For Quick Alerts
ALLOW NOTIFICATIONS  
For Daily Alerts

ಸೆಕ್ಸ್ ವೇಳೆ ದೇಹದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ ನೋಡಿ..

|

ಸೆಕ್ಸ್ ವೇಳೆ ಯಾವ ರೀತಿಯ ಭಾವನೆಯಾಗುವುದು ಎನ್ನುವುದು ಇದನ್ನು ಅನುಭವಿಸಿದ ಪ್ರತಿಯೊಬ್ಬರಿಗೂ ತಿಳಿದಿರುವಂತಹ ವಿಚಾರ. ಅದನ್ನು ಮತ್ತೆ ಮತ್ತೆ ಹೇಳಬೇಕಾಗಿಲ್ಲ. ಇದು ಅವರವರ ಭಾವಕ್ಕೆ ಬಿಟ್ಟದ್ದು. ಆದರೆ ನಿಮ್ಮ ದೇಹಕ್ಕೆ ಮಾನಸಿಕವಾಗಿ ಯಾವ ರೀತಿಯ ಪರಿಣಾಮವಾಗುತ್ತದೆ ಎಂದು ನಿಮಗೆ ತಿಳಿದಿದೆಯಾ? ದೇಹವು ಯಾವೆಲ್ಲಾ ಬದಲಾವಣೆಗೆ ಒಳಗಾಗುವುದು ಮತ್ತು ಹೇಗೆ?

How your body reacts to sex

ಇದರ ಬಗ್ಗೆ ಸೆಕ್ಸ್ ತಜ್ಞರಾಗಿರುವಂತಹ ಮಾಸ್ಟರ್ಸ್ ಮತ್ತು ಜಾನ್ಸನ್ ಅವರು ಕೆಲವು ಮಾಹಿತಿ ಹೊರಹಾಕಿದ್ದಾರೆ. ಇವರು ಸೆಕ್ಸ್ ನ ಆವರ್ತನವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿದ್ದಾರೆ. ಇದರಲ್ಲಿ ಪ್ರಮುಖವಾಗಿ ಉತ್ಸಾಹ, ಪ್ರಸ್ಥಭೂಮಿ, ಪರಾಕಾಷ್ಠೆ ಮತ್ತು ನಿರ್ಣಯ. ಈ ಲೇಖನದಲ್ಲಿ ಈ ನಾಲ್ಕು ವಿಭಾಗಗಳ ಬಗ್ಗೆ ನಿಮಗೆ ವಿವರವಾಗಿ ಹೇಳಲಿದ್ದೇವೆ.

ಉತ್ಸಾಹ

ಉತ್ಸಾಹ

ಇದು ಉತ್ತೇಜನಗೊಂಡ ಅರ್ಧ ಅಥವಾ ಒಂದು ನಿಮಿಷದಲ್ಲಿ ಆರಂಭವಾಗಬಹುದು.

ಪುರುಷರಲ್ಲಿ: ಶಿಶ್ನವು ಉದ್ರೇಕವಾಗುವುದು ಮತ್ತು ಸ್ತನ ತೊಟ್ಟುಗಳು ಉದ್ರೇಕವಾಗುವುದು.

ಮಹಿಳೆಯರಲ್ಲಿ: ದ್ರವವು ಹರಿಯಲು ಆರಂಭವಾಗುವುದು. ಯೋನಿ, ಚಂದ್ರನಾಡಿ ಮತ್ತು ಸ್ತನಗಳು ಊದಿಕೊಳ್ಳುವುದು.

ಇಬ್ಬರಲ್ಲೂ: ಉಸಿರಾಟದ ವೇಗ ಹೆಚ್ಚಳ, ರಕ್ತದೊತ್ತಡ ಮತ್ತು ಎದೆಬಡಿತ ಹೆಚ್ಚಳ.

Most Read: ನಿಮಗೆ ಮಹಿಳೆಯರ ದೇಹದ ಬಗ್ಗೆ ತಿಳಿಯದೇ ಇರುವ ಕೆಲವೊಂದು ಸಂಗತಿಗಳು

ಪುರುಷರಲ್ಲಿ

ಪುರುಷರಲ್ಲಿ

ಪುರುಷರಲ್ಲಿ ಶಿಶ್ನಗಳು ಸಂಪೂರ್ಣವಾಗಿ ಉದ್ರೇಕವಾಗುವುದು. ವೃಷಣಗಳು ವೃಷಣಕೋಶದತ್ತ ಆಕರ್ಷಿತವಾಗುವುದು.

ಮಹಿಳೆಯರು: ಯೋನಿಯ ಹೊರಗಿನ ಹಾಗೂ ಒಳಗಿನ ತುಟಿಗಳು ಹೆಚ್ಚು ಉದ್ರೇಕಗೊಳ್ಳುವುದು. ಆರಂಭಿಕ ಗೆರೆಯು ತುಂಬಾ ಕಿರಿದಾಗುವುದು. ತಾಯಿಯಾಗದೆ ಇರುವಂತಹ ಮಹಿಳೆಯರಲ್ಲಿ ಯೋನಿ ತುಟಿಗಳು ಕೆಂಪಾಗುವುದು ಮತ್ತು ತಾಯಿಯಾಗಿರುವ ಮಹಿಳೆಯರಲ್ಲಿ ಯೋನಿಯ ತುಟಿಗಳು ಗುಲಾಬಿ ಬಣ್ಣಕ್ಕೆ ತಿರುಗುವುದನ್ನು ನೋಡಬಹುದು.

ಇಬ್ಬರಲ್ಲೂ: ಕೈ, ತೊಡೆ ಮತ್ತು ನಿತಂಬದಲ್ಲಿ ಸ್ನಾಯುಗಳು ಬಿಗಿಯಾಗುವುದು. ಎದೆ, ಭುಜ, ಹೊಟ್ಟೆ ಮತ್ತು ಕುತ್ತಿಗೆಯಲ್ಲಿ ಸೆಕ್ಸ್ ಫ್ಲಶ್ ಆರಂಭವಾಗಬಹುದು.

ಪರಾಕಾಷ್ಠೆ

ಪರಾಕಾಷ್ಠೆ

ನಾಲ್ಕು ವಿಭಾಗಗಳಲ್ಲಿ ಇದು ತುಂಬಾ ಕಡಿಮೆ ಸಮಯದ್ದಾಗಿದೆ. ಇದು ಸಂಗಾತಿಗಳಲ್ಲಿ ಕೆಲವೇ ನಿಮಿಷಗಳ ಕಾಲ ಮಾತ್ರ ಇರುವುದು.

ಪುರುಷರು

ಪುರುಷರು

ಆತನ ಶಿಶ್ನದಲ್ಲಿ ದ್ರವವು ಹೊರಬರುವಂತೆ ಆಗಬಹುದು. ಆತನಿಗೆ ಸ್ಖಲನವು ಅನಿವಾರ್ಯವೆನ್ನುವ ಅನುಭವವಾಗಬಹುದು. ಈ ವೇಳೆ ಆತನಿಗೆ ವೀರ್ಯ ಸ್ಖಲನವಾಗುವುದು ಮತ್ತು ಆತನ ಶಿಶ್ನವು ಕುಗ್ಗುವುದು.

ಮಹಿಳೆಯರಲ್ಲಿ

ಮಹಿಳೆಯರಲ್ಲಿ

ಯೋನಿಯ ಗೋಡೆಯು ಲಯಬದ್ಧವಾಗಿ ಕುಗ್ಗುವುದು ಕಾಣಬಹುದು. ಪ್ರತೀ 8 ಸೆಕೆಂಡುಗಳಿಗೆ 10 ಲಯಬದ್ಧವು ಸರಾಸರಿಯಾಗಿದೆ. ಗರ್ಭಕೋಶದಲ್ಲಿನ ಸ್ನಾಯುಗಳು ಕುಗ್ಗುವ ಅನುಭವವಾಗಬಹುದು.

ಇಬ್ಬರಲ್ಲೂ: ಕೆಲವೊಂದು ಸಂದರ್ಭಗಳಲ್ಲಿ ಪರಾಕಾಷ್ಠೆ ತಲುಪುವ ವೇಳೆ ಕೈ ಹಾಗೂ ಕಾಲುಗಳಲ್ಲಿ ಸ್ನಾಯುಗಳ ಪ್ರತಿಫಲನ ಕಾಣಿಸಬಹುದು. ಸ್ನಾಯುಗಳ ಒತ್ತಡ ಮತ್ತು ರಕ್ತನಾಳಗಳಲ್ಲಿ ಅತ್ಯಧಿಕ ತೊಡಗಿಕೊಳ್ಳುವುದನ್ನು ಕಾಣಬಹುದು.

ನಿರ್ಣಯ

ನಿರ್ಣಯ

ಕ್ಲೈಮ್ಯಾಕ್ಸ್ ಬಳಿಕ ಈ ಹಂತವು ಮಹಿಳೆಯರಲ್ಲಿ ಸುಮಾರು ಅರ್ಧ ಗಂಟೆಗಳ ದೀರ್ಘಕಾಲವಿರಬಹುದು.

ಪುರುಷರು: ಶಿಶ್ನವು ಜೋತು ಬಿದ್ದಿರುವುದು ಮತ್ತು ಆತನಿಗೆ ಮತ್ತೆ ಪರಾಕಾಷ್ಠೆ ತಲುಪುವುದು ಸಾಧ್ಯವಾಗದು. ಮರಳಿ ಉದ್ರೇಕಗೊಳ್ಳುವಂತಹ ಸಮಯವು ಪುರುಷರಲ್ಲಿ ವಯಸ್ಸಿಗೆ ಅನುಗುಣವಾಗಿ ಹಾಗೂ ಜೀವನಶೈಲಿಗೆ ತಕ್ಕಂತೆ ಬದಲಾಗುವುದು.

ಮಹಿಳೆಯರಲ್ಲಿ

ಮಹಿಳೆಯರಲ್ಲಿ

ಗರ್ಭಕೋಶ ಮತ್ತು ಚಂದ್ರನಾಡಿಯು ಮೊದಲ ಸ್ಥಾನಕ್ಕೆ ಹೋಗುವುದು. ಕೆಲವು ಮಹಿಳೆಯರು ಮತ್ತೆ ಉದ್ರೇಕಗೊಳ್ಳುವಂತಹ ಸಾಮರ್ಥ್ಯ ಹೊಂದಿರುವರು.

ಇಬ್ಬರಲ್ಲೂ: ಊತ ಮತ್ತು ಸ್ನಾಯುವಿನ ಒತ್ತಡವು ಕಡಿಮೆಯಾಗುವುದು. ಸೆಕ್ಸ್ ಫ್ಲಶ್ ಕಂಡುಬಂದಿದ್ದರೆ ಅದು ಮಾಯವಾಗುವುದು.

ಮೆದುಳು ತೀವ್ರವಾಗುವುದು

ಮೆದುಳು ತೀವ್ರವಾಗುವುದು

ಸೆಕ್ಸ್ ಗೆ ನಿಮ್ಮ ದೇಹ ಮಾತ್ರ ಪ್ರತಿಕ್ರಿಯಿಸುವುದಲ್ಲ. ನಿಮ್ಮ ಮೆದುಳಿನಲ್ಲಿ ಕೂಡ ಕೆಲವೊಂದು ರೀತಿಯ ಬದಲಾವಣೆಗಳನ್ನು ಕಾಣಬಹುದು. ಮಹಿಳೆಯರಲ್ಲಿ ವಿವಿಧ ರೀತಿಯ ಲೈಂಗಿಕ ಅಂಗಾಂಗಗಳು ಉತ್ತೇಜನಗೊಳ್ಳುತ್ತಿರುವಂತೆ ಕಾರ್ಟೆಕ್ಸ್ ಸಕ್ರಿಯವಾಗುವುದು.

ಒಂದೇ ಸಲ ಪರಾಕಾಷ್ಠೆ

ಒಂದೇ ಸಲ ಪರಾಕಾಷ್ಠೆ

ಪುರುಷರು ಹಾಗೂ ಮಹಿಳೆಯರು ಈ ನಾಲ್ಕು ಹಂತದಲ್ಲಿ ಸಮಾನವಾಗಿ ಪ್ರತಿಕ್ರಿಯಿಸುವರು. ಆದರೆ ಒಂದೇ ಸಲ ಪರಾಕಾಷ್ಠೆ ತಲುಪುವುದು ತುಂಬಾ ಕಷ್ಟ. ಯಾಕೆಂದರೆ ಪುರುಷರಿಗಿಂತ ಮಹಿಳೆಯರಿಗೆ ಪರಾಕಾಷ್ಠೆ ತಲುಪಲು ಹೆಚ್ಚಿನ ಸಮಯ ಬೇಕಾಗುವುದು.

English summary

What Happens to Your Brain When You Have Sex

Sure you know what happens to you when you have sex, however, do you know what happens to your body during love-making, physiologically? What are the changes it undergoes and how? Sex therapists Masters and Johnson coined what is known as the sexual-response cycle, which divided sex in four phases. They are excitement, plateau, orgasm and resolution. Here we take a look at what happens during each of these phases of sex.
X
Desktop Bottom Promotion