For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರಲ್ಲಿ ಎದೆಯುರಿ ಸೃಷ್ಟಿಸುವ ಸಾಮಾನ್ಯ ಆಹಾರಗಳು

By Sushma Charhra
|

ಗರ್ಭಿಣಿಯಾಗಿರುವ ಸಂದರ್ಭವು ಎಷ್ಟು ಸುಂದರವಾಗಿರುವ ಭಾವನೆಯನ್ನು ಕೊಡುತ್ತದೆಯೋ ಅದೇ ರೀತಿ ನಿಮ್ಮ ದೇಹಕ್ಕೆ ಕೆಲವು ಸಮಸ್ಯೆಗಳನ್ನೂ ಕೂಡ ತಂದೊಡ್ಡುತ್ತದೆ. ಕೇವಲ ತಾಯಿ ಮಾತ್ರವಲ್ಲ, ತಂದೆತಾಯಿ ಇಬ್ಬರೂ ಸೇರಿ ತೆಗೆದುಕೊಳ್ಳುವ ಅದ್ಭುತ ನಿರ್ಧಾರವದು. ಒಂದು ಮಗುವನ್ನು ಈ ಭೂಮಿಗೆ ತರುವ ಕೆಲಸವಿದೆಯಲ್ಲಾ ಅದು ನಿಜಕ್ಕೂ ಪ್ರತಿಯೊಬ್ಬರಿಗೂ ಭಾವನಾತ್ಮಕವಾಗಿ ಸೆಳೆಯುವ ಒಂದು ಸಮಯವಾಗಿರುತ್ತದೆ.

ಆದರೆ, 9 ತಿಂಗಳ ಗರ್ಭಾವಸ್ಥೆಯ ಸಮಯ ಅಂದರೆ ಒಂದು ಮಗುವನ್ನು ಹೆರುವ ಘಳಿಗೆವರೆಗಿನ ಸುಸಂದರ್ಭದಲ್ಲಿ ತಾಯಿಯ ದೇಹದಲ್ಲಿ ಹಲವಾರು ರೀತಿಯ ಬದಲಾವಣೆಗಳಾಗುತ್ತದೆ. ಕೆಲವು ಬದಲಾವಣೆಗಳು ಬಾಹ್ಯವಾಗಿರುತ್ತದೆ ಮತ್ತು ಅದನ್ನು ಹೊರಗಿನ ಜನರು ಸುಲಭದಲ್ಲಿ ಗುರುತಿಸುವಂತಿರುತ್ತದೆ. ಅದರಲ್ಲಿ ಪ್ರಮುಖವಾಗಿ ನಿಮ್ಮ ಮುಖವು ಹೊಳೆಯುವಂತಾಗುವುದು, ಕಾಲುಗಳು ಊದಿಕೊಳ್ಳುವುದು, ಹೊಟ್ಟೆ ಬರುವುದು, ಅಥ್ವಾ ಚರ್ಮ ಕಪ್ಪಗಾಗುವುದು ಇತ್ಯಾದಿಗಳು. ..

ಆದರೆ, ಇನ್ನು ಕೆಲವು ಬದಲಾವಣೆಗಳಿರುತ್ತದೆ. ಅವುಗಳು ಆಂತರ್ಯವಾಗಿರುತ್ತದೆ. ಅಂದರೆ ಅದು ಹೊರಗಿನವರಿಗೆ ಗೋಚರಿಸುವುದೇ ಇಲ್ಲ. ಕೇವಲ ಗರ್ಭವತಿ ಮಾತ್ರ ಅನುಭವಿಸುವಂತಾಗಿರುತ್ತದೆ. ಕೇವಲ ಆಕೆಗೆ ಮಾತ್ರ ಅದು ಸಹಿಸಿಕೊಳ್ಳುವಂತ ಪರಿಸ್ಥಿತಿಯನ್ನುಂಟು ಮಾಡಿರುತ್ತದೆ. ಅದರಲ್ಲಿ ಪ್ರಮುಖವಾಗಿ ಎದೆಯುರಿ, ಸ್ತನದ ನೋವು, ಪದೇ ಪದೇ ಮೂತ್ರ ವಿಸರ್ಜನೆಗೆ ತೆರಳಬೇಕು ಅನ್ನಿಸುವುದು ಇತ್ಯಾದಿಗಳು ..

ಎದೆಯುರಿಯ ಬಗ್ಗೆ ಮಾತನಾಡುವುದಾದರೆ, ಮಗುವಿನ ಬೆಳವಣಿಗೆಯ ಹಂತದಲ್ಲಿ ಹೊಟ್ಟೆಯು ಮುಂದೆಬರುವುದರಿಂದಾಗಿ, ಹೊಟ್ಟೆಯ ಮೇಲ್ಬಾಗದ ಸ್ನಾಯುಗಳು ಆರಾಮಾಗಲು ಆರಂಭಿಸುತ್ತವೆ ಮತ್ತು ಇದರ ಪರಿಣಾಮದಿಂದಾಗಿ ಎದೆಯುರಿಯಂತಹ ಸಮಸ್ಯೆಯು ಗರ್ಭಿಣಿಯರನ್ನು ಕಾಡುತ್ತದೆ..ಇದರ ಫಲಿತಾಂಶವಾಗಿ ಜೀರ್ಣಕಾರಿ ಆಮ್ಲಗಳನ್ನು ಅನ್ನನಾಳದವರೆಗೂ ದಾರಿ ಮಾಡಿಕೊಳ್ಳುವುದನ್ನು ತಪ್ಪಿಸಲು ಸ್ನಾಯುಗಳು ಸಮರ್ಥವಾಗಿರುವುದಿಲ್ಲ. ಇದರ ಫಲಿತಾಂಶವಾಗಿ, ನೀವು ಎದೆಯುರಿಯಂತಹ ಸಮಸ್ಯೆಯನ್ನು ಅಧಿಕವಾಗಿ ಅನುಭವಿಸಬೇಕಾಗುತ್ತದೆ.

ಆದರೆ ಇದಕ್ಕಾಗಿ ನೀವೇನೂ ಮಾಡಲು ಸಾಧ್ಯವಿಲ್ಲ ಎಂದು ಅಂದುಕೊಳ್ಳುವ ಅಗತ್ಯವಿಲ್ಲ. ಈ ಲೇಖನದಲ್ಲಿ ನಾವು ಒಂದಷ್ಟು ಆಹಾರಗಳ ಪಟ್ಟಿಯನ್ನು ಮಾಡಿದ್ದೇವೆ ಮತ್ತು ಅವು ಗರ್ಭಿಣಿಯರಲ್ಲಿ ಸಹಜವಾಗಿ ಎದೆಯುರಿ ಸಮಸ್ಯೆಯನ್ನು ತರುತ್ತದೆ. ಹಾಗಾಗಿ ಗರ್ಭಿಣಿ ಸ್ತ್ರೀಯರು ಈ ಆಹಾರಗಳ ಸೇವನೆಯನ್ನು ಅಲ್ಪ ಮಟ್ಟಿಗೆ ಕಡಿಮೆ ಮಾಡಿಕೊಂಡರೆ ಹೆಚ್ಚು ಆರಾಮದಾಯಕವಾಗಿ ಇರಲು ನೆರವಾಗುತ್ತದೆ. ಮತ್ತು ಸ್ವಲ್ಪ ಮಟ್ಟಿಗೆ ಎದೆಯುರಿ ಸಮಸ್ಯೆಯಿಂದ ಮುಕ್ತಿ ಪಡೆಯಬಹುದಾಗಿದೆ...

1.ಚೀಸ್

1.ಚೀಸ್

ನೀವು ಅವರಲ್ಲೊಬ್ಬ ಮಹಿಳೆಯಾಗಿರಬಹುದು ನಿಮಗೆ ಚೀಸ್ ತಿನ್ನದೇ ನಿಮ್ಮ ದಿನವನ್ನು ಕಳೆಯಲು ಸಾಧ್ಯವೇ ಇಲ್ಲದಿರಬಹುದು ಆದರೆ, ನೀವೀಗ ಗರ್ಭಿಣಿ ಎಂಬುದನ್ನು ಮರೆಯಬೇಡಿ ಮತ್ತು ಅದರ ಕಾರಣದಿಂದಾಗಿ ನೀವು ಆದಷ್ಟು ನೆಮ್ಮದಿಯಿಂದ ಇರಬೇಕು ಎಂದರೆ ಚೀಸ್ ನ್ನು ಮರೆತುಬಿಡುವುದು ಒಳ್ಳೆಯದು. ಅದೇ ರೀತಿ, ಅತ್ಯಂತ ಹೆಚ್ಚು ಫ್ಯಾಟ್ ಅಂಶಗಳಿಂದ ಕೂಡಿರುವ ಆಹಾರ ಪದಾರ್ಥಗಳನ್ನು ಕೂಡ ಬಿಟ್ಟುಬಿಡುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು. ಇದೇ ಕಾರಣದಿಂದಾಗಿ ಬೀಜಗಳು ಮತ್ತು ಬೆಣ್ಣೆಹಣ್ಣನ್ನು ತಿನ್ನುವುದನ್ನು ಕಡಿಮೆ ಮಾಡುವುದಕ್ಕೆ ಗರ್ಭಿಣಿಯರಿಗೆ ಸಲಹೆ ನೀಡಲಾಗುತ್ತದೆ.ಇದು ಹೊಟ್ಟೆಯನ್ನು ಖಾಲಿಯಿಡುವುದಕ್ಕೆ ಬಿಡುವುದಿಲ್ಲ. ಇವೆಲ್ಲವೂ ಕೂಡ ಹೊಟ್ಟೆಯ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ ಮತ್ತು ಆಸಿಡ್ ಗಳನ್ನು ಆಸಿಯೋಫಗಸ್ ಮೇಲೆ ದೂಡುತ್ತದೆ. ಇದರ ಪಲಿತಾಂಶದಿಂದಾಗಿ ಎದೆಯುರಿ ಪ್ರಾರಂಭವಾಗುತ್ತದೆ .

2.ಕಾಫಿ ಮತ್ತು ಸೋಡಾ

2.ಕಾಫಿ ಮತ್ತು ಸೋಡಾ

ಗರ್ಭವತಿಯಾಗಿದ್ದಾಗ, ನೀವು ಯಾವುದೇ ರೀತಿಯ ಕೆಫೀನ್ ಅಂಶಗಳನ್ನು ಒಳಗೊಂಡಿರುವ ಪಾನೀಯ ಸೇವನೆ ಅಥವಾ ಸೋಡಾ ಸೇವನೆಯನ್ನು ತ್ಯಜಿಸುವುದು ಬಹಳ ಒಳ್ಳೆಯದು. ನೀವು ಎಲ್ಲಿಗೆ ಹೋದರೂ ಕೂಡ ನೀವು ಕುಡಿಯುವ ಪಾನೀಯದ ಬಗ್ಗೆ ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗಿರುವುದು ನಿಮ್ಮ ಜಬಾವ್ದಾರಿಯಾಗಿರುತ್ತದೆ. ಒಂದು ವೇಳೆ ಅನಿವಾರ್ಯವಾಗಿ ನೀವು ಕಾಫಿ ಕುಡಿಯುವ ಸಂದರ್ಬ ಬಂದಿದ್ದಲ್ಲಿ, ಖಾಲಿ ಹೊಟ್ಟೆಗೆ ಕಾಫಿ ಸೇವಿಸುತ್ತಿಲ್ಲ ಎಂಬ ಬಗ್ಗೆ ಖಾತ್ರಿಯಿರಲಿ.ಯಾವುದೇ ಕಾರಣಕ್ಕೂ ಸೋಡಾ ಮಾತ್ರ ಸೇವಿಸಲೇ ಬೇಡಿ. ಇದು ನಿಮ್ಮ ಎದೆಯುರಿ ಸಮಸ್ಯೆಯನ್ನು ಬಹಳ ಎತ್ತರಕ್ಕೆ ತೆಗೆದುಕೊಂಡು ಹೋಗುತ್ತದೆ.

3.ದನದ ಮಾಂಸ( ಬೀಫ್)

3.ದನದ ಮಾಂಸ( ಬೀಫ್)

ಬೀಫ್ ನಲ್ಲಿ ಅತೀ ಹೆಚ್ಚು ಪ್ರಮಾಣದ ಕೊಬ್ಬಿನಂಶವಿರುತ್ತದೆ ಮತ್ತು ಇದು ಎದೆಯುರಿ ಸಮಸ್ಯೆಯನ್ನು ಗರ್ಭಿಣಿಯರಲ್ಲಿ ಹೆಚ್ಚಿಸುವ ಸಾಧ್ಯತೆಯ ಪ್ರಮಾಣವು ಅಧಿಕವಾಗಿರುತ್ತದೆ. ಬೀಫ್ ನ್ನು ಸೇವಿಸುವುದನ್ನು ಆದಷ್ಟು ಕಡಿಮೆ ಮಾಡಿ.ಒಂದು ವೇಳೆ ಸೇವಿಸುವ ಸಂದರ್ಬ ಬಂದರೆ ಆದಷ್ಟು ಲಘುವಾಗಿ ಸೇವನೆ ಮಾಡಿ.. ಈ ವಿಧದ ತುಣುಕುಗಳು ಕಡಿಮೆ ಕೊಬ್ಬಿನ ಅಂಶವನ್ನು ಹೊಂದಿರುತ್ತವೆ ಮತ್ತು ನಿಮಗೆ ಕಡಿಮೆ ಅಸ್ವಸ್ಥತೆಯನ್ನು ಉಂಟುಮಾಡುತ್ತದೆ.

4.ಚಾಕಲೇಟ್

4.ಚಾಕಲೇಟ್

ಗರ್ಭಿಣಿಯರು ಚಾಕಲೇಟನ್ನು ಅವಾಡ್ ಮಾಡಬೇಕು ಎಂದು ಹೇಳುವುದಕ್ಕೆ ಹಲವಾರು ಕಾರಣಗಳಿವೆ. ಮೊದಲ ಮತ್ತು ಪ್ರಮುಖವಾದ ಕಾರಣವೆಂದರೆ ಚಾಕಲೇಟ್ ಗಳು ಕೆಫೀನ್ ಅಂಶಗಳಿಂದ ಕೂಡಿರುತ್ತದೆ.ಈಗಾಗಲೇ ಹೇಳಿಕೆ ನೀಡಿರುವಂತೆ, ಈ ಕೆಫೀನ್ ಅಂಶಗಳು ಎದೆಯುರಿ ಮತ್ತು ಅಜೀರ್ಣ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಎರಡನೆಯದಾಗಿ ಚಾಕಲೇಟ್ ಗಳು ಥೈಯೋಬ್ರೋಮಿನ್ ಅಂಶಗಳಿಂದ ಶ್ರೀಮಂತವಾಗಿರುತ್ತದೆ. ಥಿಯೋಬ್ರೊಮಿನ್ ಎನ್ನುವುದು ಮಿಥೈಕ್ಸಾಂಥೀನ್ ನ ಒಂದು ವಿಧವಾಗಿದ್ದು ಎದೆಯುರಿಯನ್ನು ಉತ್ತೇಜಿಸುತ್ತದೆ.

5. ಮಸಾಲೆ ಆಹಾರಗಳು

5. ಮಸಾಲೆ ಆಹಾರಗಳು

ಗರ್ಭಿಣಿಯರಲ್ಲಿ ಖಾರದ ಪದಾರ್ಥಗಳು ಅಥವಾ ಮಸಾಲೆಯುಕ್ತ ಪದಾರ್ಥಗಳು ಹೆಚ್ಚು ಎದೆಯುರಿ ಸಮಸ್ಯೆಯನ್ನು ಉಂಟು ಮಾಡುತ್ತದೆ. ಪದಾರ್ಥಗಳಾದ ಕಾಳುಮೆಣಸು, ಮೆಣಸು, ದೊಣ್ಣೆಮೆಣಸು ಹಸಿಯಾಗಿ ಸೇವಿಸುವುದು ಹಿತವಲ್ಲ. ಇವೆಲ್ಲವೂ ಕೂಡ ಎದೆಯುರಿ ಸಮಸ್ಯೆಯನ್ನು ಉಲ್ಬಣ ಮಾಡುವಂತ ಪದಾರ್ಥಗಳಾಗಿವೆ.ಒಂದು ವೇಳೆ ನೀವು ಇಂತಹ ಆಹಾರ ಪದಾರ್ಥಗಳನ್ನು ಸೇವಿಸಬೇಕು ಎಂಬ ಆಸೆಯಾದರೆ, ಅತೀ ಸಣ್ಣ ಪ್ರಮಾಣದಲ್ಲಿ ಇವುಗಳನ್ನು ಸೇವಿಸಿ.

ಕಡಿಮೆ ಪ್ರಮಾಣದಲ್ಲಿ ನಿಮ್ಮ ಬೇಯಿಸುವ ಅಡುಗೆಯಲ್ಲಿ ಹಸಿಮೆಣಸು ಅಥವಾ ಕಾಳುಮೆಣಸನ್ನು ಬಳಕೆ ಮಾಡುವುದರಲ್ಲಿ ಅಂತಹ ದೊಡ್ಡ ಮಟ್ಟದ ಪರಿಣಾಮಗಳು ಆಗುವುದಿಲ್ಲ. ಕಡಿಮೆ ಖಾರಯುಕ್ತವಾಗಿ ಇವುಗಳನ್ನು ನಿಮ್ಮ ಇಷ್ಟದ ಆಹಾರಗಳಲ್ಲಿ ಬಳಕೆ ಮಾಡುವುದರಿಂದಾಗಿ ಎದೆಯುರಿಯಂತಹ ಸಮಸ್ಯೆಯು ನಿಮ್ಮನ್ನು ಹೆಚ್ಚಾಗಿ ಬಾಧಿಸಲಾರದು.

6. ಸಂಸ್ಕರಿಸಿ ಬೇಯಿಸಿದ ಆಹಾರಗಳು

6. ಸಂಸ್ಕರಿಸಿ ಬೇಯಿಸಿದ ಆಹಾರಗಳು

ಹೆಚ್ಚಿನ ಸಂಸ್ಕರಿಸಿದ ಬೇಯಿಸಿದ ಆಹಾರಗಳು ಮಾರ್ಕೆಗಳಲ್ಲಿ ಈಗ ಲಭ್ಯವಿರುತ್ತದೆ ಮತ್ತು ಅವುಗಳು ಹೆಚ್ಚಿನ ಪ್ರಮಾಣದ ಸಂರಕ್ಷಕಗಳನ್ನು ಬಳಕೆ ಮಾಡಲಾಗಿರುತ್ತದೆ. ಬಹಳ ಆಕರ್ಷಣೀಯವಾಗಿ ಕಾಣುವ ಉದ್ದೇಶದಿಂದಾಗಿ, ಅವುಗಳಿಗೆ ಕೃತಕ ಬಣ್ಣಗಳನ್ನು ಕೂಡ ಬಳಸಲಾಗಿರುತ್ತದೆ.. ಇಂತಹ ಅಸುರಕ್ಷಿತ ಆಹಾರ ಅಥವಾ ಪುಷ್ಠೀಕರಿಸಿದ ಹಿಟ್ಟುಗಳು ಗರ್ಭಿಣಿ ಸ್ತ್ರೀಯ ಆರೋಗ್ಯದ ಮೇಲೆ ವ್ಯತಿರಿಕ್ತವಾದ ಪರಿಣಾಮವನ್ನು ಉಂಟು ಮಾಡುವುದರಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಸಂಸ್ಕರಿಸಿದ ಬಿಳಿ ಸಕ್ಕರೆಯು ಅತ್ಯಂತ ಹೆಚ್ಚು ಆಮ್ಲಗಳನ್ನು ಉತ್ಪತ್ತಿ ಮಾಡುವ ವಸ್ತುವಾಗಿದ್ದು, ಗರ್ಭಿಣಿಯರಲ್ಲಿ ಎದೆಯುರಿಯನ್ನು ಪ್ರಚೋದಿಸಲು ಇದು ಕಾರಣವಾಗುತ್ತದೆ. ಹಾಗಾಗಿ ಗರ್ಭಿಣಿಯರು ತಾಜಾವಾಗಿ ಬೇಯಿಸಿದ ಆಹಾರ ಪದಾರ್ಥಗಳನ್ನು ಮಾತ್ರ ಸೇವಿಸುವಂತೆ ಸಲಹೆ ನೀಡಲಾಗುತ್ತದೆ.

7.ಆಲ್ಕೋಹಾಲ್

7.ಆಲ್ಕೋಹಾಲ್

ಮಗುವಿನ ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮವನ್ನು ಉಂಟುಮಾಡುವ ಪ್ರಮುಖ ಪದಾರ್ಥಗಳಲ್ಲಿ ಆಲ್ಕೋಹಾಲ್ ಮೊದಲನೇ ಸ್ಥಾನದಲ್ಲಿ ನಿಲ್ಲುತ್ತದೆ. ಅಷ್ಟೇ ಅಲ್ಲದೆ, ಆಲ್ಕೋಹಾಲ್ ಸೇವನೆಯು ಗರ್ಭಿಣಿಯರಲ್ಲಿ ಎದೆಯುರಿಯನ್ನು ಪ್ರಚೋದಿಸುವ ಪ್ರಮುಖ ವಸ್ತುವಾಗಿದ್ದು, ನಿಮ್ಮನ್ನು ಸಾಕಷ್ಟು ಸಮಸ್ಯೆಗಳಿಗೆ ಒಡ್ಡುವುದರಲ್ಲಿ ಎರಡು ಮಾತಿಲ್ಲ. ಹಾಗಾಗಿ ನೀವು ಯಾವ ಕ್ಷಣದಲ್ಲಿ ಗರ್ಭಿಣಿ ಎಂಬುದು ನಿಮಗೆ ತಿಳಿದು ಬಿಡುತ್ತೋ, ಅದೇ ಕೂಡಲೇ ನಿಮ್ಮ ಜೀವನದಿಂದ ಆಲ್ಕೋಹಾಲನ್ನು ದೂರವೇ ಇರಿಸಬೇಕಾಗಿರುವುದು ಪ್ರತಿಯೊಬ್ಬ ಗರ್ಭಿಣಿಯ ಪ್ರಮುಖ ಕರ್ತವ್ಯಗಳಲ್ಲಿ ಒಂದಾಗಿದೆ ಎಂಬುದನ್ನು ಯಾವುದೇ ಮಹಿಳೆಯು ಕೂಡ ಮರೆಯುವಂತಿಲ್ಲ,

9. ಪುದೀನಾ

9. ಪುದೀನಾ

ಪುದೀನಾ ಸೇವನೆಯಿಂದ ನಿಮ್ಮ ಅನ್ನನಾಳ ಮತ್ತು ಹೊಟ್ಟೆಯ ನಡುವೆ ಇರುವ ಸ್ಫಿನ್ಟರ್ ಸ್ನಾಯುವನ್ನು ಸಡಿಲಗೊಳಿಸುತ್ತದೆ. ಆದರೆ ಗರ್ಭಿಣಿ ಸ್ತ್ರೀಯರಲ್ಲಿ, ಹೊಟ್ಟೆಯ ಸ್ನಾಯುಗಳು ಆಗಲೇ ಸಡಿಲಗೊಳ್ಳುತ್ತಿರುತ್ತದೆ. ಇದರಿಂದ ಹೊಟ್ಟೆ ಆಮ್ಲಗಳು ಎಫೋಫಾಗಸ್ಗೆ ಬಹಳ ಸುಲಭವಾಗಿ ಹೋಗುತ್ತವೆ. ಹಾಗಾಗಿ ಇದು ಎದೆಯುರಿಗೆ ಕಾರಣವಾಗುತ್ತದೆ. ಪುದೀನಾ ಸೇವನೆಯನ್ನು ಗರ್ಭಿಣಿ ಸ್ತ್ರೀಯರಿಗೆ ಕಟ್ಟುನಿಟ್ಟಾಗಿ ನಿರ್ಭಂದಿಸಲಾಗಿದೆ ಮತ್ತು ಪುದೀನಾ ಪ್ಲೇವರ್ ಇರುವಂತ ಆಹಾರಗಳನ್ನು ಕೂಡ ಸೇವಿಸದಿರುವಂತೆ ಸಲಹೆ ನೀಡಲಾಗುತ್ತದೆ.

10. ಬೆಳ್ಳುಳ್ಳಿ

10. ಬೆಳ್ಳುಳ್ಳಿ

ಫ್ರಕ್ಟೋನ್ಸ್ ಬೆಳ್ಳುಳ್ಳಿಯಲ್ಲಿರುವ ಒಂದು ಪ್ರಮುಖ ಅಂಶವಾಗಿದೆ.ಇದು ಅಂಶವನ್ನು ಮಾನವನ ದೇಹವು ಸಂಪೂರ್ಣವಾಗಿ ಜೀರ್ಣಿಸಿಕೊಳ್ಳುವುದಿಲ್ಲ ಮತ್ತು ಅದು ಯಾರದ್ದೇ ದೇಹಕ್ಕೆ ಸೇರಿದರೂ ಕೂಡ ಜೀರ್ಣಕ್ರಿಯೆಯನ್ನು ಅಪೂರ್ಣಗೊಳಿಸುತ್ತದೆ. ಅದು ಗರ್ಭಿಣಿ ಸ್ತ್ರೀಯರಲ್ಲಾದರೆ, ಆಗಲೇ ಜೀರ್ಣಕ್ರಿಯೆ ಪ್ರಕ್ರಿಯೆಯು ಒಂದು ಒತ್ತಡಕ್ಕೆ ಸಿಲುಕಿರುತ್ತದೆ ಅದರ ಜೊತೆಗೆ ಬೆಳ್ಳುಳ್ಳಿಯನ್ನು ಸೇವಿಸಿ ಬಿಟ್ಟರೆ, ಮತ್ತಷ್ಟು ಒತ್ತಡಕ್ಕೆ ಸಿಲುಕಿ ಅದರ ಪರಿಣಾಮದಿಂದಾಗಿ ಎದೆಯುರಿಯ ಸಮಸ್ಯೆಯು ಅವರನ್ನು ಬಾಧಿಸಲು ಆರಂಭಿಸುತ್ತದೆ. ಹಾಗಾಗಿ ಉತ್ತಮ ಅಭ್ಯಾಸವೇನೆಂದರೆ ಗರ್ಭಿಣಿ ಸ್ತ್ರೀಯರು ಯಾವುದೇ ಕಾರಣಕ್ಕೂ ಬೆಳ್ಳುಳ್ಳಿಯನ್ನು ಸೇವಿಸದೇ ಇರುವುದು. ಒಂದು ವೇಳೆ ನಿಮ್ಮ ದೇಹವು ಇದಕ್ಕೆ ಮೊದಲು ಒಗ್ಗಿದ್ದರೂ ಕೂಡ ಗರ್ಭಿಣಿಯಾದಾಗ ಒಗ್ಗದೇ ಇರಬಹುದು. ನಿಮಗೆ ಕಟ್ಟುನಿಟ್ಟಾಗಿ ಇದನ್ನು ಬಿಡಲು ಸಾಧ್ಯವೇ ಇಲ್ಲದಿದ್ದರೆ, ಇದನ್ನು ಬಳಕೆ ಮಾಡುವುದನ್ನು ಗರ್ಭಿಣಿಯಾಗಿದ್ದಾಗ ಕಡಿಮೆಗೊಳಿಸಿಕೊಳ್ಳಿ. ಹೀಗೆ ಮೇಲಿನ ಎಲ್ಲಾ ಆಹಾರಗಳನ್ನು ಸೇವಿಸದೇ ಇರುವುದು ಅಥವಾ ಸೇವಿಸುವುದನ್ನು ಕಡಿಮೆ ಮಾಡಿದರೆ ಎದೆಯುರಿ ಸಮಸ್ಯೆಯಿಂದ ಅಲ್ಪಮಟ್ಟಿಗಾದರೂ ಕೂಡ ನಿವಾರಿಸಿಕೊಳ್ಳಬಹುದು.

English summary

Common Foods That Cause Heartburn During Pregnancy

This article talks about a list of common foods that cause heartburn during pregnancy and how by avoiding the same, you can pave the way for a more comfortable pregnancy.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more