Just In
- 37 min ago
ಇಲ್ಲಿದೆ ಎಲ್ಲರ ಕಣ್ಣು ಕುಕ್ಕುವ ಟ್ರೆಂಡಿ ಕಲರ್ ಕಾಂಬಿನೇಷನ್ ಔಟ್ ಫಿಟ್ ಐಡಿಯಾಸ್..
- 2 hrs ago
ಮಹಿಳೆಯರ ಅಕಾಲಿಕ ಮರಣವನ್ನು ಈ ಪ್ರೋಟೀನ್ ಸೇವನೆಯಿಂದ ಕಡಿಮೆ ಮಾಡಬಹುದು..
- 4 hrs ago
ನಾವು ಅಕಸ್ಮಾತಾಗಿ ನುಂಗಿದ ಚೂಯಿಂಗ್ ಗಮ್ ದೇಹದೊಳಗೆ ಏನೇನ್ ಮಾಡುತ್ತೆ ಗೊತ್ತಾ!?
- 7 hrs ago
ಗರ್ಭಾವಸ್ಥೆಯಲ್ಲಿ ಮಧುಮೇಹ: ಯಾವ ಆಹಾರ ತಿನ್ನಬಹುದು, ಏನು ತಿನ್ನಬಾರದು?
Don't Miss
- Sports
ಭಾರತ vs ಇಂಗ್ಲೆಂಡ್: 5 ವಿಕೆಟ್ ಗೊಂಚಲು ಪಡೆದು ಕೆಳ ಕ್ರಮಾಂಕಕ್ಕೆ ಕಂಟಕವಾದ ಜೋ ರೂಟ್
- News
ಬೆಂಗಳೂರು: ನಾಣ್ಯಗಳಿಂದಲೇ ನಿರ್ಮಾಣವಾದ ಶ್ರೀರಾಮಮಂದಿರ ಕಲಾಕೃತಿ ಉದ್ಘಾಟನೆ
- Education
IBPS PO/MT X Interview Admit Card 2021: ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Automobiles
ವಿಂಡ್ಸ್ಕ್ರೀನ್ ನಿಯಮಗಳನ್ನು ಒಂದು ವರ್ಷ ಮುಂದೂಡಿದ ಕೇಂದ್ರ ಸರ್ಕಾರ
- Finance
IQOO 7 ಮತ್ತು ನಿಯೋ 5 ಸ್ಮಾರ್ಟ್ಫೋನ್ ಸದ್ಯದಲ್ಲೇ ಬಿಡುಗಡೆ: ಕೇವಲ 15 ನಿಮಿಷಗಳಲ್ಲಿ ಸಂಪೂರ್ಣ ಚಾರ್ಜ್?
- Movies
ದರ್ಶನ್ ಫ್ಯಾನ್ಸ್-ಜಗ್ಗೇಶ್ ವಿವಾದ ಸುಖಾಂತ್ಯ: ಬಿರುಗಾಳಿ ಎಬ್ಬಿಸಿದ 'ಆಡಿಯೋ ಕ್ಲಿಪ್' ಸುತ್ತಾ ಏನಾಯ್ತು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ತೆಳು ಬಣ್ಣದ ರಕ್ತದ ಕಲೆ: ಗರ್ಭಿಣಿ ಎನ್ನುವುದರ ಮುನ್ಸೂಚನೆ
ನಾವು ಗರ್ಭಿಣಿ ಎಂದು ಗೊತ್ತಾಗುವುದು ತಿಂಗಳ ಮುಟ್ಟು ನಿಂತಾಗ. ಆದರೆ ಕೆಲವರಿಗೆ ಮುಟ್ಟಿನ ಸಮಯ ಸಮೀಪಿಸಿದಾಗ ಮುಟ್ಟಿನ ಎಲ್ಲಾ ಲಕ್ಷಣಗಳು ಕಂಡು ಬರುತ್ತದೆ, ಕಿಬ್ಬೊಟ್ಟೆ ನೋವು ಇರುತ್ತದೆ ಜೊತೆಗೆ ಸ್ವಲ್ಪ ರಕ್ತ ಕಲೆ ಕಾಣಬಹುದು, ಆಗ ಇದು ಮುಟ್ಟಿನ ಪ್ರಾರಂಭ ಇರಬಹುದು ಎಂದು ಕೆಲವರು ಭಾವಿಸುತ್ತಾರೆ, ಆದರೆ ಹೆಚ್ಚಿನ ರಕ್ತಸ್ರಾವ ಏನೂ ಇರುವುದಿಲ್ಲ. ಹೀಗೆ ಉಂಟಾದಾಗ ಇದು ಮುಟ್ಟಿನ ಸೂಚನೆಯೇ ಅಥಾ ಗರ್ಭಿಣಿ ಎಂದು ಸೂಚಿಸುವ ಸೂಚನೆಯೇ ಎಂಬ ಸಂಶಯ ಮೂಡುವುದು.
ಹೌದು ನೀವು ಸಂಶಯ ಪಡುವುದು ಸರಿಯಾಗಿಯೇ ಇದೆ. ಇದು ನೀವು ಗರ್ಭಿಣಿ ಎಂದು ಸೂಚಿಸುವ ಲಕ್ಷಣಗಳಾಗಿವೆ. ಇದನ್ನು implantation bleeding ಎಂದು ಕರೆಯಲಾಗುವುದು.

implantation bleeding ಎಂದರೇನು?
ಫಲವತ್ತತೆ ಉಂಟಾದ 7-14 ದಿನಗಳಲ್ಲಿ ತೆಳು ರಕ್ತ ಕಲೆ ಕಂಡು ಬರುವುದು. ಫಾಲೋಫಿಯನ್ ಟ್ಯೂಬ್‌ನಲ್ಲಿ ನೇತಾಡುತ್ತಿದ್ದ ಅಂಡಾಣುವಿಗೆ ವೀರ್ಯಾಣು ಸೇರಿದಾಗ ಫಲವತ್ತತೆ ಉಂಟಾಗಿ, ಭ್ರೂಣವು ವಿಭಜನೆಯಾಗಿ ಬೆಳೆಯಲಾರಂಭಿಸುತ್ತದೆ.
ಈ ಸಮಯದಲ್ಲಿ ಗರ್ಭಾಶಯದ ಒಳಗೆ ಇರುವ ಎಂಡೊಮೆಟ್ರಿಯಮ್‌ನಲ್ಲಿ ಬದಲಾವಣೆ ಉಂಟಾಗುತ್ತದೆ. ಭ್ರೂಣವನ್ನು 9 ತಿಂಗಳು ಸುರಕ್ಷವಾಗಿ ಇಡಲು ಅದಕ್ಕೆ ಬೇಕಾದ ಪೋಷಕಾಂಶವನ್ನು ನೀಡುವಂತೆ ಬದಲಾಗಿರುತ್ತದೆ.
ಫಲವತ್ತತೆಯಾದ 5-6 ದಿದಲ್ಲಿ ಭ್ರೂಣವು ಫಾಲೋಫಿಯನ್ ಟ್ಯೂಬ್‌ನಿಂದ ಗರ್ಭಾಶಯಕ್ಕೆ ಜಾರುತ್ತದೆ. ಎಂಡೊಮೆಟ್ರಿಯಮ್ ಭ್ರೂಣಕ್ಕೆ ಅವಶ್ಯಕವಾದ ಪೋಷಕಾಂಶವನ್ನು ಒದಗಿಸುತ್ತದೆ. ಫೋಷಕಾಂಶಗಳು ಹಾಗೂ ಆಮ್ಲಜನಕ ಎಲ್ಲವನ್ನೂ ಭ್ರೂಣಕ್ಕೆ ಎಂಡೊಮೆಟ್ರಿಯಮ್ ಒದಗಿಸುತ್ತದೆ.
ಭ್ರೂಣವು ಫಾಲೋಪಿಯನ್ ಟ್ಯೂನ್‌ನಿಂದ ಗರ್ಭಾಶಯಕ್ಕೆ ಜಾರುವಾಗ ತೆಳುವಾದ ರಕ್ತನಾಗಳು ಒಡೆದು implantation bleeding ಉಂಟಾಗುವುದು.

ಈ ರೀತಿಯ ರಕ್ತಸ್ರಾವ ಯಾವಾಗ ಕಂಡು ಬರುತ್ತದೆ?
ಫಲವತ್ತತೆಯಾದ 6-14 ದಿನಗಳ ಒಳಗಾಗಿ ಕಂಡು ಬರುತ್ತದೆ, ಅಂದ್ರೆ ನಿಮ್ಮ ನಿಮ್ಮ ತಿಂಗಳ ಮುಟ್ಟಿನ ಸಮಯಕ್ಕಿಂತ ಮುಂಚಿತವಾಗಿ ಕಂಡು ಬರುತ್ತದೆ. ಪಿಂಕ್ ಅಥವಾ ತೆಳು ಕಂದು ಬಣ್ಣದಲ್ಲಿ ರಕ್ತ ಕಲೆಗಳು ಕಂಡು ಬರುವುದು.

ಫಲವತ್ತತೆಯ ಸೂಚನೆ ನೀಡುವ ರಕ್ತಸ್ರಾವದ ಲಕ್ಷಣಗಳು
* ಈ ಸಮಯದಲ್ಲಿ ತೆಳುವಾದ ರಕ್ತ ಸ್ರಾವ ಕಂಡು ಬರುವುದು. ಮುಟ್ಟಿನ ಸಮಯದಲ್ಲಿ ಕಂಡು ಬರು ಕಲೆ ಗಾಢವಾಗಿರುತ್ತದೆ.
* ಚಿಕ್ಕದಾಗಿ ಕಿಬ್ಬೊಟ್ಟೆ ಸೆಳೆತ
* ಸ್ತನಗಳು ಬಿಗಿಯಾಗುವುದು
* ತಲೆನೋವು

ಈ ರಕ್ತಕಲೆ ಗರ್ಭಿಣಿ ಎಂದು ಸೂಚಿಸುವ ಲಕ್ಷಣ, ಮುಟ್ಟಿನದ್ದಲ್ಲ ಎಂದು ತಿಳಿಯುವುದು ಹೇಗೆ?
implantation bleeding ಮುಟ್ಟಿನ ಅವಧಿಗೆ ಮೊದಲೇ ಕ ಡು ಬರುತ್ತದೆ. ಈ ರೀತಿ ರಕ್ತಸ್ರಾವ ಕಂಡು ಬಂದಾಗ ಇದು ಮುಟ್ಟಿನ ಲಕ್ಷಣವೇ ಅಥವೇ ಗರ್ಭಿಣಿ ಎಂದು ಸೂಚಿಸುವ ಲಕ್ಷಣವೇ ಎಂದು ಹೇಳುವುದು ಕಷ್ಟ. ಗರ್ಭಿಣಿ ಹೌದೇ, ಅಲ್ಲವೇ ಎಂದು ತಿಳಿಯಲು ಸ್ವಲ್ಪ ದಿನಗಳವರೆಗೆ ಕಾಯಬೇಕಾಗುತ್ತದೆ. ಇಲ್ಲದಿದ್ದರೆ ನೀವು ಲೈಂಗಿಕ ಕ್ರಿಯೆ ನಡೆಸಿದ ದಿನಾಂಕದ ಲೆಕ್ಕಾಚಾರ ಹಾಕಿದರೂ ತಿಳಿಯುತ್ತದೆ. ಏಕೆಂದರೆ ನಿಮ್ಮ ಓವ್ಯೂಲೇಷನ್ ಆದ 6-14 ದಿನಗಳ ಒಳಗೆ ಈ ರೀತಿಯ ರಕ್ತಸ್ರಾವ ಕಂಡು ಬರುವುದು.
ಕೆಲವು ಮಹಿಳೆಯರಿಗೆ implantation bleeding ಹಾಗೂ ಮುಟ್ಟಿನ ರಕ್ತಸ್ರಾವದ ನಡುವೆ ವ್ಯತ್ಯಾಸ ಗೊತ್ತಾಗುವುದಿಲ್ಲ. ಕೆಲವರಿಗೆ ಸ್ವಲ್ಪ ರಕ್ತ ಕಲೆ ಕಂಡು ಬಂದು ನಂತರ ಕೆಲ ದಿನಗಳಲ್ಲಿ ಋತುಸ್ರಾವವಾಗುವುದು, ಇನ್ನು ಕೆಲವರು implantation bleeding ಅನ್ನು ಸಾಮಾನ್ಯ ಋತುಸ್ರಾವ ಎಂದೇ ಭಾವಿಸುತ್ತಾರೆ, ಆದರೆ ಗರ್ಭ ನಿಂತಿರುತ್ತದೆ.

ಎಲ್ಲಾ ಮಹಿಳೆಯರಲ್ಲೂ implantation bleeding ಕಂಡು ಬರುತ್ತಾ?
ಇಲ್ಲ, ಶೇ. 25ರಷ್ಟು ಮಹಿಳೆಯರಲ್ಲಿ ಮಾತ್ರ ಭ್ರೂಣ ಉಂಟಾದಾಗ ಈ ರೀತಿಯ ರಕ್ತ ಕಲೆ ಕಂಡು ಬರುವುದು.
ಈ ರೀತಿಯ ರಕ್ತಕಲೆ ಕಂಡು ಬಂದಾಗ ಭಯ ಪಡುವ ಅಗ್ಯತವಿಲ್ಲ. ನೀವು ಗರ್ಭಿಣಿಯಾಗಿರಬಹುದೇ ಎಂದು ಸಂಶಯ ಮೂಡಿದರೆ ಕೆಲವು ದಿನಗಳ ಬಳಿಕ ಪ್ರೆಗ್ನೆನ್ಸಿ ಪರೀಕ್ಷೆ ಮಾಡಿಸಿ.

ಯಾವಾಗ ವೈದ್ಯರನ್ನು ಭೇಟಿ ಮಾಡಬೇಕು?
ಗರ್ಭಾವಸ್ಥೆಯ ಪ್ರಾರಂಭಿಕ ಹಂತದಲ್ಲಿ ಮಾತ್ರವಲ್ಲ, ಕೆಲವರಿಗೆ ಗರ್ಭಾವಸ್ಥೆಯ ಸಮಯದಲ್ಲೂ ಒಮ್ಮೊಮ್ಮೆ ರಕ್ತ ಕಲೆಗಳು ಕಂಡು ಬರುವುದು.
ಗರ್ಭಿಣಿ ಎಂದು ತಿಳಿದ ಬಳಿಕ ರಕ್ತಸ್ರಾವ ಕಂಡು ಬಂದರೆ ವೈದ್ಯರನ್ನು ಕಾಣುವುದು ಸೂಕ್ತ, ಏಕೆಂದರೆ ಕೆಲವೊಮ್ಮೆ ಅದು ಗರ್ಭಪಾತದ ಲಕ್ಷಣವಾಗಿರಬಹುದು ಅಥವಾ ಎಕ್ಟೋಪಿಕ್ ಪ್ರೆಗ್ನೆನ್ಸಿ ಅಥವಾ ಮೋಲಾರ್ ಪ್ರೆಗ್ನೆನ್ಸಿಯ ಸೂಚನೆಯಾಗಿರಬಹುದು.