For Quick Alerts
ALLOW NOTIFICATIONS  
For Daily Alerts

ಋತುಚಕ್ರದ ವೇಳೆ ಸೆಕ್ಸ್ ನಡೆಸಿದರೆ ಮಹಿಳೆ ಗರ್ಭಿಣಿ ಆಗುವ ಸಾಧ್ಯತೆ ಇದೆಯೇ?

|

ಗರ್ಭಧರಿಸುವುದು ವಿವಾಹಿತ ಮಹಿಳೆಯರ ಕನಸಾಗಿರುವುದು. ಕೆಲವರಿಗೆ ಈ ಭಾಗ್ಯ ಸಿಕ್ಕಿದರೆ, ಇನ್ನು ಕೆಲವರು ಇದರಿಂದ ವಂಚಿರಾಗುವರು. ಆದರೆ ಗರ್ಭ ಧರಿಸಲಿ ಅಥವಾ ಗರ್ಭ ಧರಿಸದೇ ಇರಲಿ, ನಿಮ್ಮ ಋತುಚಕ್ರದ ಆವರ್ತನದ ಬಗ್ಗೆ ಗಮನಹರಿಸುವುದು ಅತೀ ಅಗತ್ಯವಾಗಿರುವುದು. ಇದರಿಂದ ನೀವು ಫಲವತ್ತತೆ ದಿನಗಳನ್ನು ಸರಿಯಾಗಿ ತಿಳಿದುಕೊಳ್ಳಬಹುದು. ಋತುಚಕ್ರದ ವೇಳೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೆ ಮಹಿಳೆಯು ಗರ್ಭಧರಿಸುವುದಿಲ್ಲವೆನ್ನುವಂತಹ ಸುಳ್ಳು ಹಬ್ಬಿದೆ.

Can You Get Pregnant if You Have Sex on Your Period?

ಹೆಚ್ಚಿನ ಮಹಿಳೆಯರು ಕೂಡ ಇದನ್ನು ನಂಬಿಕೊಂಡಿದ್ದಾರೆ. ಋತುಚಕ್ರದ ವೇಳೆ ಮಹಿಳೆಯರು ಗರ್ಭ ಧರಿಸುವಂತಹ ಸಾಧ್ಯತೆಯು ಕಡಿಮೆಯಿರುವುದು, ಆದರೆ ಇಲ್ಲವೇ ಇಲ್ಲ ಎಂದಲ್ಲ. ಫಲವತ್ತತೆ ದಿನಗಳು ಮತ್ತು ಋತುಚಕ್ರದ ವೇಳೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವ ಬಗ್ಗೆ ಇಲ್ಲಿ ನೀವು ತಿಳಿಯಿರಿ.

ಗರ್ಭ ಧರಿಸುವುದು ಹೇಗೆ?

ಗರ್ಭ ಧರಿಸುವುದು ಹೇಗೆ?

ಗರ್ಭಧಾರಣೆ ಮಾಡುವುದು ಒಂದು ಅದ್ಭುತ ಎನ್ನಬಹುದು. ಪುರುಷನ ವೀರ್ಯವು ಮಹಿಳೆಯ ಅಂಡಾಣುವಿನೊಂದಿಗೆ ಹೋಗಿ ಸೇರಿಕೊಳ್ಳುವುದು. ಮಹಿಳೆಯ ಗರ್ಭಕೋಶವು ಅಂಡಾಣು ಬಿಡುಗಡೆ ಮಾಡಿದ ಬಳಿಕ, ಅದು ಸುಮಾರು 12-24 ಗಂಟೆಗಳ ಕಾಲ ಬದುಕುಳಿಯುವುದು. ಪುರುಷರ ವೀರ್ಯವು ಮೂರು ದಿನಗಳ ಕಾಲ ಉಳಿಯುವುದು. ಮಹಿಳೆಯರ ಸಾಮಾನ್ಯ ಆವರ್ತನವು 28 ದಿನಗಳು ಆಗಿರುವುದು. ಋತುಚಕ್ರ ಆರಂಭವಾದ ದಿನವೇ ಮೊದಲ ದಿನ. ಸಾಮಾನ್ಯವಾಗಿ ಮಹಿಳೆಯು 14 ದಿನಗಳಲ್ಲಿ ಅಂಡಾಣು ಬಿಡುಗಡೆ ಮಾಡುವಳು. ಆದರೆ ಇದು 12, 13 ಅಥವಾ 14 ಆಗಿರಬಹುದು.

ಮಹಿಳೆಯ ಗರ್ಭಕೋಶ

ಮಹಿಳೆಯ ಗರ್ಭಕೋಶ

ಮಹಿಳೆಯ ಗರ್ಭಕೋಶವು ಫಲವತ್ತತೆಗಾಗಿ ಅಂಡಾಣುವನ್ನು ಬಿಡುಗಡೆ ಮಾಡುವುದು. ಈ ವೇಳೆ ಗರ್ಭಕೋಶದಲ್ಲಿ ವೀರ್ಯವು ಸಿಕ್ಕಿದರೆ ಆಗ ಗರ್ಭ ಧರಿಸುವ ಸಾಧ್ಯತೆ ಇದೆ. ಮಹಿಳೆಯ ಆವರ್ತನಕ್ಕೆ ಅನುಗುಣವಾಗಿ ಅಂಡೋತ್ಪತ್ತಿ ಸಮಯವಿರುವುದು. ಕೆಲವು ಮಹಿಳೆಯ ಆವರ್ತನವು 35 ದಿನಗಳು ಆಗಿರುವುದು. ಈ ವೇಳೆ 21ನೇ ದಿನದಲ್ಲಿ ಅಂಡೋತ್ಪತ್ತಿ ಆಗುವುದು. 21 ದಿನಗಳ ಆವರ್ತನ ಹೊಂದಿರುವ ಮಹಿಳೆಯರಲ್ಲಿ ಕೇವಲ 7ನೇ ದಿನದಲ್ಲಿ ಅಂಡೋತ್ಪತ್ತಿ ಆಗುವುದು.

Most Read: ನೀವು ಸೆಕ್ಸ್ ಬಗ್ಗೆ ತಿಳಿಯಬೇಕಾದ ಕೆಲವು ಸಂಗತಿಗಳು ಇಲ್ಲಿವೆ..

ಋತುಚಕ್ರದ ವೇಳೆ ಮಹಿಳೆಯು ಗರ್ಭ ಧರಿಸುವುದು ಹೇಗೆ?

ಋತುಚಕ್ರದ ವೇಳೆ ಮಹಿಳೆಯು ಗರ್ಭ ಧರಿಸುವುದು ಹೇಗೆ?

ಋತುಚಕ್ರದ ಆರಂಭದಲ್ಲಿ ಯೋನಿಯಿಂದ ರಕ್ತಸ್ರಾವವಾಗುವುದು ಎನ್ನುವ ತಪ್ಪು ಕಲ್ಪನೆಯಿದೆ. ಆದರೆ ನೀವು ಹೆಚ್ಚು ಫಲವತ್ತತೆಯಿಂದ ಇರುವಾಗ ಅಂಡೋತ್ಪತ್ತಿ ವೇಳೆ ಕೂಡ ರಕ್ತಸ್ರಾವವಾಗಬಹುದು. ಆಗ ನೀವು ಇದನ್ನು ಋತುಚಕ್ರವೆಂದು ತಪ್ಪು ತಿಳಿಯಬಹುದು. ಈ ವೇಳೆ ಅಸುರಕ್ಷಿತವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಆಗ ನೀವು ಗರ್ಭ ಧರಿಸುವ ಸಾಧ್ಯತೆಯು ಹೆಚ್ಚಾಗಿರುವುದು. ಸಾಮಾನ್ಯ ಮಹಿಳೆಯರಿಗೆ ಅಂಡೋತ್ಪತ್ತಿ ಆವರ್ತನವು ಸುಮಾರು 28-30 ದಿನಗಳ ಮಧ್ಯೆ ಇರುವುದು. ಲೈಂಗಿಕ ಕ್ರಿಯೆ ವೇಳೆ ಸೆಕ್ಸ್ ನಲ್ಲಿ ತೊಡಗಿಕೊಂಡರೆ ಆಗ ನಿಮಗೆ ಮುಂದಿನ ಕೆಲವು ದಿನಗಳ ಕಾಲ ಅಂಡೋತ್ಪತ್ತಿ ಮಾಡಲು ಆಗಲ್ಲ. ಆದರೆ ಕಡಿಮೆ ಆವರ್ತನ ಹೊಂದಿರುವ ಮಹಿಳೆಯರು ಋತುಚಕ್ರ ಹಾಗೂ ಅಂಡೋತ್ಪತ್ತಿಗೆ ಸಮಾನ ಸಮಯ ಹೊಂದಿರುವರು.

72 ಗಂಟೆಗಳ ಕಾಲ ವೀರ್ಯ ಮಹಿಳೆಯ ದೇಹದಲ್ಲಿ ಉಳಿಯುತ್ತದೆ

72 ಗಂಟೆಗಳ ಕಾಲ ವೀರ್ಯ ಮಹಿಳೆಯ ದೇಹದಲ್ಲಿ ಉಳಿಯುತ್ತದೆ

ವೀರ್ಯ ಸ್ಖಲನವಾದ ಸುಮಾರು 72 ಗಂಟೆಗಳ ಕಾಲ ಮಹಿಳೆಯ ದೇಹದಲ್ಲಿ ಅದು ಉಳಿಯುತ್ತದೆ. ಇದರಿಂದ ಋತುಚಕ್ರವು ಕೊನೆಯಾಗುತ್ತಿರುವಂತೆ ಗರ್ಭಧರಿಸುವಂತಹ ಸಾಧ್ಯತೆಯು ಹೆಚ್ಚಾಗಿರುವುದು. ಅಂಡೋತ್ಪತ್ತಿ ಬಗ್ಗೆ ನಿಮಗೆ ಹೆಚ್ಚಿನ ಕುತೂಹಲವಿದ್ದರೆ ಆಗ ನೀವು ಋತುಚಕ್ರದ ಅವಧಿಯನ್ನು ಲೆಕ್ಕ ಹಾಕಬಹುದು. ಇದು ನೀವು ಋತುಚಕ್ರಕ್ಕೆ ಒಳಗಾದ ದಿನ ಮತ್ತು ಮತ್ತೆ ಋತುಚಕ್ರವಾದ ದಿನವನ್ನು ಸೇರಿಸಿಕೊಳ್ಳಬೇಕು. ಕೆಲವು ತಿಂಗಳ ಕಾಲ ನೀವು ಇದನ್ನು ತಿಳಿಯಲು ಪ್ರಯತ್ನಿಸಿದರೆ, ಆಗ ನಿಮಗೆ ಅಂಡೋತ್ಪತ್ತಿ ಸಮಯ ತಿಳಿಯುವುದು.

ಮಹಿಳೆಯು ತನ್ನ ಋತುಚಕ್ರದ ವೇಳೆ ಗರ್ಭ ಧರಿಸುವ ಸಾಧ್ಯತೆಯು ಎಷ್ಟಿದೆ?

ಮಹಿಳೆಯು ತನ್ನ ಋತುಚಕ್ರದ ವೇಳೆ ಗರ್ಭ ಧರಿಸುವ ಸಾಧ್ಯತೆಯು ಎಷ್ಟಿದೆ?

ಅಂಡೋತ್ಪತ್ತಿಯ ಆವರ್ತನಕ್ಕೆ ಅನುಗುಣವಾಗಿ ಮಹಿಳೆಯು ಋತುಚಕ್ರದ ವೇಳೆ ಗರ್ಭ ಧರಿಸುವ ಸಾಧ್ಯತೆಯು ಹೆಚ್ಚುವುದು ಅಥವಾ ಕುಗ್ಗುವುದು. ಸಾಮಾನ್ಯವಾಗಿ ಮಹಿಳೆಯ ತಿಂಗಳ ಆವರ್ತನವು 29 ದಿನಗಳಾಗಿರುವುದು. ಇನ್ನು ಕೆಲವು ಮಹಿಳೆಯರಲ್ಲಿ ಇದು 20-40 ದಿನಗಳು ಅಥವಾ ಅದಕ್ಕಿಂತಲೂ ದೀರ್ಘವಾಗಬಹುದು.

ರಕ್ತಸ್ರಾವವು ಆರಂಭವಾಗಿ ಒಂದು ಅಥವಾ ಎರಡು ದಿನಗಳಲ್ಲಿ ಆಕೆ ಗರ್ಭ ಧರಿಸುವಂತಹ ಸಾಧ್ಯತೆಯು ಶೂನ್ಯವಾಗಿರುವುದು. ಆದರೆ ಇದರ ಬಳಿಕ ಆಕೆಗೆ ರಕ್ತಸ್ರಾವವಾಗುತ್ತಿದ್ದರೂ ಗರ್ಭಧರಿಸುವ ಸಾಧ್ಯತೆಯು ಹೆಚ್ಚಾಗಿರುವುದು. ಋತುಚಕ್ರವಾದ ಬಳಿಕ 13ನೇ ದಿನದಲ್ಲಿ ಗರ್ಭಧರಿಸುವ ಸಾಧ್ಯತೆಯು ಶೇ.9ರಷ್ಟಿರುವುದು. ಇದು ಕಡಿಮೆಯಾಗಬಹುದು. ಆದರೆ ಋತುಚಕ್ರದ ವೇಳೆ ಮಹಿಳೆಯು ಗರ್ಭ ಧರಿಸುವುದೇ ಇಲ್ಲವೆಂದು ಶೇ.100ರಷ್ಟು ಖಚಿತವಾಗಿ ಹೇಳಲು ಸಾಧ್ಯವಿಲ್ಲ.

Most Read: ತನ್ನ ಬಾಯ್ ಫ್ರೆಂಡ್‌ನ ಶಿಶ್ನಕ್ಕೆ ಚಿಲ್ಲಿ ಸಾಸ್ ಹಾಕಿದ ಮಹಿಳೆ!!!

ಗರ್ಭನಿರೋಧಕ ಮುನ್ನೆಚ್ಚರಿಕೆಗಳು

ಗರ್ಭನಿರೋಧಕ ಮುನ್ನೆಚ್ಚರಿಕೆಗಳು

ನೀವು ಗರ್ಭ ಧರಿಸಲು ಪ್ರಯತ್ನಿಸುತ್ತಾ ಇದ್ದರೆ, ನಿಮ್ಮ ಋತುಚಕ್ರದ ಅವಧಿಯು 28 ದಿನಗಳಿಗಿಂತ ಕಡಿಮೆ ಆಗಿರದೆ ಇದ್ದರೆ, ಆಗ ನೀವು ಗರ್ಭಧಾರಣೆ ಮಾಡುವಂತಹ ಸಾಧ್ಯತೆಯು ತುಂಬಾ ಕಡಿಮೆ. ನಿಮಗೆ ಗರ್ಭ ಧರಿಸಲು ಇಷ್ಟವಿಲ್ಲದೆ ಇದ್ದರೆ ಆಗ ನೀವು ಪ್ರತೀ ಸಲ ಸುರಕ್ಷಿತವಾಗಿ ಸೆಕ್ಸ್ ನಡೆಸುವುದು ಒಳ್ಳೆಯದು. ನೀವು ಕಾಂಡೋಮ್ ಬಳಸಬಹುದು ಅಥವಾ ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸಬಹುದು. ಆದರೆ ಮಾತ್ರೆಗಳಿಂದ ಹರ್ಪಿಸ್, ಗೊನೊರಿಯಾ, ಅಥವಾ ಕ್ಲಮೈಡಿಯದಂತಹ ಲೈಂಗಿಕ ರೋಗಗಳನ್ನು ತಡೆಯಲು ಸಾಧ್ಯವಿಲ್ಲ. ಸೋಂಕಿನಿಂದ ತಪ್ಪಿಸಿಕೊಳ್ಳಲು ಸಂಗಾತಿಗೆ ಕಾಂಡೋಮ್ ಧರಿಸಲು ಹೇಳಿ.

ಕೊನೆಯ ಮಾತು…

ಕೊನೆಯ ಮಾತು…

ಮಹಿಳೆಯರ ಋತುಚಕ್ರದ ಅವಧಿಯು ಒಬ್ಬರಿಗಿಂತ ಒಬ್ಬರಿಗೆ ಭಿನ್ನವಾಗಿರುವುದು. ಕೆಲವೊಂದು ಸಲ ಋತುಚಕ್ರದ ವೇಳೆ ಸೆಕ್ಸ್ ನಿಂದ ಗರ್ಭಧರಿಸಬಹುದು. ಋತುಚಕ್ರದ ಆರಂಭದ ದಿನಗಳಲ್ಲಿ ಸೆಕ್ಸ್ ನಿಂದ ಗರ್ಭ ಧರಿಸುವುದು ಕಡಿಮೆ. ಆದರೆ ಇದರ ಬಳಿಕದ ದಿನಗಳಲ್ಲಿ ಸಾಧ್ಯತೆಯು ಹೆಚ್ಚುವುದು. ನೀವು ಗರ್ಭ ಧರಿಸಲು ಪ್ರಯತ್ನಿಸುತ್ತಿದ್ದರೆ, ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಸಮಯ ಅಸುರಕ್ಷಿತ ಸೆಕ್ಸ್ ನಡೆಸಿಯೂ ಗರ್ಭ ಧರಿಸದೆ ಇದ್ದರೆ ಆಗ ನೀವು ವೈದ್ಯರನ್ನು ಭೇಟಿಯಾಗಬೇಕು. ಅವರು ಅಂಡೋತ್ಪತ್ತಿಯ ದಿನವನ್ನು ನಿಮಗೆ ಸರಿಯಾಗಿ ತಿಳಿಸಿಕೊಡುವರು.

ಪಿರಿಯೆಡ್ಸ್ ಸಂದರ್ಭದಲ್ಲಿ ಸೆಕ್ಸ್ ನಡೆಸಬಹುದೇ?

ಪಿರಿಯೆಡ್ಸ್ ಸಂದರ್ಭದಲ್ಲಿ ಸೆಕ್ಸ್ ನಡೆಸಬಹುದೇ?

ಪಿರಿಯೆಡ್ಸ್ ಸಂದರ್ಭದಲ್ಲಿ ಲೈಂಗಿಕ ಕ್ರಿಯೆ ನಡೆಸೋದರಿಂದ ನಿಮಗೆ ಕಂಫರ್ಟೇಬಲ್ ಅನಿಸದೇ ಇರಬಹುದು. ಜೊತೆಗೆ ನಿಮ್ಮ ಬೆಡ್‌ಶೀಟ್‌ನಲ್ಲಿ ರಕ್ತದ ಕಲೆಗಳಾಗುತ್ತವೆ. ಪಿರಿಯೆಡ್ಸ್ ಸಂದರ್ಭ ಲೈಂಗಿಕ ಕ್ರಿಯೆ ನಡೆಸಬಹುದೋ ಇಲ್ಲವೋ, ಗರ್ಭ ಧರಿಸ್ತಾರೋ ಇಲ್ಲವೋ ಎನ್ನುವ ಬಗ್ಗೆ ಬಹಳಷ್ಟು ಜನರಲ್ಲಿ ಪ್ರಶ್ನೆಗಳಿವೆ, ಈ ಲೇಖನದಲ್ಲಿ ನಾವು ಸಾಮಾನ್ಯ ಜನರಿಗೆ ಪಿರಿಯೆಡ್ಸ್ ಹಾಗೂ ಸೆಕ್ಸ್ ಬಗೆಗಿರುವ ಕೆಲವು ಸಂದೇಹಗಳನ್ನು ನಿವಾರಿಸಲು ಪ್ರಯತ್ನಿಸಿದ್ದೇವೆ. ಮುಂದೆ ಓದಿ

ಮುಟ್ಟಿನ ರಕ್ತವು ಪುರುಷರ ಶಿಶ್ನಕ್ಕೆ ಹಾನಿಕಾರವಲ್ಲ

ಮುಟ್ಟಿನ ರಕ್ತವು ಪುರುಷರ ಶಿಶ್ನಕ್ಕೆ ಹಾನಿಕಾರವಲ್ಲ

ಬಹಳಷ್ಟು ಮಂದಿಗೆ ಮುಟ್ಟಿನ ರಕ್ತದ ಬಗ್ಗೆ ತಪ್ಪು ತಿಳುವಳಿಕೆ ಹೊಂದಿದ್ದಾರೆ. ಅದು ಕೆಟ್ಟ ರಕ್ತ. ಅದರಿಂದ ಸೋಂಕು ಹರಡುತ್ತದೆ ಎನ್ನುವ ಭಾವನೆ ಅವರಲ್ಲಿದೆ. ಮುಟ್ಟಿನ ರಕ್ತವು ದೇಹಕ್ಕೆ ಅಗತ್ಯವಿಲ್ಲದ ಆರೋಗ್ಯಕರ ರಕ್ತ ಹಾಗೂ ಅಂಗಾಂಶಗಳ ಸಂಯೋಜನೆಯಾಗಿದೆ. ಇದರಿಂದ ಯಾವುದೇ ರೀತಿಯ ಹಾನಿಯಿಲ್ಲ.

ರಕ್ತದ ಬಿಡುಗಡೆಯ ವೇಗವನ್ನು ಹೆಚ್ಚಿಸಬಹುದು

ರಕ್ತದ ಬಿಡುಗಡೆಯ ವೇಗವನ್ನು ಹೆಚ್ಚಿಸಬಹುದು

ಸಂಭೋಗೋದ್ರೇಕದಿಂದ ಮುಟ್ಟಿನ ರಕ್ತದ ಬಿಡುಗಡೆಯ ವೇಗವನ್ನು ಹೆಚ್ಚಿಸಬಹುದು. ಎಂಡೊಮೆಟ್ರಿಯಲ್ ಭಾಗದಲ್ಲಿನ ತ್ಯಾಜ್ಯವನ್ನು ದೇಹದಿಂದ ಹೊರಹಾಕುವ ದರವನ್ನು ಹೆಚ್ಚಿಸಬಹುದು. ಇದರಿಂದ ನಿಮ್ಮ ಪಿರಿಯೆಡ್ಸ್ ಅವಧಿಯ ಕಡಿಮೆಯಾಗುವ ಸಾಧ್ಯತೆ ಇದೆ.

Most Read: ಸೆಕ್ಸ್ ವೇಳೆ ದೇಹದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ ನೋಡಿ..

ನೈಸರ್ಗಿಕ ಲ್ಯುಬ್ರಿಕೆಂಟ್ ಆಗಿ ಕೆಲಸ ಮಾಡುತ್ತದೆ

ನೈಸರ್ಗಿಕ ಲ್ಯುಬ್ರಿಕೆಂಟ್ ಆಗಿ ಕೆಲಸ ಮಾಡುತ್ತದೆ

ನೀವು ಪಿರಿಯೆಡ್ಸ್ ಸಂದರ್ಭ ಸೆಕ್ಸ್ ಮಾಡುವುದಾದರೆ ನಿಮಗೆ ಯಾವುದೇ ರೀತಿಯ ಲ್ಯುಬ್ರಿಕೆಂಟ್‌ನ ಅಗತ್ಯವಿಲ್ಲ. ಯಾಕೆಂದರೆ ಮಹಿಳೆಯರ ಮುಟ್ಟಿನ ರಕ್ತವೇ ನೈಸರ್ಗಿಕ ಲ್ಯುಬ್ರಿಕೆಂಟ್ ಆಗಿ ಕೆಲಸ ಮಾಡುತ್ತದೆ,

ಲೈಂಗಿಕ ರೋಗಗಳು ಹರಡುವ ಸಾಧ್ಯತೆ

ಲೈಂಗಿಕ ರೋಗಗಳು ಹರಡುವ ಸಾಧ್ಯತೆ

ಪಿರಿಯೆಡ್ಸ್ ಸಂದರ್ಭದಲ್ಲಿ ಸೆಕ್ಸ್ ಮಾಡೋದರಿಂದ ಲೈಂಗಿಕವಾಗಿ ಹರಡುವ ರೋಗಗಳಿಗೆ ಆಹ್ವಾನ ನೀಡಿದಂತಾಗುತ್ತದೆ. ಈ ಸಂದರ್ಭದಲ್ಲಿ ಗರ್ಭ ಕೋಶ ಹೆಚ್ಚು ತೆರೆದಿರುವುದರಿಂದ ಸೋಂಕು ಹರಡುವ ಸಾಧ್ಯತೆಯೂ ಹೆಚ್ಚು ಇರುತ್ತದೆ.

 ಗರ್ಭಧರಿಸುವ ಸಾಧ್ಯತೆ ಇದೆ

ಗರ್ಭಧರಿಸುವ ಸಾಧ್ಯತೆ ಇದೆ

ಮುಟ್ಟಿನ ಸಂದರ್ಭದಲ್ಲಿ ಸೆಕ್ಸ್ ಮಾಡಿದ್ರೆ ಗರ್ಭಿಣಿ ಆಗುತ್ತಾರಾ ಎನ್ನುವ ಪ್ರಶ್ನೆ ಹಲವರಲ್ಲಿದೆ. ಹೌದು. ಈ ಸಂದರ್ಭ ಸೆಕ್ಸ್ ಮಾಡಿದ್ರೆ ಗರ್ಭಧರಿಸೋ ಸಾಧ್ಯತೆ ಇದೆ. ಯಾಕೆಂದರೆ ಈ ಸಂದರ್ಭದಲ್ಲೂ ಅಂಡೋತ್ಪತ್ತಿಯಾಗುತ್ತದೆ. ಹಾಗೂ ವೀರ್ಯಾಣು ಸುಮಾರು 7 ದಿನಗಳವರೆಗೆ ಜೀವಂತವಾಗಿರುತ್ತದೆ.

Most Read : ಹಸ್ತಮೈಥುನ ಬಗ್ಗೆ ಇರುವ ಕೆಲವು ತಪ್ಪು ನಂಬಿಕೆಗಳು, ಇದನ್ನೆಲ್ಲಾ ನಂಬಲೇಬೇಡಿ!

ಕೆಲವರಿಗೆ ನೋವುಂಟಾಗುತ್ತದೆ

ಕೆಲವರಿಗೆ ನೋವುಂಟಾಗುತ್ತದೆ

ಈ ಸಂದರ್ಭದಲ್ಲಿ ಸೆಕ್ಸ್ ಮಾಡೋದರಿಂದ ಕೆಲವರಿಗೆ ನೋವು ಉಂಟಾಗುತ್ತದೆ. ಯಾಕೆಂದರೆ ಇದು ಗರ್ಭಕೋಶಕ್ಕೆ ಒತ್ತಡವನ್ನು ಉಂಟುಮಾಡುತ್ತದೆ. ಜೊತೆಗೆ ಕಂಫರ್ಟೇಬಲ್ ಅನಿಸೋದಿಲ್ಲ.

ಪಿರಿಯೆಡ್ಸ್ ಸಂದರ್ಭ ಸೆಕ್ಸ್ ಮಾಡ್ತಾರೆ

ಪಿರಿಯೆಡ್ಸ್ ಸಂದರ್ಭ ಸೆಕ್ಸ್ ಮಾಡ್ತಾರೆ

ನಿಮಗೆ ಪಿರಿಯೆಡ್ಸ್ ವೇಳೆ ಸೆಕ್ಸ್ ಮಾಡಬೇಕೆಂದಿದ್ದರೆ ನೀವೇನೂ ಯಾರೂ ಮಾಡದ್ದನ್ನು ಮಾಡುತ್ತಿಲ್ಲ. ಯಾಕೆಂದರೆ ಸುಮಾರು 30% ಜನರು ಪಿರಿಯೆಡ್ಸ್ ಸಂದರ್ಭ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಾತ್ತಾರೆ.

English summary

Can You Get Pregnant if You Have Sex on Your Period?

If you’re trying to get pregnant (or trying not to get pregnant), tracking your cycle is important. It will help you keep track of the most fertile days when you can more easily conceive. A common fertility myth is that a woman can’t get pregnant when she’s on her period. While the odds for pregnancy are lower on the days you’re on your period, they aren’t zero.Here’s what you need to know about fertility and having sex on your period.
Story first published: Saturday, October 20, 2018, 17:00 [IST]
X
Desktop Bottom Promotion