For Quick Alerts
ALLOW NOTIFICATIONS  
For Daily Alerts

ಗರ್ಭಧಾರಣೆ ತಡೆಯುವ ಬಗ್ಗೆ ಇರುವ ತಪ್ಪು ಕಲ್ಪನೆಗಳು

|

ಮದುವೆಯಾದ ದಂಪತಿಗೆ ಮಗು ಪಡೆಯಲು ಇಷ್ಟವಿಲ್ಲದೆ ಇರುವಂತಹ ಸಂದರ್ಭದಲ್ಲಿ ಅವರು ಹಲವಾರು ರೀತಿಯ ಗರ್ಭನಿರೋಧಕ ವಿಧಾನಗಳನ್ನು ಬಳಸಿಕೊಳ್ಳುವರು. ಆದರೆ ಇದರಲ್ಲಿ ಕೆಲವು ಗರ್ಭನಿರೋಧಕ ವಿಧಾನಗಳ ಬಗ್ಗೆ ಹಲವಾರು ತಪ್ಪು ಕಲ್ಪನೆಗಳು ಇವೆ. ಕೆಲವರು ಯಾವ್ಯಾವುದೋ ಕ್ರಮಗಳನ್ನು ತೆಗೆದುಕೊಂಡು ಗರ್ಭ ನಿರೋಧಕ ಮಾಡಲು ಪ್ರಯತ್ನಿಸುವರು.

Common Myths About Birth Control

ಈ ಲೇಖನದಲ್ಲಿ ನಿಮ್ಮಲ್ಲಿ ಇರುವಂತಹ ಕೆಲವು ತಪ್ಪು ಕಲ್ಪನೆಗಳನ್ನು ದೂರ ಮಾಡುವ ಪ್ರಯತ್ನ ಮಾಡಲಾಗಿದೆ. ಲೇಖನ ಸಂಪೂರ್ಣವಾಗಿ ಓದಿಕೊಂಡು ನೀವು ಇದರ ವಿವರ ಪಡೆಯಿರಿ.

ಪೂರ್ವ ಸ್ಖಲನದಿಂದ ಗರ್ಭಧರಿಸುವರೇ?

ಪೂರ್ವ ಸ್ಖಲನದಿಂದ ಗರ್ಭಧರಿಸುವರೇ?

ಪುರುಷರು ಲೈಂಗಿಕವಾಗಿ ಉದ್ರೇಕಕ್ಕೆ ಒಳಗಾದ ವೇಳೆ ಪೂರ್ವ ಸ್ಖಲನವು ಉಂಟಾಗುವುದು. ಸಾಮಾನ್ಯವಾಗಿ ಪುರುಷರಿಗೆ ಇಂತಹ ಸಮಯದಲ್ಲಿ ವೀರ್ಯವು ಬರುವುದಿಲ್ಲ. ಆದರೆ ಅದೇ ಮಾದರಿಯ ತೆಳುವಾದ ದ್ರವವು ಬರುವುದು. ಇದು ಬಳಿಕ ವೀರ್ಯದೊಂದಿಗೆ ಮಿಶ್ರಣವಾಗುವುದು.

ಆದರೆ ಒಂದು ಅಧ್ಯಯನದ ಪ್ರಕಾರ ಪುರುಷರಲ್ಲಿ ಪೂರ್ವ ಸ್ಖಲನದ ವೇಳೆ ಉಂಟಾಗುವಾಗ ಅದರಲ್ಲಿ ಶೇ.40ರಷ್ಟು ವೀರ್ಯವು ಇರುವುದು. ಹೀಗಾಗಿ ಲೈಂಗಿಕ ಕ್ರಿಯೆ ವೇಳೆ ವೀರ್ಯ ಬರುವ ಮೊದಲು ಹೊರಗಡೆ ತೆಗೆಯುವುದು ಅಥವಾ ತಡೆಯುವುದು ಅಷ್ಟೊಂದು ಪರಿಣಾಮಕಾರಿ ಆಗದು. ವೀರ್ಯ ಬರುವ ಮೊದಲೇ ಜನನಾಂವನ್ನು ಪುರುಷ ಹೊರಗೆ ತೆಗೆದರೂ ಪೂರ್ವ ಸ್ಖಲನ ವೇಳೆ ಬಂದಿರುವಂತಹ ವೀರ್ಯದಿಂದ ಮಹಿಳೆಯು ಗರ್ಭ ಧರಿಸುವ ಸಾಧ್ಯತೆಯು ಇರುವುದು.

ಋತುಚಕ್ರದ ವೇಳೆ ಲೈಂಗಿಕ ಕ್ರಿಯೆ ನಡೆಸಿದರೆ, ಗರ್ಭ ಧರಿಸುವುದಿಲ್ಲವೇ?

ಋತುಚಕ್ರದ ವೇಳೆ ಲೈಂಗಿಕ ಕ್ರಿಯೆ ನಡೆಸಿದರೆ, ಗರ್ಭ ಧರಿಸುವುದಿಲ್ಲವೇ?

ಋತುಚಕ್ರದ ವೇಳೆ ಲೈಂಗಿಕ ಕ್ರಿಯೆ ನಡೆಸುವುದು ಕಷ್ಟವಾದರೂ ಈ ಸಂದರ್ಭದಲ್ಲಿ ಗರ್ಭ ಧರಿಸುವ ಸಾಧ್ಯತೆಯು ತುಂಬಾ ಕಡಿಮೆ ಇರುವುದು. ಆದರೆ ಅಪರೂಪದಲ್ಲೊಮ್ಮೆ ಗರ್ಭ ಧರಿಸುವ ಸಾಧ್ಯತೆಯು ಇರುವುದು. ಋತುಚಕ್ರವು ಅಂಡೋತ್ಪತ್ತಿಯಿಂದಾಗಿ ಆಗುವಂತಹ ರಕ್ತಸ್ರಾವವೆಂದು ನೀವು ಅನಿಸಬಹುದು. ಅದೇ ರೀತಿಯಾಗಿ ಈ ವೇಳೆ ಗರ್ಭಕೋಶವು ಅಂಡಾಣು ಬಿಡುಗಡೆ ಮಾಡುವ ಸಾಧ್ಯತೆಯು ಇರುವುದು.ಋತುಚಕ್ರದ ವೇಳೆ ಕೂಡ ಅಂಡಾಣು ಬಿಡುಗಡೆಯಾಗುವ ಸಾಧ್ಯತೆಗಳು ಇರುವುದು. ಹೀಗಾಗಿ ನೀವು ಋತುಚಕ್ರದ ವೇಳೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೂ ಗರ್ಭ ಧರಿಸುವಂತಹ ಸಾಧ್ಯತೆಗಳು ಇವೆ.

ವೀರ್ಯವು ಮೂರು ದಿನಗಳ ಕಾಲ ಅಂಡಾಣುವನ್ನು ಫಲವತ್ತತೆಗೊಳಿಸುವ ಸಾಮರ್ಥ್ಯ ಹೊಂದಿದೆ. ಋತುಚಕ್ರದ ಕೊನೆಯ ದಿನಗಳಲ್ಲಿ ನೀವು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೆ ಮತ್ತು ಕೆಲವು ದಿನಗಳ ಬಳಿಕ ಅಂಡೋತ್ಪತ್ತಿಯಾದರೆ ಆಗ ಗರ್ಭಧರಿಸುವ ಸಾಧ್ಯತೆಯು ಇರುವುದು.

ಗುದ ಸಂಭೋಗದಿಂದ ಗರ್ಭ ಧರಿಸುವ ಸಾಧ್ಯತೆಯು ಇದೆಯಾ?

ಗುದ ಸಂಭೋಗದಿಂದ ಗರ್ಭ ಧರಿಸುವ ಸಾಧ್ಯತೆಯು ಇದೆಯಾ?

ಇದರ ಸಾಧ್ಯತೆಯು ತುಂಬಾ ಕಡಿಮೆ ಇರುವುದು. ಆದರೆ ಗುದ ಸಂಭೋಗದಿಂದ ಗರ್ಭ ಧರಿಸುವ ಸಾಧ್ಯತೆಯು ಇರುವುದು. ಕ್ರಿಯೆಯ ವೇಳೆ ವೀರ್ಯವು ಗುದದಿಂದ ಯೋನಿಗೆ ಪ್ರವೇಶಿಸಬಹುದು. ಯೋನಿ ಸಮೀಪ ಸ್ಖಲನವು ನಡೆದರೆ ಹೀಗ ಆಗಬಹುದು. ನೀವು ಅಥವಾ ನಿಮ್ಮ ಸಂಗಾತಿಯ ಬೆರಳುಗಳಲ್ಲಿ ವೀರ್ಯವು ಇದ್ದರೆ ಮತ್ತು ಅದು ಯೋನಿಗೆ ತಗುಲಿ, ಆ ವೇಳೆ ಮಹಿಳೆಯು ಅಂಡೋತ್ಪತ್ತಿ ಮಾಡುತ್ತಲಿದ್ದರೆ, ಆಗ ಖಂಡಿತವಾಗಿಯೂ ಗರ್ಭಧಾರಣೆಯಾಗುವುದು. ಗರ್ಭಧಾರಣೆ ತಡೆಯಲು ನೀವು ಕಾಂಡೋಮ್ ಬಳಸಿ ಮತ್ತು ಇದು ಲೈಂಗಿಕವಾಗಿ ಹರಡುವಂತಹ ಕಾಯಿಲೆಗಳಿಂದಲೂ ನಿಮ್ಮನ್ನು ದೂರ ಮಾಡುವುದು. ಯೋನಿ ಸಂಭೋಗಕ್ಕಿಂತಲೂ ಗುದ ಸಂಭೋಗದ ವೇಳೆ ಲೈಂಗಿಕ ರೋಗಗಳು ಹರಡುವ ಸಾಧ್ಯತೆಯು ಹೆಚ್ಚಾಗಿರುವುದು.

ಬಾಯಿಯ ಸೆಕ್ಸ್ ನಿಂದ ಗರ್ಭ ಧರಿಸಬಹುದೇ?

ಬಾಯಿಯ ಸೆಕ್ಸ್ ನಿಂದ ಗರ್ಭ ಧರಿಸಬಹುದೇ?

ಬಾಯಿ ಸೆಕ್ಸ್ ನಿಂದ ಹಾಗೆ ಗರ್ಭ ಧರಿಸಲು ಸಾಧ್ಯವಾಗದು. ನೀವು ಇದಕ್ಕಾಗಿ ವೀರ್ಯವನ್ನು ಯೋನಿಯೊಳಗೆ ತಲುಪಿಸಿದರೆ ಆಗ ಮಾತ್ರ ಗರ್ಭಧರಿಸುವ ಸಾಧ್ಯತೆಯು ಇರುವುದು. ಯೋನಿ ವೇಳೆ ಸ್ಖಲನವಾದರೆ ಅಥವಾ ಯೋನಿ ಬಳಿಯಲ್ಲಿ ಉದ್ರೇಕಗೊಂಡಿರುವ ಜನನಾಂಗವನ್ನು ಇಟ್ಟರೆ ಆಗ ಗರ್ಭಧರಿಸುವ ಸಾಧ್ಯತೆಯು ಇರುವುದು. ವೀರ್ಯವನ್ನು ಕೈಯಲ್ಲಿ ಹಿಡಿದುಕೊಂಡು, ಅದರಿಂದ ಯೋನಿಯನ್ನು ಮುಟ್ಟಿದರೆ ಆಗ ಖಂಡಿತವಾಗಿಯೂ ಗರ್ಭಧರಿಸುವ ಸಾಧ್ಯತೆಯು ಇದೆ. ಬಾಯಿಯ ಸೆಕ್ಸ್ ಮೂಲಕ ಲೈಂಗಿಕ ರೋಗಗಳು ಹರಡುವುದು.

ವೀರ್ಯ ನುಂಗಿದರೆ ಅದರಿಂದ ಗರ್ಭ ಧರಿಸುವ ಸಾಧ್ಯತೆಯು ಇದೆಯಾ?

ವೀರ್ಯ ನುಂಗಿದರೆ ಅದರಿಂದ ಗರ್ಭ ಧರಿಸುವ ಸಾಧ್ಯತೆಯು ಇದೆಯಾ?

ನೀವು ವಿರ್ಯವನ್ನು ನುಂಗಿದರೆ, ಆಗ ದೇಹವು ಅದನ್ನು ಒಂದು ಆಹಾರವಾಗಿ ಪರಿಗಣಿಸುವುದು. ಹೀಗಾಗಿ ವಿರ್ಯವು ಹೊಟ್ಟೆ ಹಾಗೂ ಕರುಳಿನಲ್ಲಿ ಕೊಲ್ಲಲ್ಪಡುವುದು. ಕೆಲವು ಉಳಿದರೂ ಅದು ರಕ್ತದ ಮೂಲಕ ಗರ್ಭಕೋಶಕ್ಕೆ ತಲುಪುವ ಸಾಧ್ಯತೆಯು ತೀರ ಕಡಿಮೆ.

ಬಟ್ಟೆ ಧರಿಸುವುದರಿಂದ ಗರ್ಭ ಧರಿಸುವುದೇ?

ಬಟ್ಟೆ ಧರಿಸುವುದರಿಂದ ಗರ್ಭ ಧರಿಸುವುದೇ?

ಬಟ್ಟೆ ಧರಿಸಿದ್ದರೆ, ಆಗ ವೀರ್ಯವು ಯೋನಿಗೆ ತಲುಪುವುದನ್ನು ತಡೆಯಬಹುದು. ವೀರ್ಯವು ನಿಮ್ಮ ಒಳ ಉಡುಪನ್ನು ದಾಟಿ ಮುಂದಕ್ಕೆ ಹೋಗಬಹುದು. ಆದರೆ ಇದರ ಸಾಧ್ಯತೆಯು ತುಂಬಾ ಕಡಿಮೆ. ಉಡುಪು ತುಂಬಾ ದಪ್ಪಗಿದ್ದರೆ ಅಥವಾ ಒಂದೆರಡು ಒಳ ಉಡುಪು ಇದ್ದರೆ ಆಗ ವೀರ್ಯವು ಯೋನಿಯನ್ನು ತಲುಪುವುದಿಲ್ಲ.

ಗರ್ಭ ಧರಿಸಿದ್ದರೂ ಮತ್ತೆ ಗರ್ಭ ಧರಿಸಬಹುದೇ?

ಗರ್ಭ ಧರಿಸಿದ್ದರೂ ಮತ್ತೆ ಗರ್ಭ ಧರಿಸಬಹುದೇ?

ಇದರ ಸಾಧ್ಯತೆಯು ತುಂಬಾ ಕಡಿಮೆ ಮತ್ತು ಗರ್ಭಧಾರಣೆ ವೇಳೆ ದೇಹದಲ್ಲಿ ಹಾರ್ಮೋನ್ ಗಳು ಬದಲಾಗುವುದು. ಇದರಿಂದಾಗಿ ಗರ್ಭಧಾರಣೆ ವೇಳೆ ಅಂಡೋತ್ಪತ್ತಿ ಆಗುವುದಿಲ್ಲ. ಹೀಗಾಗಿ ನೀವು ಮತ್ತೆ ಗರ್ಭ ಧರಿಸುವ ಸಾಧ್ಯತೆಯು ಇಲ್ಲ. ಗರ್ಭಧಾರಣೆ ವೇಳೆ ಅಂಡೋತ್ಪತ್ತಿ ಮಾಡುವ ಮಹಿಳೆಯರ ಸಂಖ್ಯೆಯು ತುಂಬಾ ಕಡಿಮೆ ಇರುವುದು. ಇದು ಮತ್ತೊಂದು ಗರ್ಭಧಾರಣೆಗೆ ಕಾರಣವಾಗಬಹುದು. ಇದನ್ನು ಸೂಪರ್ಫೆಟೇಶನ್ ಎಂದು ಕರೆಯಲಾಗುತ್ತದೆ.

ಬಾಣಂತಿ ಗರ್ಭ ಧರಿಸುವ ಸಾಧ್ಯತೆಯು ಇದೆಯಾ?

ಬಾಣಂತಿ ಗರ್ಭ ಧರಿಸುವ ಸಾಧ್ಯತೆಯು ಇದೆಯಾ?

ಬಾಣಂತಿಯರು ಗರ್ಭ ಧರಿಸುವಂತಹ ಸಾಧ್ಯತೆಯು ತುಂಬಾ ಕಡಿಮೆ. ಆದರೆ ಸಂಪೂರ್ಣವಾಗಿ ಇಲ್ಲವೆನ್ನಲಾಗದು. ಬಾಣಂತಿಯಾಗಿದ್ದರೂ ನೀವು ಗರ್ಭ ಧರಿಸಬಹುದು. ಸ್ತನಪಾನ ವೇಳೆ ದೇಹದಲ್ಲಿ ಹಾರ್ಮೋನ್ ಮಟ್ಟವು ಹೆಚ್ಚಾಗುವುದು ಮತ್ತು ಇದರಿಂದ ಅಂಡೋತ್ಪತ್ತಿಯು ಆಗದು. ಬಾಣಂತಿಯರು ಮೊದಲ ಮೂರು ತಿಂಗಳಲ್ಲಿ ಗರ್ಭ ಧರಿಸುವ ಸಾಧ್ಯತೆಯು ಇರುವುದಿಲ್ಲ. ಆದರೆ ಇದರ ಬಳಿಕ ಗರ್ಭ ಧರಿಸುವ ಸಾಧ್ಯತೆಯು ಇರುವುದು. ನೀವು ಇದರ ಬಗ್ಗೆ ವೈದ್ಯರ ಜತೆಗೆ ಸಮಾಲೋಚಿಸಿ.

ಮಹಿಳೆ ಪರಾಕಾಷ್ಠೆ ತಲುಪದೆ ಇದ್ದರೆ ಗರ್ಭ ಧರಿಸುವಳೇ?

ಮಹಿಳೆ ಪರಾಕಾಷ್ಠೆ ತಲುಪದೆ ಇದ್ದರೆ ಗರ್ಭ ಧರಿಸುವಳೇ?

ಮಹಿಳೆಯರಲ್ಲಿನ ಪರಾಕಾಷ್ಠೆಯು ಗರ್ಭಧಾರಣೆ ಮೇಲೆ ಯಾವುದೇ ಪರಿಣಾಮ ಬೀರದು. ಅಂಡಾಣುವನ್ನು ವೀರ್ಯವು ಫಲವತ್ತತೆ ಮಾಡಿದ ಯಾವುದೇ ಸಂದರ್ಭಧಲ್ಲಿ ಗರ್ಭ ಧರಿಸುವ ಸಾಧ್ಯತೆಯು ಇರುವುದು. ಇದರಲ್ಲಿ ಮಹಿಳೆ ಪರಾಕಾಷ್ಠೆ ತಲುಪಿರುವಳೇ ಅಥವಾ ಇಲ್ಲವೇ ಎನ್ನುವುದು ಲೆಕ್ಕಕ್ಕೆ ಬರದು.

ಲೈಂಗಿಕ ಕ್ರಿಯೆ ಬಳಿಕ ಸ್ನಾನ ಮಾಡಿಕೊಂಡರೆ ಗರ್ಭ ಧರಿಸುವುದಿಲ್ಲವೇ?

ಲೈಂಗಿಕ ಕ್ರಿಯೆ ಬಳಿಕ ಸ್ನಾನ ಮಾಡಿಕೊಂಡರೆ ಗರ್ಭ ಧರಿಸುವುದಿಲ್ಲವೇ?

ನೀವು ಲೈಂಗಿಕ ಕ್ರಿಯೆ ಬಳಿಕ ಸ್ನಾನ ಮಾಡಿ, ಯೋನಿಯನ್ನು ಬೇರೆ ಯಾವುದೇ ಲಿಕ್ವಿಡ್ ಹಾಕಿ ತೊಳೆದರೂ ಅದು ಗರ್ಭ ಧರಿಸುವುದನ್ನು ತಡೆಯದು. ನೀವು ತೊಳೆಯುವ ವೇಳೆ ಅದು ಈಗಾಗಲೇ ಗರ್ಭಕೋಶಕ್ಕೆ ತಲುಪಿರುವುದು. ನೀವು ತೊಳೆದರೆ ಅದರಿಂದ ಮತ್ತಷ್ಟು ವೀರ್ಯವು ಮೇಲೆ ಬರುವುದು ಮತ್ತು ಇದರಿಂದ ಯೋನಿಯ

ಸೋಂಕು ಅಥವಾ ಲೈಂಗಿಕವಾಗಿ ಹರಡುವ ಕಾಯಿಲೆಯು ಬರುವುದು.

ಮಹಿಳೆಯಲ್ಲಿ ತಿಂಗಳಲ್ಲಿ ಒಂದು ಸಲ ಮಾತ್ರ ಅಂಡೋತ್ಪತ್ತಿ ಆಗುವುದು ಎಂದು ಹೇಳಲಾಗುತ್ತದೆ. ಬೇರೆ ದಿನಗಳಲ್ಲಿ ಲೈಂಗಿಕ ಕ್ರಿಯೆ ಸುರಕ್ಷಿತವೇ?

ಮಹಿಳೆಯಲ್ಲಿ ತಿಂಗಳಲ್ಲಿ ಒಂದು ಸಲ ಮಾತ್ರ ಅಂಡೋತ್ಪತ್ತಿ ಆಗುವುದು ಎಂದು ಹೇಳಲಾಗುತ್ತದೆ. ಬೇರೆ ದಿನಗಳಲ್ಲಿ ಲೈಂಗಿಕ ಕ್ರಿಯೆ ಸುರಕ್ಷಿತವೇ?

ಅಂಡೋತ್ಪತ್ತಿ ಆಗುವುದು ತಿಂಗಳಲ್ಲಿ ಒಂದು ಸಲ ಎನ್ನುವುದು ನಿಜ. ಆದರೆ ಅಂಡೋತ್ಪತ್ತಿಗೆ ಹತ್ತಿರ ಬರುವಂತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಆಗ ಗರ್ಭ ಧರಿಸುವ ಸಾಧ್ಯತೆಯು ಇರುವುದು. ಯಾಕೆಂದರೆ ಮಹಿಳೆಯರ ದೇಹದಲ್ಲಿ ವೀರ್ಯವು ಐದು ದಿನಗಳ ಕಾಲ ಉಳಿಯುವುದು. ಆರು ದಿನಗಳ ಒಳಗಡೆ ವೀರ್ಯವು ಅಂಡಾಣುವನ್ನು ಫಲವತ್ತವಾಗಿ ಮಾಡುವುದು.

ಇಲ್ಲಿರುವಂತಹ ದೊಡ್ಡ ಸಮಸ್ಯೆ ಏನೆಂದರೆ ಅಂಡೋತ್ಪತ್ತಿ ದಿನವು ಪ್ರತೀ ತಿಂಗಳು ಬದಲಾಗುತ್ತಲೇ ಇರುವುದು. ಯಾವಾಗ ಫಲವತ್ತರಾಗಿ ಇರುವರು ಎನ್ನುವುದನ್ನು ಕಂಡುಹಿಡುವುದು ತುಂಬಾ ಕಷ್ಟ. ಋತುಚಕ್ರ, ಉಷ್ಣತೆ, ಗರ್ಭಕಂಠ ಲೋಳೆ ಮತ್ತು ಗರ್ಭಕಂಠವನ್ನು ನೋಡಿಕೊಳ್ಳಬೇಕು. ಇದು ಆವರ್ತನ ವಿಧಾನವಾಗಿದೆ. ಇದರಲ್ಲಿ ಗರ್ಭ ನಿರೋಧಕವು ಶೇ.76ರಷ್ಟು ಮಾತ್ರ ಕೆಲಸ ಮಾಡುವುದು.

ನಿಂತು ಮಾಡುವ ಲೈಂಗಿಕ ಕ್ರಿಯೆ ಅಥವಾ ಮಹಿಳೆ ಮೇಲ್ಭಾಗದಲ್ಲಿದ್ದ ವೇಳೆ ಗರ್ಭಧಾರಣೆ ತಡೆಯಬಹುದೇ?

ನಿಂತು ಮಾಡುವ ಲೈಂಗಿಕ ಕ್ರಿಯೆ ಅಥವಾ ಮಹಿಳೆ ಮೇಲ್ಭಾಗದಲ್ಲಿದ್ದ ವೇಳೆ ಗರ್ಭಧಾರಣೆ ತಡೆಯಬಹುದೇ?

ಕೆಲವೊಂದು ಲೈಂಗಿಕ ಭಂಗಿಗಳು ಯೋನಿಗೆ ವೀರ್ಯವು ಪ್ರವೇಶಿಸದಂತೆ ತಡೆಯುವುದು ಎಂದು ಕೆಲವರು ಭಾವಿಸಿರುವರು. ಆದರೆ ಇದು ನಿಜವಲ್ಲ. ಗುರುತ್ವಾಕರ್ಷಣೆಗೆ ವೀರ್ಯವು ಈಜಿಕೊಂಡು ಹೋಗುವುದು. ಸ್ಖಲನವಾದ ವೇಳೆ ವೀರ್ಯವು ಹೊರಗೆ ಬಿದ್ದರೂ ಆಗ ಸ್ವಲ್ಪ ಪ್ರಮಾಣದಲ್ಲಿ ಅದು ಪ್ರವೇಶಿಸಿ, ಗರ್ಭಧರಿಸುವ ಸಾಧ್ಯತೆಯು ಇರುವುದು.

ಕಾಂಡೋಮ್ ಇಲ್ಲದಿರುವ ವೇಳೆ ಪ್ಲಾಸ್ಟಿಕ್ ಬಳಕೆ ಮಾಡಬಹುದೇ?

ಕಾಂಡೋಮ್ ಇಲ್ಲದಿರುವ ವೇಳೆ ಪ್ಲಾಸ್ಟಿಕ್ ಬಳಕೆ ಮಾಡಬಹುದೇ?

ನೀವೇ ತಯಾರಿಸಿದ ಕಾಂಡೋಮ್ ಖಂಡಿತವಾಗಿಯೂ ಬಳಕೆ ಮಾಡಬಾರದು. ಪ್ಲಾಸ್ಟಿಕ್, ಬಲೂನ್ ಇತ್ಯಾದಿಗಳನ್ನು ಬಳಸಿದರೆ ಅದು ಖಂಡಿವಾಗಿಯೂ ಗರ್ಭ ನಿರೋಧಕವಾಗದು. ಇದು ಸರಿಯಾಗಿ ಹೊಂದಿಕೊಳ್ಳದು ಮತ್ತು ಬಿದ್ದು ಹೋಗಬಹುದು. ಇದು ಸುಲಭವಾಗಿ ಹರಿದು ಹೋಗಬಹುದು. ಕಾಂಡೋಮ್ ನ್ನು ಲೈಂಗಿಕ ಕ್ರಿಯೆ ವೇಳೆ ಸುರಕ್ಷಿತವಾಗಿ ಇರುವಂತಹ ತಯಾರಿಸಲಾಗುತ್ತದೆ. ಇದನ್ನು ತುಂಬಾ ಪರೀಕ್ಷಿಸಿ ತಯಾರಿಸಲಾಗುತ್ತದೆ.

ಮೊದಲ ಸಲ ಸೆಕ್ಸ್ ಮಾಡಿದರೂ ಗರ್ಭ ಧರಿಸಬಹುದೇ?

ಮೊದಲ ಸಲ ಸೆಕ್ಸ್ ಮಾಡಿದರೂ ಗರ್ಭ ಧರಿಸಬಹುದೇ?

ಅಂಡೋತ್ಪತ್ತಿ ಮಾಡುವ ಸಂದರ್ಭದಲ್ಲಿ ನೀವು ಯಾವುದೇ ಸುರಕ್ಷಿತ ಕ್ರಮ ತೆಗೆದುಕೊಳ್ಳದೆ ಲೈಂಗಿಕ ಕ್ರಿಯೆ ನಡೆಸಿದರೆ ಅದರಿಂದ ಗರ್ಭ ಧರಿಸುವ ಸಾಧ್ಯತೆಯು ಇರುವುದು. ನೀವು ಈ ಮೊದಲು ಎಷ್ಟು ಸಲ ಲೈಂಗಿಕ ಕ್ರಿಯೆ ನಡೆಸಿದ್ದೀರಿ ಎನ್ನುವುದು ಇಲ್ಲಿ ಲೆಕ್ಕಕ್ಕೆ ಬರುವುದಿಲ್ಲ.

ಸ್ನಾನ ಮಾಡುವುದು, ಮೂತ್ರ ವಿಸರ್ಜನೆಯಿಂದ ಗರ್ಭಧಾರಣೆ ತಡೆಯಬಹುದೇ?

ಸ್ನಾನ ಮಾಡುವುದು, ಮೂತ್ರ ವಿಸರ್ಜನೆಯಿಂದ ಗರ್ಭಧಾರಣೆ ತಡೆಯಬಹುದೇ?

ಯೋನಿಯ ಹೊರಭಾಗದಲ್ಲಿ ಇರುವಂತಹ ವೀರ್ಯವು ಲೈಂಗಿಕ ಕ್ರಿಯೆ ಬಳಿಕ ಸ್ನಾನ ಮಾಡಿದರೆ ತೊಳೆದು ಹೋಗುವುದು. ಆದರೆ ಒಳಭಾಗದಲ್ಲಿನ ವೀರ್ಯವು ಹಾಗೆ ಇರುವುದು. ಇದು ಹಾಗೆ ಗರ್ಭಕೋಶಕ್ಕೆ ತಲುಪಬಹುದು. ಮೂತ್ರ ವಿಸರ್ಜನೆಯು ವೀರ್ಯವನ್ನು ದೂರ ಮಾಡದು. ಯಾಕೆಂದರೆ ಇದು ಯೋನಿಯ ಒಂದು ಸಣ್ಣ ರಂಧ್ರದಿಂದ ಬರುವುದು.

ಗರ್ಭ ನಿರೋಧಕ ಮಾತ್ರೆಗಳ ಸೇವನೆ ಆರಂಭಿಸಿರುವೇ? ಗರ್ಭ ನಿರೋಧಕ ಬಳಕೆ ನಿಲ್ಲಿಸಬಹುದೇ?

ಮಾತ್ರೆಗಳಲ್ಲಿ ಇರುವಂತಹ ಹಾರ್ಮೋನ್ ಕೆಲಸ ಮಾಡಲು ಸಮಯ ಬೇಕಾಗುವುದು. ಇದು ಅಂಡೋತ್ಪತ್ತಿ ತಡೆಯಬಹುದು ಮತ್ತು ಗರ್ಭಕಂಠದ ಸುತ್ತಲಿನ ಲೋಳೆಯನ್ನು ದಪ್ಪ ಮಾಡಬಹುದು. ಇದರಿಂದ ವೀರ್ಯವು ಗರ್ಭಕೋಶದೊಳಗೆ ಹೋಗಲು ಕಷ್ಟವಾಗಬಹುದು. ಮಾತ್ರೆ ಸೇವನೆ ಆರಂಭಿಸಿದ ಮೊದಲ ಏಳು ದಿನಗಳ ಕಾಲ ಕಾಂಡೋಮ್ ಬಳಕೆ ಮಾಡಬೇಕು ಎಂದು ವೈದ್ಯಕೀಯ ತಜ್ಞರು ಹೇಳಿರುವರು.

English summary

Common Birth Control Myths Debunked in Kannada

Here we are discussing about Common Myths About Birth Control. There’s also confusion about how you can conceive, too. These questions and answers separate fact from fiction. Read more.
X
Desktop Bottom Promotion