For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ಕೂದಲ ಆರೈಕೆ ಬಗ್ಗೆ ಇರಲಿ ಎಚ್ಚರ

|

ಒಬ್ಬ ಮಹಿಳೆ ತನ್ನ ಗರ್ಭಾವಸ್ಥೆಯ ಸಮಯದಲ್ಲಿ ಮತ್ತು ನಂತರದ ಕೆಲವು ದಿನಗಳಲ್ಲಿ ತನ್ನ ಆರೋಗ್ಯದ ವಿಚಾರವಾಗಿ ಸಾಕಷ್ಟು ಎಚ್ಚರಿಕೆ ವಹಿಸಬೇಕು. ಏಕೆಂದರೆ ಈ ಸಂದರ್ಭಗಳು ತುಂಬಾ ಸೂಕ್ಷ್ಮ. ತಾಯಿಯ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದರೂ ಅದರ ನೇರ ಪರಿಣಾಮ ಮಗುವಿನ ಮೇಲೆ ಉಂಟಾಗುತ್ತದೆ. ಜೀವನಶೈಲಿ ಆಗಿರಲಿ, ಆಹಾರ ಪದ್ಧತಿ ಆಗಿರಲಿ ಅಥವಾ ಔಷಧಿಗಳ ಸೇವನೆ ಆಗಿದ್ದರೂ ಕೂಡ ವೈದ್ಯರ ಮಾತಿನ ಹೊರತು ಬೇರೇನೂ ಪ್ರಯತ್ನ ಪಡಬಾರದು.

ಗರ್ಭಿಣಿ ಮಹಿಳೆ ತನ್ನ ಆರೋಗ್ಯದ ಕಾಳಜಿಯ ಜೊತೆಗೆ ತಲೆಕೂದಲಿನ ವಿಚಾರವನ್ನು ಸಹ ಗಂಭೀರವಾಗಿ ತೆಗೆದುಕೊಳ್ಳಬೇಕು. ತಲೆಕೂದಲಿಗೆ ಸಂಬಂಧಪಟ್ಟ ಹಲವಾರು ಸಮಸ್ಯೆಗಳು ಗರ್ಭಾವಸ್ಥೆಯಲ್ಲಿ ನಿಮ್ಮನ್ನು ಕಾಡಬಹುದು. ಆದರೆ ಸರಿಯಾದ ಆಹಾರ ಕ್ರಮ ಮತ್ತು ಉತ್ತಮ ಜೀವನಶೈಲಿಯಿಂದ ನಿಮ್ಮ ತಲೆಕೂದಲಿನ ಸದೃಢತೆಯನ್ನು ಅತ್ಯುತ್ತಮವಾಗಿ ಕಾಪಾಡಿಕೊಳ್ಳಬಹುದು.

ಗರ್ಭಿಣಿ ಮಹಿಳೆಯರು ತಮ್ಮ ಗರ್ಭಾವಸ್ಥೆಯ ಸಮಯದಲ್ಲಿ ಹಾಗೂ ನಂತರ ತಮ್ಮ ಕೂದಲಿನ ರಕ್ಷಣೆ ಮಾಡಿಕೊಳ್ಳಲು ಸಹಾಯವಾಗುವಂತಹ ಕೆಲವು ಟಿಪ್ಸ್ : -

1. ಸುಂದರವಾದ ತಲೆ ಕೂದಲಿಗೆ ಆಯಿಲ್ ಮಸಾಜ್

1. ಸುಂದರವಾದ ತಲೆ ಕೂದಲಿಗೆ ಆಯಿಲ್ ಮಸಾಜ್

ಸಾಧಾರಣವಾಗಿ ನೀವು ಗಮನಿಸಿರಬೇಕು. ಮನೆಯಲ್ಲಿ ಯಾರಾದರೂ ಹಿರಿಯರಿದ್ದರೆ ವಾರದಲ್ಲಿ ಎರಡರಿಂದ ಮೂರು ಬಾರಿ ಗರ್ಭಿಣಿ ಮಹಿಳೆಗೆ ಹರಳೆಣ್ಣೆಯನ್ನು ಬಿಸಿ ಮಾಡಿ ಉಗುರು ಬೆಚ್ಚಗಿರುವ ಸಮಯದಲ್ಲಿ ತಲೆಗೆ ಹಚ್ಚಿ ಸ್ನಾನ ಮಾಡಿಸುತ್ತಾರೆ. ಇದರ ಮುಖ್ಯ ಉದ್ದೇಶ ಎಂದರೆ ಗರ್ಭಿಣಿ ಮಹಿಳೆಗೆ ಯಾವುದೇ ಕಾರಣಕ್ಕೂ ನಿದ್ರಾಹೀನತೆ ಮತ್ತು ಶೀತ ಎದುರಾಗಬಾರದು ಎಂದು. ಏಕೆಂದರೆ ಗರ್ಭಾವಸ್ಥೆಯ ಸಮಯದಲ್ಲಿ ಮಹಿಳೆಯರಿಗೆ ಬೆಳಗಿನ ಸಮಯದಲ್ಲಿ ಕಾಡುವ ಆರೋಗ್ಯದ ಅಸ್ವಸ್ಥತೆಯನ್ನು ಹೋಗಲಾಡಿಸಲು ರಾತ್ರಿಯ ಸಮಯದಲ್ಲಿ ಒಳ್ಳೆಯ ನಿದ್ರೆ ಕಣ್ತುಂಬಾ ಅವಶ್ಯಕ.

ಕೇವಲ ಹರಳೆಣ್ಣೆ ಮಾತ್ರವಲ್ಲದೆ ಎಳ್ಳೆಣ್ಣೆ, ಬಾದಾಮಿ ಎಣ್ಣೆ, ಕೊಬ್ಬರಿ ಎಣ್ಣೆ ಅಥವಾ ಆಲಿವ್ ಆಯಿಲ್ ಕೂಡ ಬಳಕೆ ಮಾಡಬಹುದು. ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ತಲೆಗೆ ಹಚ್ಚಿ ಮಸಾಜ್ ಮಾಡುವುದರಿಂದ ಕೂದಲಿನ ಬೆಳವಣಿಗೆ ಕೂಡ ಉತ್ತಮಗೊಳ್ಳುತ್ತದೆ. ಗರ್ಭಿಣಿ ಮಹಿಳೆಯರು ತಮ್ಮ ಕೂದಲಿನ ಸದೃಢತೆಯನ್ನು ಕಾಪಾಡಿಕೊಳ್ಳಲು ಕೇವಲ ಈ ಮೇಲಿನ ಯಾವುದಾದರೂ ಒಂದು ಬಗೆಯ ಎಣ್ಣೆಯನ್ನು ಮಸಾಜ್ ಮಾಡಬೇಕು ಎನ್ನುವ ಹಾಗೇನಿಲ್ಲ. ಎಲ್ಲಾ ಎಣ್ಣೆಗಳನ್ನು ಮಿಶ್ರಣ ಮಾಡಿ ಕೂಡ ಬಳಕೆ ಮಾಡಬಹುದು. ಇಲ್ಲವೆಂದರೆ ಮಾರುಕಟ್ಟೆಗಳಲ್ಲಿ ಸಿಗುವ ಇನ್ನು ಕೆಲವು ಬಗೆಯ ಎಸೆನ್ಶಿಯಲ್ ಆಯಿಲ್ ಗಳಾದ ಲ್ಯಾವೆಂಡರ್ ಆಯಿಲ್, ರೋಸ್ಮರಿ ಆಯಿಲ್, ಲೆಮನ್ ಗ್ರಾಸ್ ಆಯಿಲ್, ಚಾಮೋಮೈಲ್, ಸೆಡರ್ ವುಡ್ ಆಯಿಲ್ ಗಳನ್ನು ಪ್ರಮುಖವಾಗಿ ತಲೆಯ ಭಾಗದ ಮಸಾಜ್ ಪ್ರಕ್ರಿಯೆಗೆ ಬಳಸಬಹುದು.

ಆದರೆ ನೆನಪಿರಲಿ, ನೀವು ಬಳಕೆ ಮಾಡುವ ಬಹು ಮುಖ್ಯವಾದ ಕೊಬ್ಬರಿ ಎಣ್ಣೆ, ಬಾದಾಮಿ ಎಣ್ಣೆ, ಎಳ್ಳೆಣ್ಣೆ ಅಥವಾ ಹರಳೆಣ್ಣೆಗೆ ಕೇವಲ ಒಂದು ಅಥವಾ ಎರಡು ಹನಿಗಳಷ್ಟು ಮಾತ್ರ ಎಸೆನ್ಶಿಯಲ್ ಆಯಿಲ್ ಮಿಶ್ರಣ ಮಾಡಿ ಮಸಾಜ್ ಮಾಡಿ. ಇನ್ನೊಂದು ನೀವು ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಒಂದೊಂದು ಬಗೆಯ ಎಸೆನ್ಶಿಯಲ್ ಆಯಿಲ್ ಗಳಲ್ಲಿ ಒಂದೊಂದು ರೀತಿಯ ಉಪಯೋಗಗಳು ನಿಮಗೆ ಸಿಗುತ್ತವೆ.

ಉದಾಹರಣೆಗೆ ಲ್ಯಾವಂಡರ್ ಎಸೆನ್ಶಿಯಲ್ ಆಯಿಲ್ ನಲ್ಲಿ ನಿಮ್ಮ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವಂತಹ ಗುಣ ಲಕ್ಷಣಗಳು ಕಂಡು ಬರುತ್ತವೆ. ರೋಸ್ಮರಿ ಎಸೆನ್ಶಿಯಲ್ ಆಯಿಲ್ ನಲ್ಲಿ ನಿಮ್ಮ ಕೂದಲಿನ ಸಾಂದ್ರತೆಯನ್ನು ಹೆಚ್ಚಿಸುವ ಗುಣವಿದೆ. ಚಾಮೋಮೈಲ್ ಆಯಿಲ್ ನಿಮ್ಮ ತಲೆ ಕೂದಲನ್ನು ನಯವಾಗಿ ಮತ್ತು ಹೊಳಪಿನಿಂದ ಕೂಡಿರುವಂತೆ ಮಾಡುತ್ತದೆ. ಸೆಡರ್ ವುಡ್ ಆಯಿಲ್ ನಿಮ್ಮ ತಲೆ ಕೂದಲಿನ ಉದುರುವಿಕೆಯನ್ನು ಕಡಿಮೆ ಮಾಡುತ್ತದೆ.

2. ನಿಮ್ಮ ಸಮೃದ್ಧವಾದ ಕೂದಲಿಗೆ ಒಳ್ಳೆಯ ಶಾಂಪೂ ಮತ್ತು ಕಂಡಿಷನರ್ ಅಗತ್ಯ

2. ನಿಮ್ಮ ಸಮೃದ್ಧವಾದ ಕೂದಲಿಗೆ ಒಳ್ಳೆಯ ಶಾಂಪೂ ಮತ್ತು ಕಂಡಿಷನರ್ ಅಗತ್ಯ

ಮುಖ್ಯವಾಗಿ ತಲೆಗೆ ಶಾಂಪು ಹಾಕಿ ತೊಳೆಯುವ ಉದ್ದೇಶವೇ ನೆತ್ತಿಯ ಭಾಗದ ಧೂಳು ಮತ್ತು ಕೊಳಕು ದೂರವಾಗಿ ಕೂದಲಿನ ಬೇರುಗಳು ಆರೋಗ್ಯದಿಂದ ಕೂಡಿ ಕೋಮಲವಾದ ಮತ್ತು ಆರೋಗ್ಯಕರವಾದ ತಲೆ ಕೂದಲು ನಮ್ಮದಾಗಲಿ ಎಂದು. ತಲೆ ಹೊಟ್ಟಿನ ನಿವಾರಣೆಯಲ್ಲೂ ಕೂಡ ಶಾಂಪು ಬಳಕೆಯಾಗಿ ಕೂದಲಿನ ಸಮೃದ್ಧತೆ ಮತ್ತು ಅಭಿವೃದ್ಧಿಯನ್ನು ಹೆಚ್ಚಿಸುತ್ತದೆ.

ತಲೆ ಹೊಟ್ಟಿನ ಸಮಸ್ಯೆ ಹೆಚ್ಚಾಗಿ ಅನುಭವಿಸುತ್ತಿರುವವರಿಗೆ ಕೂದಲು ಉದುರುವುದು ಜಾಸ್ತಿ ಎಂದು ಹೇಳುತ್ತಾರೆ. ಹಾಗಾಗಿ ಒಳ್ಳೆಯ ಪೌಷ್ಟಿಕ ಸತ್ವಗಳನ್ನು ಒಳಗೊಂಡ ನೈಸರ್ಗಿಕ ಶಾಂಪೂವನ್ನು ಬಳಕೆ ಮಾಡುವುದು ಒಳ್ಳೆಯದು. ಈಗಿನ ಮಾರುಕಟ್ಟೆಗಳಲ್ಲಿ ಅಲೋವೆರಾ ಆಯಿಲ್, ಅವಕ್ಯಾಡೊ ಆಯಿಲ್, ಜೋಜೋಬ ಆಯಿಲ್, ಮತ್ತು ಆರ್ಗನ್ ಆಯಿಲ್ ಬಳಕೆ ಮಾಡಿ ತಯಾರು ಮಾಡಿರುವ ಶಾಂಪುಗಳು ಸುಲಭವಾಗಿ ಸಿಗುತ್ತವೆ.

ಹಾಗಾಗಿ ಇಂತಹ ನೈಸರ್ಗಿಕ ಉತ್ಪನ್ನಗಳು ಎಂದಿಗೂ ನಿಮ್ಮ ಕೂದಲಿನ ಆರೋಗ್ಯವನ್ನು ದುಪ್ಪಟ್ಟು ಮಾಡುತ್ತವೆ ಎಂದು ನಂಬಬಹುದು. ತಲೆ ಸ್ನಾನದ ಬಳಿಕ ಬಳಸುವ ಹೇರ್ ಕಂಡೀಶನರ್ ನಿಮ್ಮ ಕೂದಲನ್ನು ಮೃದುವಾಗಿಸಿ ಅಗತ್ಯವಾದ ಪೌಷ್ಟಿಕಾಂಶಗಳನ್ನು ಒದಗಿಸಿ ಸಾಂದ್ರತೆಯನ್ನು ಹೆಚ್ಚು ಮಾಡುತ್ತದೆ. ಮುಖ್ಯವಾಗಿ ಕೂದಲಿನ ಪಿಎಚ್ ಮಟ್ಟವನ್ನು ನಿಯಂತ್ರಣ ಮಾಡುವುದರ ಜೊತೆಗೆ ಸುಂದರವಾದ ಕೇಶರಾಶಿ ನಿಮ್ಮದಾಗುತ್ತದೆ.

3. ರಾಸಾಯನಿಕಯುಕ್ತ ಬಣ್ಣಗಳ ಬಳಕೆ ಬೇಡ

3. ರಾಸಾಯನಿಕಯುಕ್ತ ಬಣ್ಣಗಳ ಬಳಕೆ ಬೇಡ

ಇತ್ತೀಚಿಗೆ ಬಿಳಿ ಕೂದಲು ಎನ್ನುವುದು ಚಿಕ್ಕಮಕ್ಕಳಿಗೂ ಕಂಡು ಬರುವ ಸಾಮಾನ್ಯ ಸಮಸ್ಯೆ. ಹಾಗಾಗಿ ದೊಡ್ಡವರು ಇದಕ್ಕೆ ಹೊರತೇನಲ್ಲ. ಮಹಿಳೆಯರಿಗೆ ಗರ್ಭಾವಸ್ಥೆಯ ಸಮಯದಲ್ಲಿ ತಾವು ಕೂದಲಿಗೆ ಬಳಕೆ ಮಾಡುವ ಉತ್ಪನ್ನಗಳ ಬಗ್ಗೆ ಸಾಕಷ್ಟು ಎಚ್ಚರವಿರಬೇಕು. ಹೆಚ್ಚು ರಾಸಾಯನಿಕ ಅಂಶಗಳನ್ನು ಒಳಗೊಂಡ ಉತ್ಪನ್ನಗಳ ಬಳಕೆಯಿಂದ ದೂರ ಉಳಿದರೆ ಒಳ್ಳೆಯದು.

ಏಕೆಂದರೆ ನೀವು ತಲೆ ಕೂದಲಿನ ಸಮೃದ್ಧತೆಯನ್ನು ಮತ್ತು ಸೌಂದರ್ಯವನ್ನು ಕಾಪಾಡಿಕೊಳ್ಳಲು ತಲೆಗೆ ಹಚ್ಚುವ ರಾಸಾಯನಿಕಯುಕ್ತ ಬಣ್ಣಗಳು ನೇರವಾಗಿ ನಿಮ್ಮ ನೆತ್ತಿಯ ಮೂಲಕ ನಿಮ್ಮ ದೇಹದೊಳಗೆ ರಕ್ತ ಸಂಚಾರದಲ್ಲಿ ಬೆರೆತು ನಿಮ್ಮ ಭ್ರೂಣದಲ್ಲಿರುವ ಮಗುವಿಗೆ ತಲುಪುತ್ತದೆ. ಹಾಗಾಗಿ ಹುಟ್ಟುವ ಮಕ್ಕಳಲ್ಲಿ ಹುಟ್ಟುತ್ತಲೇ ಅಲರ್ಜಿ ಸಮಸ್ಯೆ ಕಾಡುತ್ತವೆ. ಹಾಗಾಗಿ ನಿಮ್ಮ ಗರ್ಭಾವಸ್ಥೆಯ ಸಮಯದಲ್ಲಿ ಸಾಧ್ಯ ಆದಷ್ಟು ನಿಮ್ಮ ಕೂದಲಿಗೆ ಸಂಬಂಧ ಪಟ್ಟಂತೆ ಬ್ಲೀಚಿಂಗ್, ಪೆರ್ಮಿಂಗ್ ಅಥವಾ ಕಲರಿಂಗ್ ನಂತಹ ಪ್ರಕ್ರಿಯೆಗಳನ್ನು ದೂರ ಇಡಿ.

4. ತಲೆ ಕೂದಲಿನ ತುದಿಗಳನ್ನು ನಿಯಮಿತವಾಗಿ ಆಗಾಗ ಕತ್ತರಿಸಿ

4. ತಲೆ ಕೂದಲಿನ ತುದಿಗಳನ್ನು ನಿಯಮಿತವಾಗಿ ಆಗಾಗ ಕತ್ತರಿಸಿ

ಸೀಳು ಕೂದಲಿನ ಸಮಸ್ಯೆಯನ್ನು ಹೆಚ್ಚು ಹೊಂದಿರುವವರು ತಮ್ಮ ತಲೆ ಕೂದಲಿನ ತುದಿಯ ಭಾಗವನ್ನು ಕತ್ತರಿಯಿಂದ ಆಗಾಗ ಕತ್ತರಿಸುತ್ತಿದ್ದರೆ ಒಳ್ಳೆಯದು. ಇದಕ್ಕಾಗಿ ಹೊಸ ಕೇಶ ವಿನ್ಯಾಸವನ್ನು ಅನುಸರಿಸಿದರೂ ಕೂಡ ಯಾವುದೇ ತೊಂದರೆ ಇಲ್ಲ. ಹೊಚ್ಚ ಹೊಸ ಕೂದಲಿನ ವಿನ್ಯಾಸ ನಿಮ್ಮದಾದರೆ ಹೊಸ ಹುರುಪು ಮತ್ತು ಚೈತನ್ಯ ನಿಮ್ಮಲ್ಲಿ ಕಂಡು ಬರುವ ಸಾಧ್ಯತೆ ಇದೆ. ಹಾಗೂ ಗರ್ಭಾವಸ್ಥೆಯ ಸಮಯದಲ್ಲಿ ಇದು ನಿಮಗೆ ತುಂಬಾ ಅವಶ್ಯಕ ಕೂಡ.

5. ತೇವಾಂಶವಿದ್ದಾಗ ಎಂದಿಗೂ ತಲೆ ಬಾಚಬೇಡಿ

5. ತೇವಾಂಶವಿದ್ದಾಗ ಎಂದಿಗೂ ತಲೆ ಬಾಚಬೇಡಿ

ಹಲವರಿಗೆ ಇದೊಂದು ಅಭ್ಯಾಸ ರೂಡಿ ಆಗಿರುತ್ತದೆ. ತಲೆ ಸ್ನಾನ ಮಾಡಿದ ನಂತರ ತಕ್ಷಣವೇ ಬಾಚಣಿಗೆಯಿಂದ ತಲೆ ಬಾಚಲು ಮುಂದಾಗುತ್ತಾರೆ. ಆದರೆ ನಿಮಗೆ ನೆನಪಿರಬೇಕು. ನಿಮ್ಮ ನೆತ್ತಿಯ ಭಾಗ ನೀರಿನಿಂದ ತೇವಗೊಂಡಿದ್ದಾಗ ನಿಮ್ಮ ಕೂದಲಿನ ಬೇರುಗಳು ಸಾಕಷ್ಟು ಮೆತ್ತಗಿರುತ್ತವೆ. ಹಾಗಾಗಿ ನೀವು ತಲೆ ಬಾಚುವ ಸಮಯದಲ್ಲಿ ಬಾಚಣಿಗೆಗೆ ಸಿಕ್ಕಿ ಹಾಕಿಕೊಂಡ ಅದೆಷ್ಟೋ ಕೂದಲುಗಳು ಅರ್ಧಕ್ಕೆ ಮುರಿದುಕೊಳ್ಳುತ್ತವೆ ಮತ್ತು ಸಂಪೂರ್ಣವಾಗಿ ಬೇರಿನ ಸಮೇತ ನಿಮ್ಮ ಕೈಗೆ ಬಂದುಬಿಡುತ್ತವೆ. ನಿಮ್ಮ ತಲೆ ಕೂದಲು ಉದುರುವಿಕೆಯಲ್ಲಿ ಇದೂ ಕೂಡ ಒಂದು ಪ್ರಮುಖ ಕಾರಣ. ಈ ಕಾರಣಕ್ಕಾಗಿಯೇ ಕೂದಲಿನ ಸದೃಢತೆಯಲ್ಲಿ ನೀವು ಹೆಚ್ಚು ಗಮನ ವಹಿಸಬೇಕು ಎಂದು ನಾವು ಮೊದಲೇ ಹೇಳಿದ್ದು.

6. ನಿಮ್ಮ ನೆತ್ತಿಯ ಹಾಗೂ ಕೂದಲಿನ ಬಗ್ಗೆ ಅರಿವಿರಲಿ

6. ನಿಮ್ಮ ನೆತ್ತಿಯ ಹಾಗೂ ಕೂದಲಿನ ಬಗ್ಗೆ ಅರಿವಿರಲಿ

ನಮಗೆಲ್ಲಾ ಗೊತ್ತಿರುವ ಹಾಗೆ ನಮ್ಮ ಒಬ್ಬೊಬ್ಬರ ಕೂದಲು ಅಥವಾ ಚರ್ಮ ಒಂದೊಂದು ರೀತಿ ಇರುತ್ತದೆ. ಹಾಗಾಗಿ ಒಬ್ಬರು ಬಳಕೆ ಮಾಡುವ ಶಾಂಪು ಅಥವಾ ಇನ್ನಿತರ ಉತ್ಪನ್ನಗಳು ಇನ್ನೊಬ್ಬರಿಗೆ ಸರಿ ಹೊಂದುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಹಾಗಾಗಿ ಮೊದಲಿಗೆ ನಿಮ್ಮ ನೆತ್ತಿಗೆ ಮತ್ತು ಕೂದಲಿಗೆ ಸೂಕ್ತವಾಗುವಂತಹ ಉತ್ಪನ್ನಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಿ.

ಕೆಲವರಿಗೆ ತಲೆಗೆ ಮೆಹಂದಿ ಹಚ್ಚಿದರೆ ನೆತ್ತಿಯ ಭಾಗ ತಂಪಾಗಿರುವುದರ ಜೊತೆಗೆ ಕೂದಲಿನ ಬೆಳವಣಿಗೆ ಕೂಡ ಹೆಚ್ಚಾಗುತ್ತದೆ. ಇನ್ನು ಕೆಲವರಿಗೆ ಮೆಹಂದಿಯ ವಾಸನೆಯೇ ಇಷ್ಟವಾಗುವುದಿಲ್ಲ. ಕೆಲವು ಮಹಿಳೆಯರಿಗೆ ಗುಂಗುರು ಕೂದಲು ಇದ್ದು, ಕೂದಲಿನ ಹೊಳಪು ಸಹ ಕಡಿಮೆ ಇರುತ್ತದೆ. ಎಣ್ಣೆಯ ಚರ್ಮ ಹೊಂದಿರುವವರಿಗೆ ನೆತ್ತಿಯ ಭಾಗದಲ್ಲಿ ಹೆಚ್ಚು ಧೂಳು ಸೇರಿಕೊಂಡು ಬ್ಯಾಕ್ಟೀರಿಯಾಗಳ ಹಾಗೂ ಫಂಗಸ್ ಸೋಂಕು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಒಂದೇ ಬಗೆಯ ಕೂದಲಿಗೆ ಸಂಬಂಧಿಸಿದ ಆರೈಕೆಯ ಪ್ರಕ್ರಿಯೆಯನ್ನು ನಡೆಸಲು ಸಾಧ್ಯವಿಲ್ಲ.

7. ಬಿಗಿ ಎನಿಸುವ ಕೇಶವಿನ್ಯಾಸ ಬೇಡವೇ ಬೇಡ

7. ಬಿಗಿ ಎನಿಸುವ ಕೇಶವಿನ್ಯಾಸ ಬೇಡವೇ ಬೇಡ

ಇತ್ತೀಚೆಗೆ ಬ್ಯೂಟಿ ಪಾರ್ಲರ್ ಗಳಲ್ಲಿ ಅವರ ಮುಖದ ಅಂದಕ್ಕೆ ತಕ್ಕಂತೆ ಕೂದಲಿನ ವಿನ್ಯಾಸವನ್ನು ಮಾಡಲಾಗುತ್ತದೆ. ಕೂದಲಿನ ವಿನ್ಯಾಸ ಸಿದ್ಧ ಪಡಿಸುವ ಪ್ರಕ್ರಿಯೆಯಲ್ಲಿ ಹಲವು ಬಗೆಯ ಕೂದಲಿನ ಆರೋಗ್ಯಕ್ಕೆ ಹಾನಿಕರ ಎನಿಸುವ ವಿದ್ಯುತ್ ಉಪಕರಣಗಳನ್ನು ಬಳಕೆ ಮಾಡಲಾಗುತ್ತದೆ. ಕೆಲವರ ತಲೆ ಕೂದಲನ್ನು ನೋಡಲು ಚಂದ ಕಾಣಲಿ ಎಂದು ಭದ್ರವಾಗಿ ಎಳೆದು ಕಟ್ಟಿರುತ್ತಾರೆ. ಗರ್ಭಿಣಿ ಮಹಿಳೆಯರು ಇಂತಹ ಕೇಶ ವಿನ್ಯಾಸಗಳನ್ನು ಗರ್ಭಾವಸ್ಥೆಗೆ ಮುಂಚೆ ಮಾಡಿಸಿಕೊಳ್ಳುತ್ತಿದ್ದರೆ ಗರ್ಭಾವಸ್ಥೆಯ ಸಮಯದಲ್ಲಿ ಅದನ್ನು ಕೈ ಬಿಡುವುದು ಒಳ್ಳೆಯದು. ಏಕೆಂದರೆ ಇದರಿಂದ ಮಾನಸಿಕ ಒತ್ತಡ ಹೆಚ್ಚಾಗಿ ಕೂದಲಿನ ಉದುರುವಿಕೆ ಮಿತಿಮೀರಿ ಹೆಚ್ಚಾಗುತ್ತದೆ.

8. ಆರೋಗ್ಯಕರವಾದ ಆಹಾರ ಸೇವನೆ ಬಹಳ ಅಗತ್ಯ

8. ಆರೋಗ್ಯಕರವಾದ ಆಹಾರ ಸೇವನೆ ಬಹಳ ಅಗತ್ಯ

ಗರ್ಭಿಣಿಯರು ತಮ್ಮ ಗರ್ಭಾವಸ್ಥೆಯ ಸಮಯದಲ್ಲಿ ತಮ್ಮ ಆರೋಗ್ಯಕ್ಕೆ ಎಷ್ಟು ಒತ್ತು ಕೊಡುತ್ತಾರೋ ಅದೇ ರೀತಿ ತಮ್ಮ ಆಹಾರ ಸೇವನೆಯ ಪದ್ಧತಿಯಲ್ಲಿ ಕೂಡ ಶಿಸ್ತನ್ನು ಅನುಸರಿಸಬೇಕು. ಇದುವರೆಗೂ ಬೀದಿ ಬದಿಗಳಲ್ಲಿ ತಿನ್ನುತ್ತಿದ್ದ ಜಂಕ್ ಫುಡ್ ಗಳಿಗೆ ಬ್ರೇಕ್ ಹಾಕಬೇಕು. ವೈದ್ಯರನ್ನು ಕೇಳದೆ ಮಾಡದೆ ಮನಸ್ಸಿಗೆ ಇಷ್ಟವಾಗುವ ಯಾವುದೇ ಆಹಾರವನ್ನು ಸೇವಿಸುವಂತಿಲ್ಲ.

ನಿಮ್ಮ ದೇಹಕ್ಕೆ ನೀವು ತೆಗೆದುಕೊಳ್ಳುವ ಔಷಧಿಗಳಿಗೆ ಪೂರಕವಾಗಿ ನಿಮ್ಮ ಆಹಾರಪದ್ಧತಿಯ ಸಮತೋಲನತೆಯನ್ನು ಕಾಯ್ದುಕೊಳ್ಳಬೇಕು. ತಾಜಾ ಹಣ್ಣು ಮತ್ತು ತರಕಾರಿಗಳು ಡ್ರೈ ಫ್ರೂಟ್ಸ್, ಒಣ ಖರ್ಜೂರ, ಪ್ರೋಟಿನ್ ಅಂಶ ಹೆಚ್ಚಾಗಿ ಹೊಂದಿದ ಆಹಾರಗಳು ಪ್ರತಿ ದಿನ ನಿಮ್ಮ ದೇಹ ಸೇರಬೇಕು. ಇಷ್ಟೇ ಅಲ್ಲದೆ ದಿನದಲ್ಲಿ ಆಗಾಗ ಹೆಚ್ಚು ನೀರು ಕುಡಿಯಬೇಕು. ನೀವು ಅನುಸರಿಸುವ ನಿಮ್ಮ ಆಹಾರ ಪದ್ಧತಿ ಕ್ರಮ ನಿಮ್ಮ ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ ಎಂಬುದು ನಿಮಗೆ ಸದಾ ನೆನಪಿರಬೇಕು. ಗರ್ಭಾವಸ್ಥೆಯಲ್ಲಿ ನೀವು ಸೇವಿಸುವ ಅನಾರೋಗ್ಯಕರ ಆಹಾರದಿಂದ ತಲೆ ಕೂದಲಿನ ಹಾನಿಯಾಗುವ ಸಾಧ್ಯತೆ ಇರುತ್ತದೆ. ಅಷ್ಟೇ ನಿಮ್ಮ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿಗೂ ಕೂಡ ನೇರವಾದ ದುಷ್ಪರಿಣಾಮ ಬೀರಬಹುದು.

9. ಒತ್ತಡ ನಿವಾರಣೆ ಬಹು ಮುಖ್ಯ

9. ಒತ್ತಡ ನಿವಾರಣೆ ಬಹು ಮುಖ್ಯ

ಗರ್ಭಿಣಿಯರಿಗೆ ಗರ್ಭಾವಸ್ಥೆಯ ಸಮಯ ಎನ್ನುವುದು ತುಂಬಾ ಆನಂದವಾಗಿ ಕಳೆಯಬೇಕಾದ ಮತ್ತು ಜೀವನದಲ್ಲಿ ಅಪರೂಪವಾಗಿ ಸಿಗುವ ಸಮಯ. ಹಾಗಾಗಿ ಇಂತಹ ಸಮಯದಲ್ಲಿ ಯಾವುದೇ ಕಹಿ ಘಟನೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಾಗಲೀ ಜೀವನದ ಕಹಿ ನೆನಪುಗಳನ್ನು ಮೆಲುಕು ಹಾಕಿ ಮಾನಸಿಕ ನೆಮ್ಮದಿಯನ್ನು ಹದಗೆಡಿಸಿಕೊಳ್ಳುವ ಪ್ರಯತ್ನ ಮಾಡಬಾರದು. ಕೂದಲು ಉದುರುವಿಕೆಗೆ ಮಾನಸಿಕ ಖಿನ್ನತೆ ಕೂಡ ಒಂದು ಬಹು ಮುಖ್ಯ ಕಾರಣ ಎಂದು ಹೇಳುತ್ತಾರೆ.

ಹಾಗಾಗಿ ಗರ್ಭಾವಸ್ಥೆಯ ಸಮಯದಲ್ಲಿ ಸಾಧ್ಯವಾದಷ್ಟು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವಂತಹ ಕಾರ್ಯ ಚಟುವಟಿಕೆಗಳಲ್ಲಿ ತೊಡಗಬೇಕು. ಉದಾಹಣೆಗೆ ಬೆಳಗ್ಗೆ ಮತ್ತು ಸಂಜೆ ನಿತ್ಯ ನಿಯಮಿತವಾಗಿ ವಾಕಿಂಗ್ ಮಾಡುವುದು, ಧ್ಯಾನ ಮಾಡುವುದು, ಯೋಗ ಮಾಡುವುದು ಇತ್ಯಾದಿ. ನಿಸರ್ಗದ ಮಡಿಲಲ್ಲಿ ಹೆಚ್ಚು ಕಾಲ ಕಳೆದಷ್ಟೂ ಮನಸ್ಸಿನ ಮೇಲಿರುವ ಒತ್ತಡದ ಪ್ರಭಾವ ದೂರವಾಗಿ ಪ್ರಶಾಂತತೆಯ ಅನುಭವ ನಿಮ್ಮದಾಗುತ್ತದೆ.

10. ಮೆಂತ್ಯ ಕಾಳುಗಳ ಉಪಯೋಗ

10. ಮೆಂತ್ಯ ಕಾಳುಗಳ ಉಪಯೋಗ

ಮೆಂತ್ಯೆ ಕಾಳುಗಳು ದೇಹಕ್ಕೆ ತಂಪು ಎಂದು ಹೇಳುತ್ತಾರೆ. ಹಾಗಾಗಿ ರಾತ್ರಿಯ ಸಮಯದಲ್ಲಿ ಒಂದು ಚಿಕ್ಕ ಬಟ್ಟಲಿನಲ್ಲಿ ಮೆಂತೆ ಕಾಳುಗಳನ್ನು ಇಡೀ ರಾತ್ರಿ ನೆನೆಹಾಕಿ ಮರು ದಿನ ಬೆಳಗ್ಗೆ ಸ್ನಾನ ಮಾಡುವ ಸಂದರ್ಭದಲ್ಲಿ ನೆನೆಹಾಕಿದ ಮೆಂತ್ಯೆ ಕಾಳುಗಳ ಪೇಸ್ಟ್ ತಯಾರು ಮಾಡಿ ತಲೆ ಕೂದಲಿಗೆ ಹಾಗೂ ನೆತ್ತಿಯ ಭಾಗಕ್ಕೆ ಚೆನ್ನಾಗಿ ಹಚ್ಚಿ ಮಸಾಜ್ ಮಾಡಿ. ಸುಮಾರು ಒಂದು ಗಂಟೆಯ ನಂತರ ತಲೆ ಸ್ನಾನ ಮಾಡುವ ಅಭ್ಯಾಸ ಇಟ್ಟುಕೊಂಡರೆ, ಕೂದಲಿನ ಸದೃಡತೆ ಹೆಚ್ಚಾಗಿ ಸೊಂಪಾಗಿ ಬೆಳೆಯುವುದರ ಜೊತೆಗೆ ಸುಂದರವಾದ ತಲೆ ಕೂದಲು ನಿಮ್ಮದಾಗುತ್ತದೆ.

English summary

Effective Tips for Hair Care during Pregnancy in Kannada

Here we are discussing about EffectiveTips for Hair Care during Pregnancy. Read more.
X