Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಗರ್ಭಾವಸ್ಥೆಯಲ್ಲಿ ವಾಕರಿಕೆ ಶಮನಕ್ಕೆ ಮನೆ ಮದ್ದು ರಾಮಬಾಣ
ತಾಯಿಯಾಗುವುದು ಪ್ರತಿ ಹೆಣ್ಣಿನ ಒಂದು ಕನಸು. ಆದರೆ ಗರ್ಭ ಧರಿಸಿದ ಬಳಿಕ ಎದುರಾಗುವ ವಾಕರಿಕೆ, ವಾಂತಿಯ ಸಮಸ್ಯೆಯೇ ಅವರಿಗೆ ತಲೆನೋವಾಗಿ ಪರಿಣಮಿಸುತ್ತದೆ... ಚಿಂತಿಸದಿರಿ ಇಲ್ಲಿದೆ ನೋಡಿ ಸೂಕ್ತ ಮನೆಮದ್ದು....
ಸಾಮಾನ್ಯವಾಗಿ ಗರ್ಭಾವಸ್ಥೆಯ ಪ್ರಥಮ ಮೂರು ತಿಂಗಳ ಅವಧಿಯಲ್ಲಿ ಗರ್ಭಿಣಿಗೆ ಹೆಚ್ಚು ವಾಂತಿಯಾಗುತ್ತದೆ ಅಥವಾ ವಾಕರಿಕೆ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಇದು ಬೆಳಗ್ಗಿನ ಹೊತ್ತು ಹೆಚ್ಚಾಗಿದ್ದು ಮಧ್ಯಾಹ್ನದ ಹೊತ್ತಿಗೆ ಕಡಿಮೆಯಾಗುತ್ತದೆ. ಆದರೆ ಕೆಲವು ಮಹಿಳೆಯರಿಗೆ ಈ ತೊಂದರೆ ಇನ್ನೂ ಹೆಚ್ಚು ಕಾಲ ಬಾಧಿಸಬಹುದು. ಗರ್ಭಾವಸ್ಥೆಯಲ್ಲಿ ಬೆಳಗ್ಗೆ ಕಾಡುವ ಸುಸ್ತು
ಸಾಮಾನ್ಯವಾಗಿ ಮೂರು ತಿಂಗಳ ಒಳಗೇ ವಾಕರಿಕೆ ಕಡಿಮೆಯಾಗುತ್ತದೆ. ಇನ್ನೂ ಕೆಲವು ಮಹಿಳೆಯರಿಗೆ ನಾಲ್ಕನೆಯ ತಿಂಗಳಿಗೂ ವಾಕರಿಕೆ ಮುಂದುವರೆಯಬಹುದು. ಹೆದರದಿರಿ! ಗರ್ಭಾವಸ್ಥೆಯಲ್ಲಿ ಈ ಲಕ್ಷಣಗಳು ಸರ್ವೇ ಸಾಮಾನ್ಯ
ಒಂದು ವೇಳೆ ವಾಕರಿಕೆ ಮತ್ತು ವಾಂತಿ ಸಾಮಾನ್ಯ ಮಟ್ಟದಲ್ಲಿದ್ದರೆ ಚಿಂತೆಗೆ ಕಾರಣವಿಲ್ಲ. ಆದರೆ ಇದು ಹೆಚ್ಚಾದರೆ ಮಾತ್ರ ವೈದ್ಯರಿಗೆ ತೋರಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಅಗತ್ಯ. ಬನ್ನಿ, ವಾಕರಿಕೆಯನ್ನು ಕಡಿಮೆ ಮಾಡುವ ಕೆಲವು ಸಲಹೆಗಳನ್ನು ನೋಡೋಣ......

ಸಲಹೆ #1 ಹಸಿಶುಂಠಿ ಬಳಸಿ
ವಾಕರಿಕೆಯನ್ನು ಕಡಿಮೆಗೊಳಿಸಲು ಹಸಿಶುಂಠಿಯನ್ನು ಬೆರೆಸಿ ಕುದಿಸಿದ ಟೀ ತಯಾರಿಸಿ ನಿಧಾನವಾಗಿ ಗುಟುಕರಿಸಿ. ಜೊತೆಗೇ ದಿನದಲ್ಲಿ ಹಸಿಶುಂಠಿಯ ಚಿಕ್ಕ ತುಂಡೊಂದನ್ನು ದಿನದಲ್ಲಿ ಎರಡು ಅಥವಾ ಮೂರು ಬಾರಿ ಜಗಿದು ರಸ ನುಂಗಿ.ಬೆಕ್ಕಸ ಬೆರಗಾಗಿಸುವ ಹಸಿ ಶುಂಠಿಯ ಕಾರುಬಾರು...!

ಸಲಹೆ #2 ಲಿಂಬೆಯ ಪರಿಮಳ ಆಸ್ವಾದಿಸಿ
ಒಂದು ಲಿಂಬೆಹಣ್ಣನ್ನು ನಿಮ್ಮ ಬಳಿಯೇ ಇರಿಸಿ ಪ್ರತಿ ಹತ್ತು ಹದಿನೈದು ನಿಮಿಷಕ್ಕೊಮ್ಮೆ ಅಥವಾ ಯಾವಾಗ ವಾಕರಿಕೆ ಅನ್ನಿಸುತ್ತದೆಯೋ ಆಗ ಲಿಂಬೆಯ ಪರಿಮಳವನ್ನು ಆಸ್ವಾದಿಸಿ. ಇದರಿಂದ ವಾಕರಿಕೆ ತಕ್ಷಣ ಕಡಿಮೆಯಾಗುತ್ತದೆ.

ಸಲಹೆ #3 ಹಸಿ ತರಕಾರಿ ಸೇವಿಸಿ
ಹಸಿ ತರಕಾರಿಗಳಲ್ಲಿ ಸಾಕಷ್ಟು ಆಂಟಿ ಆಕ್ಸಿಡೆಂಟುಗಳು ಮತ್ತು ಉತ್ತಮ ಪ್ರಮಾಣದ ನಾರು ಇದೆ. ನಿಮ್ಮ ವೈದ್ಯರ ಸಲಹೆ ಪಡೆದು ನಿಮ್ಮ ಆರೋಗ್ಯಕ್ಕೆ ಸೂಕ್ತವಾದ ಹಸಿ ತರಕಾರಿಗಳು ಯಾವುವು ಎಂಬುದನ್ನು ತಿಳಿದುಕೊಂಡು ನಿಮ್ಮ ನಿತ್ಯದ ಆಹಾರದ ಜೊತೆ ಸಾಕಷ್ಟು ಪ್ರಮಾಣದಲ್ಲಿ ಸೇವಿಸಿ.

ಸಲಹೆ #4 ಸೂಪ್ ಸೇವಿಸಿ
ಒಂದು ವೇಳೆ ನೀವು ಸಸ್ಯಾಹಾರಿಯಾಗಿದ್ದರೆ ಟೊಮಾಟೋ ಅಥವಾ ಇತರ ಯಾವುದಾದರೂ ಸಸ್ಯಾಹಾರಿ ಸೂಪ್ ಮಾಂಸಾಹಾರಿಯಾಗಿದ್ದರೆ ಮೂಳೆಗಳ ಸೂಪ್ ತಯಾರಿಸಿ ಕುಡಿಯಿರಿ.

ಸಲಹೆ #5 ಯಾವುದೇ ಹೊತ್ತಿನ ಊಟ ಬಿಡಬೇಡಿ
ದಿನಕ್ಕೆ ಕನಿಷ್ಠ ಮೂರು ಹೊತ್ತಿನ ಊಟವನ್ನು ಮಾಡಲೇಬೇಕು. ಅಲ್ಲದೇ ಚಿಕ್ಕ ಪ್ರಮಾಣದಲ್ಲಿ ಇತರ ಹೊತ್ತಿನಲ್ಲಿಯೂ ಸೇವಿಸುತ್ತಿರಿ. ಒಟ್ಟಾರೆ ನಿಮಗೆ ಹಸಿವು ಬಾಧಿಸಬಾರದು. ದಿನವಿಡೀ ಸಾಕಷ್ಟು ನೀರು ಕುಡಿಯಿರಿ ಹಾಗೂ ನಡುನಡುವೆ ಕಪ್ಪು ಟೀ ಸೇವಿಸುತ್ತಿರಿ.

ಸಲಹೆ #6 ಆರೋಗ್ಯಕರ ಆಹಾರ ಸೇವಿಸಿ
ನಿಮ್ಮ ಆಹಾರದಲ್ಲಿ ಕೊಬ್ಬರಿ ಎಣ್ಣೆ, ಆಲಿವ್ ಎಣ್ಣೆ, ಬೆಣ್ಣೆಹಣ್ಣು, ವಿವಿಧ ಒಣಫಲಗಳು, ಬೀಜಗಳು ಮತ್ತು ಕೊಂಚ ಪ್ರಮಾಣದಲ್ಲಿ ಕೊಬ್ಬಿನ ಆಹಾರಗಳನ್ನೂ ಸೇವಿಸಿ.



Click it and Unblock the Notifications
