For Quick Alerts
ALLOW NOTIFICATIONS  
For Daily Alerts

ಕೇಸರಿಯುಕ್ತ ಹಾಲು ಕುಡಿಯುವುದರಿಂದ ಗರ್ಭಿಣಿಯರಿಗೆ ಸಿಗುವುದು ಈ ಆರೋಗ್ಯ ಲಾಭಗಳು..

|

ಒಂಬತ್ತು ತಿಂಗಳ ಗರ್ಭಿಣಿಯರ ಹಾದಿ ಪದಗಳಲ್ಲಿ ವಿವರಿಸಲಾಗದ ಭಾವನೆ. ಗರ್ಭಾಧಾರಣೆಯ ಲಕ್ಷಣಗಳಾದ ವಾಕರಿಕೆ, ಸುಸ್ತು ಒಂದೆಡೆಯಾದರೆ, ಕುಟುಂಬಕ್ಕೆ ಹೊಸ ವ್ಯಕ್ತಿಯನ್ನು ಸ್ವಾಗತಿಸುವ ಖುಷಿ, ಹುರುಪು ಮತ್ತೊಂದೆಡೆ. ಮಹಿಳೆ ತನಗಾಗಿ ಬಹಳ ಲಕ್ಷ್ಯ ಕೊಡಬೇಕಾದ ಸಮಯ.

ಅದೇನೇ ಇದ್ದರೂ, ಗರ್ಭಿಣಿಯಾಗಿದ್ದಾಗ ಮೊದಲು ಮನಸ್ಸಿಗೆ ಬರುವ ವಿಷಯವೆಂದರೆ, ಆರೋಗ್ಯವನ್ನು ನೋಡಿಕೊಳ್ಳುವುದು, ಏಕೆಂದರೆ ನಿಮ್ಮೊಳಗಿರುವ ನಿಮ್ಮ ಮಗುವಿನ ಆರೋಗ್ಯಕರ ಬೆಳವಣಿಗೆಗೆ ತುಂಬಾ ಮುಖ್ಯವಾಗಿದೆ. ಇದಕ್ಕಾಗಿ ಸಮತೋಲಿತ ಆಹಾರ, ಉತ್ತಮ ಅಭ್ಯಾಸಗಳ ಅವಶ್ಯಕತೆಯಿದೆ. ಈ ಒಂಬತ್ತು ತಿಂಗಳಲ್ಲಿ ಅತೀ ಹೆಚ್ಚು ಶಿಫಾರಸ್ಸು ಮಾಡುವ ಆಹಾರ ಪದಾರ್ಥವೆಂದರೆ, ಕೇಸರಿ. ಗರ್ಭಾವಸ್ಥೆಯಲ್ಲಿ ಕೇಸರಿ ಸೇವನೆಯು ನಿಮಗೆ ಎಷ್ಟು ಸಹಾಯ ಮಾಡುತ್ತದೆ ಎಂಬುದನ್ನು ಇಲ್ಲಿ ನೀಡಿದ್ದೇವೆ.

ಗರ್ಭಿಣಿಯರು ಕೇಸರಿ ಸೇವನೆಯಿಂದ ಸಿಗುವ ಲಾಭಗಳೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಭಾವನೆಗಳ ಏರಿಳಿತ( ಮೂಡ್ ಸ್ವಿಂಗ್‌)ನಿಭಾಯಿಸುವುದು:

ಭಾವನೆಗಳ ಏರಿಳಿತ( ಮೂಡ್ ಸ್ವಿಂಗ್‌)ನಿಭಾಯಿಸುವುದು:

ಮೂಡ್ ಸ್ವಿಂಗ್ ಮತ್ತು ಗರ್ಭಧಾರಣೆ ಎರಡು ಬೇರ್ಪಡಿಸಲಾಗದ ವಿಷಯಗಳು. ತ್ವರಿತ ಹಾರ್ಮೋನುಗಳ ಬದಲಾವಣೆಗಳು ಮತ್ತು ದೈಹಿಕ ಅಸ್ವಸ್ಥತೆಗಳು ಸೇರಿದಂತೆ ವಿವಿಧ ಅಂಶಗಳು ಈ ಮನಸ್ಥಿತಿ ಬದಲಾವಣೆಗೆ ಕಾರಣವಾಗಿದೆ. ಇದರಿಂದ ವ್ಯಕ್ತಿಗೆ ಸ್ವಲ್ಪ ಮಟ್ಟದ ಕಿರಿಕಿರಿಯುಂಟಾಗುತ್ತದೆ. ಕೇಸರಿ ಸಿರೊಟೋನಿನ್ ಅನ್ನು ಉತ್ಪಾದಿಸಿ, ನಿಮ್ಮ ದೇಹದಲ್ಲಿ ರಕ್ತದ ಹರಿವನ್ನು ವರ್ಧಿಸುವ ಮೂಲಕ ನಿಮ್ಮ ಮನಸ್ಥಿತಿಯನ್ನು ಬದಲಾಯಿಸುತ್ತದೆ. ಈ ಮೂಲಕ ನಿಮ್ಮ ಭಾವನೆಗಳ ಏರಿಳಿತಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ, ಅಷ್ಟೇ ಅಲ್ಲ, ನಿಮ್ಮ ಉತ್ಸಾಹವು ಹೆಚ್ಚು ಕಾಲ ಉಳಿಯುವಂತೆ ಮಾಡುವುದು.

ಚೆನ್ನಾಗಿ ನಿದ್ರಿಸಲು ಸಹಾಯ ಮಾಡುವುದು:

ಚೆನ್ನಾಗಿ ನಿದ್ರಿಸಲು ಸಹಾಯ ಮಾಡುವುದು:

ಗರ್ಭಧಾರಣೆಯ ಸಮಯದಲ್ಲಿ ದೈಹಿಕ ಸುಸ್ತು ನಿಮ್ಮ ನಿದ್ರೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ರಾತ್ರಿ ನಿದ್ದೆ ಬಾರದೇ ಹೊರಳಾಡುವಂತಾಗಬಹುದು. ಆಗ ನೀವು ಮಲಗುವ ಮೊದಲು ಒಂದು ಲೋಟ ಹಾಲಿಗೆ ಕೇಸರಿ ಹಾಕಿ ಕುಡಿಯಿರಿ. ಇದು ನಿಮ್ಮ ಆತಂಕವನ್ನು ದೂರಮಾಡಿ, ಮನಸ್ಥಿತಿಯನ್ನು ಶಾಂತಗೊಳಿಸುತ್ತದೆ. ಈ ಮೂಲಕ ನಿಮಗೆ ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ.

ಸೆಳೆತವನ್ನು ನಿವಾರಿಸುವುದು:

ಸೆಳೆತವನ್ನು ನಿವಾರಿಸುವುದು:

ಹಾರ್ಮೋನುಗಳ ಬದಲಾವಣೆಯಿಂದಾಗಿ, ಗರ್ಭಾವಸ್ಥೆಯಲ್ಲಿ ಸೆಳೆತ ಹೆಚ್ಚಾಗಿ ಕಂಡುಬರುತ್ತದೆ. ಕೆಲವೊಮ್ಮೆ ಸೆಳೆತವು ಸೌಮ್ಯವಾಗಿರಬಹುದು, ಇನ್ನೂ ಕೆಲವೊಮ್ಮೆ ತೀವ್ರ ಮತ್ತು ಸಹಿಸಲಸಾಧ್ಯವಾಗಿರುತ್ತದೆ. ಕೇಸರಿಯನ್ನು ಸೇವಿಸುವುದರಿಂದ ಈ ಸೆಳೆತ ಅಥವಾ ನೋವನ್ನು ಸುಲಭವಾಗಿ ತಡೆಯಬಹುದು. ಏಕೆಂದರೆ ಕೇಸರಿಯು ನೋವು ನಿವಾರಕವಾಗಿ ಕೆಲಸ ಮಾಡುತ್ತದೆ ಕೊತೆಗೆ ನಿಮ್ಮ ದೇಹದಲ್ಲಿನ ಸ್ನಾಯು ನೋವನ್ನು ನಿವಾರಿಸುತ್ತದೆ. ಅಷ್ಟೇ ಅಲ್ಲ, ಗರ್ಭಾವಸ್ಥೆಯಲ್ಲಿ ಅಧಿಕವಾಗುವ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

ಹೃದಯದ ಕಾರ್ಯವನ್ನು ಸುಧಾರಿಸುವುದು:

ಹೃದಯದ ಕಾರ್ಯವನ್ನು ಸುಧಾರಿಸುವುದು:

ಗರ್ಭಾವಸ್ಥೆಯಲ್ಲಿ ಬಯಕೆಗಳು ಸಾಮಾನ್ಯ. ಆ ಕಡುಬಯಕೆಗಳ ಈಡೇರಿಸಿಕೊಳ್ಳಲು ಎಲ್ಲವನ್ನೂ ತಿನ್ನುತ್ತೀರಿ. ಆಗ ನಿಮ್ಮ ಕ್ಯಾಲೋರಿ ಸೇವನೆ ಜಾಸ್ತಿಯಾಗಿ, ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುತ್ತದೆ. ಇದು ನಿಮ್ಮ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕೇಸರಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೇಸರಿಯಲ್ಲಿರುವ ಸಂಯುಕ್ತಗಳು ಅಪಧಮನಿಗಳ ಅಡಚಣೆಯನ್ನು ತಡೆಯುತ್ತದೆ ಜೊತೆಗೆ ನಿಮ್ಮ ದೇಹದಲ್ಲಿ ಆಮ್ಲಜನಕದ ಮಟ್ಟವನ್ನು ಹೆಚ್ಚಿಸುತ್ತದೆ.

ಅಲರ್ಜಿಯನ್ನು ತಡೆಯುವುದು:

ಅಲರ್ಜಿಯನ್ನು ತಡೆಯುವುದು:

ಗರ್ಭಿಣಿಯಾಗಿದ್ದಾಗ ಅಲರ್ಜಿಗಳು ಬರುತ್ತವೆ. ಋತುಮಾನದ ಅಲರ್ಜಿ, ಉಸಿರಾಟದ ಸಮಸ್ಯೆಗಳ ವಿರುದ್ಧ ಹೋರಾಡಲು ಕೇಸರಿ ನಿಮಗೆ ಸಹಾಯ ಮಾಡುತ್ತದೆ. ಸ್ವಲ್ಪ ಪ್ರಮಾಣದ ಕೇಸರಿಯನ್ನು ಸೇವಿಸುವುದು ಸುರಕ್ಷಿತ ಮತ್ತು ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನಕಾರಿ. ಆದರೆ ಹೆಚ್ಚು ಸೇವಿಸಬೇಡಿ. ಅಡ್ಡಪರಿಣಾಮಗಳು ಉಂಟಾಗಬಹುದು.

English summary

Health Benefits of Saffron for Pregnant Women in Kannada

A balanced diet, good habits and staying happy are the key points to being healthy during pregnancy. Talking about a healthy diet, saffron is one food item that is highly recommended during the nine months of pregnancy.
Story first published: Monday, August 16, 2021, 18:03 [IST]
X
Desktop Bottom Promotion