For Quick Alerts
ALLOW NOTIFICATIONS  
For Daily Alerts

ನಿಮ್ಮ ಮುದ್ದಿನ ಪುಟ್ಟ ಮಗುವಿಗೆ ಒಂದು ವರ್ಷವಾಗುವ ಮೊದಲು ನೀವು ಇಂತಹ ಆಹಾರಗಳನ್ನು ಕೊಡಬಹುದು

|

ಮನೆಯಲ್ಲಿ ಮಗುವೊಂದಿದ್ದರೆ ಆ ಮನೆಯ ನಗುವಿಗೆ ಸಂತೋಷಕ್ಕೆ ಪಾರವೇ ಇರುವುದಿಲ್ಲ . ದೊಡ್ಡವರಾದ ನಾವು ಜೀವನದ ಜಂಜಾಟದಲ್ಲಿ ಪ್ರತಿದಿನವೂ ಬಳಲುತ್ತಿರುತ್ತೇವೆ . ಒಮ್ಮೆ ನಮ್ಮ ಮನೆಯಲ್ಲಿರುವ ಮುದ್ದಾದ ಮಗುವಿನ ಮುಖ ನೋಡಿದರೆ ಸಾಕು . ಅದರ ತುಂಟಾಟ ,ನಗು , ಕೇಕೆ ತಕ್ಷಣ ನಮ್ಮ ಎಲ್ಲಾ ನೋವುಗಳನ್ನೂ ಮರೆಸುತ್ತದೆ . ಮನೆಗೆ ನೆಮ್ಮದಿ ಸಂತೋಷ ತರುವ ಅಂತಹ ಮಗುವಿನ ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮ ಪ್ರಮುಖ ಜವಾಬ್ದಾರಿ .

ನಾವಾದರೆ ನಮಗೆ ಇಂತಹದೇ ಆಹಾರ ಬೇಕು ಎಂದು ಬಾಯಿ ಬಿಟ್ಟು ಕೇಳುತ್ತೇವೆ . ಆದರೆ ಇನ್ನೂ ಮಾತೇ ಬಾರದ ಆ ಪುಟ್ಟ ಮಗು ಹೇಗೆ ತಾನೆ ಕೇಳೀತು ? ಅದರಲ್ಲೂ ಇನ್ನೂ ಒಂದು ವರ್ಷ ತುಂಬದ ಮಗುವಿಗೆ ಆಹಾರ ಕೊಡುವುದು ಜೀವನದಲ್ಲಿ ತಾಯಂದಿರಿಗೆ ಬಹಳ ಕಷ್ಟದ ಕೆಲಸ . ಒಂದು ಕೊಟ್ಟರೆ ಹೆಚ್ಚು , ಮತ್ತೊಂದು ಆಹಾರ ಕೊಟ್ಟರೆ ಕಮ್ಮಿ ಎಂಬಂತೆ ಆಗುತ್ತದೆ . ಏಕೆಂದರೆ ಆ ಮಗುವಿನ ಜೀರ್ಣಾಂಗ ವ್ಯವಸ್ಥೆ ಇನ್ನೂ ಅಭಿವೃದ್ಧಿ ಹೊಂದುತ್ತಾ ಇರುತ್ತದೆ . ಅದಕ್ಕೆ ಗಟ್ಟಿ ಪದಾರ್ಥಗಳನ್ನು ಜಿಗಿಯಲು ಹಲ್ಲುಗಳೂ ಸಹ ಬಂದಿರುವುದಿಲ್ಲ . ಹೀಗಿರುವಾಗ ಮಗುವಿಗೆ ಊಟ ಮಾಡಿಸುವ ಯಾರೇ ಆಗಿದ್ದರೂ ಬಹಳ ಜಾಗರೂಕರಾಗಿ ಇರಬೇಕಾಗಿರುವುದು ಬಹಳ ಅನಿವಾರ್ಯ. ಸಂಶೋಧಕರು ಹೇಳುವಂತೆ ಯಾವ ಮಗು ಒಂದು ವರ್ಷವಾಗುವುದಕ್ಕೆ ಮೊದಲು ಹೆಚ್ಚು ಹಣ್ಣು ತರಕಾರಿಗಳನ್ನು ತಿನ್ನಲು ಬಯಸುತ್ತದೋ ಅಂತಹ ಮಗು ಆರು ವರ್ಷವಾಗುವ ಸಮಯದಲ್ಲಿ ತರಾವರಿ ಆಹಾರಗಳನ್ನು ತಿನ್ನುವುದನ್ನು ರೂಢಿ ಮಾಡಿಕೊಂಡು ದಷ್ಟ ಪುಷ್ಟ ವಾಗುತ್ತದೆ .ಅಮ್ಮಂದಿರು ಮಗುವಿಗೆ ಅಡುಗೆ ಮಾಡಿ ಬಡಿಸಲು ಸಿದ್ಧವಾಗಿರ ಬೇಕಷ್ಟೆ. ಕೇವಲ ಹಾಲನ್ನಷ್ಟೇ ಅಲ್ಲದೆ ಬೇರೆ ಬೇರೆ ಇತರ ಗಟ್ಟಿ ಪದಾರ್ಥಗಳನ್ನು ಮಗುವಿಗೆ ಹೇಗೆ ರೂಡಿ ಮಾಡಬೇಕು ?

ಪುಟ್ಟ ಮಗುವಿಗೆ ಆಗಾಗ ಬೇರೆ ಬೇರೆ ಕಾರಣಗಳಿಂದ ಶೀತವಾಗುತ್ತಿರುತ್ತದೆ . ಇದು ಮಗುವಿನ ಉಸಿರಾಟಕ್ಕೆ ತೊಂದರೆ ಕೊಡುತ್ತಿರುತ್ತದೆ . ಹಾಗಾಗಿ ನಾವು ಮೊದಲು ಇದನ್ನು ಸರಿ ಪಡಿಸಬೇಕು . ಆಹಾರಗಳಲ್ಲೂ ಸಹ ಕೆಲವೊಂದು ತಿಂಡಿಗಳು ಮಗುವಿನ ಉಸಿರಾಟಕ್ಕೆ ನೇರ ಹೊಡೆತ ಕೊಡುತ್ತವೆ . ಉದಾಹರಣೆಗೆ ಜೇನುತುಪ್ಪ . ಅದರಲ್ಲಿ " ಕ್ಲೊಸ್ಟ್ರಿಡಿಯಮ್ ಬೊಟುಲಿನಮ್ " ಎಂಬ ಬ್ಯಾಕ್ಟೀರಿಯಾ ಇದ್ದು ಮಗುವಿನ ದೇಹದೊಳಗೆ ಫುಡ್ ಪಾಯಿಸನ್ ಆಗುವ ಸಾಧ್ಯತೆ ಇರುತ್ತದೆ . ಹಾಗಿದ್ದರೆ ನಿಮ್ಮ ಮಗುವಿಗೆ ಇನ್ನೇನೆಲ್ಲಾ ಕೊಡಬಹುದು ? ಅಕ್ಕಿ ಸರಿ ( ಪ್ಯೂರೀ ),ರಾಗಿ ಸರಿ , ತರಕಾರೀ ಸರಿ , ಕಲ್ಲಂಗಡಿ ಹಣ್ಣಿನ ಸರಿ , ಚಿಕನ್ ಪ್ಯೂರೀ ಹೀಗೆ ಆರೋಗ್ಯಕರ ಆಹಾರಗಳನ್ನು ಕೊಡಬಹುದು . ಆದರೆ ಈ ರೀತಿಯ ಒಂದು ತಿಂಡಿ ಕೊಟ್ಟರೆ , ಬೇರೆ ರೀತಿಯ ತಿಂಡಿ ತಿನಿಸನ್ನು ತಕ್ಷಣ ಕೊಡಬಾರದು . ಕನಿಷ್ಠವೆಂದರೂ ಒಂದು ಆಹಾರವನ್ನು ಬದಲಾಯಿಸಲು 3 ದಿನ ಕಾಯಬೇಕು . ಏಕೆಂದರೆ ನಿಮ್ಮ ಮಗುವಿಗೆ ನೀವೇ ಆಹಾರ ಕೊಡುವುದರಿಂದ ನೀವು ಕೊಟ್ಟ ಆಹಾರ ಅದಕ್ಕೆ ನಿಜಕ್ಕೂ ಇಷ್ಟವಾಗಿದೆಯೇ ಅಥವಾ ಅಲರ್ಜಿ ಉಂಟಾಗುತ್ತಿದೆಯೇ ಎಂಬುದನ್ನು ಗಮನಿಸಿ ಕಂಡು ಹಿಡಿಯಲು ಇದು ಒಳ್ಳೆಯ ಸಮಯ ಅಲ್ಲವೇ ?

ಬೆರ್ರಿ ಹಣ್ಣುಗಳು ನಿಮ್ಮ ಮಗುವಿಗೆ ಬಹಳ ಇಷ್ಟ

ಬೆರ್ರಿ ಹಣ್ಣುಗಳು ನಿಮ್ಮ ಮಗುವಿಗೆ ಬಹಳ ಇಷ್ಟ

ನಾವು ಹೇಗೆ ರಸ್ತೆ ಬದಿಯಲ್ಲಿ ಕಣ್ಣಿಗೆ ಕಾಣುವ ಸುಂದರ ವಸ್ತುಗಳಿಗಾಗಿ ಆಸೆ ಪಡುತ್ತೇವೆಯೋ ಪುಟ್ಟ ಮಗುವೂ ಹಾಗೆಯೇ . ಅದರ ಕಣ್ಣಿಗೆ ಪ್ರಕಾಶಮಾನವಾಗಿ ಯಾವುದೇ ವಸ್ತು ಕಂಡರೂ ಅದಕ್ಕೆ ಏನೋ ಒಂಥರಾ ಖುಷಿ . ಅದನ್ನು ಏನಾದರೂ ಮಾಡಿ ಮೊದಲು ಮುಟ್ಟಬೇಕು ಎನ್ನುವ ತವಕ . ಅದು ತಿನ್ನುವ ವಸ್ತು ಹೌದೋ ಅಲ್ಲವೋ ಒಟ್ಟಿನಲ್ಲಿ ಅದನ್ನು ಬಾಯಿಯಲ್ಲಿ ಹಾಕಿಕೊಳ್ಳಬೇಕು ಎನ್ನುವ ಆಸೆ . ಬೆರ್ರಿ ಹಣ್ಣುಗಳೂ ಅಷ್ಟೇ ಬೆಳಕಿಗೆ ಪಳಪಳನೆ ಹೊಳೆಯುತ್ತವೆ . ಇಂತಹ ರುಚಿಯಾದ ಹಣ್ಣುಗಳು ಪುಟ್ಟ ಮಗುವಿನ ಕಣ್ಣಿಗೆ ಬಿದ್ದರೆ ಬಿಡುತ್ತದೆಯೇ ? ಬಹಳ ಇಷ್ಟ ಪಟ್ಟು ತಿನ್ನುತ್ತದೆ . ಬೆರ್ರಿ ಹಣ್ಣುಗಳಲ್ಲಿ ಬೆಳೆಯುವ ಮಗುವಿಗೆ ಬೇಕಾದ ಪೋಷಕಾಂಶಗಳಿರುವುದರಿಂದ ಮಗುವಿಗೆ ಇದು ಒಂದು ಒಳ್ಳೆಯ ಹೇಳಿ ಮಾಡಿಸಿದ ಫಲಾಹಾರ.

Most Read: ಶೀತ ಜ್ವರದ ವೇಳೆ ಮಕ್ಕಳ ಆರೋಗ್ಯದ ಆರೈಕೆಗೆ ಒಂದಿಷ್ಟು ಸರಳ ಟಿಪ್ಸ್

ಕಡೆಲೆಕಾಯಿ ಬೀಜ

ಕಡೆಲೆಕಾಯಿ ಬೀಜ

ಯಾರಿಗೆ ಆದರೂ ನಮ್ಮ ಮಗು ಚೆನ್ನಾಗಿ ದಷ್ಟ ಪುಷ್ಟ ವಾಗಿ ಬೆಳೆಯಬೇಕು ಎಂಬ ಬಯಕೆ ಇದ್ದೇ ಇರುತ್ತದೆ . ನಿಮ್ಮ ಮಗುವಿಗೆ ಕಡಲೆಕಾಯಿ ಬೀಜ ಒಂದು ವರದಾನ . ಕೆಲ ಮಕ್ಕಳಿಗೆ ಕಡಲೆ ಬೀಜ ಅಲರ್ಜಿ ಆದರೂ ಆ ಅಲರ್ಜಿಯನ್ನೇ ಹೋಗಲಾಡಿಸಿ ಮಕ್ಕಳಿಗೆ ತಿನ್ನುವ ಹಾಗೆ ಮಾಡುವ ಶಕ್ತಿ ಈ ಕಡಲೆಬೀಜಗಳಿಗೆ ಇರುತ್ತದೆ . ಆದರೆ ಕಡಲೆ ಕಾಯಿಗಳನ್ನು ಕೊಡಬೇಡಿ . ಮಕ್ಕಳು ಏನೇ ಕೊಟ್ಟರೂ ಬಾಯಿಗೆ ಹಾಕಿಕೊಳ್ಳುತ್ತವಾದ್ದರಿಂದ ಕಡಲೆ ಕಾಯಿ ಗಂಟಲಲ್ಲಿ ಸಿಕ್ಕು ಅದರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಂತೂ ಸತ್ಯ . ಕಡಲೆ ಬೀಜ ದ ಪ್ಯೂರೀ ಮಾಡಿ ಬ್ರೆಡ್ ಸ್ಟಿಕ್ಗಳ ಮೇಲೆ ಸವರಿ ಕೂಡ ಕೊಡಬಹುದು . ಆದರೆ ನೆನಪಿಡಿ . ಕಡಲೆ ಬೀಜದ ಖಾದ್ಯ ಕೊಡುವುದಕ್ಕೂ ಮುಂಚೆ ಸಾಂಪ್ರದಾಯಿಕ ಆಹಾರಗಳನ್ನು ನಿಮ್ಮ ಮಗುವಿಗೆ ಕೊಟ್ಟಿರತಕ್ಕದ್ದು .

ಹಸಿರು ಎಲೆ ತರಕಾರಿಗಳು ನಿಮ್ಮ ಮಗುವಿಗಂತೂ ಪೋಷಕಾಂಶಗಳ ತವರು

ಹಸಿರು ಎಲೆ ತರಕಾರಿಗಳು ನಿಮ್ಮ ಮಗುವಿಗಂತೂ ಪೋಷಕಾಂಶಗಳ ತವರು

ಅಚ್ಚರಿ ಎಂಬಂತೆ ಹಸಿರು ತರಕಾರಿಯನ್ನು ನೋಡಿದರೆ ಸಾಕು ಕೆಲ ಎಳೆ ಮಗುಗಳು ವಾಕರಿಕೆ ಮಾಡಿಕೊಳ್ಳುವಂತೆ ಆಡುತ್ತವೆ . ಆದರೆ ವೈದ್ಯರೇ ಹೇಳುವ ಪ್ರಕಾರ ಹಸಿರು ಎಲೆ ಮತ್ತು ತರಕಾರಿಗಳಲ್ಲಿ ಇರುವಷ್ಟು ಅಗಾಧ ಪೋಷಕಾಂಶ ಬೇರೆ ಯಾವುದರಲ್ಲೂ ಸಿಗುವುದಿಲ್ಲ . ಆದ್ದರಿಂದ ಪೋಷಕರು ಚಂದಮಾಮನ ಕಥೆ ಹೇಳಿಯಾದರೂ ಸರಿ ಇದನ್ನು ನಿಮ್ಮ ಮಗುವಿಗೆ ತಿನ್ನಸದೆ ಮಾತ್ರ ಬಿಡಬೇಡಿ . ಏಕೆಂದರೆ ಬೆಳೆಯುವ ಮಗುವಿನ ಆರೋಗ್ಯಕ್ಕೆ ಬೇಕಾದ ಎಲ್ಲಾ ರೀತಿಯ ಪೋಷಕಾಂಶಗಳು ಇದರಲ್ಲೇ ಅಡಗಿವೆ . ನಿಮ್ಮ ಮಗುವಿನ ಆರೋಗ್ಯಕ್ಕೆ ಇದು ಬಹಳ ಸಹಕಾರಿ .

ಧಾನ್ಯಗಳು

ಧಾನ್ಯಗಳು

ನಮ್ಮ ಆಹಾರ ಪದ್ಧತಿ ಏನೇ ಆಗಿದ್ದರೂ ಹಿಂದಿನ ಕಾಲದ ಸಾಂಪ್ರದಾಯಿಕ ಆಹಾರ ಪದ್ದತಿಯ ಮುಂದೆ ನಮ್ಮದೇನೂ ಇಲ್ಲ . ಆಗಿನ ಕಾಲದ ಮಕ್ಕಳಿಗೆ ಕಾಳುಗಳನ್ನು ಕುಟ್ಟಿ ಪುಡಿ ಮಾಡಿ ಅದನ್ನು ಹಾಲಿಗೆ ಹಾಕಿ ಕೊಡುತ್ತಿದ್ದರು . ಅದಕ್ಕೆ ದೊಡ್ಡವರಾದ ಮೇಲೆ ಯಾವುದೇ ರೋಗ ರುಜಿನ ಇಲ್ಲದಂತೆ ಆರೋಗ್ಯವಾಗಿ ಬದುಕುತ್ತಿದ್ದರು . ನೀವೇಕೆ ಈ ಪದ್ದತಿಯನ್ನು ಅಳವಡಿಸಿಕೊಳ್ಳಬಾರದು ? ಅಕ್ಕಿ , ಬೇಳೆಗಳನ್ನು ಹೀಗೆ ಪುಡಿ ಮಾಡಿ ಹಾಲಿಗೆ ಹಾಕಿ ಅಥವಾ ಹಾಲನ್ನು ಕಲಸಿ ಕೊಡುವುದರಿಂದ ನಿಮ್ಮ ಮಗುವಿನ ದೇಹಕ್ಕೆ ಹೆಚ್ಚು ಶಕ್ತಿ ಬಂದಂತಾಗುತ್ತದೆ .

ನಿಮ್ಮ ಮಗುವಿನ ಆಹಾರದಲ್ಲಿ ಸ್ವಲ್ಪ ಈರುಳ್ಳಿ ಮತ್ತು ಬೆಳ್ಳುಳ್ಳಿ

ನಿಮ್ಮ ಮಗುವಿನ ಆಹಾರದಲ್ಲಿ ಸ್ವಲ್ಪ ಈರುಳ್ಳಿ ಮತ್ತು ಬೆಳ್ಳುಳ್ಳಿ

ನಿಮ್ಮ ಮಗುವಿಗೆ ಕೊಡುವ ಆಹಾರದಲ್ಲಿ ಯಾವುದೇ ಭಯವಿಲ್ಲದೆ ಸ್ವಲ್ಪ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಮಿಕ್ಸ್ ಮಾಡಿ ಕೊಡಿ . ಇದು ನಿಮ್ಮ ಮಗುವಿನ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಮಗುವಿನ ಹೊಟ್ಟೆ ಹಸಿವನ್ನು ಜಾಸ್ತಿ ಮಾಡುತ್ತದೆ . ಮಗುವು ಇದರಿಂದ ಚೆನ್ನಾಗಿ ಊಟ ಮಾಡಲು ಅನುಕೂಲವಾಗುತ್ತದೆ .

Most Read: ಮಲಗುವ ಮೊದಲು ಮಕ್ಕಳ ಕೈಗೆ ಅಪ್ಪಿ ತಪ್ಪಿಯೂ ಮೊಬೈಲ್ ನೀಡಬೇಡಿ!

ನಿಮ್ಮ ಮಗುವಿನ ಹೊಟ್ಟೆಗೆ ಕೋಳಿ ಮೊಟ್ಟೆ

ನಿಮ್ಮ ಮಗುವಿನ ಹೊಟ್ಟೆಗೆ ಕೋಳಿ ಮೊಟ್ಟೆ

ಹಿಂದಿನ ಮಕ್ಕಳ ವೈದ್ಯರು ಒಂದು ವರ್ಷ ವಯಸ್ಸಿಗಿಂತ ಕಡಿಮೆ ವಯಸ್ಸಿನ ಮಗುವಿಗೆ ಕೋಳಿ ಮೊಟ್ಟೆಗಳನ್ನು ಕೊಡಬಾರದೆಂದು ಪೋಷಕರಿಗೆ ಸಲಹೆ ಕೊಡುತ್ತಿದ್ದರು . ಆದರೆ ಈಗಿನ ವೈದ್ಯಕೀಯ ಸಂಶೋಧನೆಗಳಿಂದ ಕೋಳಿ ಮೊಟ್ಟೆಗಳಿಂದ ಮಗುವಿನ ಆರೋಗ್ಯಕ್ಕೆ ಯಾವುದೇ ದುಷ್ಪರಿಣಾಮಗಳಿಲ್ಲ ಬದಲಿಗೆ ಅನುಕೂಲಗಳೇ ಹೆಚ್ಚಿವೆ ಎಂದು ದೃಢಪಟ್ಟಿರುವುದರಿಂದ ತಾಯಂದಿರು ಮಗುವಿಗೆ ಯಾವುದೇ ಅಂಜಿಕೆ ಇಲ್ಲದೆ ಮಗುವಿನ ಆಹಾರದಲ್ಲಿ ಮೊಟ್ಟೆಯನ್ನು ಸೇರಿಸಬಹುದು . ಮೊಟ್ಟೆಗಳಲ್ಲಿ ಪ್ರೋಟೀನ್ ಅಂಶ , ಮಗುವಿನ ಆರೋಗ್ಯಕ್ಕೆ ಅಗತ್ಯವಾದ ಕೊಬ್ಬಿನಂಶಗಳು ಮತ್ತು ಕೊಲೀನ್ಗಳು ಹೇರಳವಾಗಿರುತ್ತವೆ . ಇನ್ನು ಬೇಯಿಸಿದ ಮೊಟ್ಟೆಗಳನ್ನು ತರಕಾರಿಯ ಪ್ಯೂರಿಯ ಜೊತೆ ಕೊಟ್ಟರಂತೂ ನಿಮ್ಮ ಮಗುವಿಗೆ ಒಂದೇ ಬಾರಿಗೆ ಸಂಪೂರ್ಣ ಆರೋಗ್ಯ ಭಾಗ್ಯ ಕೊಟ್ಟಂತೆ .

ಲೆಂಟಿಲ್ಸ್ ಅಥವಾ ಮಸೂರ ಅವರೆ

ಲೆಂಟಿಲ್ಸ್ ಅಥವಾ ಮಸೂರ ಅವರೆ

ಈ ಮಸೂರದಲ್ಲಿ ಕಬ್ಬಿಣ ಅಂಶ ಮತ್ತು ಪ್ರೋಟೀನ್ ಅಂಶ ನಿರರ್ಗಳವಾಗಿರುತ್ತದೆ . ನೀವು ಕೊಡುವ ಸಸ್ಯಾಹಾರದ ಜೊತೆಗೆ ಇದನ್ನೂ ಸೇರಿಸಿ ನಿಮ್ಮ ಮಗುವಿಗೆ ಕೊಡಬಹುದು .

ಇನ್ನಿತರ ಆಹಾರಗಳು

ಇನ್ನಿತರ ಆಹಾರಗಳು

ನಿಮ್ಮ ಮಗುವಿನ ಓಟ್ಸ್, ಬೀಟ್ಸ್ , ತುಳಸಿ, ಕೇಲ್, ಸಾಲ್ಮನ್, ಕುಂಬಳಕಾಯಿ, ಚೀಸ್ ಮತ್ತು ಪೀಚ್ ಇವೆಲ್ಲವನ್ನೂ ಯಾವುದೇ ಭಯವಿಲ್ಲದೆ ಕೊಟ್ಟು ನಿಮ್ಮ ಮಗುವನ್ನು ಇತರ ಮಕ್ಕಳಂತೆ ಆರೋಗ್ಯವಂತ ಮಗುವಾಗಿ ಮಾಡಬಹುದು . ಈ ಆಹಾರ ಪದ್ದತಿಗಳನ್ನು ನೀವೂ ರೂಡಿಸಿಕೊಂಡು ನಿಮ್ಮ ಅಕ್ಕ ಪಕ್ಕದ ಮನೆಯವರಿಗೂ ಹೇಳಿ . ಅವರ ಮಗುವಿಗೂ ಇದು ಬಹಳ ಸಹಕಾರಿ ಹೌದಲ್ಲವೇ ? ನಿಮ್ಮ ಮಗು ನಿಮ್ಮ ಮನೆಯ ನಗು . ಶುಭವಾಗಲಿ

English summary

Best foods to feed your baby before they turns one

Feeding your kid is never less than a struggle and when it comes to feeding your one-year-old, let’s not even talk about it. There are a lot of restrictions when you have to feed a one-year-old baby because they do not have teeth to chew and their digestive system is still developing. But research says that the more fruits and vegetables a baby eats before the age of one, the more likely he/she is to eat a variety of foods by the time he/she is six.So, mommies it’s time to cook!
X