For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರಲ್ಲಿ ಮಗು ಆರೋಗ್ಯವಾಗಿದೆ ಎಂದು ಸೂಚಿಸುವ ಲಕ್ಷಣಗಳಿವು

By Sushma Charhra
|

ಸಂಗಾತಿಗಳ ಜೀವನದಲ್ಲಿ ಒಂದು ಮಗುವಿಗಾಗಿ ಪ್ಲ್ಯಾನ್ ಮಾಡುವುದು ಎಂದರೆ ಅದೊಂದು ಜೀವನದ ದೊಡ್ಡ ನಿರ್ಧಾರವಾಗಿರುತ್ತದೆ. ಇದು ತಾಯಿ ಮತ್ತು ತಂದೆ ಇಬ್ಬರಿಗೂ ಹಲವು ರೀತಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಸಮಯವೂ ಆಗಿರುತ್ತದೆ. ಅದು ಜೀವನಶೈಲಿಯ ಹೊಂದಾಣಿಕೆ, ಹಣಕಾಸಿನ ಹೊಂದಾಣಿಕೆ ಅಥವಾ ಇತರೆ ಯಾವುದೇ ರೀತಿಯ ಹೊಂದಾಣಿಕೆ ಕೂಡ ಆಗಿರಬಹುದು.

ಇವೆಲ್ಲವನ್ನೂ ಗಣನೆಗೆ ತೆಗೆದುಕೊಂಡು ನೀವು ಅಂತಿಮವಾಗಿ ನಿಮ್ಮ ಮಗುವಿನ ಜನನಕ್ಕೆ ತಯಾರಾಗಿದ್ದರೆ, ಖಂಡಿತ ನೀವು ನಿಮ್ಮ ಮಗುವಿನ ಆರೋಗ್ಯ ಮತ್ತು ಬೆಳವಣಿಗೆಯ ಬಗ್ಗೆ ಕ್ಷಣಕ್ಷಣವೂ ಕಾತರರಾಗಿರುತ್ತೀರಿ ಮತ್ತು ಕಾಳಜಿ ತೆಗೆದುಕೊಳ್ಳುತ್ತಲೇ ಇರಲು ಬಯಸುತ್ತೀರಿ. ಆದರೆ, ನೀವು ನಿಮ್ಮ ಮಗುವನ್ನು ನೇರವಾಗಿ ನೋಡಲು ಸಾಧ್ಯವಿಲ್ಲದೇ ಇರುವುದರಿಂದಾಗಿ ಹೊಟ್ಟೆಯೊಳಗಿನ ಮಗುವಿನ ಬಗ್ಗೆ ಆಗಾಗ ಚಿಂತೆ ಕಾಡುತ್ತಲೇ ಇರುವುದು ಸಾಮಾನ್ಯ ವಿಚಾರವೇ ಆಗಿರುತ್ತದೆ. ಒಂದು ವೇಳೆ ನಿಮ್ಮದು ಮೊದಲ ಗರ್ಭಧಾರಣೆಯಾಗಿದ್ದರಂತೂ ಇದರ ಚಿಂತೆ ದುಪ್ಪಟ್ಟು ಇರುತ್ತೆ. ಮಗು ಹೇಗಿದೆಯೋ ಏನೋ ಪ್ರಶ್ನೆಯೊಂದು ನಿಮ್ಮ ತಲೆಯಲ್ಲಿ ಸಂಚರಿಸುತ್ತಲೇ ಇರುತ್ತದೆ. ಯಾಕಂದರೆ ಒಂದು ಜೀವಕ್ಕೆ ಜೀವ ಕೊಡುವ ಮೊದಲ ಅನುಭವ ನಿಮಗೆ ಆಗುತ್ತಿರುತ್ತದೆ.

signs of healthy baby

ಆದರೆ, ಈಗಾಗಲೇ ಹಲವಾರು ವಿಧಾನಗಳಿದ್ದು (ಉದಾಹರಣೆಗೆ ಅಲ್ಟ್ರಾಸೌಂಡ್ ) ಆ ಮೂಲಕ ವೈದ್ಯರು ನಿಮ್ಮ ಹೊಟ್ಟೆಯಲ್ಲಿರುವ ನಿಮ್ಮ ಮಗುವಿನ ಆರೋಗ್ಯ ಮತ್ತು ಬೆಳವಣಿಗೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಸಾಧ್ಯವಾಗುತ್ತದೆ. ಆದರೆ ಇದು ಪ್ರತಿದಿನವೂ ನಡೆಯುವ ಪ್ರಕ್ರಿಯೆಯಲ್ಲಿ. ವೈದ್ಯರ ಬಳಿ ಪರೀಕ್ಷೆಗೆ ಹೋದಾಗ ಮಾತ್ರ ನಡೆಯುತ್ತದೆ. ಹಾಗಂತ ನಿಮ್ಮ ಮಗುವಿನ ಬೆಳವಣಿಗೆಯ ಬಗ್ಗೆ ನಿಮಗೆ ಪ್ರತಿದಿನವೂ ತಿಳಿದುಕೊಳ್ಳಲೂ ಸಾಧ್ಯವೇ ಇಲ್ಲ, ಮುಂದಿನ ವೈದ್ಯರ ಅಪಾಯ್ಟ್ ಮೆಂಟ್ ವರೆಗೂ ಕಾಯುತ್ತಲೇ ಇರಬೇಕು ಎಂದರ್ಥವಲ್ಲ. ಬದಲಾಗಿ ಗರ್ಭಿಣಿಯೂ ಕೂಡ ತನ್ನ ಮಗುವಿನ ಆರೋಗ್ಯ ಮತ್ತು ಹೊಟ್ಟೆಯೊಳಗೆ ಮಗು ಬೆಳವಣಿಗೆ ಹೊಂದುತ್ತಿರುವುದ ಬಗ್ಗೆ ತಿಳಿದುಕೊಳ್ಳಬಹುದು. ಅದೇ ಕಾರಣಕ್ಕೆ ಈ ಲೇಖನವು ನಿಮ್ಮ ಸಹಾಯಕ್ಕೆ ಬರಲಿದೆ.

• ತೂಕ ಹೆಚ್ಚಳವಾಗುವುದು

ನೀವು ಗರ್ಭ ಧರಿಸಿದ ಕೂಡಲೇ, ಮುಂದಿನ ಒಂದು ವರ್ಷದ ವರೆಗೆ ಯಾವುದೇ ಕಾರಣಕ್ಕೂ ನಿಮ್ಮ ತೂಕದ ಬಗ್ಗೆ ನೀವು ತಲೆಕೆಡಿಸಿಕೊಳ್ಳಬಾರದು. ನೀವು ಎಂದೂ ಕೂಡ ನಿರೀಕ್ಷಿಸದ ಮಟ್ಟದಲ್ಲಿ ನಿಮ್ಮ ತೂಕ ಹೆಚ್ಚಳವಾಗಬಹುದು. ಅದಕ್ಕೆ ನೀವು ತಯಾರಾಗಿರಬೇಕು. ಆದರೆ ಒಂದು ನೆನಪಿಡಿ. ಆರೋಗ್ಯಕರವಾದ ತೂಕ ಹೆಚ್ಚಳವು ಗರ್ಭಾವಸ್ಥೆಯಲ್ಲಿ ಬಹಳ ಮುಖ್ಯವಾಗಿ ಬೇಕಾಗುತ್ತದೆ. ಒಂದು ಅಂದಾಜು ಲೆಕ್ಕಾಚಾರದ ಪ್ರಕಾರ ತಿಳಿಸುವುದಾದರೆ, ನೀವು ಸುಮಾರು 13 ರಿಂದ 15 ಕೆಜಿ ತೂಕವನ್ನು ನಿಮ್ಮ 9 ತಿಂಗಳ ಗರ್ಭಾವಸ್ಥೆಯ ಸಮಯದಲ್ಲಿ ಹೆಚ್ಚಿಸಿಕೊಳ್ಳಬೇಕು. ಒಂದು ವೇಳೆ ಇದು ಸಾಧ್ಯವಾದರೆ, ಖಂಡಿತ ನಿಮ್ಮ ಮಗು ಆರೋಗ್ಯವಾಗಿದೆ ಎಂಬುದರ ಸಂಕೇತವೇ ಆಗಿದೆ. ಆದರೆ, ಈ ಲೆಕ್ಕಾಚಾರವು ಸ್ವಲ್ಪ ಆಚೆಈಚೆ ಇರಬಹುದು. ಯಾಕೆಂದರೆ ನೀವು ಗರ್ಭ ಧರಿಸುವ ಮುನ್ನ ಹೆಚ್ಚು ತೂಕ ಇರುವವರಾಗಿದ್ದೀರಾ ಅಥವಾ ತೆಳ್ಳಗಿರುವವರಾಗಿದ್ದೀರಾ ಎಂಬುದರ ಆಧಾರದ ಮೇಲೆ ಗರ್ಭಧಾರಣೆಯಲ್ಲಿ ತೂಕದ ವ್ಯತ್ಯಾಸವಿರಬಹುದು ಮತ್ತು ತೂಕ ಹೆಚ್ಚಳ ಅನ್ನುವುದು ಮಹಿಳೆಯರಿಂದ ಮಹಿಳೆಗೆ ಭಿನ್ನವಾಗಿರುತ್ತದೆ. ತೂಕದ ವಿಚಾರದಲ್ಲಿ ನಿಮ್ಮ ವೈದ್ಯರು ನಿಮಗೆ ಯಾವುದೇ ಸಲಹೆಗಳನ್ನು ನೀಡಿದ್ದು, ಅದನ್ನು ನೀವು ಸರಿಯಾಗಿ ಪಾಲಿಸುತ್ತಿದ್ದೀರಿ ಎಂದಾದರೆ ಖಂಡಿತ ನಿಮ್ಮ ಮಗು ನಿಮ್ಮ ಹೊಟ್ಟೆಯೊಳಗೆ ಆರೋಗ್ಯವಾಗಿ ಬೆಳವಣಿಗೆ ಹೊಂದುತ್ತಿದೆ ಎಂತಲೇ ಅರ್ಥ.

• ಹಾರ್ಮೋನುಗಳ ಮಟ್ಟ

ಯಾವುದೇ ಮಹಿಳೆ ಗರ್ಭ ಧರಿಸಲು ಪ್ರಯತ್ನಿಸುತ್ತಿದ್ದಾಳೆ ಅಂದರೆ ಆಕೆ ಗರ್ಭ ಧರಿಸಿದ ಕೂಡಲೇ ಆಕೆಯ ದೇಹದಲ್ಲಿ ಹಲವು ರೀತಿಯ ಹಾರ್ಮೋನುಗಳ ವ್ಯತ್ಯಾಸವಾಗುತ್ತದೆ ಎಂಬುದರ ಅರಿವು ಆಕೆಗಿರಬೇಕು. ನಿಮ್ಮ ದೇಹದ ಈಸ್ಟ್ರೋಜನ್ ಮತ್ತು ಪ್ರೊಜೆಸ್ಟ್ರಾನ್ ಗಳ ಮಟ್ಟವನ್ನು ಅರಿತುಕೊಳ್ಳುವುದು ಬಹಳ ಮುಖ್ಯವಾದ ವಿಚಾರವಾಗಿದೆ ಯಾಕೆಂದರೆ ಇದು ನಿಮ್ಮ ಮತ್ತು ನಿಮ್ಮ ಮಗುವಿನ ಸಂಪೂರ್ಣ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಸಹಕಾರಿಯಾಗಿರುತ್ತದೆ. ಗರ್ಭ ಧರಿಸಿದ ಮಹಿಳೆಯು ಸಾಮಾನ್ಯವಾಗಿ 400ಎಂಜಿ ಯಷ್ಟು ಪ್ರೊಜೆಸ್ಟ್ರಾನ್ ಅನ್ನು ಉತ್ಪಾದನೆ ಮಾಡಬೇಕು. ಎಂಡೋಮೆಟ್ರಿಯಮ್ ಅನ್ನು ಸೆಟ್ ಮಾಡಲು ಇದು ಜವಾಬ್ದಾರಿಯಾಗಿರುತ್ತದೆ ಮತ್ತು ಮುಟ್ಟಿನ ಸ್ಥಿತಿಯನ್ನು ಕಾಪಾಡಲು ಇದು ಸಹಕಾರಿಯಾಗಿದೆ. ಆರೋಗ್ಯಯುತವಾಗಿರುವ ಮಗುವನ್ನು ಸಹಿಸಿಕೊಳ್ಳುವ ತಾಕತ್ತು ಗರ್ಭಾಶಕ್ಕೆ ಸಿಗಬೇಕು ಅಂದರೆ ಗರ್ಭಾಶಯದ ಬೆಳವಣಿಗೆ ಮತ್ತು ಆರೋಗ್ಯ ಬಹಳ ಪ್ರಮುಖವಾಗಿರುತ್ತದೆ. ಆ ನಿಟ್ಟಿನಲ್ಲಿ ಸುಮಾರು 1200 ಗ್ರಾಂನಷ್ಟು ಇಸ್ಟ್ರೋಜನ್ ಪ್ರಮಾಣವು ಪ್ರತಿ ಗರ್ಭಿಣಿಗೂ ಅಗತ್ಯವಿರುತ್ತದೆ. ಹಾಗಾಗಿ ಈ ಎರಡೂ ಹಾರ್ಮೋನುಗಳ ಮಟ್ಟವನ್ನು ಪರೀಕ್ಷಿಸಿಕೊಳ್ಳುವುದು ಬಹಳ ಮುಖ್ಯ.ಒಂದು ವೇಳೆ ಈ ಎರಡೂ ಹಾರ್ಮೋನುಗಳು ಸರಿಯಾದ ಮಟ್ಟದಲ್ಲಿ ನಿಮ್ಮ ದೇಹದಲ್ಲಿ ಇದೆ ಎಂದಾದರೆ ನೀವು ತಲೆ ಕೆಡಿಸಿಕೊಳ್ಳುವ ಅಗತ್ಯವೇ ಇಲ್ಲ. ನಿಮ್ಮ ಹೊಟ್ಟೆಯೊಳಗಿನ ಮಗು ತುಂಬಾ ಸುರಕ್ಷಿತವಾಗಿದೆ ಮತ್ತು ಸರಿಯಾದ ಬೆಳವಣಿಗೆಯನ್ನು ಹೊಂದುತ್ತಿದೆ ಎಂಬುದು ಇದರಿಂದ ಖಾತ್ರಿಯಾಗುತ್ತೆ.

• ಹೊಟ್ಟೆಯ ಬೆಳವಣಿಗೆ

ಪ್ರತಿ ಮಹಿಳೆಯೂ ಕೂಡ ತನ್ನ ಮಗುವನ್ನು ವಿಭಿನ್ನವಾಗಿ ತನ್ನ ಹೊಟ್ಟೆಯೊಳಗೆ ಇಟ್ಟುಕೊಂಡಿರುತ್ತಾರೆ ಎಂಬುದು ನಿಜವಾದ ಸಂಗತಿಯೇ ಆಗಿದೆ. ಮಹಿಳೆಯ ಮೊದಲ ಗರ್ಭಧಾರಣೆಯೋ ಅಥವಾ ಅಲ್ಲವೋ ಅನ್ನುವುದು ಕೂಡ ಹೊಟ್ಟೆಯ ಆಕಾರವನ್ನು ನಿರ್ಧರಿಸುತ್ತದೆ ಎಂಬುದು ಪ್ರಮುಖ ವಿಚಾರವೇ ಆಗಿರುತ್ತದೆ. ಹೊಟ್ಟೆಯೊಳಗೆ ಒಂದು ಮಗುವಿದೆಯಾ ಅಥವಾ ಅವಳಿ ಜವಳಿ ಮಕ್ಕಳು ಇದ್ದಾರಾ ಎಂಬುದು ಕೂಡ ಹೊಟ್ಟೆಯ ಬೆಳವಣಿಗೆಯನ್ನು ನಿರ್ಧರಿಸುತ್ತದೆ. ಹಾಗೆಯೇ ಹಲವಾರು ವಿವಿಧ ಅಂಶಗಳು ಗರ್ಭಿಣಿಯ ಹೊಟ್ಟೆಯ ಬೆಳವಣೆಗೆಯನ್ನು ನಿರ್ಧರಿಸುತ್ತದೆ ಎಂಬುದು ಕೂಡ ನಿಜವಾದ ಸಂಗತಿಯೇ ಆಗಿದೆ. ಮಗುವಿನ ತೂಕವೂ ಕೂಡ ಹೊಟ್ಟೆಯ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ನಿಮ್ಮ ವೈದ್ಯರ ಬಳಿ ರೆಗ್ಯುಲರ್ ಚೆಕ್ ಅಪ್ ಗೆ ತೆರಳುತ್ತಿರಿ ಮತ್ತು ಅವರು ನಿಮಗೆ ಹೊಟ್ಟೆಯ ಬೆಳವಣಿಗೆ ಮತ್ತು ಅದರ ಸೈಜ್ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡುತ್ತಾರೆ. ಅವರ ಮಾಹಿತಿಯನ್ನು ನೀವು ಆಲಿಸಿ ಆ ಪ್ರಕಾರವೇ ನಡೆದರೆ ಖಂಡಿತ ಚಿಂತಿಸುವ ಅಗತ್ಯವಿಲ್ಲ. ಖಂಡಿತ ನಿಮ್ಮ ಹೊಟ್ಟೆಯಲ್ಲಿರುವ ಮಗು ಸುರಕ್ಷಿತವಾಗಿರುತ್ತದೆ.

• ಆರೋಗ್ಯಕಾರಿ ಎದೆಬಡಿತ

ನಾರ್ಮಲ್ ಮನುಷ್ಯರಂತೆ, ಭ್ರೂಣದ ಎದೆಬಡಿತ ಕೂಡ ಭ್ರೂಣದ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುವ ಅಂಶವಾಗಿರುತ್ತದೆ. ಒತ್ತಡ ಪರೀಕ್ಷೆಗಳು, ಸಂಕೋಚನ ಪರೀಕ್ಷೆಗಳಂತ ಕೆಲವು ಪರೀಕ್ಷೆಗಳನ್ನು ಗರ್ಭಿಣಿಯರಿಗೆ ನಡೆಸಲಾಗುತ್ತದೆ ಮತ್ತು ಆ ಮೂಲಕ ನಿಮ್ಮ ಮಗುವಿನ ಸಂಪೂರ್ಣ ಬೆಳವಣಿಗೆಯ ವಿವರವನ್ನು ಪಡೆಯಲಾಗುತ್ತದೆ. ಸಹಜವಾಗಿ, ಇನ್ನೂ ನಿಮ್ಮ ಹೊಟ್ಟೆಯಲ್ಲೇ ಭದ್ರವಾಗಿರುವ ನಿಮ್ಮ ಕಂದಮ್ಮನ ಎದೆಬಡಿತವು ಒಂದು ನಿಮಿಷಕ್ಕೆ 110 ರಿಂದ 160 ಬೀಟ್ಸ್ ಇರುತ್ತದೆ.ಇದನ್ನು ಖಾತ್ರಿಪಡಿಸಿಕೊಳ್ಳಲು ಸಾಧ್ಯವಾದರೆ, ನಿಮ್ಮ ಮಗು ಹೊಟ್ಟೆಯೊಳಗೆ ಸುರಕ್ಷಿತವಾಗಿದೆ ಮತ್ತು ಉಳಿದ ಎಲ್ಲಾ ವಿಚಾರಗಳೂ ಕೂಡ ಸಹಜವಾಗಿಯೇ ನಡೆಯುತ್ತಿದೆ ಎಂಬುದನ್ನು ಇದು ಸೂಚಿಸುತ್ತದೆ.ಈ ರೀತಿಯ ಹಾರ್ಟ್ ಬೀಟ್ ನ್ನು ಗರ್ಭಿಣಿಯು ಮೊದಲ ತ್ರೈಮಾಸಿಕದ ಎರಡನೇ ತಿಂಗಳಿನಿಂದಲೇ ಆರಂಭಿಸಲಾಗುತ್ತೆ 9 ನೇ ತಿಂಗಳ ಕೊನೆವರೆಗೂ ವೈದ್ಯರ ಬಳಿ ತೆರಳಿದಾಗೆಲ್ಲ ಪರೀಕ್ಷೆ ಮಾಡಲಾಗುತ್ತದೆ.

• ಭ್ರೂಣದ ಚಲನೆ

ನಿಜವಾಗಿ ಹೇಳಬೇಕು ಎಂದರೆ ತಾಯಿ ಮತ್ತು ಮಗುವಿನ ನಡುವಿನ ಸಂವಹನವು ಗರ್ಭಧರಿಸಿದಾಗ ನಡೆಯುವುದು ಭ್ರೂಣದ ಚಲನೆಯಿಂದಲೇ ಆಗಿರುತ್ತದೆ. ಎರಡನೇ ತ್ರೈಮಾಸಿಕ ಮಧ್ಯಾರ್ಧದಲ್ಲಿ ಭ್ರೂಣದ ಚಲನೆಯು ಗರ್ಭಿಣಿಯ ಅನುಭವಕ್ಕೆ ಬರಲು ಆರಂಭವಾಗುತ್ತದೆ..ದಿನಗಳು ಕಳೆದಂತೆ ಭ್ರೂಣವು ಒದೆಯುವುದು, ತಿರುಗುವುದನ್ನು ಗರ್ಭಿಣಿ ಅನುಭವಿಸಲು ಸಾಧ್ಯವಾಗುತ್ತದೆ.ವೈದ್ಯರೂ ಕೂಡ ನಿಮ್ಮ ಮಗುವಿನ ಈ ಚಲನೆಯನ್ನು ಗಮನಿಸುತ್ತಾರೆ ಮತ್ತು ಮಗುವಿನ ಬೆಳವಣಿಗೆಯ ಬಗ್ಗೆ ಟ್ರ್ಯಾಕ್ ಮಾಡುತ್ತಾರೆ. ನೀವು ಎಷ್ಟೇ ಅನಾನುಕೂಲದ ಪರಿಸ್ಥಿತಿ ಅನುಭವಿಸುತ್ತಿದ್ದರೂ ಕೂಡ, ನಿಮ್ಮ ಎರಡು ಮತ್ತು ಮೂರನೇ ತ್ರೈಮಾಸಿಕದಲ್ಲಿ ಭ್ರೂಣದ ಚಲನೆಯು ನಿಮ್ಮ ಗಮನಕ್ಕೆ ಬರುತ್ತಿದೆ ಎಂದರೆ ಅದು ನಿಮ್ಮ ಮಗುವಿನ ಆರೋಗ್ಯದ ಸಂಕೇತವಾಗಿರುತ್ತದೆ. ಕೊನೆಯ ತ್ರೈಮಾಸಿಕದಲ್ಲಿ ನಿಮ್ಮ ಮಗುವಿನ ಕಾಲುಗಳ ತುಳಿತವನ್ನು ಕೂಡ ನೀವು ಗಮನಿಸಬಹುದು.
ಭ್ರೂಣದ ಚಲನೆಯ ವಿಧಾನ ಮತ್ತು ಅದರ ತೀವ್ರತೆ, ಪ್ರಾಕಾರ ಎಲ್ಲವೂ ಕೂಡ ಮಹಿಳೆಯಿಂದ ಮಹಿಳೆಗೆ ಮತ್ತು ಗರ್ಭಾವಸ್ಥೆಯಿಂದ ಗರ್ಭಾವಸ್ಥೆಗೆ ಭಿನ್ನವಾಗಿರುತ್ತದೆ. ಆದರೆ ಯಾವುದೇ ರೀತಿಯ ಭ್ರೂಣದ ಚಲನೆಯೂ ಕೂಡ ಭ್ರೂಣವು ಸರಿಯಾದ ಪ್ರಮಾಣದ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಪಡೆಯುತ್ತಿದೆ ಮತ್ತು ಸರಿಯಾಗಿ ಬೆಳವಣಿಗೆ ಹೊಂದುತ್ತಿದೆ ಎಂಬುದರ ಸೂಚನೆಯಾಗಿರುತ್ತದೆ.

• ಪ್ರಸವ ಪೂರ್ವ ಫಲಿತ

ಭ್ರೂಣದ ಚಲನೆಯನ್ನು ನಾವು ಎಷ್ಟು ಪ್ರಮುಖವಾದದ್ದು ಎಂದು ಹೇಳಿದೆವೋ ಹಾಗೆಯೇ ಪ್ರಸವ ಪೂರ್ವ ಫಲಿತ ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಗರ್ಭಾವಸ್ಥೆಯ ಕೊನೆಯ ತ್ರೈಮಾಸಿಕದ ಕೊನೆಯ ದಿನಗಳಲ್ಲಿ ಭ್ರೂಣದ ಚಲನೆಯು ಸ್ಥಗಿತಗೊಳ್ಳುವ ಸಾಧ್ಯತೆಯೂ ಇರುತ್ತದೆ. ಇದು ಆರೋಗ್ಯಕಾರಿ ಗರ್ಭಧಾರಣೆಯ ಸಂಕೇತವಾಗಿರುತ್ತದೆ ಮತ್ತು ಇದು ಒಂದು ರೀತಿಯಲ್ಲಿ ಪ್ರಸವದ ದಿನಗಳು ನಿಮಗೆ ಹತ್ತಿರವಾಗುತ್ತಿದೆ ಎಂಬುದರ ಅಲರಾಂ ಕೂಡ ಆಗಿರುತ್ತದೆ. ಈ ಹಂತದಲ್ಲಿ, ನಿಮ್ಮ ಮಗುವು ಗರ್ಭಕೋಶದಿಂದ ಹೊರಬರಲು ಸನ್ನದ್ಧವಾಗಿರುತ್ತದೆ ಮತ್ತು ಜನ್ಮ ಕಾಲುವೆಯ ಬಳಿ ತನ್ನ ತಲೆಯನ್ನು ಹೊಂದಿರುತ್ತದೆ. ಹಾಗಾಗಿ ನಿಮಗೆ ಭ್ರೂಣದ ಚಲನೆಯು ಕಡಿತಗೊಂಡಿರುವಂತ ಭಾವನೆ ಬರಬಹುದು. ಅಂದರೆ ಇದರರ್ಥ ನಿಮ್ಮ ಮಗು ಹುಟ್ಟಲು ಸನ್ನದ್ಧವಾಗಿದೆ ಎಂಬುದರ ಸೂಚನೆಯಾಗಿದೆ ಮತ್ತು ಅವನು ಅಥವಾ ಅವನು ನಿಮ್ಮ ಹೊಟ್ಟೆಯಲ್ಲಿ ಸುರಕ್ಷಿತವಾಗಿದ್ದಾರೆ ಎಂಬುದು ಖಾತ್ರಿಯಾದಂತೆ.

English summary

Signs Of A Healthy Baby In Pregnancy

Planning a baby is a major life decision in the life of a couple. For both the father and mother, this would mean a lot of adjustments (which may be lifestyle adjustments, financial adjustments or some other type of adjustments). Considering that you have gone through all of that and are finally ready to have a baby, it is obvious that you would leave no stone unturned to ensure that your baby is hale and hearty.
X
Desktop Bottom Promotion