For Quick Alerts
ALLOW NOTIFICATIONS  
For Daily Alerts

ಐಸ್ ತಿನ್ನಬೇಕು ಅಂತ ಪ್ರೆಗ್ನೆನ್ಸಿಯಲ್ಲಿ ಯಾಕೆ ಅನ್ನಿಸುತ್ತೆ?

By Sushma Charhra
|

ಬಯಕೆಗಳಾಗುವುದು ಪ್ರಗ್ನೆನ್ಸಿಯ ಒಂದು ಭಾಗವಿದ್ದಂತೆ. ಒಬ್ಬೊಬ್ಬರು ಮಹಿಳೆಯರಿಗೆ ಒಂದೊಂದು ರೀತಿಯ ಕ್ರೇವಿಂಗ್ಸ್ ಆಗುತ್ತೆ. ಕೆಲವರಿಗೆ ಖಾರದ ಆಹಾರ ತಿನ್ನಬೇಕು ಅನ್ನಿಸಿದರೆ, ಮತ್ತೂ ಕೆಲವರಿಗೆ ಚಾಕಲೇಟ್ ತಿನ್ನಬೇಕು ಅನ್ನಿಸುತ್ತೆ. ಆದರೆ ಎಲ್ಲರನ್ನೂ ಹೆಚ್ಚಾಗಿ ಕಾಣಿಸಿಕೊಳ್ಳುವ ಬಯಕೆ ಎಂದರೆ ಹುಳಿ ಆಹಾರಗಳನ್ನು ತಿನ್ನಬೇಕು ಅಂತ. ಆದರೆ ಹೆಚ್ಚಿನ ಮಹಿಳೆಯರಿಗೆ ತನ್ನ ಪ್ರಗ್ನೆನ್ಸಿಯಲ್ಲಿ ಐಸ್ ತಿನ್ನಬೇಕು ಅಂತಲೂ ಅನ್ನಿಸುತ್ತೆ. ಎಸ್ ನಿಜ. ಅಯ್ಯೋ ನಾವು ಮಾತನಾಡ್ತಾ ಇರೋದು ಐಸ್ ಕ್ರೀಮ್ ಬಗ್ಗೆ ಅಲ್ಲ. ಬದಲಾಗಿ ಗಟ್ಟಿ ಕಲ್ಲುಗಳಂತೆ ಮಾಡುವ ನೀರಿನ ಘನ ರೂಪ ಅರ್ಥಾತ್ ಐಸ್ ಕ್ಯೂಬ್ ಗಳು ಬಾಯಲ್ಲಿಟ್ಟರೆ ಕಟುಂಕಟುಂ ಅಂತ ಜಗಿಯಲೂ ಆಗಬೇಕು ಹಾಗೆ ಬಾಯಲ್ಲಿಟ್ಟುಕೊಂಡರೆ ಕರಗಲೂ ಬೇಕು ಅಂತಹ ಐಸ್ ಗಳು.

ಪ್ರತಿಯೊಂದು ಬಯಕೆಗೂ ಒಂದೊಂದು ಅರ್ಥವಿದೆ. ಅದನ್ನ ಪ್ರಗ್ನೆನ್ಸಿಯಲ್ಲಿ ನಿಮ್ಮ ದೇಹ ಪ್ರತಿಕ್ರಿಯಿಸುತ್ತಿರುತ್ತೆ ಮತ್ತು ಆರೋಗ್ಯಯುತವಾದ ಮಗುಗಿನ ಜನನಕ್ಕೆ ನಿಮ್ಮ ದೇಹದ ಉತ್ತರಗಳವು. ನಿಮ್ಮ ಮಗು ನಿಮ್ಮ ಹೊಟ್ಟೆಯೊಳಗೆ ಈ ಪ್ರಪಂಚಕ್ಕಾಗಿ ತಯಾರಾಗುವಾಗ ಸಾಕಷ್ಟು ನ್ಯೂಟ್ರೀಷಿಯಸ್ ಆಹಾರಗಳು ನಿಮ್ಮ ದೇಹಕ್ಕೆ ಅಗತ್ಯವಿರುತ್ತೆ. ಯಾವ ಯಾವ ರೀತಿಯ ವಿಚಿತ್ರ ಬಯಕೆಗಳು ಆಗುತ್ತೆ ಹೇಳಲು ಸಾಧ್ಯವಿಲ್ಲ.....

ಪ್ರತಿಯೊಂದು ಕ್ರೇವಿಂಗ್ ನ ಹಿಂದೆಯೂ ದೇಹಕ್ಕೆ ಅಗತ್ಯವಿರುವ ನ್ಯೂಟ್ರೀಷಿಯಸ್ ಗಳ ಮೂಲ ಚಿಹ್ನೆಗಳಿರುತ್ತೆ. ನೀವು ಕೂಡ ಪ್ರಗ್ನೆಂಟ್ ವುಮೆನ್ ಆಗಿದ್ದು ಬಾಯಿತುಂಬಾ ಐಸ್ ತಿನ್ನಬೇಕು ಅಂತ ಅನ್ನಿಸುತ್ತಿದೆಯಾ? ಒಂದು ಲೋಟ ತಣ್ಣನೆಯ ಜ್ಯೂಸ್ ನಲ್ಲಿ ಜ್ಯೂಸ್ ಎಲ್ಲಾ ಬಿಟ್ಟು ಕೇವಲ ಐಸ್ ಮಾತ್ರ ತಿನ್ನಬೇಕು ಅನ್ನೋ ಬಯಕೆಯಾಗುತ್ತಿದೆಯಾ? ಹಾಗಿದ್ದರೆ ಟೆಕ್ಷನ್ ಮಾಡ್ಕೊಬೇಡಿ.. ನೀವು ಏಕಾಂಗಿಯಲ್ಲ. ನಿಮ್ಮ ಹಾಗೆ ನೂರಕ್ಕೂ ಹೆಚ್ಚು ಮಹಿಳೆಯರು ಇದೇ ರೀತಿ ಆಸೆಯನ್ನು ಹೊಂದಿರುತ್ತಾರೆ. ಇದೊಂದು ಸಾಮಾನ್ಯ ಬಯಕೆ ಅಲ್ಲದಿದ್ದರೂ ಕೂಡ ಸಾಕಷ್ಟು ಮಹಿಳೆಯರಿಗೆ ಈ ಬಯಕೆಯಾಗುತ್ತೆ....

ಐಸ್ ತಿನ್ನಬೇಕು ಅಂತ ಬಸುರಿಯಾದಾಗ ಅನ್ನಿಸುವುದಾದರೂ ಯಾಕೆ?

ಐಸ್ ತಿನ್ನಬೇಕು ಅಂತ ಬಸುರಿಯಾದಾಗ ಅನ್ನಿಸುವುದಾದರೂ ಯಾಕೆ?

ನೀವು ಬಸುರಿಯಾದಾಗ ಯಾವ ಕಾರಣದಿಂದ ನಿಮಗೆ ಐಸ್ ತಿನ್ನಬೇಕು ಅನ್ನಿಸುತ್ತಿರುತ್ತೆ ಗೊತ್ತಾ? ನಿಜ ಹೇಳಬೇಕು ಅಂದರೆ ಅದಕ್ಕೆ ಹಲವಾರು ಕಾರಣಗಳಿರುತ್ತೆ. ಆ ಎಲ್ಲಾ ಕಾರಣಗಳು ಯಾವುದು ಎಂದು ತಿಳಿಯಬೇಕಾದರೆ ಮುಂದೆ ಓದಿ. ಕೇವಲ ಒಂದೇ ಒಂದು ಕಾರಣದಿಂದ ಹೀಗಾಗುವುದಿಲ್ಲ.

ಐಸ್ ತಿನ್ನುವುದರಿಂದ ಮಾರ್ನಿಂಗ್ ಸಿಕ್ ನೆಸ್ ಕಡಿಮೆಯಾಗುತ್ತೆ

ಐಸ್ ತಿನ್ನುವುದರಿಂದ ಮಾರ್ನಿಂಗ್ ಸಿಕ್ ನೆಸ್ ಕಡಿಮೆಯಾಗುತ್ತೆ

ನೀವು ಬಸುರಿ ಮಹಿಳೆಯಾಗಿದ್ದರೆ, ಬೆಳಿಗ್ಗೆ ಎದ್ದ ಕೂಡಲೇ ನಿಮಗೆ ಏನೇನೋ ಸಮಸ್ಯೆಗಳಾಗಬಹುದು. ಇದನ್ನು ಮಾರ್ನಿಂಗ್ ಸಿಕ್ ನೆಸ್ ಎನ್ನುತ್ತಾರೆ. ಏಳುವುದೇ ಅಸಾಧ್ಯ ಅನ್ನುವಂತ ಫೀಲಿಂಗ್. ಮಾರ್ನಿಂಗ್ ಸಿಕ್ ನೆಸ್ ದಿನದ ಯಾವ ಸಮಯಕ್ಕೆ ಬೇಕಾದರೂ ಬಂದು ಎಷ್ಟು ಹೊತ್ತು ಬೇಕಾದರೂ ಹಾಗೆಯೇ ಇರಬಹುದು. ವಾಂತಿ ಬಂದಂತೆ ಆಗುವುದು ಅಥವಾ ವಾಂತಿ ಬರುವುದು, ಆಲಸ್ಯ, ತಲೆ ಸುತ್ತುವಿಕೆ ಇತ್ಯಾದಿಗಳು ಇದರ ಚಿಹ್ನೆಗಳು.. ಇದೆಲ್ಲವೂ ಪ್ರಗ್ನೆನ್ಸಿಯ ಸೈಡ್ ಎಫೆಕ್ಟ್ ಗಳು. ಆದರೆ ಐಸ್ ತಿನ್ನುವಿಕೆಯೂ ಈ ಗುಣಲಕ್ಷಣಗಳನ್ನು ಹೇಗೋ ಸುಧಾರಿಸಿಬಿಡುತ್ತೆ ಮತ್ತು ಮಾರ್ನಿಂಗ್ ಸಿಕ್ ನೆಸ್ ನಿಂದ ಸ್ವಲ್ಪ ಮಟ್ಟಿಗಿನ ರಿಲ್ಯಾಕ್ಸ್ ನೀಡುತ್ತೆ. ಬಹುಷ್ಯ ಐಸ್ ನಲ್ಲಿ ಯಾವುದೇ ವಾಸನೆ ಇಲ್ಲದೇ ಇರುವುದು ಮತ್ತು ರುಚಿ ಇಲ್ಲದಿರುವುದೇ ಇದಕ್ಕೆ ಕಾರಣವಾಗಿರಬಹುದು.

ಎದೆ ಉರಿಯನ್ನು ನಿಯಂತ್ರಿಸುತ್ತೆ

ಎದೆ ಉರಿಯನ್ನು ನಿಯಂತ್ರಿಸುತ್ತೆ

ಪ್ರೊಜೆಸ್ಟ್ರಾನ್ ಹಾರ್ಮೋನು ಬಸುರಿಯಾದಾಗ ಸಾಕಷ್ಟು ಬಿಡುಗಡೆಗೊಳ್ಳುತ್ತೆ. ಇದು ಮೂತ್ರಕೋಶದ ಮಾಂಸಖಂಡಗಳ ಆರಾಮಕ್ಕೆ ಮತ್ತು ಪ್ರಸೆಂಟಾದ ಹಲವು ಕಾರ್ಯಚಟುವಟಿಕೆಗಳಿಗೆ ಜವಾಬ್ದಾರಿಯಾಗಿರುತ್ತೆ.ಪ್ರೊಜೆಸ್ಟ್ರಾನ್ ಹಾರ್ಮೋನಿನ ಒಂದು ಅಡ್ಡಪರಿಣಾಮವೆಂದರೆ ಹೊಟ್ಟೆಯ ಸ್ಪಿನ್ಸ್ಟರ್ ಮಾಂಸಖಂಡಗಳನ್ನು ಮತ್ತು ಹೊಟ್ಟೆಯೊಳಗಿನ ಆಸಿಡ್ ಗಳನ್ನು ರಿಲ್ಯಾಕ್ಸ್ ಮಾಡುತ್ತೆ . ಇದರ ಪರಿಣಾಮವಾಗಿ ಎದೆಯುರಿ ಸಮಸ್ಯೆ ಕಾಣಿಸಿಕೊಳ್ಳುತ್ತೆ. ಆದರೆ ಐಸ್ ತಿನ್ನುವಿಕೆಯಿಂದಾಗಿ ಈ ಉರಿ ಹೊಟ್ಟೆಯೊಳಗೆ ಕಡಿಮೆಯಾಗುತ್ತೆ ಮತ್ತು ಎದೆ ಯುರಿ ಸಮಸ್ಯೆ ನಿವಾರಣೆಯಾಗುತ್ತೆ.

ದೇಹದ ಉರಿ ಮತ್ತು ಬಿಸಿಯನ್ನು ಕಡಿಮೆ ಮಾಡಲು ನೆರವು ನೀಡುತ್ತೆ

ದೇಹದ ಉರಿ ಮತ್ತು ಬಿಸಿಯನ್ನು ಕಡಿಮೆ ಮಾಡಲು ನೆರವು ನೀಡುತ್ತೆ

ಬಸುರಿ ಮಹಿಳೆಯರ ಮುಖವು ದೇಹದಲ್ಲಿ ರಕ್ತ ಅಧಿಕವಾಗುವಿಕೆಯಿಂದಾಗಿ ನಾರ್ಮಲ್ ಗಿಂತಲೂ ಹೆಚ್ಚು ಬಿಸಿಯಾಗುತ್ತೆ. ಇದು ನಿಮ್ಮನ್ನು ಬಿಸಿ ಬಿಸಿ ಅನ್ನಿಸುವ ಭಾವನೆಗೆ ಅಥವಾ ಉರಿ ಉರಿ ದೇಹ ಅಂತ ಅನ್ನಿಸುವಂತೆ ಮಾಡಬಹುದು. ಒಂದು ವೇಳೆ ಬೇಸಿಗೆ ಕಾಲವಾದರಂತೂ ಮುಗೀತು. ಅಂದುಕೊಂಡಿದ್ದಕ್ಕಿಂತಲೂ ಹೆಚ್ಚೇ ಉರಿಯ ಸಮಸ್ಯೆಯಾಗುತ್ತೆ. ಆದರೆ ಯಾವಾಗ ನಿಮಗೆ ಐಸ್ ತಿನ್ನಬೇಕು ಎಂಬ ಬಯಕೆಯಾಗುತ್ತೋ, ಆಗ ನಿಮ್ಮ ದೇಹ ನಿಮಗೆ ಸಂಜ್ಞೆ ನೀಡಿದಂತೆ. ನಿಮ್ಮ ದೇಹವನ್ನು ತಣ್ಣಗಾಗಿಸಲು ಇದರ ಅಗತ್ಯವಿದೆ ಎಂಬಂತ ಸೂಚನೆ. ನೀವು ಐಸ್ ತಿನ್ನುವುದರಿಂದ ಸ್ವಲ್ಪ ಮಟ್ಟಿಗೆ ಕೂಲ್ ಆಗುವುದೂ ನಿಜ. ಆದರೆ ಐಸ್ ಗೆ ಸಕ್ಕರೆ ಅಥವಾ ಕಾರ್ಬೋನೇಟೆಡ್ ಡ್ರಿಂಕ್ಸ್ ನಂತೆ ಸೇವಿಸಬೇಡಿ. ಅದು ಯಾವುದೇ ಕಾರಣಕ್ಕೂ ನಿಮಗಾಗಲಿ, ನಿಮ್ಮ ಹೊಟ್ಟೆಯಲ್ಲಿನ ಮಗುವಿಗಾಗಲಿ ಹಿತವಲ್ಲ ಅನ್ನುವುದು ನೆನಪಿರಲಿ.

ಇದು ಪಿಕಾ ಸಿಂಡ್ರೋಮಿನ ಲಕ್ಷಣವಾಗಿರಬಹುದು ಎಚ್ಚರಿಕೆ

ಇದು ಪಿಕಾ ಸಿಂಡ್ರೋಮಿನ ಲಕ್ಷಣವಾಗಿರಬಹುದು ಎಚ್ಚರಿಕೆ

ಒಂದು ಪ್ರಮುಖವಾದ ವಿಚಾರವನ್ನು ತಿಳಿಸಬೇಕು ಎಂದಾದರೆ, ಹೀಗೆ ಐಸ್ ತಿನ್ನುವ ಬಯಕೆ ಪಿಕಾ ಸಿಂಡ್ರೋಮ್ ನ ಲಕ್ಷಣವಾಗಿರಬಹುದು. ಪಿಕಾ ಸಿಂಡ್ರೋಮ್ ಅಂದರೆ ಒಬ್ಬ ವ್ಯಕ್ತಿಗೆ ತಿನ್ನಬಾರದ ವಸ್ತುಗಳನ್ನು ಅಥವಾ ಕ್ಯಾಲೋರಿ ಇಲ್ಲದ ವಸ್ತುಗಳನ್ನು ಅಥವಾ ಪೋಷಕಾಂಶ ರಹಿತವಾದ ವಸ್ತುಗಳನ್ನು ತಿನ್ನಲೇಬೇಕು ಎಂದು ಅನ್ನಿಸುವ ಬಯಕೆ. ತುಂಬಾ ಸಾಮಾನ್ಯವಾಗಿ ಪ್ರಗ್ನೆನ್ಸಿಯಲ್ಲಿ ಕಾಣಿಸುವ ಪಿಕಾ ಸಿಂಡ್ರೋಮ್ ನ ಲಕ್ಷಣಗಳೆಂದರೆ, ಚಾಕ್ ಪೀಸ್ ತಿನ್ನಬೇಕು ಅನ್ನಿಸುವುದು, ಕಬ್ಬಿಣ, ಮರಳು, ಕಾರ್ಡ್ ಬೋರ್ಡ್, ಮಣ್ಣು , ಕಲ್ಲು ಇತ್ಯಾದಿಗಳನ್ನು ತಿನ್ನ ಬೇಕು ಅನ್ನಿಸುವುದು.ಐಸ್ ಕೂಡ ಇದೇ ಕೆಟಗರಿಗೆ ಸೇರುತ್ತೆ. ಆದರೆ ಮೇಲಿರುವ ವಸ್ತುಗಳನ್ನು ಕೆಟ್ಟದ್ದನ್ನು ಐಸ್ ಮಾಡುವುದಿಲ್ಲ ಅಷ್ಟೇ. ಒಂದು ವೇಳೆ ಅತಿಯಾಗಿ ಐಸ್ ತಿನ್ನಬೇಕು ಅನ್ನಿಸುತ್ತಿದ್ದು ಅದು ನಿಮ್ಮ ಆರೋಗ್ಯಯುತವಾದ ಆಹಾರ ಸೇವನೆಗೆ ತೊಂದರೆ ನೀಡುತ್ತಿದೆಯಾದರೆ ನೀವು ಕೂಡಲೇ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಪರೀಕ್ಷಿಸಿಕೊಳ್ಳಿ.

ಕಬ್ಬಿಣಾಂಶದ ಕೊರತೆಯಿಂದ ಕೂಡ ನಿಮಗೆ ಐಸ್ ತಿನ್ನಬೇಕು ಅನ್ನಿಸುತ್ತಿರಬಹುದು

ಕಬ್ಬಿಣಾಂಶದ ಕೊರತೆಯಿಂದ ಕೂಡ ನಿಮಗೆ ಐಸ್ ತಿನ್ನಬೇಕು ಅನ್ನಿಸುತ್ತಿರಬಹುದು

ಪ್ರಗ್ನೆನ್ಸಿಯಲ್ಲಿ ಐಸ್ ತಿನ್ನಬೇಕು ಎಂಬ ಬಯಕೆಯಾಗಲು ಇನ್ನೊಂದು ಪ್ರಮುಖ ಕಾರಣ ಅನೀಮಿಯಾ ಅಥವಾ ಕಬ್ಬಿಣಾಂಶದ ಕೊರತೆ ಕೂಡ ಕಾರಣವಾಗಿರಬಹುದು. ಇದೊಂದು ಗಂಭೀರ ಸಮಸ್ಯೆಯಾಗಿದ್ದು, ನಿಮ್ಮ ಹೊಟ್ಟೆಯಲ್ಲಿ ಮಗು ಬೆಳೆಯಲು ಕಬ್ಬಿಣಾಂಶ ಬಹಳ ಮುಖ್ಯವಾಗಿ ಬೇಕಾಗುತ್ತೆ. ಹಾಗಾಗಿ ಕಬ್ಬಿಣಾಂಶದ ಕೊರತೆ ಇದೆಯಾ ಅಥವಾ ಇಲ್ಲವಾ ಎಂಬ ಬಗ್ಗೆ ನೀವು ಪರೀಕ್ಷೆ ಮಾಡಿಸಿಕೊಳ್ಳುವುದು ಬಹಳ ಮುಖ್ಯ.

ಒತ್ತಡ ನಿವಾರಿಸಿಕೊಳ್ಳಲು ಐಸ್ ತಿನ್ನುವಿಕೆ ಸಹಾಯ ಮಾಡಬಹುದು

ಒತ್ತಡ ನಿವಾರಿಸಿಕೊಳ್ಳಲು ಐಸ್ ತಿನ್ನುವಿಕೆ ಸಹಾಯ ಮಾಡಬಹುದು

ತಾಯಿಯಾಗುವುದು ಎಂದರೆ ಆ ಸಂದರ್ಭದಲ್ಲಿ ಒತ್ತಡ ಮತ್ತು ಆತಂಕ ಎದುರುಬದುರಾಗಿ ನಿಮ್ಮನ್ನು ಕಾಡುತ್ತಲೇ ಇರುತ್ತೆ. ಐಸ್ ತಿನ್ನುವಿಕೆಯಿಂದ ನಿಮ್ಮ ಒತ್ತಡ ಕಡಿಮೆಯಾಗಿ ಕೂಲ್ ಆಗಲು ನೆರವಾಗುತ್ತೆ. ನಿಮ್ಮನ್ನ ನೀವು ಶಾಂತವಾಗುವಂತೆ ಮಾಡುವ ತಾಕತ್ತು ಇದಕ್ಕಿದೆಯಂತೆ. ಹೇಗೆ ಆಹಾರ ತಿನ್ನುವುದು ಕೆಲವರಿಗೆ ಒತ್ತಡ ನಿವಾರಿಸುತ್ತೋ ಹಾಗೆಯೇ ಇದೂ ಕೂಡ . ಆದರೆ ಇದರಲ್ಲಿ ಹೆಚ್ಚುವರಿ ಕ್ಯಾಲೋರಿ ಅಂಶವಿರುವುದಿಲ್ಲ ಎಂಬುವುದೊಂದೇ ವಿಶೇಷವಾದದ್ದು.

ಐಸ್ ತಿನ್ನುವಿಕೆಯಿಂದಾಗಿ ನೀವು ಹೈಡ್ರೇಟ್ ಆಗಿರಲು ನೆರವಾಗುತ್ತೆ

ಐಸ್ ತಿನ್ನುವಿಕೆಯಿಂದಾಗಿ ನೀವು ಹೈಡ್ರೇಟ್ ಆಗಿರಲು ನೆರವಾಗುತ್ತೆ

ಪ್ರಗ್ನೆನ್ಸಿಯಲ್ಲಿ ಚೆನ್ನಾಗಿ ನೀರು ಕುಡಿಯುವುದು ಬಹಳ ಮುಖ್ಯವಾದ ವಿಚಾರ ಮತ್ತು ಆ ಮೂಲಕ ನೀವು ಆದಷ್ಟು ಹೈಡ್ರೇಟ್ ಆಗಿ ಇರಬೇಕಾಗುತ್ತೆ. ಆದರೆ ಯಾವಾಗಲೂ ನೀರು ಕುಡಿಯುತ್ತಲೇ ಇರಲು ಬೋರ್ ಅನ್ನಿಸುತ್ತೆ. ಆದರೆ ಐಸ್ ತಿನ್ನುವಿಕೆಯಿಂದಲೂ ನೀರಿನಂಶವು ನಿಮ್ಮ ದೇಹ ಸೇರುತ್ತೆ ಮತ್ತು ನೀವು ಹೈಡ್ರೇಟ್ ಆಗಿರಲು ನೆರವಾಗುತ್ತೆ. ಐಸ್ ತಿನ್ನುವಿಕೆಯಿಂದಾಗಿ ನೀವು ಹಲವು ಬಾರಿ ಬಾತ್ ರೂಮ್ ಕಡೆ ಹೋಗಬೇಕಾಗಿ ಬರಬಹುದು. ಯಾಕೆಂದರೆ ನಿಮ್ಮ ದೇಹಕ್ಕೆ ಐಸ್ ಮೂಲಕ ನೀರಿನಂಶ ಸೇರಿರುತ್ತೆ ಅನ್ನುವುದು ನೆನಪಿರಲಿ.

ನೀವು ಐಸ್ ತಿನ್ನುವಾಗ ನೆನಪಿನಲ್ಲಿ ಇಡಬೇಕಾದ ಅಂಶಗಳು

ನೀವು ಐಸ್ ತಿನ್ನುವಾಗ ನೆನಪಿನಲ್ಲಿ ಇಡಬೇಕಾದ ಅಂಶಗಳು

ಅತಿಯಾಗಿ ಐಸ್ ತಿನ್ನುವಿಕೆಯು ನಿಮ್ಮ ಹಲ್ಲುಗಳನ್ನು ಹಾಳು ಮಾಡುವ ಸಾಧ್ಯತೆ ಇರುತ್ತೆ ಎಸ್.... ಹೌದು! ಯಾವಾಗಲೂ ಐಸ್ ಕಚ್ಚುತ್ತಲೇ ಇರುವುದು ನಿಮ್ಮ ಹಲ್ಲುಗಳ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡಬಹುದು. ಅದರಲ್ಲೂ ಮುಖ್ಯವಾಗಿ ಸೆನ್ಸಿಟಿವಿಟಿ ಸಮಸ್ಯೆ ಬರಬಹುದು. ಹಲ್ಲುಗಳಲ್ಲಿ ಸಣ್ಣ ಕ್ರ್ಯಾಕ್ ಕಾಣಿಸಿಕೊಳ್ಳಬಹುದು ಇಲ್ಲವೇ ಬ್ಯಾಕ್ಟೀರಿಯಾಗಳ ದಾಳಿಯಿಂದಾಗಿ ಹಲ್ಲು ಹುಳುಕಾಗುವ ಸಾಧ್ಯತೆಯೂ ಇರುತ್ತೆ. ಐಸ್ ನ್ನು ಹಲ್ಲುಗಳಿಂದ ಕಚ್ಚುವ ಬದಲು ಬಾಯಲ್ಲಿ ಹಾಗೆಯೇ ಇಟ್ಟುಕೊಂಡು ಕರಗಲು ಬಿಟ್ಟರೆ ಒಳಿತು. ಆ ಮೂಲಕ ನೇರವಾಗಿ ನಿಮ್ಮ ಹಲ್ಲುಗಳ ಮೇಲಾಗುವ ಪರಿಣಾಮವನ್ನು ಅಲ್ಪಮಟ್ಟಿಗಾದರೂ ಕಡಿಮೆಗೊಳಿಸುವ ಪ್ರಯತ್ನವನ್ನು ಮಾಡಬಹುದು.

ಅತಿಯಾಗಿ ಐಸ್ ತಿನ್ನುವುದು ಅನಾರೋಗ್ಯಕಾರಿ

ಅತಿಯಾಗಿ ಐಸ್ ತಿನ್ನುವುದು ಅನಾರೋಗ್ಯಕಾರಿ

ನೀವು ಐಸ್ ತಿನ್ನುವುದರಿಂದಾಗಿ ನಿಮ್ ಹಸಿವು ಇಂಗಿ ಹೋಗುತ್ತೆ. ನಿಮಗೆ ನಿಜವಾದ , ಹೆಲ್ತಿಯಾದ ಆಹಾರಗಳು ಬೇಕು ಅಂತ ಅನ್ನಿಸದೇ ಇರಬಹುದು. ಐಸ್ ನಲ್ಲಿ ಯಾವುದೇ ಕ್ಯಾಲೋರಿಗಳು ಇರುವುದಿಲ್ಲ. ನ್ಯೂಟ್ರೀಷಿಯನ್ ಅಂಶಗಳೂ ಇರುವುದಿಲ್ಲ. ನಿಜ ಹೇಳಬೇಕು ಎಂದರೆ ಐಸ್ ತಿನ್ನುವಿಕೆಯಿಂದಾಗಿ ಹೆಚ್ಚು ಕ್ಯಾಲೋರಿ ನಾಶವಾಗುತ್ತೆ. ಇದು ನೀವು ಬಸುರಿಯಾಗಿದ್ದಾಗ ಒಳ್ಳೆಯ ಲಕ್ಷಣವಲ್ಲ.ನಿಮ್ಮ ದೇಹಕ್ಕೆ ಈ ಸಂದರ್ಬದಲ್ಲಿ ಅತೀ ಹೆಚ್ಚು ಪೋಷಕಾಂಶಗಳ ಮತ್ತು ಕ್ಯಾಲೋರಿಯ ಅಗತ್ಯವಿರುತ್ತೆ. ಆ ಮೂಲಕ ಮಾತ್ರ ನಿಮ್ಮ ಮಗುವಿನ ಬೆಳವಣಿಗೆ ಮತ್ತು ಆರೋಗ್ಯ ಚೆನ್ನಾಗಿರಲು ಸಾಧ್ಯ. ಹಾಗಾಗಿ ಒಂದು ನೆನಪಿಡಿ, ಐಸ್ ತಿನ್ನುವಿಕೆಯು ನಿಮ್ಮ ದೈನಂದಿನ ಹೆಲ್ತಿ ಆಹಾರ ಕ್ರಮದ ಮೇಲೆ ಯಾವುದೇ ಪರಿಣಾಮ ಬೀರದಂತೆ ನೋಡಿಕೊಳ್ಳುವುದು ಬಹಳ ಮುಖ್ಯ.

English summary

Why Do You Crave Ice When Pregnant?

It is thought that every craving is a way that your body lets you know what it needs for a healthy pregnancy. When you have a baby getting ready for the world in your tummy, it is only normal that you would need a lot of nutrition and good food. No matter how weird the craving might seem, in the end, it serves the purpose of giving the body exactly what it needs.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more