For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರು ಮೊದಲ ತ್ರೈಮಾಸಿಕದಲ್ಲಿ ತಿನ್ನಬೇಕಾದ 7 ಆಹಾರಗಳಿವು

|

ಗರ್ಭಾವಸ್ಥೆ ಮಹಿಳೆಯ ಬದುಕಿನ ಒಂದು ಸುಂದರವಾದ ಹಂತ. ತನ್ನ ಹೊಟ್ಟೆಯಲ್ಲಿ ಜೀವವೊಂದನ್ನು ಪೋಷಿಸುವ ಆ ಸಮಯ ಆಕೆಯ ಮನಸ್ಸಿಗೆ ತುಂಬಾ ಖುಷಿ ನೀಡುತ್ತದೆ. ಈ ಸಮಯದಲ್ಲಿ ಅವಳ ದೇಹದಲ್ಲಿ ಮಾತ್ರವಲ್ಲ, ಅವಳ ಮಾನಸಿಕ ಸ್ಥಿತಿಯಲ್ಲಿ ಅನೇಕ ಬದಲಾವಣೆಗಳಾಗಿರುತ್ತವೆ.

ಈ ಸಮಯದಲ್ಲಿ ಮಗು ಹಾಗೂ ತಾಯಿಯ ಆರೋಗ್ಯದ ದೃಷ್ಟಿಯಿಂದ ಗರ್ಭಿಣಿ ಆಹಾರಕ್ರಮದ ಕಡೆಗೆ ತುಂಬಾ ಗಮನ ಕೊಡುತ್ತದೆ. ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ ತಿನ್ನುವುದಕ್ಕಿಂತ ಅಧಿಕ ಪೋಷಕಾಂಶಗಳಿರುವ ಆಹಾರ ಸೇವಿಸಬೇಕಾಗುತ್ತದೆ.

ಗರ್ಭಿಣಿಯರು ಆರೋಗ್ಯಕರ ಆಹಾರ ಸೇವನೆ ಮಾಡಬೇಕು. ಇಲ್ಲದಿದ್ದರೆ ಪೋಷಕಾಂಶ ಕೊರತೆ ಉಂಟಾಗಿ ರಕ್ತಸ್ರಾವ, ಗರ್ಭಾವಸ್ಥೆಯಲ್ಲಿ ಮಧುಮೇಹ, ಭೇದಿ, ಕೆಳಹೊಟ್ಟೆ ನೋವು ಮುಂತಾದ ಸಮಸ್ಯೆಗಳು ಉಂಟಾಗುವುದು. ಇನ್ನು ಕೆಲವೊಂದು ಆಹಾರಗಳು ಗರ್ಭಪಾತಕ್ಕೆ ಕೂಡ ಕಾರಣವಾಗಬಹುದು. ಆದ್ದರಿಂದ ಮೊದಲ ತ್ರೈ ಮಾಸಿಕದಲ್ಲಿ ಪಪ್ಪಾಯಿ, ಅನಾನಾಸ್ ಹಾಗೂ ಮೈ ಉಷ್ಣತೆ ಹೆಚ್ಚಿಸುವ ಆಹಾರಗಳನ್ನು ತಿನ್ನಲೇಬಾರದು.

ಗರ್ಭಿಣಿಯರು ಫೋಲೆಟ್, ಒಮೆಗಾ 3 ಕೊಬ್ಬು, ವಿಟಮಿನ್ ಬಿ12, ಕ್ಯಾಲ್ಸಿಯಂ ಇರುವ ಆಹಾರ ಸೇವಿಸಿದರೆ ಮಗುವಿನ ಆರೋಗ್ಯಕರ ಬೆಳವಣಿಗೆಗೆ ತುಂಬಾ ಸಹಕಾರಿ. ಇಲ್ಲಿ ನಾವು ಮೊದಲ ತ್ರೈ ಮಾಸಿಕದಲ್ಲಿ ತಿನ್ನಬೇಕಾದ ಆಹಾರಗಳ ಪಟ್ಟಿ ನೀಡಿದ್ದೇವೆ. ಗರ್ಭಿಣಿಯರು ಈ ಆಹಾರ ಸೇವಿಸುವುದರಿಂದ ಮಗುವಿನ ಬೆಳವಣಿಗೆಗೆ ತುಂಬಾ ಒಳ್ಳೆಯದು.

ಧಾನ್ಯಗಳು

ಧಾನ್ಯಗಳು

ಬೀನ್ಸ್, ಕಿಡ್ನಿ ಬೀನ್ಸ್, ಸೋಯಾಬೀನ್, ಕಡಲೆ ಇವುಗಳನ್ನು ತಿನ್ನಬೇಕು. ಇನ್ನು ಗರ್ಭಿಣಿಯರಿಗೆ ನಾರಿನಂಶ, ಕ್ಯಾಲ್ಸಿಯಂ, ಪ್ರೊಟೀನ್, ಕಬ್ಬಿಣದಂಶ , ಫೋಲೆಟ್ ಇವುಗಳ ಅವಶ್ಯಕತೆ ಹೆಚ್ಚಿದ್ದು, ಇದು ಸಸ್ಯಮೂಲ ಆಹಾರಗಳಲ್ಲಿ ದೊರೆಯುತ್ತದೆ. ಗರ್ಭಿಣಿಯರಿಗೆ ಫೋಲೆಟ್ ಅಂಶದ ಕೊರತೆ ಉಂಟಾದರೆ ಮಗುವಿನ ಮೆದುಳು ಹಾಗೂ ಬೆನ್ನು ಮೂಳೆಯ ಬೆಳವಣಿಗೆಗೆ ಹೊಡೆತ ಉಂಟಾಗುವುದು. ಧಾನ್ಯಗಳಲ್ಲಿ ಫೋಲೆಟ್ ಅಂಶವಿರುತ್ತದೆ. ಗರ್ಭಾವಸ್ಥೆಯಲ್ಲಿ 600mcgಯಷ್ಟು ಫೋಲೆಟ್ ಅವಶ್ಯಕ.

ಪಾಲಾಕ್‌

ಪಾಲಾಕ್‌

ಗರ್ಭಿಣಿಯರು ಸೊಪ್ಪು ಹೆಚ್ಚು ತಿನ್ನಬೇಕು. ಇದರಿಂದ ದೇಹದಲ್ಲಿ ಕೆಂಪು ರಕ್ತಕಣಗಳು ಹೆಚ್ಚಾಗುವುದು. ರಕ್ತಕಣಗಳು ಕಡಿಮೆಯಾದರೆ ಮಗುವಿನ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಬೀರುತ್ತದೆ. ಗರ್ಭಿಣಿಯರಿಗೆ ಮೊದಲ ತ್ರೈಮಾಸಿಕದಲ್ಲಿ 137-589ng/mlನಷ್ಟು ಪೋಲೆಟ್ ಅವಶ್ಯಕವಾಗಿ ಸೇವಿಸಲೇಬೇಕು. 100 ಗ್ರಾಂ ಪಾಲಾಕ್‌ನಲ್ಲಿ 194mcg ಫೋಲೆಟ್ ಇರುತ್ತದೆ.

ಹಾಲು ಮತ್ತು ಮೊಸರು

ಹಾಲು ಮತ್ತು ಮೊಸರು

ಹಾಲು ಹಾಗೂ ಮೊಸರಿನಲ್ಲಿ ಕ್ಯಾಲ್ಸಿಯಂ ಅಂಶವಿರುತ್ತದೆ. ಇದು ಮಗುವಿನ ಮೂಳೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೊದಲ ತ್ರೈಮಾಸಿಕದಲ್ಲಿ ಗರ್ಭಿಣಿಯರ ದೇಹದಲ್ಲಿ ಪ್ಯಾರಾ ಥೈರಾಯ್ಡ್ ಹಾರ್ಮೋನ್ ಕಡಿಮೆಯಾಗುವುದು. ಏಕೆಂದರೆ ದೇಹದಲ್ಲಿರುವ ಕ್ಯಾಲ್ಸಿಯಂ ಅನ್ನು ಹೀರಿಕೊಂಡು ಭ್ರೂಣವು ಬೆಳೆಯುತ್ತದೆ. ಹಾಗಾಗಿ ಕ್ಯಾಲ್ಸಿಯಂ ಕೊರತೆ ಉಂಟಾಗದಿರಲು ಗರ್ಭಿಣಿಯರು ತಪ್ಪದೆ ಹಾಲು, ಮೊಸರು ಸೇವನೆ ಮಾಡಬೇಕು.

 ಮೀನು

ಮೀನು

ಸಮುದ್ರಾಹಾರಗಳಲ್ಲಿ ಒಮೆಗಾ 3 ಕೊಬ್ಬಿನಂಶ ದೊರೆಯುತ್ತದೆ. ಇವು ಮಗುವಿನ ಮೆದುಳು ಹಾಗೂ ಕಣ್ಣಿನ ಆರೋಗ್ಯಕ್ಕೆ ತುಂಬಾ ಸಹಕಾರಿಯಾಗಿದೆ. ಒಮೆಗಾ 3 ಕೊಬ್ಬಿನಂಶ ಕಡಿಮೆಯಾದರೆ ಮಗುವಿನ ಕಣ್ಣುದೃಷ್ಟಿಯ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು, ದೈಹಿಕವಾಗಿ ಕೆಲವೊಂದು ನ್ಯೂನ್ಯತೆಗಳು ಉಂಟಾಗುವ ಸಾಧ್ಯತೆ ಇದೆ. ಗರ್ಭಿಣಿಯರಿಗೆ 200 ಮಿಗ್ರಾಂನಷ್ಟು DHA ಕೊಬ್ಬಿನಂಶ ಅವಶ್ಯಕ. ಇದು ವಾರದಲ್ಲಿ 2-3 ಬಾರಿ ಸಮುದ್ರಾಹಾರ ತಿಂದರೆ ಸಿಗುತ್ತದೆ. ವೆಜ್‌ ಮಾತ್ರ ತಿನ್ನನುವವರು ಅಗಸೆ ಬೀಜ ತಿಂದರೆ ಒಮೆಗಾ 3 ಕೊಬ್ಬಿನಂಶ ದೊರೆಯುವುದು.

 ನಟ್ಸ್

ನಟ್ಸ್

ಮೊದಲ ತ್ರೈ ಮಾಸಿಕದಲ್ಲಿ ಪ್ರೊಟೀನ್ ತಾಯಿ ಹಾಗೂ ಮಗುವಿನ ಆರೋಗ್ಯಕ್ಕೆ ತುಂಬಾ ಅವಶ್ಯಕ. ಪ್ರೊಟೀನ್ ತಾಯಿಯ ಆರೋಗ್ಯ ಕಾಪಾಡುವುದರ ಜೊತೆಗೆ ಮಗು ಆರೋಗ್ಯಕರವಾಗಿ ಬೆಳೆಯಲು ಸಹಕಾರಿ. ಮೊದಲ ತ್ರೈ ಮಾಸಿಕದಲ್ಲಿ ಗರ್ಭಿಣಿಯರು ಪ್ರತಿದಿನ ಅವರ ಮೈ ತೂಕಕ್ಕೆ ಅನುಗುಣವಾಗಿ ಪ್ರೊಟೀನ್ ತೆಗೆದುಕೊಲ್ಳಬೇಕು. ಒಂದು ಕೆಜಿ ಮೈತೂಕ್ಕೆ 1.2 ರಿಂದ 1.52ಗ್ರಾಂನಷ್ಟು ಪ್ರೊಟೀನ್ ಸೇವನೆ ಮಾಡಬೇಕು.

ಮಾಂಸಾಹಾರ (ಕಡಿಮೆ ಕೊಬ್ಬಿನಂಂಶವಿರುವ)

ಮಾಂಸಾಹಾರ (ಕಡಿಮೆ ಕೊಬ್ಬಿನಂಂಶವಿರುವ)

ಮಾಂಸಾಹಾರಗಳಲ್ಲಿವಿಟಮಿನ್ ಬಿ 12 ಇದ್ದು, ಇದು ಸಸ್ಯಗಳಲ್ಲಿ ದೊರೆಯವುದಿಲ್ಲ. ಈ ವಿಟಮಿನ್ ನಮ್ಮ ದೇಹದಲ್ಲಿಯೂ ಉತ್ಪತ್ತಿಯಾಗುತ್ತದೆ. ಈ ವಿಟಮಿನ್ ಮಗುವಿನ ನರಗಳು ಆರೋಗ್ಯವಾಗಿರಲು ಅವಶ್ಯಕ. ವಿಟಮಿನ್ ಬಿ 12 ಕೊರತೆ ಉಂಟಾದರೆ ನರ ಸಂಬಂಧಿ ತೊಂದರೆಗಳು ಉಂಟಾಗಬಹುಯದು. ಗರ್ಭಿಣಿಯರಿಗೆ ಗರ್ಭಾವಸ್ಥೆಯಲ್ಲಿ ಪ್ರತಿದಿನ 50mcಯಷ್ಟು ವಿಟಮಿನ್ ಬಿ 12 ಅವಶ್ಯಕ.

ಹಸಿರು ಸೊಪ್ಪು ತರಕಾರಿಗಳು

ಹಸಿರು ಸೊಪ್ಪು ತರಕಾರಿಗಳು

ಹಸಿರು ಸೊಪ್ಪು-ತರಕಾರಿಗಳಲ್ಲಿ ಮೆಗ್ನಿಷ್ಯಿಯಂ, ಪೊಟಾಷ್ಯಿಯಂ, ವಿಟಮಿನ್ ಎ, ಸಿ ಫೋಲೆಟ್ ಅಂಶಗಳಿರುತ್ತವೆ. ಅಲ್ಲದೆ ತಾಯಿ-ಮಗುವಿನ ಆರೋಗ್ಯಕ್ಕೆ ಅವಶ್ಯಕವಾದ ಅನೇಕ ಪೋಷಕಾಂಶಗಳು ಸೊಪ್ಪು-ತರಕಾರಿಯಲ್ಲಿರುತ್ತದೆ. ಗರ್ಭಿಣಿಯರು ಸೊಪ್ಪು ತರಕಾರಿ ಕಡಿಮೆ ಪ್ರಮಾಣದಲ್ಲಿ ತಿನ್ನುವುದರಿಂದ SGA(Small for Gestational Age)ಅಂದರೆ ಹುಟ್ಟುವ ಮಗು ತೂಕ ಕಡಿಮೆಯಾಗಿ ಹುಟ್ಟುವ ಸಾಧ್ಯತೆ ಇದೆ. ಮೊದಲ ತ್ರೈ ಮಾಸಿಕ ದಲ್ಲಿ ಒಂದು ಬೌಲ್‌ನಷ್ಟು ತರಕಾರಿ ಆಹಾರಕ್ರಮದಲ್ಲಿ ಸೇರಿಸಿ. ತರಕಾರಿಗಳನ್ನು ಹಸಿ ತಿನ್ನುವ ಬದಲು ಚೆನ್ನಾಗಿ ಬೇಯಿಸಿ ತಿನ್ನಿ.

ಮೊದಲ ತ್ರೈಮಾಸಿಕದಲ್ಲಿ ಈ ಆಹಾರಗಳನ್ನು ತಿನ್ನಬೇಡಿ

ಮೊದಲ ತ್ರೈಮಾಸಿಕದಲ್ಲಿ ಈ ಆಹಾರಗಳನ್ನು ತಿನ್ನಬೇಡಿ

*ಅತ್ಯಧಿಕ ಮರ್ಕ್ಯೂರಿ ಇರುವ ಮೀನು ಉದಾಹರಣೆಗೆ ಬಾಳೆ ಮೀನು, ತುನಾ ಇವುಗಳಲ್ಲಿ ಮರ್ಕ್ಯೂರಿ ಅಂಶ ಅಧಿಕವಿರುತ್ತದೆ. ಇದರ ಬದಲಿಗೆ ಸಾಲಮೋನ್ ತಿನ್ನಿ.

* ಹಸಿ ಹಾಲುಕುಡಿಯಬೇಡಿ, ಇದರಿಂದ ಫುಡ್‌ ಪಾಯಿಸಿನ್ ಆಗುವ ಸಾಧ್ಯತೆ ಇದೆ.

*ಸಂಸ್ಕರಿಸಿದ ಮೀನು, ಮಾಂಸ ತಿನ್ನಬೇಡಿ. ಮಾಂಸ, ಮೀನಿನ ರೆಡಿಮೇಡ್ ಸಲಾಡ್, ಆಹಾರ ತಿನ್ನಬೇಡಿ.

* ಅತ್ಯಧಿಕ ಕೆಫೀನ್‌ ಸೇವನೆ ಅಂದರೆ ಕಾಫಿ, ಟೀ ಹೆಚ್ಚು ಸೇವಿಸಬೇಡಿ. ಕೆಫೀನ್ ಅಂಶ ಹೆಚ್ಚಾದರೆ ಮಗುವಿನ ಬೆಳವಣಿಗೆ ಕುಂಠಿತವಾಗುವ ಸಾಧ್ಯತೆ ಇದೆ,

* ಹಣ್ಣಾಗದಿರುವ ಪಪ್ಪಾಯಿ ತಿನ್ನುವುದರಿಂದ ಗರ್ಭಪಾತ ಅಥವಾ ಅವಧಿಪೂರ್ವ ಮಗು ಹುಟ್ಟುವ ಸಾಧ್ಯತೆ ಇದೆ. * ಹಸಿ ಮೊಟ್ಟೆ ತಿನ್ನಬೇಡಿ. ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ತಿನ್ನಿ.

*ಜಂಕ್‌ ಫುಡ್‌ಗಳಿಂದ ದೂರವಿರಿ. ಇದು ಮೈ ತೂಕ ಹೆಚ್ಚಿಸುವುದು ಮಾತ್ರವಲ್ಲ, ಮಗುವಿನ ಆರೊಗ್ಯದ ದೃಷ್ಟಿಯಿಂದಲೂ ಒಳ್ಳೆಯದಲ್ಲ.

English summary

Healthy Foods To Eat During The First Trimesters Pregnancy

Medical experts suggest that women should take special care of themselves during this time as it is important for both the mother's and the child's health.
Story first published: Thursday, February 6, 2020, 12:46 [IST]
X
Desktop Bottom Promotion