Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ಗರ್ಭಾವಸ್ಥೆಗೂ ಕಾಲುಂಗುರ ಧರಿಸುವುದಕ್ಕೂ ಅವಿನಾಭಾವ ಸಂಬಂಧ ಇದೆ
ಹಿಂದೂ ಸಂಸ್ಕøತಿ ಹಾಗೂ ಸಂಸ್ಕಾರದಲ್ಲಿ ಅನೇಕ ವಿಧಿ ವಿಧಾನಗಳಿವೆ. ಪ್ರತಿಯೊಂದು ವಿಧಿ-ವಿಧಾನಕ್ಕೂ ತನ್ನದೇ ಆದ ವಿಶೇಷ ಅರ್ಥ ಹಾಗೂ ಹಿನ್ನೆಲೆಯಿದೆ. ಅದರಲ್ಲೂ ಸ್ತ್ರೀಯರಿಗಾಗಿ ವಿಧಿಸಿರುವ ಕೆಲವು ನಿಯಮಗಳು ಪ್ರಮುಖ ಪಾತ್ರವಹಿಸುತ್ತವೆ. ಉದಾಹರಣೆಗೆ ಕುಂಕುಮ ಇಟ್ಟುಕೊಳ್ಳುವುದು, ಕೈಬಳೆ ಹಾಗೂ ಕಾಲುಂಗುರ ತೊಡುವುದು ಸಾಂಪ್ರದಾಯಿಕ ದೃಷ್ಟಿಯಲ್ಲಿ ಸುಮಂಗಲಿಯ ಲಕ್ಷಣವನ್ನು ಪ್ರತಿಬಿಂಬಿಸುತ್ತದೆ. ಅದೇ ವೈಜ್ಞಾನಿಕವಾಗಿ ಅಥವಾ ವೈದ್ಯಕೀಯ ದೃಷ್ಟಿಯಿಂದ ಮಹಿಳೆಯರ ಆರೋಗ್ಯದ ಸುಧಾರಣೆ ಹಾಗೂ ಆರೋಗ್ಯದ ಮಟ್ಟವನ್ನು ಕಾಪಾಡುತ್ತದೆ ಎಂದು ಹೇಳಲಾಗುವುದು.

ಭಾರತದ ಪುರಾತನ ಸಂಪ್ರದಾಯಗಳು ಜಗತ್ತಿನಲ್ಲಿಯೇ ಅತ್ಯಂತ ಶ್ರೀಮಂತಿಕೆಯನ್ನು ಪಡೆದುಕೊಂಡಿದೆ. ಮೇಲ್ನೋಟಕ್ಕೆ ಅದು ಸಾಂಪ್ರದಾಯಿಕ ಪದ್ಧತಿ ಎನಿಸಿಕೊಂಡರೂ, ವಾಸ್ತವವಾಗಿ ಅನೇಕ ವೈಜ್ಞಾನಿಕ ಹಿನ್ನೆಲೆಯನ್ನು ಪಡೆದುಕೊಂಡಿದೆ. ಕೆಲವು ವಿಚಾರಗಳಲ್ಲಿ ಅನೇಕ ತಾರ್ಕಿಕ ತರ್ಕಗಳು ನಡೆದಿರುವುದನ್ನು ಸಹ ನಾವು ನೆನೆಯಬಹುದು. ಆದರೆ ಅವುಗಳಲ್ಲೂ ಸಹ ಅಂತಿಮವಾಗಿ ಪದ್ಧತಿಯ ಹಿಂದೆ ವೈಜ್ಞಾನಿಕ ಸತ್ಯ ಇದೆ ಎನ್ನುವ ವಿಚಾರ ಹೊರ ಹೊಮ್ಮಿರುವುದು ವಿಶೇಷ.
ಸದಾ ಮನೆಯ ಜವಾಬ್ದಾರಿ, ಕೆಲಸಗಳು, ಮಕ್ಕಳ ಪಾಲನೆ, ಸಂಸಾರದ ಹೊಣೆಯನ್ನು ಹೊರುವ ಮಹಿಳೆಯು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಾಕಷ್ಟು ದಣದಿರುತಾಳೆ. ಅವಳ ಆ ಆಯಾಸಕ್ಕೆ ಕೊಂಚ ಸಾಂತ್ವನ ನೀಡುವ ಉದ್ದೇಶದಿಂದಲೇ ಕೆಲವು ಸಂಪ್ರದಾಯಗಳು ರೂಢಿಯಲ್ಲಿ ಬಂದಿವೆ. ಅಲ್ಲದೆ ಸ್ತ್ರೀಯರಿಗೆ ವರಧಾನವಾದ ಗರ್ಭಧಾರಣೆಯ ಶಕ್ತಿಯನ್ನು ವೃದ್ಧಿಸುವುದು. ಅವುಗಳಲ್ಲಿ ಸ್ತ್ರೀಯರು ತಮ್ಮ ಕಾಲು ಬೆರಳಿಗೆ ಕಾಲುಂಗುರ ತೊಡುವುದು ಸಹ ಒಂದು. ಇದನ್ನು ಧರಿಸುವುದರಿಂದ ಸ್ತ್ರೀಯರ ದೇಹದಲ್ಲಿ ಅನೇಕ ಧನಾತ್ಮಕ ಬದಲಾವಣೆಗಳಿಗೆ ಅನುಕೂಲವಾಗುತ್ತದೆ. ಹಾಗಾದರೆ ಆ ಉಪಯೋಗಗಳು ಯಾವವು? ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು ಎನ್ನುವುದಾದರೆ ಈ ಮುಂದೆ ನೀಡಿರುವ ಸೂಕ್ತ ವಿವರಣೆಯನ್ನು ಪರಿಶೀಲಿಸಿ.

ಸಮಾಧಾನವನ್ನು ಉತ್ತೇಜಿಸುತ್ತದೆ:
ಸ್ತ್ರೀಯರು ತಮ್ಮ ಕಾಲು ಬೆರಳಿಗೆ ಬೆಳ್ಳಿ ಉಂಗುರವನ್ನು ತೊಡುವುದರಿಂದ ಹಿತವಾದ ಪರಿಣಾಮ ಉಂಟಾಗುತ್ತದೆ. ಮಾನಸಿಕವಾಗಿ ಇರುವ ಒತ್ತಡವು ದೂರವಾಗುವುದು. ನಿಯಮಿತವಾಗಿ ಇದನ್ನು ಧರಿಸಿಯೇ ಇರುವುದರಿಂದ ದೇಹದಲ್ಲಿ ರಕ್ತಗಳ ಸಂಚಾರ ಸುಗಮವಾಗುತ್ತದೆ. ಅಲ್ಲದೆ ಆರೋಗ್ಯಕರ ಗರ್ಭಧಾರಣೆಗೆ ಅನುಕೂಲವಾಗುವಂತೆ ದೇಹದ ಆರೋಗ್ಯವನ್ನು ಸುಧಾರಿಸುತ್ತದೆ.

ಸುಗಮವಾದ ರಕ್ತ ಸಂಚಾರ:
ಗರ್ಭಕೋಶಕ್ಕೆ ಸಂಬಂಧಿಸಿದಂತೆ ಕಾಲ್ಬೆರಳಿನಿಂದ ನರ ವ್ಯವಸ್ಥೆಯು ಗರ್ಭಕ್ಕೆ ಸಂಪರ್ಕವನ್ನು ಪಡೆದುಕೊಂಡಿದೆ. ಗರ್ಭಿಣಿಯರು ಕಾಲುಂಗುರ ಧರಿಸುವುದರಿಂದ ಗರ್ಭದಲ್ಲಿರುವ ಮಗುವಿನ ದೇಹದಲ್ಲಿ ರಕ್ತ ಸಂಚಾರ ಸುಗಮವಾಗಿ ನಡೆಯುತ್ತದೆ. ಹಾಗೆಯೇ ತಾಯಿಯ ದೇಹದಲ್ಲೂ ರಕ್ತದೊತ್ತಡವು ಸುಗಮವಾಗಿ ಇರುತ್ತದೆ.

ಆಕ್ಯುಪ್ರೆಶರ್ ಪರಿಣಾಮ:
ಗರ್ಭಾಶಯ ಮತ್ತು ಕಾಲ್ಬೆರಳಿನ ನರಗಳು ನೇರ ಸಂಪರ್ಕ ಹೊಂದಿರುತ್ತದೆ. ಬೆರಳಿಗೆ ಕಾಲುಂಗುರವನ್ನು ಧರಿಸುವುದರಿಂದ ಸೂಕ್ತವಾದ ಒತ್ತಡ ಉಂಟಾಗುತ್ತದೆ. ಇದು ಆಕ್ಯುಪ್ರೆಶರ್ ರೀತಿಯಲ್ಲಿ ಕೆಲಸ ನಿರ್ವಹಿಸುವುದು. ಜೊತೆಗೆ ಗರ್ಭಕೋಶದ ಮೇಲೆ ಸೂಕ್ತವಾದ ಪರಿಣಾಮವನ್ನು ಉಂಟುಮಾಡುವುದು. ಈ ಪರಿಣಾಮವು ಮಗುವಿನ ಮೇಲೂ ಪರಿಣಾಮ ಬೀರುವುದು. ಶಿಶು ಶಾಂತ ಮತ್ತು ಆರೋಗ್ಯಕರವಾಗಿರುವಂತೆ ಮಾಡುತ್ತದೆ.

ಉತ್ತಮ ಶಕ್ತಿ ನೀಡುವುದು:
ಸ್ತ್ರೀಯರು ಧರಿಸುವ ಕಾಲುಂಗುರ ಬೆಳ್ಳಿ ಮತ್ತು ಇತರ ಲೋಹದಿಂದ ತಯಾರಿಸಲಾಗುತ್ತದೆ. ಈ ಲೋಹಗಳು ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಕಾಲುಂಗುರ ಧರಿಸಿ ನಡೆದಾಡುವಾಗ ದೇಹವು ಸಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತದೆ. ಜೊತೆಗೆ ದೇಹಕ್ಕೆ ವರ್ಗಾವಣೆಯಾಗುವಂತೆ ಮಾಡುವುದು. ಇದು ಮಹಿಳೆಯರಿಗೆ ಹಾಗೂ ಗರ್ಭಿಣಿಯರಿಗೂ ಉತ್ತಮ ಅನುಕೂಲವನ್ನು ಕಲ್ಪಿಸಿಕೊಡುವುದು.

ಮಾನಸಿಕ ಶಕ್ತಿಯನ್ನು ಹೆಚ್ಚಿಸುತ್ತದೆ:
ಗರ್ಭಾವಸ್ಥೆಯಲ್ಲಿರುವ ಮಹಿಳೆಯ ಮಾನಸಿಕ ಆರೋಗ್ಯವೂ ಸಹ ಬಹು ಮುಖ್ಯ ಪಾತ್ರವಹಿಸುತ್ತದೆ. ಈ ಸಂದರ್ಭದಲ್ಲಿ ಮಹಿಳೆ ಕಾಲುಂಗುರ ಧರರಿಸುವುದರಿಂದ ಮಾನಸಿಕವಾಗಿ ಅಪಾರ ಶಕ್ತಿಯನ್ನು ಒದಗಿಸುತ್ತದೆ. ಜೊತೆಗೆ ಸದಾ ಸಂತೋಷದಿಂದ ಕೂಡಿರುವಂತಹ ಮನಃಸ್ಥಿತಿಯನ್ನು ಸೃಷ್ಟಿಸುತ್ತದೆ.

ಸಮತೋಲಿತ ಗರ್ಭಕೋಶ:
ಗರ್ಭಿಣಿಯರು ತಮ್ಮ ಎರಡು ಕಾಲುಗಳಿಗೂ ಕಾಲುಂಗುರ ಧರಿಸುವುದರಿಂದ ಶಕ್ತಿಯು ದೇಹಕ್ಕೆ ಸಂಪೂರ್ಣವಾಗಿ ವರ್ಗಾವಣೆಯಾಗುವುದು. ಅಲ್ಲದೆ ಗರ್ಭ ಕೋಶದ ಆರೋಗ್ಯವು ಉತ್ತಮವಾಗಿರುವಂತೆ ಮಾಡುತ್ತದೆ. ಗರ್ಭದಲ್ಲಿರುವ ಮಗುವು ಆರೋಗ್ಯಕರವಾಗಿರಲು ಹಾಗೂ ಉತ್ತಮ ಹೆರಿಗೆಗೆ ಕಾರಣವಾಗಲು ಸಹಾಯ ಮಾಡುತ್ತದೆ.

ಮುಟ್ಟಿನ ಅವಧಿ:
ಕೆಲವು ಸ್ತ್ರೀಯರು ಮುಟ್ಟಿನ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ಋತುಚಕ್ರದ ಕ್ರಮಬದ್ಧತೆಯನ್ನು ಕಾಪಾಡುವಲ್ಲಿ ಕಾಲುಂಗುರವು ಸಹಾಯ ಮಾಡುತ್ತದೆ. ಪಾದದ ಎರಡನೇ ಬೆರಳಿಗೆ ಕಾಲುಂಗುರ ಧರಿಸುವುದರಿಂದ ನಿಯಮಿತವಾಗಿ ನರಗಳ ಮೇಲೆ ಒತ್ತಡ ಉಂಟಾಗುತ್ತದೆ. ಇದು ಕ್ರಮಬದ್ಧವಾದ ಮುಟ್ಟನ್ನು ಸೃಷ್ಟಿಸುತ್ತದೆ. ಜೊತೆಗೆ ಆರೋಗ್ಯಕರವಾದ ಗರ್ಭಧಾರಣೆಗೆ ಸಹಾಯಮಾಡುವುದು.



Click it and Unblock the Notifications
