ್ತದೆ ಜೊತೆಗೆ ಛಿದ್ರವಾಗುತ್ತದೆ. ಇದರ ಪರಿಣಾಮವಾಗಿಯೂ ಅಧಿಕ ರಕ್ತಸ್ರಾವವಾಗುವ ಸಾಧ್ಯತೆ ಇರುತ್ತದೆ.

ಜರಾಯು ಅಡ್ಡಪಡಿಸುವಿಕೆ: ಇದು ಗರ್ಭಾಶಯದ ಗೋಡೆಯಿಂದ ಜರಾಯುವಿನ ಆರಂಭಿಕ ಬೇರ್ಪಡಿಸುವಿಕೆ.ಇದು ಜರಾಯು ಮತ್ತು ಗರ್ಭಾಶಯದ ನಡುವೆ ರಕ್ತ ಸಂಗ್ರಹಿಸಲು ಕಾರಣವಾಗುತ್ತದೆ. ಇದರೊಂದಿಗೆ ತೀವ್ರವಾದ ಸೆಳೆತ,ಹೊಟ್ಟೆ ನೋವು ಮತ್ತು ಬೆನ್ನು ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

ಪ್ರಸವಪೂರ್ವ ಹೆರಿಗೆ ನೋವು: ಒಂದು ವೇಳೆ ನಿಯಮಿತವಾದ ರಕ್ತಸ್ರಾವ ಅಥವಾ ಸ್ಪಾಟಿಂಗ್ ಮತ್ತು ಹೆರಿಗೆ ನೋವಿನ ಲಕ್ಷಣಗಳು 37 ನೇ ವಾರಕ್ಕೂ ಮುನ್ನವೇ ಕಾಣಿಸಿಕೊಂಡರೆ ಅದು ಪ್ರಸವ ಪೂರ್ವ ಹೆರಿಗೆ ಲಕ್ಷಣವೂ ಆಗಿರುವ ಸಾಧ್ಯತೆ ಇರುತ್ತದೆ. ಒಂದು ವೇಳೆ ಇಂತಹ ಪ್ರಸವ ಪೂರ್ಣ ಹೆರಿಗೆ ನೋವಿನ ಲಕ್ಷಣಗಳು ಕಾಣಿಸಿಕೊಂಡಲ್ಲಿ ಕೂಡಲೇ ನಿಮ್ಮ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ.

ಭ್ರೂಣದ ವೆಸಲ್ ಛಿದ್ರಗೊಳ್ಳುವಿಕೆ(ವಾಸಾ ಪ್ರೀವಿಯಾ): ಈ ಸ್ಥಿತಿಯಲ್ಲಿ ಭ್ರೂಣದ ರಕ್ತನಾಳದ ಹೊಕ್ಕಳು ಬಳ್ಳಿಯು ಜರಾಯುವಿನ ಬದಲು ಗರ್ಭಕಂಠದ ಪೊರೆಗಳಿಗೆ ಅಂಟಿಕೊಳ್ಳುತ್ತದೆ. ಜನ್ಮ ಕಾಲುವೆಯ ತೆರೆಯುವಿಕೆಯ ಮೇಲೆ ಇದು ಹಾದು ಹೋಗಬೇಕು.ಆದರೆ ಇದು ಛಿದ್ರಗೊಂಡಾಗ ಸಹಜವಾಗಿಯೇ ರಕ್ತಸ್ರಾವವಾಗುತ್ತದೆ.

ಗರ್ಭಾಶಯ ಛಿದ್ರವಾಗುವಿಕೆ: ಕೆಲವೊಮ್ಮೆ ಗರ್ಭಾಶಯವನ್ನು ಸ್ವಯಂಪ್ರೇರಿತವಾಗಿ ಹರಿದು ಭ್ರೂಣವನ್ನು ಹೊಟ್ಟೆಗೆ ಹೊರಹಾಕುವ ಸಾಧ್ಯತೆ ಇರುತ್ತದೆ.ಇದು ಈ ಹಿಂದಿನ ಹೆರಿಗೆಯಲ್ಲಿ ಸಿಸೇರಿಯನ್ ಆಗಿದ್ದಲ್ಲಿ ಆ ಗಾಯದ ಪ್ರದೇಶದಲ್ಲಿ ನಡೆಯುವ ಸಾಧ್ಯತೆ ಇರುತ್ತದೆ ಮತ್ತು ತುರ್ತು ಪರಿಸ್ಥಿತಿಗೆ ಒಳಗಾಗಿ ನಡೆಯುವ ಸಂಭವ ಹೆಚ್ಚು. ಈ ಸಂದರ್ಭದಲ್ಲಿ ಹೊಟ್ಟೆಯ ಕೆಳಭಾಗದಲ್ಲಿ ನೋವು ಮತ್ತು ವಜಿನಲ್ ರಕ್ತಸ್ರಾವ ಕಾಣಿಸಿಕೊಳ್ಳುತ್ತದೆ.

ಗರ್ಭಾವಸ್ಥೆಯಲ್ಲಿ ಒಂದು ವೇಳೆ ಅಸಹಜ ರಕ್ತಸ್ರಾವ ಕಾಣಿಸಿದರೆ ಏನು ಮಾಡಬೇಕು?

ಗರ್ಭಾವಸ್ಥೆಯಲ್ಲಿ ಒಂದು ವೇಳೆ ಅಸಹಜ ರಕ್ತಸ್ರಾವ ಕಾಣಿಸಿದರೆ ಏನು ಮಾಡಬೇಕು?

ಗರ್ಭಾವಸ್ಥೆಯ ಯಾವುದೇ ತ್ರೈಮಾಸಿಕದಲ್ಲೇ ಆಗಲಿ ರಕ್ತಸ್ರಾವ ಕಾಣಿಸಿಕೊಂಡರೆ ಇದು ಸಮಸ್ಯೆಯ ಚಿಹ್ನೆಯಾಗಿರುತ್ತದೆ ಮತ್ತು ಕೂಡಲೇ ವೈದ್ಯರನ್ನು ಸಂಪರ್ಕಿಸಿ ನಿಮಗಾಗಿರುವ ರಕ್ತಸ್ರಾವದ ಗುಣಲಕ್ಷಣಗಳ ಬಗ್ಗೆ ಚರ್ಚೆ ನಡೆಸುವುದು ಬಹಳ ಒಳ್ಳೆಯದು. ರಕ್ತಸ್ರಾವವನ್ನು ಅಳೆಯುವುದಕ್ಕಾಗಿ ಕೂಡಲೇ ಸ್ಯಾನಿಟರಿ ಪ್ಯಾಡ್ ನ್ನು ಧರಿಸಿ ಮತ್ತು ರಕ್ತದ ಮಾದರಿಯನ್ನು ಗಮನಿಸಿ. ರಕ್ತದ ವರ್ಣ ಕಂದು, ಕೆಂಪು ಅಥವಾ ಗುಲಾಬಿ ವರ್ಣದಲ್ಲಿಯೇ ಎಂಬುದನ್ನು ಪರೀಕ್ಷಿಸಿ ಮತ್ತು ರಕ್ತವು ಕ್ಲಾಟ್ ಗಳಂತೆ ಅಂದರೆ ಗಡ್ಡೆಗಳಂತೆ ಸ್ರವಿಸುತ್ತಿದೆಯೇ ಅಥವಾ ದ್ರವರೂಪದಲ್ಲೇ ಮೃದುವಾಗಿ ಸ್ರವಿಸುತ್ತಿದೆಯೇ ಎಂಬುದನ್ನು ಗಮನಿಸಿ.

ಯಾವುದೇ ರೀತಿಯ ಟಿಶ್ಯೂ ರೂಪವು ವಜಿನಾದಿಂದ ಗಮನಿಸಿದಲ್ಲಿ ಕೂಡಲೇ ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಳ್ಳಿ. ಸಂಭೋಗವನ್ನು ಮಾಡಬೇಡಿ ಮತ್ತು ಟ್ಯಾಂಪೂನ್ ನ್ನು ರಕ್ತಸ್ರಾವದ ಸಂದರ್ಬದಲ್ಲಿ ಬಳಸಬೇಡಿ.

ಈ ಕೆಳಗಿನ ಚಿಹ್ನೆಗಳು ಮತ್ತು ಲಕ್ಷಣಗಳು ಗರ್ಭಪಾತದ ಅಥವಾ ಇತರೆ ಯಾವುದೇ ಸ್ಥಿತಿಯ ಚಿಹ್ನೆಯೂ ಆಗಿರಬಹುದು

ಈ ಕೆಳಗಿನ ಚಿಹ್ನೆಗಳು ಮತ್ತು ಲಕ್ಷಣಗಳು ಗರ್ಭಪಾತದ ಅಥವಾ ಇತರೆ ಯಾವುದೇ ಸ್ಥಿತಿಯ ಚಿಹ್ನೆಯೂ ಆಗಿರಬಹುದು

  • ನೋವಿರುವ ಅಥವಾ ನೋವೇ ಇಲ್ಲದ ಕಡಿಮೆ ಅಥವಾ ಅಧಿಕ ರಕ್ತಸ್ರಾವ
  • ಹೊಟ್ಟೆಯ ಕೆಳಭಾಗದಲ್ಲಿ ಅತಿಯಾದ ಸೆಳೆತ
  • ತಲೆ ತಿರುಗುವಿಕೆ
  • 100.4°F ಅಧಿಕ ಜ್ವರ ಇರುವ ಸ್ಥಿತಿ.
  • ಹೊಟ್ಟೆ, ಬೆನ್ನು ಅಥವಾ ಸೊಂಟದಲ್ಲಿ ನೋವು.
  • ಅಂಗಾಂಶವನ್ನು ಹೊಂದಿರುವಂತಹ ವಜಿನಲ್ ಬಿಡುಗಡೆ
  • ಗರ್ಭಾವಸ್ಥೆಯಲ್ಲಿ ಸ್ಪಾಟಿಂಗ್ ಮತ್ತು ರಕ್ತಸ್ರಾವವನ್ನು ಗುರುತಿಸುವುದು
  • ರೋಗಿಯ ಇತಿಹಾಸ ಮತ್ತು ದೈಹಿಕ ಕ್ಷಮತೆಯ ಮೂಲಕ ವೈದ್ಯಕೀಯವಾಗಿ ರೋಗಪತ್ತೆಯನ್ನು ಮಾಡಲಾಗುತ್ತದೆ.
  • ರಕ್ತಸ್ರಾವದ ತೀವ್ರತೆಯನ್ನು ಗಮನಿಸಿ ಮತ್ತು ಚಿಹ್ನೆಯ ಗಂಭೀರತೆಯನ್ನು ಗಮನಿಸಿ ಈ ಕೆಳಗಿನ ಪರೀಕ್ಷೆಗಳನ್ನು ಮಾಡಲಾಗುತ್ತದೆ.
  • ಅಲ್ಟ್ರಾಸೌಂಡ್ ಪರೀಕ್ಷೆ

    ಅಲ್ಟ್ರಾಸೌಂಡ್ ಪರೀಕ್ಷೆ

    ಈ ಪರೀಕ್ಷೆಯನ್ನು ಫೀಟಸ್ ಗರ್ಭಕೋಶದಲ್ಲೇ ಇದೆಯೇ ಮತ್ತು ಫೀಟಸ್ ನ ಹೃದಯಬಡಿತ ಸಹಜವಾಗಿದೆಯೇ ಎಂಬುದನ್ನು ಪರೀಕ್ಷಿಸುವುದಕ್ಕಾಗಿ ನಡೆಸಲಾಗುತ್ತದೆ. ಜರಾಯು ಇರುವ ಸ್ಥಳ ಮತ್ತು ಭ್ರೂಣದ ರಕ್ತಸ್ರಾವ ಮತ್ತು ಜನನಾಂಗದ ಸಮಸ್ಯೆಗಳ ಪುರಾವೆಗಳನ್ನು ನಿರ್ಧರಿಸುವುದಕ್ಕೆ ಇದು ಸಹಾಯ ಮಾಡುತ್ತದೆ.

    hCG ಹಾರ್ಮೋನ್ ಮಟ್ಟದ ಪರೀಕ್ಷೆ

    hCG ಹಾರ್ಮೋನ್ ಮಟ್ಟದ ಪರೀಕ್ಷೆ

    ಗರ್ಭಾವಸ್ಥೆಯ ಸ್ಥಿತಿಯನ್ನು ತಿಳಿಯಲು ಇದು ಸಹಾಯ ಮಾಡುತ್ತದೆ. ಆದರೆ ಈ ಪರೀಕ್ಷೆ ಆರಂಭಿಕ ಆರು ವಾರಗಳಲ್ಲಿ ಅನುಕೂಲಕರವಾಗಿರುತ್ತದೆ. ಒಮ್ಮೆ ಆಲ್ಟ್ರಾಸೌಂಡ್ ಗರ್ಭಕೋಶದಲ್ಲಿ ಫೀಟಸ್ ನ್ನು ಖಾತ್ರಿಗೊಳಿಸಿದ ನಂತರ ಈ ಪರೀಕ್ಷೆಯ ಅಗತ್ಯವಿರುವುದಿಲ್ಲ.

    ಸ್ಪೆಕ್ಯುಲಮ್ ಪರೀಕ್ಷೆ: ಶ್ರೋಣಿಯ ಸೋಂಕು,ಗರ್ಭಕಂಠದ ಸೀಳುವಿಕೆ,ಗರ್ಭಕಂಠದ ಹಿಗ್ಗುವಿಕೆ ಅಥವಾ ಲೋಳೆಯ ಪ್ಲಗ್ ನಿಂದ ರಕ್ತಸ್ರಾವವಾಗಿದೆಯೇ ಎಂದು ಪರೀಕ್ಷಿಸಲು ಗರ್ಭಕಂಥವನ್ನು ಈ ಪರೀಕ್ಷೆಯಲ್ಲಿ ನೋಡಲಾಗುತ್ತದೆ.

    ಗರ್ಭಾವಸ್ಥೆಯಲ್ಲಿ ಸ್ಪಾಟಿಂಗ್ ಮತ್ತು ಅಧಿಕ ರಕ್ತಸ್ರಾವದ ಕಾರಣಕ್ಕೆ ಅನುಗುಣವಾಗಿ ನೀಡಲಾಗುವ ಚಿಕಿತ್ಸೆ

    ಗರ್ಭಾವಸ್ಥೆಯ ರಕ್ತಸ್ರಾವವನ್ನು ತಡೆಯುವುದಕ್ಕೆ ಸಾಧ್ಯವೇ?

    ಗರ್ಭಾವಸ್ಥೆಯ ರಕ್ತಸ್ರಾವವನ್ನು ತಡೆಯುವುದಕ್ಕೆ ಸಾಧ್ಯವೇ?

    ಸ್ಪಾಟಿಂಗ್ ಅಥವಾ ರಕ್ತಸ್ರಾವವನ್ನು ತಡೆಯುವುದಕ್ಕೆ ನಿರ್ಧಿಷ್ಟವಾದ ಯಾವುದೇ ವಿಧಾನವಿಲ್ಲ. ಒಂದು ವೇಳೆ ನಿಮ್ಮ ಹಿಂದಿನ ಗರ್ಭಾವಸ್ಥೆಯಲ್ಲಿ ಇಂತಹ ಸಮಸ್ಯೆಯನ್ನು ನೀವು ಅನುಭವಿಸಿದ್ದರೆ ನಿಮ್ಮ ವೈದ್ಯರು ಅದರ ಬಗ್ಗೆ ಅರಿತಿರುತ್ತಾರೆ.

    ಗರ್ಭಾವಸ್ಥೆಯಲ್ಲಿ ರಕ್ತಸ್ರಾವವಾಗುವ ಅಪಾಯವನ್ನು ಕಡಿಮೆ ಮಾಡಲು ಈ ಕೆಳಗಿನ ಸಲಹೆಗಳು ಸಹಾಯ ಮಾಡುತ್ತವೆ: ವಿರಾಮ ತೆಗೆದುಕೊಳ್ಳಿ ಮತ್ತು ಒತ್ತಡ ಮುಕ್ತರಾಗಿರಿ.

    • ನೀವು ಸ್ಪಾಟಿಂಗ್ ಗಮನಿಸಿದರೆ ಲೈಂಗಿಕ ಕ್ರಿಯೆಯನ್ನು ಮಾಡದಿರಿ
    • ಡ್ರಗ್ಸ್, ನಿಕೋಟಿನ್ ಮತ್ತು ಆಲ್ಕೋಹಾಲ್ ಸೇವನೆ ನಿಲ್ಲಿಸಿ
    • ಒಂದು ವೇಳೆ ನಿಮಗೆ ಅಧಿಕ ರಕ್ತದೊತ್ತಡ ಅಥವಾ ಡಯಾಬಿಟೀಸ್ ಇದ್ದರೆ ನಿಯಮಿತ ಪರೀಕ್ಷೆ ಮತ್ತು ವೈದ್ಯಕೀಯ ತಪಾಸಣೆ ಮಾಡಿಸಿ.
    • ನಿಮ್ಮ ಗರ್ಭಾವಸ್ಥೆಯಲ್ಲಿ ಯಾವುದೇ ರೀತಿಯ ಅಸಹಜ ಬದಲಾವಣೆ ಗಮನಿಸಿದಲ್ಲಿ ಅದನ್ನು ಕಡೆಗಣಿಸದಿರಿ.
English summary

Pregnancy Spotting And Bleeding: Causes And Prevention

Here we are dicussing about Pregnancy Spotting And Bleeding: Causes And Prevention. This post tells you about the possible causes of pregnancy spotting or bleeding, and when to see a doctor. Read more.
Story first published: Monday, March 30, 2020, 16:35 [IST]
X
Desktop Bottom Promotion