For Quick Alerts
ALLOW NOTIFICATIONS  
For Daily Alerts

  ಗರ್ಭಾವಸ್ಥೆಯಲ್ಲಿ ಪೆಲ್ವಿಕ್ ನೋವನ್ನು ನಿವಾರಿಸುವುದು ಹೇಗೆ?

  |

  ಗರ್ಭಾವಸ್ಥೆ ಎನ್ನುವುದು ಮಹಿಳೆಯರಿಗೆ ಒಂದು ಪ್ರಮುಖವಾದ ಘಟ್ಟ. ತನ್ನ ಜೀವನದ ಪರಿಪೂರ್ಣತೆಯನ್ನು ಗರ್ಭಾವಸ್ಥೆಯಲ್ಲಿ ಅನುಭವಿಸುತ್ತಾರೆ. ಇದು ಮಹಿಳೆಗೆ ಸಂತೋಷ ಹಾಗೂ ಹೆಮ್ಮೆಯನ್ನುಂಟುಮಾಡುವಂತಹ ವಿಚಾರ ಆಗಿರಬಹುದು. ಆದರೆ ಅದರೊಟ್ಟಿಗೆ ದೈಹಿಕವಾಗಿ ಸಾಕಷ್ಟು ನೋವು ಹಾಗೂ ಬದಲಾವಣೆಯನ್ನು ಅನುಭವಿಸಬೇಕು. ಕೆಲವು ಹಂತಗಳಲ್ಲಿ ಮಾನಸಿಕವಾಗಿಯೂ ಆಕೆ ಸದೃಢ ಮನಸ್ಸನ್ನು ತಳೆಯಬೇಕಾಗುವುದು.

  ಗರ್ಭಾವಸ್ಥೆಯಲ್ಲಿ ಕಾಣಿಸಿಕೊಳ್ಳುವ ನೋವು ಕೆಲವೊಮ್ಮೆ ಜೀವಿತಾವಧಿಯವರೆಗೂ ಹಾಗೆಯೇ ಉಳಿದುಕೊಳ್ಳುವ ಸಾಧ್ಯತೆಗಳಿರುತ್ತವೆ. ಗರ್ಭಿಣಿಯಾಗಿರುವಾಗ ಗ್ಯಾಸ್ಟ್ರಿಕ್ ಸಮಸ್ಯೆ, ಮಲಬದ್ಧತೆ, ಪದೇ ಪದೇ ಮೂತ್ರವಿಸರ್ಜನೆ, ಹುಳಿ ತೇಗು, ಎದೆ ಉರಿ, ಕಾಲು ನೋವು, ಬೆನ್ನು ನೋವು ಸೇರಿದಂತೆ ಅನೇಕ ಸಮಸ್ಯೆಗಳು ಕಾಡುವುದು. ಹಾಗಂತ ಯಾವುದೇ ಸಮಸ್ಯೆಗಳಿಗೆ ವಿಶೇಷ ಔಷಧಗಳ ಮೂಲಕ ಆರೈಕೆ ನಡೆಸಲಾಗುವುದಿಲ್ಲ. ಸಮಸ್ಯೆಗಳಿಗೆ ನೀಡುವ ಔಷಧಗಳು ಮಗುವಿನ ಆರೋಗ್ಯದ ಮೇಲೆ ಹಾನಿ ಉಂಟುಮಾಡುವ ಸಾಧ್ಯತೆಗಳಿರುತ್ತವೆ. ಎರಡನೇ ತ್ರೈಮಾಸಿಕಕ್ಕೆ ಕಾಲಿಡುತ್ತಿದ್ದಂತೆಯೇ ಗರ್ಭಾಶಯವು ಪಕ್ಕೆಲುಬನ್ನು ತಲುಪುತ್ತದೆ.

  Pregnant women exercise

  ಈ ಸಂದರ್ಭದಲ್ಲಿ ಭ್ರೂಣವು ಸಾಕಷ್ಟು ಬೆಳವಣಿಗೆ ಹೊಂದಿರುತ್ತವೆ. ಜೊತೆಗೆ ಕೈ-ಕಾಲುಗಳು ಚಲನವಲನ ಮಾಡಲು ಪ್ರಾರಂಭಿಸುತ್ತವೆ. ಇದು ಕೆಲವೊಮ್ಮೆ ತಾಯಿಗೆ ಕಿರಿಕಿರಿ ಉಂಟಾಗಬಹುದು. ಗರ್ಭಕೋಶದ ಒತ್ತಡ ಮೂತ್ರಪಿಂಡಗಳ ಮೇಲೆ ಪ್ರಭಾವ ಬೀರುತ್ತವೆ. ಚರ್ಮದಲ್ಲೂ ಹಿಗ್ಗುವಿಕೆ ಉಂಟಾಗುವುದು. ಇದರಿಂದ ಕೆಲವು ಶಾಶ್ವತವಾದ ಕಲೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ.

  ಹೈಪರ್ ಪಿಗ್ಮೆಂಟೇಶನ್ ದೇಹದ ಎಲ್ಲೆಡೆ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಹಾರ್ಮೋನ್ ಬದಲಾವಣೆಯಿಂದ ದೇಹದಲ್ಲಿ ಅನೇಕ ಬದಲಾವಣೆಗಳು ಹಾಗೂ ಸಮಸ್ಯೆಗಳು ಸಹ ಕಾಣಿಸಿಕೊಳ್ಳುತ್ತವೆ. ಗರ್ಭಾವಸ್ಥೆಯಲ್ಲಿ ಸಾಮಾನ್ಯ ಸಮಸ್ಯೆಗಳಾದ ಬೆನ್ನು ನೋವು ಮೂರನೇ ತ್ರೈಮಾಸಿಕದಲ್ಲಿ ಅಧಿಕವಾಗುವ ಸಾಧ್ಯತೆಗಳಿರುತ್ತವೆ. ಇದರಿಂದ ವಿಶ್ರಾಂತಿ ಪಡೆಯುವುದು ಮತ್ತು ಮಲಗುವುದು ಸಹ ಒಂದು ಸಮಸ್ಯೆಯಾಗಿ ಪರಿಣಮಿಸಬಹುದು. ಅಲ್ಲದೆ ಪೆಲ್ವಿಕ್ ನೋವು ಅಧಿಕವಾಗುವ ಸಾಧ್ಯತೆಗಳಿರುತ್ತವೆ. ಗರ್ಭಾವಸ್ಥೆಯಲ್ಲಿ ಪೆಲ್ವಿಕ್ ನೋವು ಹಾಗೂ ಅದರ ನಿವಾರಣೆಗೆ ಯಾವೆಲ್ಲಾ ಪರಿಹಾರೋಪಾಯಗಳು ಇವೆ ಎಂದು ಬೋಲ್ಡ್ ಸ್ಕೈ ಈ ಮುಂದೆ ವಿವರಿಸಿದೆ.....

  pregnant women

  ಪೆಲ್ವಿಕ್ ನೋವು ಎಂದರೇನು?

  ಪೆಲ್ವಿಕ್ ಮೂಳೆಗಳಲ್ಲಿ ಕಾಣಿಸಿಕೊಳ್ಳುವ ಅಹಿತಕರವಾದ ನೋವನ್ನು ಪೆಲ್ವಿಕ್ ನೋವು ಎಂದು ಕರೆಯಲಾಗುತ್ತದೆ. ಗರ್ಭಿಣಿಯರು ಸಾಮಾನ್ಯವಾಗಿ ಈ ಸಮಸ್ಯೆ ಅಥವಾ ನೋವನ್ನು ಅನುಭವಿಸುತ್ತಾರೆ. ಇದನ್ನು ಗರ್ಭಧಾರಣೆಯ ಸಂಬಂಧಿತ ಶ್ರೋಣಿ ಕುರುಹುಗಳು ಎಂದು ಕರೆಯಲಾಗುತ್ತದೆ. ಇದು ಪ್ರಸವದ ನೋವಿಗಿಂತ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ. ಈ ನೋವು ಮಗುವಿನ ಬೆಳವಣಿಗೆ ಅಥವಾ ಮಗುವಿಗೆ ಯಾವುದೇ ರೀತಿಯ ತೊಂದರೆ ಉಂಟುಮಾಡದು. ಆದರೆ ತಾಯಿಯ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುವುದು.

  ಪೆಲ್ವಿಕ್ ನೋವಿನ ಕುರುಹುಗಳು ಹೇಗಿರುತ್ತವೆ?

  ಮಗುವಿನ ಬೆಳವಣಿಗೆ ಆಗುತ್ತಿದ್ದಂತೆ ಸೊಂಟದ ವಿರುದ್ಧ ದಿಕ್ಕಿನಲ್ಲಿ ಒತ್ತಡ ಉಂಟಾಗುವುದು. ಜೊತೆಗೆ ಸೊಂಟದ ಕಡೆಗೆ ಚಲಿಸುವುದು. ಇದರಿಂದ ಶ್ರೋಣಿ ಕೀಲುಗಳ ಮೇಲೆ ಭಾರವಾದ ಹೊರೆಯು ಬೀಳುವುದು. ಇದರಿಂದಾಗಿ ನೋವು ಕಾಣಿಸಿಕೊಳ್ಳುವುದು. ಈ ನೋವು ಮೆಟ್ಟಿಲನ್ನು ಏರುವಾಗ, ಲಘುವಾದ ನಡಿಗೆ ಮಾಡಿದಾಗ, ಬಟ್ಟೆ ಬದಲಿಸುವಾಗ, ಒಂದೆಡೆಯಲ್ಲಿಯೇ ನಿಂತಿರುವ ಸಂದರ್ಭದಲ್ಲಿ ಈ ನೋವು ಕಾಣಿಸಿಕೊಳ್ಳುತ್ತದೆ. ಗರ್ಭಾವಸ್ಥೆಯಲ್ಲಿ ಕಾಣಿಸಿಕೊಳ್ಳುವ ಈ ನೋವಿನ ನಿವಾರಣೆಗೆ ಕೆಲವು ಪರಿಹಾರ ಕ್ರಮಗಳನ್ನು ಈ ಮುಂದೆ ನೀಡಲಾಗಿದೆ.

  pregnant women

  ಪೆಲ್ವಿಕ್ ವ್ಯಾಯಾಮ

  ಪೆಲ್ವಿಕ್ ನೋವಿನಿಂದ ನೀವು ನಿಮ್ಮ ವೈದ್ಯರನ್ನು ಭೇಟಿ ಮಾಡಿದರೆ ಅವರು ಮೊದಲು ಸೂಚಿಸುವುದು ಕೆಲವು ವ್ಯಾಯಾಮ ಕ್ರಮಗಳು. ಈ ವ್ಯಾಯಾಮಗಳು ಪೆಲ್ವಿಕ್ ನೋವನ್ನು ನಿಯಂತ್ರಿಸುತ್ತವೆ. ಸ್ನಾಯುಗಳು ವಿಶ್ರಮಿಸಲು ಅನುಕೂಲವಾಗುವುದು. ಇದರ ಪರಿಣಾಮವಾಗಿ ನೋವಿನ ಪ್ರಮಾಣವು ತಗ್ಗುವುದು. ವ್ಯಾಯಾಮ ಮಾಡುವ ಮುನ್ನ ಸೂಕ್ತ ರೀತಿಯ ಮಾರ್ಗದರ್ಶನ ಪಡೆದುಕೊಳ್ಳುವುದು ಪ್ರಮುಖವಾದದ್ದು.

  ಆಕ್ಯುಪಂಕ್ಚರ್

  ಗರ್ಭಿಣಿಯರಿಗೆ ಈ ಚಿಕಿತ್ಸೆಯ ವಿಧಾನ ಉತ್ತಮವಾದದ್ದು ಎಂದು ಹೇಳಲಾಗುತ್ತದೆ. ಗರ್ಭಾವಸ್ಥೆಯಲ್ಲಿ ಕಾಣಿಸಿಕೊಳ್ಳುವ ಹೆಚ್ಚಿನ ನೋವುಗಳ ನಿವಾರಣೆಗೆ ಆಕ್ಯುಪಂಕ್ಚರ್ ಅತ್ಯುತ್ತಮ ರೀತಿಯಲ್ಲಿ ಆರೈಕೆ ಮಾಡುವುದು. ಅಲ್ಲದೆ ಗರ್ಭಾವಸ್ಥೆಯ ಪ್ರತಿಯೊಂದು ಹಂತವೂ ಸುಲಭವಾಗುವಂತೆ ಮಾಡುವುದು.

  ಬಿಸಿ ನೀರ ಸ್ನಾನ

  ಗರ್ಭಿಣಿಯರಿಗೆ ಬೆಚ್ಚಗಿನ ನೀರು ಉತ್ತಮ ಆರೈಕೆ ಮಾಡುವುದು. ಪೆಲ್ವಿಕ್ ನೋವು ಹೊಂದಿರುವಾಗ ಬೆಚ್ಚಗಿನ ನೀರು ತುಂಬಿರುವ ತೊಟ್ಟಿಯಲ್ಲಿ ಸ್ವಲ್ಪ ಸಮಯ ವಿಶ್ರಮಿಸಿ. ಇದರಿಂದ ನೋವು ಸುಲಭವಾಗಿ ನಿವಾರಣೆಯಾಗುವುದು. ಜೊತೆಗೆ ಅದರಿಂದ ಉಂಟಾಗುವ ಬಳಲುವಿಕೆಯು ಕಡಿಮೆಯಾಗುವುದು.

  ಬೆಲ್ಲಿ ಸ್ಲಿಂಗ್

  ಉರುಗೋಲುಗಳು ಅಥವಾ ಹೊಟ್ಟೆಯ ಜೋಲಿಗಳಂತಹ ಸಲಕರಣೆಯನ್ನು ಬಳಸಿ. ಇದರಿಂದ ನಿಮ್ಮ ಹೊಟ್ಟೆಯ ತೂಕವನ್ನು ಹತೋಟಿಯಲ್ಲಿಟ್ಟುಕೊಳ್ಳಲು ಸಹಾಯವಾಗುವುದು. ಅಲ್ಲದೆ ಶ್ರೋಣಿ ಸ್ನಾಯುಗಳಿಗೆ ಕೆಲವು ಪರಿಹಾರಗಳು ಲಭ್ಯವಾಗುತ್ತವೆ.

  ವಿಶ್ರಾಂತಿ

  ನೀವು ಶ್ರೋಣಿ ಕುಹರದ ನೋವು ಅಥವಾ ಪೆಲ್ವಿಕ್ ನೋವಿನಿಂದ ಬಳಲುತಿದ್ದರೆ ತಕ್ಷಣವೇ ಎಲ್ಲಾ ಕೆಲಸವನ್ನು ಬಿಟ್ಟು ಮಲಗಿಕೊಳ್ಳಿ. ಇದು ನಿಮ್ಮ ಜಾಣ್ಮೆಯೂ ಆಗುವುದು. ಪೆಲ್ವಿಕ್ ಮೇಲೆ ನಿರಂತರವಾಗಿ ಹೆಚ್ಚಿನ ಒತ್ತಡ ಉಂಟಾದಾಗ ನೋವು ಅತಿಯಾಗುವುದು. ಅಂತಹ ಸಂದರ್ಭದಲ್ಲಿ ಆದಷ್ಟು ವಿಶ್ರಾಂತಿ ಹೊಂದುವುದರಿಂದ ನೋವನ್ನು ನಿವಾರಿಸಿಕೊಳ್ಳಬಹುದು. ಈ ನೋವಿನಿಂದ ಯಾವುದೇ ಮಾನಸಿಕ ಗೊಂದಲಕ್ಕೆ ಒಳಗಾಗದೆ ಆರೋಗ್ಯವನ್ನು ನೋಡಿಕೊಳ್ಳಬೇಕು ಎನ್ನುವುದನ್ನು ಪ್ರತಿಯೊಬ್ಬ ಗರ್ಭಿಣಿಯು ಮನದಟ್ಟು ಮಾಡಿಕೊಳ್ಳಬೇಕು.

  pregnant women

  ಪೆಲ್ವಿಕ್ ನೋವು ಸಾಮಾನ್ಯವಾಗಿ ಮಹಿಳೆಯರಿಗೆ ಎರಡನೇ ತ್ರೈಮಾಸಿಕದಲ್ಲಿ ಸಂಭವಿಸುತ್ತದೆ. ಆದರೆ ಕೆಲವರು ಮೂರನೇ ತ್ರೈಮಾಸಿಕದ ಅಂತ್ಯದ ವರೆಗೂ ಯಾವುದೇ ಸಮಸ್ಯೆಯನ್ನು ಅನುಭವಿಸುವುದಿಲ್ಲ. ನಿರಂತರವಾದ ದೈಹಿಕ ಶ್ರಮದ ಕೆಲಸವನ್ನು ನಿಲ್ಲಿಸುವುದರಿಂದ ಪೆಲ್ವಿಕ್ ನೋವಿನ ಸಮಸ್ಯೆಯನ್ನು ನಿವಾರಿಸಬಹುದು. ಗರ್ಭಾವಸ್ಥೆಯಲ್ಲಿ ಉಂಟಾಗುವ ಪ್ರತಿಯೊಂದು ಸಮಸ್ಯೆ ಹಾಗೂ ಬದಲಾವಣೆಯನ್ನು ವೈದ್ಯರಲ್ಲಿ ಪರೀಕ್ಷಿಸಿಕೊಂಡು, ಮಾಹಿತಿಯನ್ನು ಪಡೆದುಕೊಳ್ಳಲು ಮರೆಯದಿರಿ.

  English summary

  Handling Pelvic Pain During Pregnancy

  The topic of pregnancy creates fervour among women. Though women look forward to holding their baby for the first time after nine long months, they wish they could without the problems and pain associated with the phase. Every woman's body reacts differently during pregnancy. Some women experience certain symptoms, which other women have no idea about. That is why there is a lot of confusion and myths that prevail about pregnancy. During pregnancy, the internal organs of a woman move slightly to accommodate the growing baby in the womb.
  Story first published: Saturday, February 17, 2018, 23:31 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more