Latest Updates
-
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ
ಗರ್ಭಿಣಿ ಮಹಿಳೆಯರು ಸೇವಿಸಬೇಕಾದ ಸಸ್ಯಾಹಾರಿ ಆಹಾರಗಳು
ಗರ್ಭಧಾರಣೆಯ ಸಮಯದಲ್ಲಿ ಮಹಿಳೆಯ ದೇಹಕ್ಕೆ ಹೆಚ್ಚಿನ ಪೋಷಕಾಂಶಗಳು ಬೇಕಾಗುವುದು. ಅದರಲ್ಲೂ ಪ್ರೋಟೀನ್ ಅತ್ಯಗತ್ಯವಾಗಿ ಬೇಕು. ಇಂತಹ ಸಮಯದಲ್ಲಿ ಸಸ್ಯಾಹಾರಿ ಮಹಿಳೆಯರಿಗೆ ಇದು ತುಂಬಾ ಕಷ್ಟದ ದಿನವಾಗಿರುವುದು. ಯಾಕೆಂದರೆ ಹೆಚ್ಚಾಗಿ ಪ್ರೋಟೀನ್ ಪ್ರಾಣಿಜನ್ಯ ಆಹಾರಗಳಿಂದ ಸಿಗುವುದು. ಇದನ್ನು ಸಸ್ಯಾಹಾರಿಗಳಿಗೆ ಸೇವಿಸಲು ಸಾಧ್ಯವಿಲ್ಲ. ಇಂತಹ ಸಮಯದಲ್ಲಿ ದೇಹಕ್ಕೆ ಪ್ರೋಟೀನ್ ಕೊರತೆಯಾಗದಂತೆ ಸಸ್ಯಾಹಾರಿ ಆಹಾರ ಸೇವನೆ ಮಾಡುವುದು ಅತೀ ಅಗತ್ಯ.
ಆಹಾರ ಕ್ರಮದಲ್ಲಿ ಹೆಚ್ಚಿನ ಪ್ರೋಟೀನ್ ಇರುವಂತಹ ಸಸ್ಯಾಹಾರಿ ಆಹಾರಗಳನ್ನು ಸೇರಿಸಿದರೆ ಅದರಿಂದ ಮಗುವಿಗೂ ಒಳ್ಳೆಯ ಪೋಷಕಾಂಶಗಳು ಲಭ್ಯವಾಗುವುದು. ಕೇವಲ ಪ್ರೋಟೀನ್ ಮಾತ್ರವಲ್ಲದೆ ಕ್ಯಾಲ್ಸಿಯಂ, ವಿಟಮಿನ್ ಮತ್ತು ಖನಿಜಾಂಶಗಳನ್ನು ಕೂಡ ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬೇಕು. ಸರಿಯಾದ ಪ್ರಮಾಣ ಮತ್ತು ಒಳ್ಳೆಯ ಸಮತೋಲನದೊಂದಿಗೆ ಸಸ್ಯಾಹಾರಿ ಆಹಾರ ಸೇವನೆ ಮಾಡಿದರೆ ಅದರಿಂದ ಗರ್ಭಿಣಿ ಮಹಿಳೆಗೆ ಒಳ್ಳೆಯದು. ಪ್ರೋಟೀನ್ ಅಧಿಕವಾಗಿ ಇರುವಂತಹ ಕಿಡ್ನಿ ಬೀನ್ಸ್, ಕಾಳುಗಳು, ಮೃದುಗಿಣ್ಣು ಹಾಗೂ ಸೋಯಾ ಇತ್ಯಾದಿ ಗಳನ್ನು ಸೇವಿಸಿ. ಇದರಿಂದ ಮಾಂಸಾಹಾರಿ ಗರ್ಭಿಣಿ ಮಹಿಳೆಯರಿಗೆ ಸಿಗುವಂತಹ ಪ್ರೋಟೀನ್ ನಿಮಗೂ ಲಭ್ಯವಾಗುವುದು. ಸರಿಯಾದ ಆಹಾರ ಕ್ರಮವನ್ನು ಪಾಲಿಸಿಕೊಂಡು ಹೋದರೆ ಅದರಿಂದ ನಿಮ್ಮ ಮಗುವಿನ ಬೆಳವಣಿಗೆಗೆ ಯಾವುದೇ ಸಮಸ್ಯೆಯಾಗದು. ಆ ಆಹಾರಗಳು ಯಾವುದು ಎಂದು ತಿಳಿಯಿರಿ.
ಪನ್ನೀರ್
ಸಸ್ಯಾಹಾರಿಗಳಿಗೆ ಸಿಗುವ ಪ್ರೋಟೀನ್ ಇದರಲ್ಲಿದೆ. ಪನ್ನೀರ್‌ನಲ್ಲಿ ಕ್ಯಾಲ್ಸಿಯಂ ಹಾಗೂ ಹಾಲಿನಲ್ಲಿರುವಂತಹ ಪ್ರೋಟೀನ್ ಗಳಿವೆ. ಇದು ಮಗುವಿನ ಬೆಳವಣಿಗೆಗೆ ನೆರವಾಗುವುದು.
ಹಸಿರು ತರಕಾರಿಗಳು
ಹಸಿರು ತರಕಾರಿಗಳಲ್ಲಿ ಕ್ಯಾಲರಿ ಶೂನ್ಯವಾಗಿದೆ. ಆದರೆ ಇದರಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ವಿವಿಧ ರೀತಿಯ ತರಕಾರಿಗಳಾದ ಬಸಳೆ, ಬಾಕ್ರೋಲಿ, ನುಗ್ಗೆಕಾಯಿ ಇತ್ಯಾದಿಗಳನ್ನು ಸೇವಿಸಿ.

ಕಿಡ್ನಿ ಬೀನ್ಸ್
ಗರ್ಭಿಣಿ ಮಹಿಳೆಯರಿಗೆ ಕಿಡ್ನಿ ಬೀನ್ಸ್ ತುಂಬಾ ಒಳ್ಳೆಯದು. ಇದರಲ್ಲಿ ಹೆಚ್ಚಿನ ಮಟ್ಟದ ಪ್ರೋಟೀನ್ ಇದ್ದು, ಸಸ್ಯಾಹಾರಿ ಮಹಿಳೆಯರಿಗೆ ಇದು ಸಹಕಾರಿ.
ಮೊಸರು
ಮೊಸರಿನಲ್ಲಿ ಉತ್ತಮ ಮಟ್ಟದ ಕ್ಯಾಲ್ಸಿಯಂ ಮತ್ತು ಒಳ್ಳೆಯ ಬ್ಯಾಕ್ಟೀರಿಯಾಗಳು ಇವೆ. ಇದು ಜೀರ್ಣಕ್ರಿಯೆ ಶಕ್ತಿ ಹೆಚ್ಚು ಮಾಡುವುದು. ಗರ್ಭಿಣಿ ಮಹಿಳೆಯರಲ್ಲಿ ಎದೆಯುರಿ ಕಾಣಿಸಿಕೊಳ್ಳುವುದು. ಇಂತಹ ಸಮಸ್ಯೆಯನ್ನು ಮೊಸರು ಕಡಿಮೆಗೊಳಿಸುವುದು.
ಸೋಯಾ
ಸಸ್ಯಾಹಾರಿ ಮಹಿಳೆಯರಿಗೆ ದೊಡ್ಡ ಸಮಸ್ಯೆಯೆಂದರೆ ಅದು ಪ್ರೋಟೀನ್ ಕೊರತೆ. ಆದರೆ ಸೋಯಾ ತುಂಡುಗಳಿಂದ ಗರ್ಭಿಣಿ ಮಹಿಳೆಯರಿಗೆ ಬೇಕಾಗಿರುವ ಪ್ರೋಟೀನ್ ಸಿಗುವುದು. ಸೋಯಾದಿಂದ ನಿಮಗೆ ವಿಟಮಿನ್ ಡಿ ಲಭ್ಯವಾಗುವುದು.
ಕ್ಯಾರೆಟ್
ಕ್ಯಾರೆಟ್ ನಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ. ಇದರಿಂದ ಕ್ಯಾರೆಟ್ ನ್ನು ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ. ಇದರಿಂದ ಮಗುವಿನ ದೃಷ್ಟಿ ಸರಿಯಾಗಿ ಬೆಳೆಯಲು ನೆರವಾಗುವುದು.
ಬೀನ್ಸ್
ಬೀನ್ಸ್ ನಲ್ಲಿ ಹಸಿರು ಬೀನ್ಸ್, ಫವ ಬೀನ್ಸ್ ಹೀಗೆ ಹಲವಾರು ವಿಧದ ಬೀನ್ಸ್ ಗಳು ಇವೆ. ಬೀನ್ಸ್ ತುಂಬಾ ಆರೋಗ್ಯಕಾರಿ ಮತ್ತು ಇದರಿಂದ ನಿಮಗೆ ಪ್ರೋಟೀನ್ ಮಾತ್ರವಲ್ಲದೆ ಶಕ್ತಿ ಕೂಡ ಲಭ್ಯವಾಗುವುದು. ಇದರಿಂದ ಹೆಚ್ಚಿನ ಮಟ್ಟದ ನಾರಿನಾಂಶವಿರುವ ಕಾರಣ ಕರುಳಿನ ಚಲನೆಗೆ ಇದು ಸಹಕಾರಿ.
ಧಾನ್ಯಗಳು
ನೀವು ಭಾರತೀಯರಾಗಿದ್ದರೆ ದಾಲ್ ನಿಮ್ಮ ಆಹಾರ ಕ್ರಮದಲ್ಲಿರಬೇಕು. ವಿವಿಧ ರೀತಿಯ ದಾಲ್ ನ್ನು ಪ್ರಯತ್ನಿಸುವ ಮೂಲಕ ಆಹಾರದಲ್ಲೂ ವೈವಿಧ್ಯತೆ ತರಬಹುದು. ದಾಲ್ ನಲ್ಲಿ ಹೆಚ್ಚಿನ ಪ್ರೋಟೀನ್ ಇದೆ. ಇದರಿಂದ ಸಸ್ಯಾಹಾರಿಗಳಿಗೆ ಇದು ಅತ್ಯುತ್ತಮ ಆಹಾರ.
ಸಿಪ್ಪೆಯಿರುವ ಧಾನ್ಯಗಳು
ಯಾವಾಗಲೂ ಸಿಪ್ಪೆಯಿರುವಂತಹ ಧಾನ್ಯಗಳನ್ನು ಸೇವನೆ ಮಾಡುವುದರಿಂದ ನಿಮಗೆ ಹೆಚ್ಚುವರಿಯಾಗಿ ಕ್ಯಾಲ್ಸಿಯಂ, ವಿಟಮಿನ್ ಡಿ ಮತ್ತು ಡಿಎಚ್ ಎ ಸಿಗುವುದು. ಇದು ಮಗುವಿನ ಮೆದುಳಿನ ಬೆಳವಣಿಗೆಗೆ ಸಹಕಾರಿ.
ತೆಂಗಿನಕಾಯಿ
ದೇಹಕ್ಕೆ ಶಕ್ತಿ ಒದಗಿಸಿಬಲ್ಲಂತಹ ಒಳ್ಳೆಯ ಕೊಬ್ಬು ತೆಂಗಿನಕಾಯಿಯಲ್ಲಿದೆ. ತೆಂಗಿನ ಕಾಯಿ ತಿಂದರೆ ಹುಟ್ಟುವ ಮಗು ಬಿಳಿಯಾಗಿರುವುದು ಎನ್ನುವ ನಂಬಿಕೆ ಭಾರತೀಯರಲ್ಲಿದೆ.
ಬೀಜಗಳು
ಬಾದಾಮಿಯಂತಹ ಬೀಜಗಳು ನಿಮ್ಮ ದೇಹಕ್ಕೆ ಬೇಕಾಗಿರುವ ವಿಟಮಿನ್ ಇ ನೀಡುವುದು. ಆರೋಗ್ಯಕಾರಿ ದೇಹವನ್ನು ಹೊಂದಿ ಬೆಳೆಯಲು ಮಗುವಿಗೆ ಎಲ್ಲಾ ರೀತಿಯ ಪೋಷಕಾಂಶಗಳು ಅಗತ್ಯ. ಬೀಜಗಳು ತೂಕ ಹೆಚ್ಚು ಮಾಡದೆ ದೇಹಕ್ಕೆ ನೆರವಾಗುವುದು.
ಬಾಳೆಹಣ್ಣು
ಗರ್ಭಿಣಿ ಮಹಿಳೆಯರು ಬಾಳೆಹಣ್ಣು ತಿನ್ನಬೇಕು. ಇದರಿಂದ ದೇಹಕ್ಕೆ ಬೇಕಾಗುವ ಶಕ್ತಿ ಮತ್ತು ನಾರಿನಾಂಶವು ಲಭ್ಯವಾಗುವುದು.
ಹಾಲು
ನೀವು ಯಾವುದೇ ರೂಪದಲ್ಲಿಯಾದರೂ ಹಾಲಿನ ಸೇವನೆ ಮಾಡಿ. ಮಹಿಳೆಯರಿಗೆ ಹಾಲು ತುಂಬಾ ಪರಿಣಾಮಕಾರಿ. ಯಾಕೆಂದರೆ ಇದರಿಂದ ಎದೆಯುರಿ ಮತ್ತು ಆ್ಯಸಿಡಿಟಿ ಸಮಸ್ಯೆ ನಿವಾರಣೆಯಾಗುವುದು.
ಕಡಲೆಕಾಳು
ಕಡಲೆಕಾಳಿನಲ್ಲಿ ಹೆಚ್ಚಿನ ಮಟ್ಟದ ಪ್ರೋಟೀನ್ ಇದೆ. ಇದು ಮಗುವಿನ ಬೆಳವಣಿಗೆಗೆ ನೆರವಾಗುವುದು. ಕಡಲೆಕಾಳಿನಿಂದ ಮಗುವಿನ ಸ್ನಾಯುಗಳು ಬೆಳೆವಣಿಗೆಗೆ ಶಕ್ತಿ ತುಂಬುವುದು.
ಸಿಟ್ರಸ್ ಇರುವ ಹಣ್ಣುಗಳು
ಗರ್ಭಿಣಿ ಮಹಿಳೆಯರಿಗೆ ಸಿಟ್ರಸ್ ಹಣ್ಣುಗಳು ತುಂಬಾ ಪರಿಣಾಮಕಾರಿ. ಇದು ರೋಗಗಳು ಬರದಂತೆ ಪ್ರತಿರೋಧಕ ಶಕ್ತಿಯನ್ನು ಬಲವಾಗಿರಿಸುವುದು. ಇದರಲ್ಲಿನ ವಿಟಮಿನ್ ಸಿ ಮತ್ತು ಬಿ ಮಗುವಿನ ಬೆಳವಣಿಗೆಗೆ ನೆರವಾಗುವುದು.



Click it and Unblock the Notifications




