For Quick Alerts
ALLOW NOTIFICATIONS  
For Daily Alerts

ಈ ಲಕ್ಷಣಗಳು ನಿಮ್ಮಲ್ಲಿ ಕಂಡು ಬಂದರೆ ನೀವು ಗರ್ಭಿಣಿ ಎಂದರ್ಥ!

By Hemanth Amin
|

ಗರ್ಭಧಾರಣೆಯ ವೇಳೆ ಮಹಿಳೆಯ ಸಂಪೂರ್ಣ ದೇಹವು ಬದಲಾವಣೆಗೆ ಒಗ್ಗಿಕೊಳ್ಳುವುದು. ಇದರಲ್ಲಿ ಪ್ರಮುಖವಾಗಿ ದೇಹದಲ್ಲಿ ಆಗುವಂತಹ ಹಾರ್ಮೋನು ವೈಪರಿತ್ಯದಿಂದಾಗಿ ಮಹಿಳೆಯ ದೇಹದಲ್ಲಿ ಬದಲಾವಣೆಗಳು ಕಂಡುಬರುವುದು. ಇದು ಮಾನಸಿಕವಾಗಿಯೂ ಮಹಿಳೆಯ ಮೇಲೆ ಪ್ರಭಾವ ಬೀರುವುದು. ಆದರೆ ಪ್ರತಿಯೊಬ್ಬ ಗರ್ಭಿಣಿ ಮಹಿಳೆ ಒಂದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂದು ಹೇಳಲು ಬರುವುದಿಲ್ಲ.

ಇದು ಒಬ್ಬರಿಗಿಂತ ಒಬ್ಬರಿಗೆ ಭಿನ್ನವಾಗಿರುವುದು. ಗರ್ಭಧಾರಣೆಯ ಕೆಲವು ಸೂಚನೆಗಳು ಮತ್ತು ಲಕ್ಷಣಗಳು ಮಹಿಳೆಯಲ್ಲಿ ಕಾಣಿಸುವುದು. ಇದು ಹೆಚ್ಚಿನ ಮಹಿಳೆಯರಲ್ಲಿ ಸಾಮಾನ್ಯವಾಗಿರುವುದು. ಗರ್ಭಿಣಿ ಮಹಿಳೆಯರು ಈ ಲೇಖನದಲ್ಲಿ ಹೇಳಿರುವಂತಹ ಒಂದು ಲಕ್ಷಣವನ್ನಾದರೂ ಅನುಭವಿಸಬಹುದು. ಇದು ಯಾವುದೆಂದು ನೀವು ತಿಳಿಯಲು ಮುಂದೆ ಓದುತ್ತಾ ಸಾಗಿ....

ಸ್ತನಗಳು ಊದಿಕೊಳ್ಳುವುದು

ಸ್ತನಗಳು ಊದಿಕೊಳ್ಳುವುದು

ನಿಮಗೆ ಗರ್ಭಧಾರಣೆಯ ಸೂಚನೆ ಹಾಗೂ ಲಕ್ಷಣಗಳು ಕಂಡುಬಂದರೆ ಆಗ ನೀವು ವೈದ್ಯರನ್ನು ಹೋಗಿ ಭೇಟಿಯಾಗಿ. ನೋವು ಮತ್ತು ಊದಿಕೊಂಡಿರುವ ಸ್ತನಗಳು ಗರ್ಭಧಾರಣೆಯ ಮೊದಲ ಲಕ್ಷಣಗಳು. ಅದರಲ್ಲೂ ಕೆಲವೊಮ್ಮೆ ಒಳಉಡುಪು ಅಚಾನಕ್ಕಾಗಿ ಬಿಗಿಯಾಗುವುದು ನಿಮ್ಮ ಸ್ತನಗಳ ನರಗಳು ಹಿಗ್ಗುವುದರ ಮೂಲಕ ಗಾತ್ರವೂ ಕೂಡ ಹಿಗ್ಗಿದಂತಿರುತ್ತದೆ. ಒಳಡುಪನ್ನು ಧರಿಸುವುದು ಕಿರಿಕಿರಿಯೆನಿಸುವುದು ಸಾಮನ್ಯವಾಗಿ ಕಂಡುಬರುವಂತಹ ಲಕ್ಷಣವಾಗಿದೆ. ಇಂತಹ ಸಂದರ್ಭಗಳಲ್ಲಿ ಆರಾಮದಾಯಕವೆನಿಸುವ ಸ್ಫೋರ್ಟ್ಸ್ ಒಳಡುಪುಗಳನ್ನು ಧರಿಸಬಹುದು. ಅಷ್ಟೇ ಅಲ್ಲದೆ ಸ್ತನದ ತುದಿಗಳ ಗಾತ್ರ ಹಿಗುಗುವುದು ಮತ್ತು ಸ್ತನದ ನಿಪ್ಪಲ್ಲುಗಳ ಬಣ್ಣ ಬದಲಾಗುವುದೂ ಕೂಡ ನೀವು ಗರ್ಭಿಣಿ ಎನ್ನುವ ಲಕ್ಷಣವನ್ನು ತೋರಿಸುತ್ತದೆ. ಆದ್ದರಿಂದಲೇ ಬೇಸಿಗೆಯ ದಿನಗಳಲ್ಲಿ ಗರ್ಭಿಣಿಯರು ಬಿಗಿಯಾದ ಬಟ್ಟೆಗಳನ್ನು ಧರಿಸುವುದು ಆರೋಗ್ಯದ ದೃಷ್ಟಿಯಿಂದ ಒಳಿತಲ್ಲವೆನ್ನಲಾಗುತ್ತದೆ. ಅಷ್ಟೇ ಅಲ್ಲದೆ ಕೆಲವು ಆಹಾರ ಪದಾರ್ಥಗಳ ಬಗೆಗೆ ಒಲವು ಮತ್ತು ಕೆಲವು ಆಹಾರ ಪದಾರ್ಥಗಳನ್ನು ದೂರವಿಡಿಸುವುದು ಹಿಂದೆಂದೂ ತಿನ್ನಲು ಇಚ್ಚಿಸದ ಕೆಲವು ಆಹಾರಪದಾರ್ಥಗಳು ರುಚಿಕರವೆನಿಸುವುದು ಮತ್ತು ಅವುಗಳನ್ನು ತಿನ್ನುವ ಹಂಬಲ ಉಂಟಾಗುವುದು. ಹಾಗೆಯೇ ನಿಮಗೆ ರುಚಿಸುವ ಆಹಾರವೂ ರುಚಿಸದೇ ಇರುವುದು ಈ ಎರಡೂ ಬಗೆಯ ಲಕ್ಷಣಗಳೂ ಗರ್ಭಿಣಿಯರಲ್ಲಿ ಸಹಜವಾಗಿ ಕಂಡುಬರುವಂತಹುದು. ಒಂದು ಗಮನಿಸಬೇಕಾದ ಅಂಶವೆಂದರೆ ಆಹರಪದಾರ್ಥಗಳಲ್ಲಿ ನಿಯಮಿತ ಆಯ್ಕೆಗಳನ್ನು ಹೊಂದಿರುವುದು ಆರೋಗ್ಯಕರ ಸಂಗತಿಯಾಗಿರದು. ಎಲ್ಲಾ ಬಗೆಯ ಆಹರವನ್ನೂ ತಿನ್ನುವಂತಹ ಕ್ರಮವನ್ನು ರೂಢಿಸಿಕೊಂಡಿರುವುದು ಅವಶ್ಯಕವಾದುದಾಗಿದೆ. ಕೆಲವು ಮಹಿಳೆಯರಲ್ಲಿ ಗರ್ಭಿಣಿಯಾಗಿದ್ದಾಗ ಕೆಲವು ಆಹಾರ ಪದಾರ್ಥಗಳ ಪರಿಮಳವನ್ನು ತೆಗೆದುಕೊಂಡರೂ ವಾಂತಿ ಅಥವ ವಾಕರಿಕೆಯಾಗುವುದನ್ನು ಕಾಣಬಹುದಾಗಿದೆ.

ಆಯಾಸಗೊಳ್ಳುವುದು

ಆಯಾಸಗೊಳ್ಳುವುದು

ಈ ದಿನಗಳಲ್ಲಿ ಯಾವಾಗಲೂ ಆಯಾಸದಿಂದ ಕೂಡಿರುವುದೂ ಕೂಡ ಸರ್ವೇ ಸಾಮಯವಾದ ಲಕ್ಷಣಗಳಲ್ಲಿ ಒಂದಾಗಿರುತ್ತದೆ. ಆಯಾಸದ ಪ್ರಮಾಣ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಬಹುದು. ಆದರೂ ಮೊದಲ ದಿನಗಳಲ್ಲಿ ಆಯಾಸ ಉಂಟಾಗುವುದು ಸಾಮಾನ್ಯವಾಗಿ ಎಲ್ಲರಲ್ಲಿಯೂ ಕಂಡುಬರುತ್ತದೆ. ಸಾದಾ ದಿನಗಳಲ್ಲಿ ನಿರಾಸಾದಾಯಕವಾಗಿ ಮಾಡುತ್ತಿದ್ದ ಕೆಲಸಗಳು ಈ ದಿನಗಳಲ್ಲಿ ಹೆಚ್ಚಿನ ಆಯಾಸವನ್ನುಂಟುಮಾಡಬಲ್ಲದು. ಇಂತಹ ಸಂದರ್ಭಗಳಲ್ಲಿ ಮೊದಲಿಗೆ ಮನೆಯಲ್ಲಿಯೇ ಪರೀಕ್ಷೆಯನ್ನು ಮಾಡಿಕೊಳ್ಳುವುದರ ಮೂಲಕ ನೀವು ಗರ್ಭಿಣಿಯೇ ಅಥವ ಅಲ್ಲವೇ ಎಂಬುದನ್ನು ತಿಳಿದುಕೊಳ್ಳುವುದು ಅತ್ಯಂತ ಅವಶ್ಯಕವಾದುದಾಗಿದೆ. ಪ್ರೆಗ್ನೆನ್ಸಿ ಕಿಟ್ ಗಳ ಸಹಾಯದಿಂದ ಪ್ರಾಥಮಿಕ ಪರೀಕ್ಷೆಯನ್ನು ಸುಲಭದಲ್ಲಿ ಮಾಡಿಕೊಳ್ಳಬಹುದು.

ವಾಕರಿಕೆ

ವಾಕರಿಕೆ

ಅಜೀರ್ಣ ಅಥವ ಪಿತ್ತಗಳ ಸಮಸ್ಯೆಗಳಿಲ್ಲದ ವಾಕರಿಕೆಯೂ ಕೂಡ ಗರ್ಭಿಣಿಯರ ಲಕ್ಷಣಗಳಲ್ಲೊಂದಾಗಿರುತ್ತದೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ಬೆಳಗಿನ ವಾಕರಿಕೆಯೂ ಕೂಡ ಗರ್ಭಿಣಿಯರಲ್ಲಿ ಕಂಡುಬರಬಹುದಾದ ಲಕ್ಷಣವಾಗಿದೆ. ಈ ಬಗೆಯ ವಾಕರಿಕೆಗಳು ಕೆಲವು ಪರಿಮಳವನ್ನು ತೆಗೆದುಕೊಂಡಾಗ ಅಥವ ಕೆಲವು ಆಹಾರ ಪದಾರ್ಥಗಳನ್ನು ನೋಡಿದಾಗ, ತಿಂದಾಗ ಇನ್ನಿತರೆ ಸಂದರ್ಭಗಳಲ್ಲಿ ದಿನದ ಯಾವುದೇ ಸಮಯದಲ್ಲಿಯೂ ಕಾಣಿಸಿಕೊಳ್ಳುವ ಲಕ್ಷಣವಾಗಿದೆ. ಇದರ ತೀವ್ರತೆ ಮಹಿಳೆಯಿಂದ ಮಹಿಳೆಗೆ ಭಿನ್ನವಾಗಿರುತ್ತದೆ ಎನ್ನಬಹುದಾಗಿದೆ.

ಅಸ್ವಸ್ಥತೆ

ಅಸ್ವಸ್ಥತೆ

ನಿಮ್ಮ ಸ್ತನಗಳಲ್ಲಿ ಕಂಡುಬರುವಂತಹ ಅಸ್ವಸ್ಥತೆಯು ನೀವು ಋತುಚಕ್ರದ ಸಮಯದಲ್ಲಿ ಎದುರಿಸುವ ಅಸ್ವಸ್ಥತೆಗಿಂತಲೂ ಹೆಚ್ಚಾಗಿರುವುದು. ಮೊದಲ ತ್ರೈಮಾಸಿಕದಲ್ಲಿ ನೋವು ಗಣನೀಯವಾಗಿ ಕಡಿಮೆಯಾಗುವುದು. ಯಾಕೆಂದರೆ ದೇಹವು ಹೊಸ ಹಾರ್ಮೋನು ಮಟ್ಟಕ್ಕೆ ಹೊಂದಿಕೊಳ್ಳಬೇಕು.

ನಿಶ್ಯಕ್ತಿ

ನಿಶ್ಯಕ್ತಿ

ನಿಶ್ಯಕ್ತಿಯು ಗರ್ಭಧಾರಣೆಯ ಮತ್ತೊಂದು ಸುಳಿವಾಗಿದೆ. ಆಹಾರದ ತೀವ್ರ ಬಯಕೆಯಾಗುವುದು ಕೂಡ ಗರ್ಭಧಾರಣೆಯ ಆರಂಭಿಕ ಲಕ್ಷಣಗಳಲ್ಲಿ ಒಂದಾಗಿದೆ. ನಿಮಗೆ ಮೊದಲು ಇಷ್ಟವಿದ್ದ ಆಹಾರಗಳ ಬಗ್ಗೆ ನಿರಾಸಕ್ತಿ ಮೂಡಬಹುದು.

ಕಳಕೊಂಡ ಅಥವಾ ಹಗುರ ಋತುಚಕ್ರ

ಕಳಕೊಂಡ ಅಥವಾ ಹಗುರ ಋತುಚಕ್ರ

ಈ ಸಮಸ್ಯೆಯು ಗರ್ಭಧಾರಣೆ ವೇಳೆ ಬಂದು ಹೋಗುತ್ತಲಿರುವುದು. ನೀವು ನಿಯಮಿತವಾಗಿ ಋತುಚಕ್ರಕ್ಕೆ ಒಳಗಾಗುತ್ತಿದ್ದರೆ ಕಳಕೊಂಡ, ವಿಳಂಬ ಮತ್ತು ತುಂಬಾ ಲಘುವಾದ ಋತುಚಕ್ರವು ಗರ್ಭಧಾರಣೆಯ ಲಕ್ಷಣಗಳಲ್ಲಿ ಒಂದಾಗಿದೆ.

ಅಸಹನೀಯ ವಾಸನೆ

ಅಸಹನೀಯ ವಾಸನೆ

ಅಸಹನೀಯವಾಗಿರುವ ವಾಸನೆಯು ಗರ್ಭಧಾರಣೆಯ ಮೊದಲ ಲಕ್ಷಣವಾಗಿದೆ. ಹೊಸದಾಗಿ ಮದುವೆಯಾಗಿರುವಂತಹ ಮಹಿಳೆಯರು ಗರ್ಭಧರಿಸಿದ ವೇಳೆಗೆ ಇಂತಹ ದುರ್ವಾಸನೆಯು ಕಂಡುಬರುವುದು ಸಾಮಾನ್ಯವಾಗಿದೆ.

ಮುಟ್ಟಿನ ದಿನಗಳಲ್ಲಿ ಏರುಪೇರು

ಮುಟ್ಟಿನ ದಿನಗಳಲ್ಲಿ ಏರುಪೇರು

ನಿಮ್ಮ ಋತುಚಕ್ರದ ದಿನಗಳಲ್ಲಿನ ಬದಲಾವಣೆಯೂ ಕೂಡ ಗರ್ಭಿಣಿಯಾಗಿರುವ ಮುನ್ಸೂಚನೆಯನ್ನು ಕೊಡುವಂತಹ ಲಕ್ಷಣವೆನಿಸುತ್ತದೆ. ಕೆಲವು ದಿನಗಳು ವ್ಯತ್ಯಾಸವಾಗುವುದು ಸಾಮಾನ್ಯಸಂಗತಿಯಾದರೂ, ಗರ್ಭಿಣಿಯಾಗುವ ನಿರೀಕ್ಷೆಯಲ್ಲಿರುವ ಮಹಿಳೆಯರು ಋತುಚಕ್ರದ ದಿನಗಳ ತಪ್ಪುವಿಕೆ ಅಥವ ವ್ಯತ್ಯಾಸಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸುವುದು ಸಮಂಜಸವಲ್ಲ. ಏಕೆಂದರೆ ಋತುಚಕ್ರವಾಗದೇ ಇರುವಿಕೆಯೂ ಕೂಡ ಗರ್ಭ ಧರಿಸಿದ ಲಕ್ಷಣಗಳಲ್ಲಿ ಅತ್ಯಂತ ಮುಖ್ಯವಾದ ಮತ್ತು ಮಹತ್ವದ ಲಕ್ಷಣಗಳಲ್ಲಿ ಒಂದಾಗಿರುತ್ತದೆ. ಆದ್ದರಿಂದ ಇಂತಹ ಸಂದರ್ಭಗಳಲ್ಲಿ ವೈದ್ಯರನ್ನು ಭೇಟಿ ಆಗುವುದು ಅಥವ ಮೊದಲಿಗೆ ಮನೆಯಲ್ಲಿಯೇ ಪ್ರಾಥಮಿಕ ಪರೀಕ್ಷೆಯನ್ನು ಮಾಡಿಕೊಳ್ಳುವುದು ಸೂಕ್ತವಾದುದು.

ಪದೇ ಪದೇ ಮೂತ್ರವಿಸರ್ಜನೆ

ಪದೇ ಪದೇ ಮೂತ್ರವಿಸರ್ಜನೆ

ಪದೇ ಪದೇ ಮೂತ್ರವಿಸರ್ಜನೆಯಾಗುವುದು ಗರ್ಭಧಾರಣೆಯ ಲಕ್ಷಣಗಳಲ್ಲಿ ಒಂದಾಗಿದೆ. ಮೊದಲ ತಿಂಗಳ ಗರ್ಭಧಾರಣೆ ವೇಳೆ ಇದನ್ನು ಹೊರತುಪಡಿಸಿ, ನಿಮಗೆ ಬೇರೆ ಯಾವುದೇ ರೀತಿಯ ಲಕ್ಷಣಗಳು ಕಾಣಿಸದೆ ಇರಬಹುದು. ಗರ್ಭಧರಿಸಿದ ಒಂದು ತಿಂಗಳ ಬಳಿಕವಷ್ಟೇ ಕೆಲವು ಮಹಿಳೆಯರಲ್ಲಿ ಇಂತಹ ಲಕ್ಷಣಗಳು ಕಂಡುಬರುವುದು. ನೀವು ಮನೆಯಲ್ಲಿ ಗರ್ಭಧಾರಣೆ ಪರೀಕ್ಷೆ ಕಿಟ್ ನಿಂದ ಪರೀಕ್ಷಿಸಿಕೊಳ್ಳಿ. ಇದರ ಬಳಿಕ ವೈದ್ಯರಲ್ಲಿಗೆ ಪರೀಕ್ಷೆಗೆ ತೆರಳಿ.

ಸೆಳೆತಗಳು

ಸೆಳೆತಗಳು

ತಿಂಗಳಿಂದ ತಿಂಗಳು ಬದಲಾದಂತೆ ಗರ್ಭಿಣಿಯರಲ್ಲಿ ವಿವಿಧ ಬಗೆಯ ನೋವುಗಳು ಕಂಡುಬರುತ್ತದೆ. ಇವುಗಳು ಸಾಮಾನ್ಯ ನೋವುಗಳೇ ಆಗಿದ್ದರೂ ಕೆಲವೊಮ್ಮೆ ದೀರ್ಘಕಾಲದವರೆಗೂ ನೋವುಗಳು ಉಳಿಯುವಂತಹ ಉದಾಹರಣೆಗಳನ್ನು ಕಾಣಬಹುದಾಗಿದೆ. ಸಂತಾನೋತ್ಪತ್ತಿಯ ಅಂಗಾಂಗಗಳು ಮಗುವನ್ನು ನಿರ್ವಹಿಸುವ ತಯಾರಿಯಲ್ಲಿರುವುದರ ಫಲವಾಗಿ ಮತ್ತು ಅಂಗಾಂಗಗಳ ಈ ರೀತಿಯ ಬದಲಾವಣೆಗಳ ಪರಿಣಾಮವಾಗಿ ದೇಹದ ವಿವಿಧ ಭಾಗಗಳಲ್ಲಿ ನೋವುಗಳು ಕಾಣಿಸಿಕೊಳ್ಳುತ್ತವೆ. ಕೈ ನೋವು, ಕಾಲು ನೋವು, ಮೊಣಕೈ-ಮೊಣಕಾಲುಗಳಲ್ಲಿ ನೋವುಗಳು, ಬೆನ್ನು ನೋವು ಇನ್ನಿತರೆ ನೋವುಗಳು ಕಾಣಿಸಿಕೊಳ್ಳುತ್ತವೆ.

ತಲೆತಿರುಗುವಿಕೆ

ತಲೆತಿರುಗುವಿಕೆ

ತಲೆ ಸುತ್ತುವುದು ಅಥವ ತೆಲೆತಿರುಗುವುದು ಗರ್ಭಿಣಿಯರ ಸಾಮಾನ್ಯ ಲಕ್ಷಣಗಳಲ್ಲಿ ಒಂದು. ಗರ್ಭಿಣಿಯರಲ್ಲಿ ರಕ್ತದ ಶರ್ಕರ ಪ್ರಮಾಣ ಮತ್ತು ರಕ್ತದೊತ್ತಡ ಕಡಿಮೆಯಾಗುವುದರ ಪರಿಣಾಮವಾಗಿ ತಲೆತಿರುಗುವುದು ಕಂಡುಬರುತ್ತದೆ. ತಲೆಸುತ್ತುವಿಕೆಯನ್ನು ಹೋಗಲಾಡಿಸಲು ಅಥವ ತಡೆಗಟ್ಟಲು ಆದಷ್ಟು ಹೆಚ್ಚಿನ ನೀರನ್ನು ಕುಡಿಯುವುದು ಮತ್ತು ಸೂಕ್ತವಾದ ಆಹಾರವನ್ನು ತೆಗೆದುಕೊಳ್ಳುವುದು ಅತ್ಯಂತ ಅವಶ್ಯಕವಾದುದಾಗಿದೆ. ಒಂದೊಮ್ಮೆ ವಾಕರಿಕೆಯ ಸಮಸ್ಯೆಯಿದ್ದರೂ ಕೂಡ ನಿಮಗೆ ರುಚಿಸುವಂತಹ ಆಹಾರವನ್ನು ಆಯ್ದು ಸೇವಿಸಿದರೆ ಅವು ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಸಹಾಯಕವಾಗುತ್ತದೆ. ಗರ್ಭಿಣಿಯಾಗುವ ನಿರೀಕ್ಷೆಯಲ್ಲಿರುವವರು ಈ ಮೇಲಿನ ಎಲ್ಲಾ ದೈಹಿಕ ಬದಲಾವಣೆಗಳಿಗೊಳಪಡುವುದಷ್ಟೇ ಅಲ್ಲದೆ ಮಾನಸಿಕ ಬದಲಾವಣೆಗಳಿಗೂ ಕೂಡ ತನ್ನನ್ನು ತಾನು ತಯಾರಿಗೊಳಿಸಬೇಕಾಗುತ್ತದೆ. ದೈಹಿಕ ಬದಲಾವಣೆಗಳು ನಿರಂತರವಾಗಿ ಆಗುತ್ತಿರುವ ಈ ದಿನಗಳಲ್ಲಿ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಏಕೆಂದರೆ ಮಾನಸಿಕ ಒತ್ತಡಗಳು, ಚಿಂತೆಗಳು ದೇಹದ ಮೇಲೆಯೂ ಕೂಡ ಪ್ರಭಾವವನ್ನು ಬೀರುತ್ತಿರುತ್ತವೆ. ಗರ್ಭಾವಸ್ಥೆಯ ಮೊದಲ ದಿನಗಳಲ್ಲಿ ತಾಯಿಯ ದೇಹಸ್ಥಿತಿ ಸೂಕ್ಷ್ಮವಾಗಿರುವುದರಿಂದ ಆದಷ್ಟು ಜಾಗರೂಕತೆಯನ್ನು ವಹಿಸುವುದು ಮುಖ್ಯವಾದುದು. ಒತ್ತಡಗಳಿಂದ ಮತ್ತು ಆಯಾಸಗಳಿಂದ ತಮ್ಮನ್ನು ದೂರವಿರಿಸಿಕೊಳ್ಳುವುದರೊಂದಿಗೆ, ನಿಯಮಿತ ಸುಲಭ ಗರ್ಭಿಣಿಯರ ವ್ಯಾಯಾಮಗಳು ಮತ್ತು ಮಾನಸಿಕ ಸಮತೋಲನ ಕಾಪಾಡಿಕೊಳ್ಳಲು ಸೂಕ್ತ ಧ್ಯಾನ ಇತ್ಯಾದಿಗಳನ್ನು ಮಾಡುವುದು ಈ ಸಮಯದಲ್ಲಿ ಸೂಕ್ತವೆನಿಸುತ್ತವೆ.

ಬೆನ್ನು ನೋವು

ಬೆನ್ನು ನೋವು

ಬೆನ್ನಿನ ಕೆಳಭಾಗದಲ್ಲಿ ಮೃದುವಾದ ನೋವು ಉಂಟಾಗುತ್ತದೆ. ಗರ್ಭಾವಸ್ಥೆಯಲ್ಲಿನ ಮಾನಸಿಕ ಮತ್ತು ದೈಹಿಕ ಒತ್ತಡದಿಂದ ಇದು ಸಂಭವಿಸುತ್ತದೆ. ಕೆಲವು ಮಹಿಳೆಯರು ಗರ್ಭಾವಸ್ಥೆಯ ಸಮಯದಲ್ಲಿ ಬೆನ್ನು ನೋವು ಅನುಭವಿಸುತ್ತಾರೆ.

ಬಾಯಿ ಚಪಲ

ಬಾಯಿ ಚಪಲ

ಸಾಮಾನ್ಯಕ್ಕಿಂತ ಹೆಚ್ಚಿನ ಹಸಿವು ನಿಮ್ಮನ್ನು ಕಾಡುತ್ತದೆ. ತಲೆನೋವಿನಿಂದ ಕೂಡಿದ ಖಾಲಿ ಹೊಟ್ಟೆಯಲ್ಲಿ ನೀವು ಏಳುತ್ತೀರಿ ಹಸಿವು ತೀರಿದ ನಂತರವೇ ನಿಮಗೆ ಸಮಾಧಾನವುಂಟಾಗುತ್ತದೆ. ನಿಮಗೆ ಮತ್ತು ನಿಮ್ಮ ಮಗುವಿಗೆ ಹೆಚ್ಚುವರಿ ನ್ಯೂಟ್ರಿಶಿಯನ್‌ನ ಅಗತ್ಯವಿದೆ ಎಂಬುದನ್ನು ಇದು ಸೂಚಿಸುತ್ತದೆ.

English summary

Signs that tell You May Be Pregnant

During pregnancy, a woman's body undergoes many changes, in which some are more noticeable than the others. Cautiously noting early pregnancy symptoms and signs along with at-home and doctor-assisted pregnancy testing will assist you to be ready as early as possible for the changes you'll be experiencing over the months to follow.
X
Desktop Bottom Promotion