For Quick Alerts
ALLOW NOTIFICATIONS  
For Daily Alerts

ಹೆಣ್ಣುಮಕ್ಕಳು ತಿಳಿಯಬೇಕಾದ 'ಗರ್ಭಕೋಶದ ಗಡ್ಡೆ' ರೋಗದ ಸೂಚನೆ ಹಾಗೂ ಲಕ್ಷಣಗಳು

|

ಸಾಮಾನ್ಯವಾಗಿ ಪ್ರಕೃತಿ ನಿಯಮದಂತೆ ಮಹಿಳೆಯರಲ್ಲಿ ಪ್ರೌಢಾವಸ್ಥೆಗೆ ಬಂದ ಬಳಿಕ 40 ಹರೆಯದ ತನಕ ಪ್ರತೀ ತಿಂಗಳು ಋತುಚಕ್ರವು ಆಗುತ್ತಲಿರುವುದು. ಋತುಚಕ್ರದ ವೇಳೆ ದೇಹದಿಂದ ರಕ್ತವು ಹೊರಗೆ ಬರುವುದು. ಇದನ್ನು ಋತುಚಕ್ರದ ರಕ್ತಸ್ರಾವ ಎಂದು ಕರೆಯಲಾಗುತ್ತದೆ. ಇದು ಸಹಜ ಕ್ರಿಯೆಯಾಗಿದೆ. ಇದು ಗರ್ಭಕೋಶದ ಪ್ರಮುಖ ಕ್ರಿಯೆಯಾಗಿದೆ. ಆದರೆ ಇದರ ಹೊರತಾಗಿ ರಕ್ತದ ಕಲೆಗಳು ಕಂಡುಬಂದರೆ ಆಗ ಮಹಿಳೆಯರು ಎಚ್ಚರಿಕೆ ವಹಿಸುವುದು ಅತೀ ಅಗತ್ಯವಾಗಿರುವುದು.

ಯಾಕೆಂದರೆ ಇಂತಹ ರಕ್ತದ ಕಲೆಗಳು ಗರ್ಭಕೋಶದಲ್ಲಿನ ಗಡ್ಡೆಯ ಲಕ್ಷಣ ಆಗಿರಬಹುದು. ಕೆಲವೊಂದು ಸಲ ಇದು ಬೇರೆ ಕಾರಣದಿಂದ ಬಂದರೂ ಇದು ಗರ್ಭಕೋಶದಲ್ಲಿನ ಲಕ್ಷಣವೂ ಆಗಿರಬಹುದು. ಇದನ್ನು ಕಡೆಗಣಿಸಿದರೆ, ಆಗ ಅದು ದೊಡ್ಡ ಮಟ್ಟದ ಆರೋಗ್ಯ ಸಮಸ್ಯೆಗೆ ಕಾರಣವಾಗಿ, ಪ್ರಾಣಹಾನಿ ಕೂಡ ಸಂಭವಿಸಬಹುದು. ಇಂದಿನ ದಿನಗಲ್ಲಿ ಮಹಿಳೆಯರಲ್ಲಿ ಗರ್ಭಕೋಶದ ಗಡ್ಡೆಯು ಸಾಮಾನ್ಯ ಸಮಸ್ಯೆಯಾಗುತ್ತಿದೆ ಎಂದು ಅಧ್ಯಯನಗಳು ಹೇಳಿವೆ. ಗರ್ಭಕೋಶದಲ್ಲಿ ಗಡ್ಡೆ ಇದೆ ಎಂದು ತಿಳಿಸುವ ಕೆಲವೊಂದು ಲಕ್ಷಣಗಳು ಕೂಡ ದೇಹದಲ್ಲಿ ಕಾಣಿಸಿಕೊಳ್ಳುವುದು. ಅವು ಯಾವುದು ಎಂದು ನೀವು ಈ ಲೇಖನ ಮೂಲಕ ತಿಳಿಯಿರಿ.

ವಾಕರಿಕೆ ಮತ್ತು ವಾಂತಿ

ವಾಕರಿಕೆ ಮತ್ತು ವಾಂತಿ

ವಾಕರಿಕೆ ಮತ್ತು ವಾಂತಿಯು ಗರ್ಭಧಾರಣೆಯ ಸಾಮಾನ್ಯ ಲಕ್ಷಣಗಳು ಆಗಿದೆ. ಆದರೆ ನೀವು ಗರ್ಭಿಣಿ ಅಲ್ಲದೆ ಇದ್ದರೆ ಆಗ ಗರ್ಭಕೋಶದಲ್ಲಿ ಗಡ್ಡೆ ಇದೆ ಎಂದು ತಿಳಿಯಬೇಕು. ಹಾರ್ಮೋನು ವೈಪರಿತ್ಯದಿಂದಾಗಿ ಈ ಸಮಸ್ಯೆಯು ಕಾಣಿಸಿಕೊಂಡಿರಬಹುದು.

Most Read: ಗರ್ಭಿಣಿಯರ ಬೆನ್ನೇರಿ ಕಾಡುವ ಪಿಸಿಓಎಸ್ ಎಂಬ ಪೆಡಂಭೂತ

ಹೊಟ್ಟೆ ತುಂಬಿದಂತೆ ಆಗುವುದು

ಹೊಟ್ಟೆ ತುಂಬಿದಂತೆ ಆಗುವುದು

ಗರ್ಭಕೋಶದಲ್ಲಿ ಗಡ್ಡೆ ಕಾಣಿಸಿಕೊಂಡರೆ, ಆಗ ಹೊಟ್ಟೆಯಲ್ಲಿ ಕೂಡ ಇದು ಸ್ಥಾನ ಪಡೆಯುವುದು. ಇದರಿಂದಾಗಿ ನಿಮಗೆ ಹೊಟ್ಟೆ ತುಂಬಿದಂತೆ ಆಗಬಹುದು. ಹೊಟ್ಟೆಯಲ್ಲಿ ನಿಮಗೆ ಭಾರವೆನಿಸುವ ಭಾವನೆ ಬರಬಹುದು ಮತ್ತು ಇದೇ ಸಮಯದಲ್ಲಿ ಹೊಟ್ಟೆ ತುಂಬಿದಂತೆ ಭಾವನೆ ಆಗಬಹುದು. ಇದರಿಂದಾಗಿ ನಿಮಗೆ ಹಸಿವು ಕಡಿಮೆ ಆಗಬಹುದು.

ಕಾಲು ಮತ್ತು ಬೆನ್ನು ನೋವು ನಿರಂತರವಾಗಿ ಕಾಡುವುದು

ಕಾಲು ಮತ್ತು ಬೆನ್ನು ನೋವು ನಿರಂತರವಾಗಿ ಕಾಡುವುದು

ಈ ಲಕ್ಷಣವನ್ನು ನೀವು ತುಂಬಾ ಸುಲಭವಾಗಿ ಪತ್ತೆ ಮಾಡಬಹುದು. ಯಾವುದೇ ಕಾರಣವಿಲ್ಲದೆ ನಿಮಗೆ ಕಾಲು ಹಾಗೂ ಬೆನ್ನು ನೋವು ಕಾಣಿಸಿಕೊಳ್ಳುತ್ತಾ ಇದ್ದರೆ, ಆಗ ಇದು ಗರ್ಭಕೋಶದಲ್ಲಿನ ಗಡ್ಡೆಯ ಲಕ್ಷಣ ಆಗಿರಬಹುದು. ಈ ರೀತಿಯ ಪರಿಸ್ಥಿತಿಯಲ್ಲಿ ನೋವು ನಿರಂತರವಾಗಿ ಇರುವುದು. ಇದು ಒಂದು ಅಥವಾ ಎರಡು ದಿನ, ಕೆಲವೊಮ್ಮೆ ಅದಕ್ಕಿಂತಲೂ ಹೆಚ್ಚು ದಿನ ಇರಬಹುದು. ಇಂತಹ ಪರಿಸ್ಥಿತಿಯಲ್ಲಿ ನೀವು ವೈದ್ಯರನ್ನು ಭೇಟಿಯಾಗಿ ಅವರಿಂದ ನೋವಿಗೆ ನಿಖರ ಕಾರಣ ತಿಳಿಯಲೇಬೇಕು.

Most Read: ಗರ್ಭಾವಸ್ಥೆಯಲ್ಲಿ ಎದುರಾಗುವ ಶಿಲೀಂಧ್ರದ ಸೋಂಕನ್ನು ಗುಣಪಡಿಸಲು ಸುಲಭ ಮನೆಮದ್ದುಗಳು

ಮೂತ್ರ ವಿಸರ್ಜನೆಯಲ್ಲಿ ಬದಲಾವಣೆಗಳು

ಮೂತ್ರ ವಿಸರ್ಜನೆಯಲ್ಲಿ ಬದಲಾವಣೆಗಳು

ಮೂತ್ರ ವಿಸರ್ಜನೆಯಲ್ಲಿ ಕೆಲವೊಂದು ಬದಲಾವಣೆಗಳು ಆಗುವುದು. ಅಂದರೆ ಪದೇ ಪದೇ ಮೂತ್ರವಿಸರ್ಜಿಸಬೇಕು ಅಥವಾ ಮೂತ್ರ ವಿಸರ್ಜನೆಗೆ ಅವಸರ ಮಾಡುವುದು ಗರ್ಭಕೋಶದಲ್ಲಿ ಗಡ್ಡೆ ಇರುವುದರ ಲಕ್ಷಣವಾಗಿದೆ. ಆದರೆ ಮೂತ್ರ ವಿಸರ್ಜನೆಯಲ್ಲಿ ಬದಲಾವಣೆಗಳು ಆಗಲು ಕೆಲವು ಬೇರೆ ಕಾರಣಗಳು ಕೂಡ ಇರಬಹುದು. ಇದರಿಂದಾಗಿ ನಿಮಗೆ ಇಂತಹ ಸಮಸ್ಯೆಯು ಕಾಣಿಸಿಕೊಂಡ ಕೂಡಲೇ ನೀವು ವೈದ್ಯರನ್ನು ಭೇಟಿ ಮಾಡಿ ಅವರಿಂದ ಪರೀಕ್ಷಿಸಿಕೊಳ್ಳಿ.

English summary

Signs and symptoms of ovarian cysts every woman must know

If you experience abnormal spotting apart from your normal period cycle then it can indicate ovarian cysts. Sometimes it can be due to other factors but it is also a symptom of ovarian cyst.Nausea and vomiting are common indicators of pregnancy but if you are not pregnant then it can also indicate ovarian cyst. Hormonal imbalance can be the possible reason behind this condition.
X
Desktop Bottom Promotion