ಗರ್ಭಿಣಿಯರೇ, ನೆನಪಿಡಿ ಪಪ್ಪಾಯಿ ಹಣ್ಣಿನಿಂದ ಆದಷ್ಟು ದೂರವಿರಿ!

Posted By: Prabha Bhat
Subscribe to Boldsky

ನಿಸರ್ಗದ ಕೊಡುಗೆಯೆನಿಸಿದ ತಾಯಿಯಾಗುವ ಅತ್ಯಂತ ಅಮೂಲ್ಯವಾದ ಕ್ಷಣವನ್ನು ಅನ್ನುಭವಿಸಲು ಪ್ರತಿಯೊಬ್ಬ ಮಹಿಳೆಯೂ ಕೂಡ ಬಯಸುವುದು ಸಹಜವಾದುದು. ಹಾಗೆ ಒದಗಿ ಬಂದ ಅವಕಾಶವನ್ನು ಬಳಸಿಕೊಂಡು ತಾಯಿಯಾಗುವ ಅನುಭವವನ್ನು ಹೊಂದುವ ಈ ಪ್ರಕ್ರಿಯೆಯಲ್ಲಿ ಮಹಿಳೆ ಅದೆಷ್ಟೋ ಕಷ್ಟಗಳನ್ನನುಭವಿಸುತ್ತಾಳೆ. ಮಾನಸಿಕ ಮತ್ತು ದೈಹಿಕ ಬದಲಾವಣೆಗಳಿಗೊಳಪಡುವ ಗರ್ಭಿಣಿಯರು ತಮ್ಮೊಳಗೆ ಇನ್ನೊಂದು ಜೀವವನ್ನು ಸಲಹಿ-ಪೋಷಿಸಿ ಅದನ್ನು ಭೂಮಿಗೆ ತರುವಂತಹ ಕಾರ್ಯವನ್ನು ಮಾಡುತ್ತಾಳೆ.

ಇಷ್ಟೆಲ್ಲಾ ಕಷ್ಟಗಳನ್ನು ಅನುಭವಿಸಲು ಸಿದ್ಧರಿರುವ ಗರ್ಭಿಣಿ ಮಹಿಳೆಯು ತನ್ನ ಮಗುವಿನ ಬಗೆಗೆ ಅನೇಕ ಕನಸುಗಳನ್ನು ಹೆಣೆದುಕೊಳ್ಳುತ್ತಾ ಹೋಗುತ್ತಿರುತ್ತಾಳೆ. ಈ ಸಂದರ್ಭಗಳಲ್ಲಿ ಗರ್ಭಿಣಿಯರಲ್ಲಿ ಅನಿರೀಕ್ಷಿತವಾಗಿ ಸಂಭವಿಸುವ ಗರ್ಭಪಾತಗಳು ಆಕೆಯನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿಯೂ ಕುಗ್ಗುವಂತೆ ಮಾಡುತ್ತವೆ. ಇಂತಹ ಗರ್ಭಪಾತಗಳಿಗೆ ಅನೇಕ ಕಾರಣಗಳಿರುತ್ತವೆ. ಕಾರಣಗಳನ್ನು ಹುಡುಕ ಹೊರಟಾಗ ಗರ್ಭಿಣಿಯರಲ್ಲಿನ ದೈಹಿಕವಾದ ಆಂತರಿಕ ಸಮಸ್ಯೆಗಳು, ಮಹಿಳೆಯರ ಗರ್ಭಕೋಶದಲ್ಲಿನ ದೋಷಗಳು, ಅಪಘಾತಗಳು, ಸೂಕ್ತ ಔಷಧೋಪಚಾರಗಳನ್ನು ಪಡೆಯದೆ ಇರುವುದು, ಒತ್ತಡದಿಂದ ಕೂಡಿದ ಜೀವನಕ್ರಮಗಳು, ಅತಿಯಾದ ದೈಹಿಕ ಆಯಾಸಗಳು, ಅಹಾರ ಕ್ರಮದಲ್ಲಿನ ವ್ಯತ್ಯಾಸಗಳು ಇನ್ನಿತರೆ ಕಾರಣಗಳನ್ನು ಗಮನಿಸಬಹುದಾಗಿದೆ.

Papaya

ಅವುಗಳಲ್ಲಿ ಅವೈಜ್ಞಾನಕ ಆಹಾರ ಪದ್ಧತಿಗಳೂ ಕೂಡ ಅನಿರೀಕ್ಷಿತ ಗರ್ಭಪಾತಗಳಿಗೆ ಕಾರಣವಾಗಬಲ್ಲವು. ಒಂಬತ್ತು ತಿಂಗಳುಗಳ ದೀರ್ಘ ಕಾಲದಲ್ಲಿ ಭ್ರೂಣವನ್ನು ತನ್ನ ಗರ್ಭದಲ್ಲಿ ಹೊತ್ತು ಅದನ್ನು ಪೋಷಿಸಿ, ತನ್ನ ಪೋಷಕಾಂಶಗಳನ್ನು ಅದಕ್ಕೆ ಕಾಲ ಕಾಲಕ್ಕೆ ನೀಡುತ್ತಾ ಭ್ರೂಣವನ್ನು ಬೆಳವಣಿಗೆ ಹೊಂದಿದ ಆರೋಗ್ಯಯುತವಾದ ಮಗುವನ್ನಾಗಿ ಪರಿವರ್ತಿಸುವ ಮಹತ್ವದ ಮತ್ತು ಕಷ್ಟಕರವಾದ ಕಾರ್ಯವನ್ನು ಮಾಡುವಂತಹ ಗರ್ಭಿಣಿ ಮಹಿಳೆಯ ಆರೋಗ್ಯವನ್ನು ಕಾಳಜಿಯಿಂದ ಕಾಪಾಡಿಕೊಳ್ಳುವುದು ಅತ್ಯಂತ ಮಹತ್ವದ ಸಂಗತಿಯಾಗಿದೆ.

ಈ ದೀರ್ಘಾವಧಿಯ ಪ್ರಕ್ರಿಯೆಯಲ್ಲಿ ತಾಯಿಯಾಗುವವಳು ಹಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ತನ್ನ ದಿನನಿತ್ಯದ ಚಟುವಟಿಕಗಳನ್ನು ಬಹಳ ಜಾಗರೂಕತೆಯಿಂದ ನಿರ್ವಹಿಸಬೇಕಾಗುತ್ತದೆ. ಅವುಗಳಲ್ಲಿ ಬಹಳ ಮುಖ್ಯವಾದುದು ಆಹಾರಕ್ರಮ. ಆರೋಗ್ಯಕರವಾದ ಮತ್ತು ಸಮತೋಲಿತ ಆಹಾರಕ್ರಮವನ್ನು ಪ್ರತಿಯೊಬ್ಬ ಗರ್ಭಿಣಿ ಸ್ತ್ರೀಯೂ ತಪ್ಪದೇ ಪಾಲಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ ಯಾವ ಬಗೆಯ ಆಹಾರಗಳನ್ನು ಮತ್ತು ಪದಾರ್ಥಗಳನ್ನು ಸೇವಿಸುವುದರಿಂದ ಗರ್ಭಪಾತವಾಗುವಂತಹ ಸಂದರ್ಭಗಳು ಒದಗಿ ಬರಬಹುದೆಂಬ ಮಾಹಿತಿಗಳೂ ಕೂಡ ಎಲ್ಲ ಗರ್ಭಿಣಿಯರಿಗೆ ಇರಬೇಕಾಗುತ್ತದೆ. 

ಆಹಾರ ಪದಾರ್ಥಗಳ ಕೊರತೆ ಮತ್ತು ಅತಿಯಾದ ಆಹಾರ ಸೇವನೆ ಎರಡೂ ಕೂಡ ಮಹಿಳೆಯರ ಆರೋಗ್ಯದ ಮೇಲೆ ಪರಿಣಾಮಗಳನ್ನು ಬೀರುವಂತದ್ದಾಗಿರುತ್ತದೆ. ಅಲ್ಲದೆ ಕೆಲವು ವ್ಯತಿರಿಕ್ತವಾದ ಆರೋಗ್ಯದ ಸಮಸ್ಯೆಗಳು ಹಾಗೂ ಗರ್ಭಾವಸ್ಥೆಯಲ್ಲಿ ಅಡೆತಡೆಗಳನ್ನು ಸೃಷ್ಟಿಸುವ ಸಾಧ್ಯತೆಗಳಿರುತ್ತವೆ ಎನ್ನಲಾಗುತ್ತದೆ. ಇಂತಹ ಹಲವಾರು ಸಂದರ್ಭಗಳನ್ನು ಕೇಳಿರುತ್ತೇವೆ. ಆಹಾರ ಪದಾರ್ಥಗಳಾದ ಪೊಪ್ಪಾಯಿ ಹಣ್ಣು ಮತ್ತು ಮೊಟ್ಟೆಯನ್ನು ಗರ್ಭಿಣಿಯರು ಸೇವಿಸುವುದು ಅಪಾಯಕಾರಿ ಮತ್ತು ಇವು ಕೂಡ ಗರ್ಭಪಾತಕ್ಕೆ ಕಾರಣವಾಗುತ್ತದೆ ಎಂಬ ಸಂಗತಿ ಹಲವರಿಗೆ ತಿಳಿದಿರಲಿಕ್ಕಿಲ್ಲ. ಈ ಲೇಖನದಲ್ಲಿ ಯಾವ ಆಹಾರ ಪದಾರ್ಥಗಳು ಗರ್ಭಪಾತಕ್ಕೆ ಕಾರಣವಾಗುತ್ತವೆ ಎಂಬುದರ ಬಗೆಗೆ ಮಾಹಿತಿಯನ್ನು ತಿಳಿಯೋಣ...

Papaya

ಸಾಮಾನ್ಯವಾಗಿ ಪಪ್ಪಾಯ ಹಣ್ಣು ಒಂದು ಪರಿಪೂರ್ಣವಾದ ಆಹಾರಪದಾರ್ಥವಾಗಿದ್ದು ಇದರ ಸೇವನೆಯಿಂದ ಹಲವು ರೋಗಗಳ ನಿವಾರಣೆಯಾಗುತ್ತವೆ ಎನ್ನಲಾಗುತ್ತದೆ. ಪಪ್ಪಾಯ ಕಾಯಿ ದೇಹದ ರೋಗನಿರೋಧಕ ಶಕ್ತಿಯನ್ನು ಮರಳುವಂತೆ ಮಾಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಜೀರ್ಣಕ್ರಿಯೆಗೆ ಸಹಾಯವನ್ನು ಮಾಡುವುದಲ್ಲದೆ, ಗಾಯಗಳ ಚಿಕಿತ್ಸೆಯಲ್ಲಿಯೂ ಕೂಡ ಪಪ್ಪಾಯ ಕಾಯಿಯನ್ನು ಬಳಸಲಾಗುತ್ತದೆ. ಪಪ್ಪಾಯ ಹಣ್ಣಿನ ರಸವನ್ನು ಸುಟ್ಟಗಾಯಗಳಿಗೆ, ಗುಳ್ಳೆಗಳಿಗೆ ಮತ್ತ ಇತರೆ ಗಾಯಗಳ ಚಿಕಿತ್ಸೆಯಲ್ಲಿ ಬಳಸಬಹುದಾಗಿದೆ. ಅಷ್ಟೇ ಅಲ್ಲದೆ ಪಪ್ಪಾಳೆಯ ಸೇವನೆಯಿಂದ ಮಧಮೇಹದಿಂದ, ಹೃದಯ ಸಂಬಂಧಿ ಖಾಯಿಲೆಗಳಿಂದ ಮತ್ತು ಕ್ಯಾನ್ಸರಿನಂತಹ ಮಾರಕ ಕಾಯಿಲೆಗಳಿಂದ ನಮ್ಮನ್ನು ನಾವು ದೂರವಿರಿಸಿಕೊಳ್ಳಬಹುದು.

ಇಷ್ಟೆಲ್ಲಾ ಪ್ರಯೋಜನಗಳಿರುವ ಪಪ್ಪಾಯ ಕಾಯಿ ಮತ್ತು ಹಣ್ಣುಗಳು ಗರ್ಭಿಣಿಯರ ಮತ್ತು ಗರ್ಭಿಣಿಯಾಗುವ ನಿರೀಕ್ಷೆಯಲ್ಲಿರುವವರಿಗೆ ಮಾತ್ರ ಉತ್ತಮವಾದುದಲ್ಲ ಎನ್ನಲಾಗುತ್ತದೆ. ಪಪ್ಪಾಯ ಹಣ್ಣು ಮತ್ತು ಬೇಯಿಸದ ಮೊಟ್ಟೆ ಇವುಗಳು ಗರ್ಭಪಾತಕ್ಕೆ ಕಾರಣವಾಗಲಾರವು ಎಂದೂ ಹೇಳಲಾಗುತ್ತದೆ. ಆದರೆ ಪಪ್ಪಾಯ ಕಾಯಿ ಮತ್ತು ಹಸಿ ಮೊಟ್ಟೆಗಳನ್ನು ಸೇವಿಸುವುದರಿಂದ ಗರ್ಭಪಾತವಾಗುವ ಸಾಧ್ಯತೆ ಅತ್ಯಂತ ಹೆಚ್ಚಾಗಿರುತ್ತದೆ ಎನ್ನಲಾಗುತ್ತದೆ.

ಆಯುರ್ವೇದದ ಪ್ರಕಾರ ಮೊಟ್ಟೆ ಮತ್ತು ಪಪ್ಪಾಯ ಇವೆರಡೂ ಕೂಡ ಉಷ್ಣಪ್ರಕೃತಿಯನ್ನು ಹೊಂದಿದ ಆಹಾರ ಪದಾರ್ಥಗಳೆನಿಸಿವೆ. ಪಪ್ಪಾಯ ಕಾಯಿಯಲ್ಲಿರುವ ಹಾಲಿನಂತಹ ರಸದಲ್ಲಿ ಪಪೈನ್ ಎಂಬ ಕಿಣ್ವ (ಎನ್ಸೈಮ್ಸ್) ಇರುತ್ತವೆ. ಪಪ್ಪಾಯ ಕಾಯಿಯಲ್ಲಿರುವ ಈ ಎನ್ಸೈಮ್ ಇನ್ನೆರಡು ಎನ್ಸೈಮುಗಳಾದ ಪ್ರೊಸ್ಟಗ್ಲ್ಯಾಂಡಿನ್ ಮತ್ತು ಆಕ್ಸಿಟೊಸಿನ್ ಎಂಬೆರಡು ಎನ್ಸೈನುಗಳ ಕಾರ್ಯಗಳನ್ನೂ ಕೂಡ ಮಾಡುತ್ತದೆ. ಈ ಪ್ರೊಸ್ಟಗ್ಲ್ಯಾಂಡಿನ್ ಮತ್ತು ಆಕ್ಸಿಟೊಸಿನ್ ಎನ್ಸೈಮುಗಳು ಕೃತಕವಾಗಿ ಬಳಸಲ್ಪಡುವ ಪ್ರಸೂತಿ ಉಂಟಾಗಲು ಬಳಸುವಂತದ್ದಾಗಿರತ್ತದೆ. ಈ ಕಾರಣದಿಂದಾಗಿಯೇ ಪಪ್ಪಾಯ ಕಾಯಿಯಲ್ಲಿರುವ ಕಿಣ್ವ ಅವಧಿಪೂರ್ವ ಪ್ರಸೂತಿಯನ್ನು ಮಾಡಿಸುವಂತಹ ಶಕ್ತಿಯನ್ನು ಹೊಂದಿರುತ್ತದೆ.

ಆದ್ದರಿಂದಲೇ ಇವುಗಳನ್ನು ಸೇವಿಸುವುದರಿಂದ ಗರ್ಭಪಾತವಾಗುವ ಮತ್ತು ಹುಟ್ಟಿದ ಮಗುವಿನಲ್ಲಿ ಅಂಗವೈಕಲ್ಯತೆಯಂತಹ ಅಸಾಮಾನ್ಯ ಲಕ್ಷಣಗಳು ಕಂಡುಬರುತ್ತವೆ.  ಕೆಲವು ಅಧ್ಯಯನಗಳ ಪ್ರಕಾರ ಹಸಿರು ಪಪ್ಪಾಯ ಅಥವ ಪಪ್ಪಾಯ ಕಾಯಿಗಳಲ್ಲಿ ಅಸಂಖ್ಯಾತ ಕಿಣ್ವಗಳು ಮತ್ತು ಕೀವುಗಳಿರುತ್ತವೆ. ಇವುಗಳಿಂದ ಗರ್ಭಕೋಶದಲ್ಲಿ ಸೆಳೆತಗಳುಂಟಾಗುವದರ ಕಾರಣದಿಂದಾಗಿ ಗರ್ಭಪಾತಗಳಾಗುವ ಸಾಧ್ಯತೆಗಳು ಅತ್ಯಧಿಕವಾಗಿರುತ್ತವೆ.

ಪಪ್ಪಾಯಲ್ಲಿರುವ ಪ್ರೊಸ್ಟಗ್ಲ್ಯಾಂಡಿನ್ ಮತ್ತು ಆಕ್ಸಿಟೊಸಿನ್ ಕಿಣ್ವಗಳು ಪ್ರಸೂತಿ ಸಂದರ್ಭದಲ್ಲಿ ಅಗತ್ಯವಾಗಿರುವಂತವುಗಳಾಗಿದ್ದರೂ ಅವಧಿಪೂರ್ವ ಗರ್ಭಿಣಿಯರಿಗೆ ಇವು ಅಪಾಯವನ್ನು ಉಂಟುಮಾಡಬಲ್ಲವು. ಗರ್ಭಣಿಯರು ತೆಗೆದುಕೊಳ್ಳಬಹುದಾದ ಹಣ್ಣುಗಳನ್ನು ಸೂಚಿಸುವಾಗ ವೈದ್ಯರುಗಳು ಪಪ್ಪಾಯ ಹಣ್ಣನ್ನೂ ಸೂಚಿಸುವುದನ್ನು ಕೇಳಿರುತ್ತೇವೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಪಪ್ಪಾಯ ಕಾಯಿ ಮತ್ತು ಹಣ್ಣು ಎರಡೂ ಬೇರೆ ಬೇರೆ ರೀತಿಯ ಪರಿಣಾಮಗಳನ್ನು ಗರ್ಭಿಣಿಯರ ಮೇಲೆ ಬೀರುವುದರಿಂದ ವೈದ್ಯರ ಸಲಹೆಯನ್ನು ತಪ್ಪಾಗಿ ಅರ್ಥೈಸಕೊಳ್ಳಬಾರದು. ಪಪ್ಪಾಯ ಹಣ್ಣನ್ನು ಸೇವಿಸಬಹುದೇ ಹೊರತು ಪಪ್ಪಾಯ ಕಾಯಿಯನ್ನಲ್ಲ. 

ಪಪ್ಪಾಯ ಕಾಯಿಯಲ್ಲಿ ವಿಟಮಿನ್ ಸಿ ಅಂಶವು ಭರಪೂರ್ಣವಾಗಿರುವುದರಿಂದ ಇದರ ಸೇವನೆ ಋತುಚಕ್ರದ ಮೇಲೆ ನೇರವಾದ ಪರಿಣಾಮವನ್ನು ಬೀರಿ ಋತುಚಕ್ರ ನಿಗಧಿತ ಅವಧಿಯಲ್ಲಿ ಆಗವಂತೆ ಸಹಾಯವನ್ನು ಮಾಡಬಲ್ಲದಾಗಿದೆ. ಪಪ್ಪಾಯ ಕಾಯಿಯನ್ನು ಸೇವಿಸುವುದರಿಂದ, ದೇಹದಲ್ಲಿನ ಈಸ್ಟ್ರೋಗೆನ್ (ಮದಜನಕ) ಪ್ರಮಾಣ ಹೆಚ್ಚುತ್ತದೆ ಮತ್ತು ತನ್ಮೂಲಕ ಋತುಚಕ್ರವನ್ನು ನಿಯಂತ್ರಿಸುತ್ತದೆ. ಹಿಂದಿನ ಕಾಲದಿಂದಲೂ ಕೂಡ ಜನಸಂಖ್ಯೆಯ ನಿಯಂತ್ರಣದಲ್ಲಿ ಪಪ್ಪಾಯ ಕಾಯಿಗಳನ್ನು ಬಳಸುತ್ತಾ ಬಂದಿರುವ ಉದಾಹರಣೆಗಳಿವೆ. 

"ಗರ್ಭಸ್ರಾವಕ" ಎಂಬ ಪದವು ಗರ್ಭಿಣಿಯರಲ್ಲಿ ಗರ್ಭಪಾತವನ್ನುಂಟುಮಾಡಬಲ್ಲಂತಹ ಪದಾರ್ಥಗಳಿಗೆ ಹೇಳಲಾಗುತ್ತದೆ. ಹಿಂದಿನ ಕಾಲಗಳಲ್ಲಿ ಗರ್ಭಧಾರಣೆಗೆ ಸಿದ್ಧರಿಲ್ಲದ ಅಥವ ಗರ್ಭಧರಿಸುವ ಇಚ್ಚೆಇಲ್ಲದ ಮಹಿಳೆಯರು ಪಪ್ಪಾಯ ಕಾಯಿಯನ್ನು ಸೇವಿಸುತ್ತಿದ್ದರು. ಇಲ್ಲಿ ಪಪ್ಪಾಯ ನೈಸರ್ಗಿಕ ಗರ್ಭನಿರೋಧಕ ಮತ್ತು ಗರ್ಭಸ್ರಾವಕವಾಗ ಬಳಸಲ್ಪಡುತ್ತಿತ್ತು ಹೆಚ್ಚು ಎನ್ನಬಹುದಾಗಿದೆ. 

ಪಪ್ಪಾಯಲ್ಲಿರುವ ಪಪೈನ್ ಎನ್ಸೈಮ್ ಪ್ರೊಜೆಸ್ಟರಾನ್ ಎನ್ಸೈಮನ್ನು ನಿಗ್ರಹಿಸುವುದರಿಂದಾಗಿ ಗರ್ಭಕೋಶದ ಭಿತ್ತಿಯ ಎಂಡೋಮೆಟ್ರಿಯಲ್ ಪೊರೆಯು ಅಪೂರ್ಣ ಮತ್ತು ಅನುಚಿತವಾದ ಬೆಳವಣಿಗೆಯನ್ನು ಹೊಂದುತ್ತದೆ. ಈ ವಾತಾವರಣವು ಭ್ರೂಣದ ಬಳವಣಿಗೆಗೆ ಅನಾನುಕೂಲಕರವಾಗಿರುತ್ತದೆ. ಆದ್ದರಿಂದಲೇ ಪಪ್ಪಾಯ ಕಾಯ ಭ್ರೂಣದ ಬೆಳವಣಿಗಗೆ ಮಾರಣಾಂತಿಕ ಪರಿಣಾಮವನ್ನುಂಟು ಮಾಡಬಲ್ಲದಾಗಿದೆ. 

ಕೇವಲ ಪಪೈನ್ ಎನ್ಸೈಮಿನ ಇರುವಿಕೆಯಷ್ಟೇ ಅಲ್ಲದೆ, ಇದರಲ್ಲಿರುವ ಅಧಿಕ ಪ್ರಮಾಣದ ಸಸ್ಯ ಕ್ಷೀರವನ್ನು ಗರ್ಭದ ಖಳನಾಯಕನೆಂದೇ ಪರಿಗಣಿಸಲಾಗುತ್ತದೆ. ಪಪ್ಪಾಳೆಯಲ್ಲಿರುವ ಸಸ್ಯಕ್ಷೀರವು ಗರ್ಭಾಶಯವನ್ನು ಸಂಕುಚಿತಗೊಳಿಸಿ ತನ್ಮೂಲಕ ಗರ್ಭಪಾತನ್ನುಂಟುಮಾಡುತ್ತದ. ದಿ ಬ್ರಿಟಿಷ್ ಜರ್ನಲ್ ಆಫ್ ನ್ಯೂಟ್ರೀಷಿನ್ ಪ್ರಕಟಿಸಿದ ಅಧ್ಯಯನದಲ್ಲಿ, ಗರ್ಭಿಣಿಯರು ಪಪ್ಪಾಯ ಕಾಯಿಯನ್ನು ಸೇವಿಸುವುದರ ಪರಿಣಾಮಗಳ ಬಗ್ಗೆ ಹೇಳುವ ಮಾತುಗಳನ್ನು ವಿಜ್ಞಾನಿಗಳು ಗಂಭೀರವಾಗಿ ಗಣನೆಗೆ ತೆಗೆದುಕೊಂಡು ಅಭ್ಯಸಿಸಿ, ಅರ್ಥೈಸಿಕೊಂಡು ನಂತರ ನಿಜವೆಂದು ಒಪ್ಪಿಕೊಂಡಿರುವುದನ್ನು ತಿಳಿಸಲಾಗಿದೆ. 

Papaya

ಆದ್ದರಿಂದಲೇ ಗರ್ಭಿಣಿಯರು ಆದಷ್ಟು ಹಸಿಪದಾರ್ಥಗಳಾದ ಹಸಿಯ ಮೊಟ್ಟೆ ಮತ್ತು ಮೊಟ್ಟೆಯಿಂದ ತಯಾರಿಸಿದ ಆಹಾರಪದಾರ್ಥಗಳ ಬಳಕೆಯನ್ನು ಕಡಿಮೆಗೊಳಿಸಬೇಕಾಗಿರುವುದು ಅತ್ಯಂತ ಅವಶ್ಯಕವಾದುದು. ಮೊಟ್ಟೆಯ ಹಳದಿ ಮತ್ತ ಬಿಳಿ ಭಾಗಗಳೆರಡೂ ಕೂಡ ಬೇಯಿಸಿದ ನಂತರ ಘನವಾಗಿದೆಯೇ ಎಂಬುದನ್ನು ಗಮನಿಸಬೇಕಾಗುತ್ತದೆ.

ಆದ್ದರಿಂದ ಪಪ್ಪಾಯ ಕಾಯಿ ಮತ್ತು ಹಸಿ ಮೊಟ್ಟೆಗಳು ಗರ್ಭಿಣಿ ಸ್ತ್ರೀಯರ ಆರೋಗ್ಯಕ್ಕೆ ಸಂಬಂಧಿಸಿದ ಪ್ರಮುಖವಾದ ವಿರೋಧಿಗಳು ಎಂದು ಹೇಳಬಹುದಾಗಿದೆ. ಹಾಗಾಗಿ ಗರ್ಭಿಣಿಯರ ಆರೋಗ್ಯಕ್ಕೆ ಪೂರಕ ಮತ್ತು ಮಾರಕವಾಗಬಲ್ಲ ಆಹಾರಪದಾರ್ಥಗಳ ಬಗೆಗಿನ ಅರಿವನ್ನು ಹೊಂದುವುದು ಅತ್ಯಂತ ಅವಶ್ಯಕವಾದುದಾಗಿದೆ. ನಿಸರ್ಗದತ್ತವಾಗಿ ಹೆಣ್ಣಿಗೆ ಲಭಿಸಿರುವ ಈ ಸುಂದರವಾದ ಅವಕಾಶವನ್ನು, ಸಂತಸವನ್ನು ಅಜಾಗರೂಕತೆಯಿಂದ ಹಾಳುಮಾಡಿಕೊಳ್ಳುವುದು ಎಂದಿಗೂ ಜಾಣತನವಲ್ಲ.

ಗರ್ಭಿಣಿಯರು ತಾವು ಸೇವಿಸುವ ಪ್ರತಿಯೊಂದೂ ಪದಾರ್ಥಗಳ ಬಗೆಗಿನ ಮಾಹಿತಿಯನ್ನು ಅವುಗಳ ಅನುಕೂಲ ಮತ್ತು ಅನಾನುಕೂಲಗಳನ್ನ ತಿಳಿದುಕೊಂಡೇ ಅವುಗಳನ್ನು ಬಳಸುವುದು ಸೂಕ್ತವಾದುದು. ಗರ್ಭಿಣಿಯರು ತಮ್ಮ ಆಹಾರ ಪದ್ಧತಿಯನ್ನು ನಿಗದಿಗೊಳಿಸಿಕೊಳ್ಳಲು ಸೂಕ್ತ ಸಮಯದಲ್ಲಿ ಸೂಕ್ತ ವೈದ್ಯರನ್ನು ಭೇಟಿಮಾಡುವುದು ಸಮಂಜಸವಾದದು. ಆಹಾರಕ್ಕೂ ನಮ್ಮ ದೇಹಕ್ಕೂ ನೇರವಾದ ಪರಿಣಾಮದ ಸಂಬಂಧವಿರುವುದರಿಂದಾಗಿ ಜಾಗರೂಕತೆಯಿಂದ ಇಂತಹ ಆಹಾರಗಳನ್ನು ಬಳಸುವುದು ಬಹುಮುಖ್ಯ.

English summary

How Can Eating Papaya Or Eggs Cause Miscarriage?

Carrying an embryo inside and nurturing it until it turns to a fully developed baby is a herculean task for mothers. They have to stick on to a perfect diet plan and should very well understand the specific food items that are to be avoided during the period of pregnancy. Both the deficiency of and excess of the amount of certain food intake can affect the female body and can cause problems and obstacles during pregnancy. It is often said and heard that papaya and eggs can be the main cause of a miscarriage. Let us see how.