ಗರ್ಭಿಣಿಯರು 'ಕಲ್ಲಂಗಡಿ ಹಣ್ಣು' ಸೇವಿಸುವುದರಿಂದ ಲಾಭವೋ ಲಾಭ

By: Arshad
Subscribe to Boldsky

ನಿಮ್ಮ ಮನೆಗೆ ಇನ್ನು ಕೆಲವೇ ತಿಂಗಳಲ್ಲಿ ಹೊಸ ಅತಿಥಿಯ ಆಗಮನವಾಗುವುದಿದೆಯೇ? ಈ ಶುಭಸುದ್ದಿ ತಿಳಿಯುತ್ತಿದ್ದಂತೆಯೇ ನಿಮ್ಮ ಮನೆಯವರು ಮತ್ತು ಹಿತೈಷಿಗಳು ಬಹಳಷ್ಟು ಸಲಹೆಗಳನ್ನು ನೀಡಿರಬೇಕಲ್ಲವೇ? ಆದರೆ ಯಾರು ಏನೇ ಹೇಳಿದರೂ ನಿಮ್ಮ ವೈದ್ಯರು ಅಪ್ಪಣೆ ನೀಡುವ ಹೊರತು ಯಾವುದೇ ಆಹಾರವನ್ನು ಸೇವಿಸಲು ಹೋಗದಿರುವುದೇ ಜಾಣತನದ ಕ್ರಮ. ಬಿಸಿಲಿನ ಝಳಕ್ಕೆ, ತಂಪುಣಿಸುವ ಕಲ್ಲಂಗಡಿ ಹಣ್ಣು

ಬೇಸಿಗೆಯಲ್ಲಿ ಗರ್ಭಿಣಿಯರಿಗೆ ಸೂಕ್ತವಾದ ಆಹಾರ ಯಾವುದು? ಸಾಮಾನ್ಯವಾಗಿ ನೀರಿನಂಶ ಹೆಚ್ಚಿರುವ ಕಲ್ಲಂಗಡಿ, ಸೌತೆ ಹಾಗೂ ಇತರ ಹಣ್ಣುಗಳ ರಸವನ್ನು ಬೇಸಿಗೆಯಲ್ಲಿ ಹೆಚ್ಚಾಗಿ ಸೇವಿಸಲಾಗುತ್ತದೆ. ಅದರಲ್ಲೂ ಕಲ್ಲಂಗಡಿ ಹಣ್ಣು ಬೇಸಿಗೆಗೆ ಹೇಳಿ ಮಾಡಿಸಿದ ಹಣ್ಣಾಗಿದ್ದು ಇದರಲ್ಲಿ ಅತಿ ಹೆಚ್ಚಿನ ನೀರು ಮತ್ತು ಇತರ ಪೋಷಕಾಂಶಗಳಿವೆ.  ಗರ್ಭಿಣಿಯರ ಆಹಾರ ಹೀಗಿದ್ದರೆ, ಮಗುವಿನ ಆರೋಗ್ಯ ಚೆನ್ನಾಗಿರುತ್ತದೆ

ಇದು ತೂಕವನ್ನು ಇಳಿಸಲು ನೆರವಾಗುವ ಜೊತೆಗೇ ಬೇಸಿಗೆಯ ಬೇಗೆಯಿಂದ ದೇಹವನ್ನು ತಂಪಾಗಿರಿಸಲೂ ನೆರವಾಗುತ್ತದೆ. ಆದರೆ ಈ ಹಣ್ಣು ಗರ್ಭಿಣಿಯರು ಸೇವಿಸಲು ಯೋಗ್ಯವೇ? ಈ ಪ್ರಶ್ನೆಯನ್ನು ನಿಮ್ಮ ವೈದ್ಯರಲ್ಲಿ ಕೇಳಿ ನಿಮಗೆ ಸೂಕ್ತ ಎಂದು ಅನುಮತಿ ನೀಡಿದ ಬಳಿಕವೇ ಸೇವಿಸಬೇಕು. ಇದು ನಿಮಗೆ ಸೂಕ್ತ ಎನ್ನುವುದಾದರೆ ಕಲ್ಲಂಗಡಿಯ ಪ್ರಯೋಜನಗಳನ್ನು ಗರ್ಭಿಣಿಯರು ಸಹಾ ಪಡೆಯಬಹುದು. ಬನ್ನಿ, ಇದರ ಪ್ರಯೋಜನಗಳೇನು ಎಂಬುದನ್ನು ನೋಡೋಣ.....   

ದೇಹಕ್ಕೆ ಅಗತ್ಯವಿರುವ ನೀರನ್ನು ಪೂರೈಸುತ್ತದೆ

ದೇಹಕ್ಕೆ ಅಗತ್ಯವಿರುವ ನೀರನ್ನು ಪೂರೈಸುತ್ತದೆ

ಇತರ ಸಮಯಕ್ಕಿಂತಲೂ ಬೇಸಿಗೆಯ ಸಮಯದಲ್ಲಿ ದೇಹಕ್ಕೆ ಹೆಚ್ಚಿನ ನೀರಿನ ಅಗತ್ಯವಿದೆ. ಆದ್ದರಿಂದ ಬೇಸಿಗೆಯಲ್ಲಿ ಹೆಚ್ಚು ಹೆಚ್ಚು ದ್ರವಾಹಾರ ಹಾಗೂ ನೀರನ್ನು ಸೇವಿಸಬೇಕು. ಕಲ್ಲಂಗಡಿ ಹಣ್ಣಿನಲ್ಲಿ ಗರಿಷ್ಠ ಪ್ರಮಾಣದ ನೀರು ಇರುವ ಕಾರಣ ದೇಹದಲ್ಲಿ ನೀರಿನ ಅಂಶ ಹೆಚ್ಚಿಸಲು ನೆರವಾಗುತ್ತದೆ ಹಾಗೂ ಬಿಸಿಲ ಬೇಗೆಯಿಂದ ದೇಹವನ್ನು ತಂಪಾಗಿರಿಸಲು ಸಾಧ್ಯವಾಗುತ್ತದೆ.

ಇದರಲ್ಲಿದೆ ಹಲವು ವಿಟಮಿನ್ನುಗಳು

ಇದರಲ್ಲಿದೆ ಹಲವು ವಿಟಮಿನ್ನುಗಳು

ಕಲ್ಲಂಗಡಿಯಲ್ಲಿ ಗರಿಷ್ಠ ಮಟ್ಟದಲ್ಲಿ ನೀರು ಇದ್ದರೂ ಉಳಿದಂತೆ ಹಲವಾರು ಪೋಷಕಾಂಶಗಳೂ ಇವೆ. ಪ್ರಮುಖವಾಗಿ ವಿಟಮಿನ್ ಎ ಮತ್ತು ಸಿ. ಈ ಪೋಷಕಾಂಶಗಳು ಗರ್ಭಿಣಿಯ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುವ ಜೊತೆಗೇ ಮಗುವಿನ ಪೋಷಣೆಗೂ ನೆರವಾಗುತ್ತದೆ. ಗರ್ಭಿಣಿಯರು ಬೇಸಿಗೆಯಲ್ಲಿ ಪ್ರತಿದಿನ ಮೂರು ಬಾರಿ ಸಾಮಾನ್ಯ ಪ್ರಮಾಣದ ಕಲ್ಲಂಗಡಿ ಹಣ್ಣಿನ ತಿರುಳನ್ನು ಸೇವಿಸುವುದು ಉತ್ತಮ.

ಎದೆಯುರಿಯನ್ನು ಕಡಿಮೆ ಮಾಡುತ್ತದೆ

ಎದೆಯುರಿಯನ್ನು ಕಡಿಮೆ ಮಾಡುತ್ತದೆ

ಗರ್ಭಾವಸ್ಥೆಯಲ್ಲಿ ಹಲವಾರು ಬದಲಾವಣೆಗಳು ಕಂಡುಬರುತ್ತವೆ. ಇದರಲ್ಲಿ ಎದೆಯುರಿ ಅಥವಾ ಹೊಟ್ಟೆಯಲ್ಲಿ ಉರಿಯೂ ಒಂದು. ಹೀಗೆ ಉರಿ ಕಾಣಿಸಿಕೊಂಡಾಗ ಗಾಬರಿಯಾಗದೇ ತಕ್ಷಣವೇ ಒಂದು ಕಪ್‌ನಷ್ಟು ಕಲ್ಲಂಗಡಿ ಹಣ್ಣಿನ ತುಂಡುಗಳನ್ನು ತಿಂದರೆ ಸಾಕಾಗುತ್ತದೆ.

ಸ್ನಾಯುಗಳ ಸೆಡೆತವನ್ನು ಕಡಿಮೆ ಮಾಡುತ್ತದೆ

ಸ್ನಾಯುಗಳ ಸೆಡೆತವನ್ನು ಕಡಿಮೆ ಮಾಡುತ್ತದೆ

ಗರ್ಭಾವಸ್ಥೆಯಲ್ಲಿ ಎದುರಾಗುವ ಇನ್ನೊಂದು ಸಾಮಾನ್ಯ ತೊಂದರೆ ಎಂದರೆ ಸ್ನಾಯುಗಳ ಸೆಡೆತ. ದೇಹದಲ್ಲಿ ಪೊಟ್ಯಾಶಿಯಂ ಮತ್ತು ಮೆಗ್ನೇಶಿಯಂ ಕೊರತೆ ಇದ್ದರೆ ಸ್ನಾಯುಗಳು ಸೆಡೆತಕ್ಕೆ ಒಳಗಾಗಿ ಚಲನೆಯನ್ನು ಪ್ರತಿಬಂಧಿಸುವುದು ಮಾತ್ರವಲ್ಲ, ನೋವನ್ನೂ ನೀಡುತ್ತವೆ.

ಸ್ನಾಯುಗಳ ಸೆಡೆತವನ್ನು ಕಡಿಮೆ ಮಾಡುತ್ತದೆ

ಸ್ನಾಯುಗಳ ಸೆಡೆತವನ್ನು ಕಡಿಮೆ ಮಾಡುತ್ತದೆ

ಈ ತೊಂದರೆ ವಿಶೇಷವಾಗಿ ಏಳನೆಯ ತಿಂಗಳಿನ ಬಳಿಕ ಕಾಣಿಸಿಕೊಳ್ಳುತ್ತದೆ. ಕಲ್ಲಂಗಡಿಯಲ್ಲಿ ಇವೆರಡೂ ಖನಿಜಗಳು ಉತ್ತಮ ಪ್ರಮಾಣದಲ್ಲಿರುವ ಕಾರಣ ಥಟ್ಟನೇ ಸ್ನಾಯುಗಳು ಸೆಡೆತಕ್ಕೆ ಒಳಗಾಗುವುದರಿಂದ ತಪ್ಪಿಸಬಹುದು.

 
English summary

Why You Need More Watermelon in Your Pregnancy Diet

Are you ready to welcome the little bundle of joy into your family? You must have shared the good news with all of your family members and they are giving you lots of advises, right? The most important thing you should remember while you’re pregnant is that whatever you do or whatever you eat, you should consult your doctor
Please Wait while comments are loading...
Subscribe Newsletter